HOME
CINEMA NEWS
GALLERY
TV NEWS
REVIEWS
CONTACT US
ಸಾಹಸ ಪ್ರಧಾನಚಿತ್ರ ಕಲಿವೀರ
ಉತ್ತರಕರ್ನಾಟಕದಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್‍ಆಟ್ರ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಸಲೀಸಾಗಿ ಪ್ರದರ್ಶಿಸುತ್ತಾರೆ.ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ. ನಿರ್ದೇಶಕ ಅವಿನಾಶ್‍ಭೂಷಣ್‍ಇವರಿಗೆ ಸೂಟ್‍ಆಗುವಂತೆಕತೆಯನ್ನು ಸೃಷ್ಟಿಸಿದ್ದಾರೆ. ಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು ಸಿದ್ದಪಡಿಸಿರುವುದು ವಿಶೇಷ. ಆದರೆಚಿತ್ರದ ಸಾರಾಂಶವನ್ನುತಂಡವುಒಂದು ಏಳೆಯನ್ನು ಬಿಟ್ಟುಕೊಡದೆಗುಟ್ಟನ್ನುಕಾಪಾಡಿಕೊಂಡಿದೆ. 30 ವರ್ಷಅನುಭವ, 600 ಚಿತ್ರಗಳಿಗೆ ಆಕ್ಷನ್ ಮಾಡಿಸಿರುವ ಡಿಫರೆಂಟ್‍ಡ್ಯಾನಿ ಇವರ ಸಾಹಸ ಕಂಡು ಸೋಜಿಗಗೊಂಡಿದ್ದಾರೆ. ಅದಕ್ಕಾಗಿ ಬಾಳೆಹಣ್ಣು ಮಂಡಿ, ಮಳೆ, ಬೆಂಕಿ, ಕಲರಿಯಲ್ಲಿ ಫೈಟ್ಸ್‍ಗಳನ್ನು ಮಾಡಿಸಿದ್ದಾರೆ.

ತೆರೆ ಮೇಲೆ,ಹಿಂದೆಅನಾಥನಾಗಿರುವ ನಾಯಕಕಾಡಿನ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಚಿರಶ್ರೀಅಂಚನ್ ನಾಯಕಿ.ವಕೀಲೆಯಾಗಿ ಪಾವನಗೌಡ, ಭ್ರಷ್ಟ ಪೋಲೀಸ್‍ಅಧಿಕಾರಿಯಾಗಿ ನೀನಾಸಂಅಶ್ವಥ್, ನಾಯಕನಂತಯೇಇರುವತಬಲನಾಣಿ ಪ್ರೋತ್ಸಾಹ, ಸಲಹೆ ನೀಡುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಶಿವಮೊಗ್ಗ, ದಾಂಡೇಲಿ,ಕನಕಪುರ, ಬೆಂಗಳೂರು ಹಾಗೂ ಮುತ್ತ್ತೆತ್ತಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಾ.ನಾಗೇಂದ್ರಪ್ರಸಾದ್, ಅರಸುಅಂತಾರೆ ಸಾಹಿತ್ಯದ ಗೀತೆಗಳಿಗೆ ವಿ.ಮನೋಹರ್ ಸಂಗೀತದಜೊತೆಗೆ ಹಾಡಿಗೆ ಲೇಖನಿ ಹಿಡಿದಿದ್ದಾರೆ. ಛಾಯಾಗ್ರಹಣ ಹಾಲೇಶ್.ಎಸ್., ಸಂಕಲನ ಎ.ಆರ್.ಕೃಷ್ಣ, ನೃತ್ಯ ಮುರಳಿ ಅವರದಾಗಿದೆ. ಹುಡುಗನ ಪ್ರದರ್ಶನ ನೋಡಿದ ಶ್ರೀನಿವಾಸ್‍ಮತ್ತುಮೂವರುಗೆಳಯರು ಸೇರಿಕೊಂಡುಜ್ಯೋತಿಆಟ್ರ್ಸ್ ಮುಖಾಂತರನಿರ್ಮಾಣ ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/01/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore