HOME
CINEMA NEWS
GALLERY
TV NEWS
REVIEWS
CONTACT US
ಕಾದಂಬರಿ ಆಧಾರಿತ ಚಿತ್ರ
ಸ್ಯಾಂಡಲ್‍ವುಡ್‍ದಲ್ಲಿ ಅಪರೂಪ ಎನ್ನುವಂತೆ ಕಾದಂಬರಿ ಆಧಾರಿತ ‘ಕಳ್ಬೆಟ್ಟದ ದರೋಡೆಕೋರರು’ ಎನ್ನುವ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿರುವುದು ದೀಪಕ್‍ಮದುವನಹಳಿ.್ಳ ಅವರು ಹೇಳುವಂತೆ ಕಾದಂಬರಿಯ ಅನುಮತಿ ಪಡೆದುಕೊಂಡು ಚಿತ್ರ ಮುಗಿಸಲಾಗಿದೆ. ಹಳ್ಳಿಯ ಆನೆ ಸಾಲು-ಕೋಟೆ ಬೀದಿಯಲ್ಲಿರುವ ಎರಡು ಓಣಿಯ ಹುಡುಗರು ಯಾವಗಲೂ ದ್ವೇಷವನ್ನು ಸಾಧಿಸುತ್ತಾರೆ. ಅಲ್ಲೋಂದು ಬೆಟ್ಟ ಇರಲಿದ್ದು, ರಾತ್ರಿ ಆದರೆ ದರೋಡೆ ಆಗುತ್ತದೆ. ಇದರಿಂದ ಆ ವೇಳೆಯಲ್ಲಿ ಜನರು ಆಚೆ ಬರುವುದಿಲ್ಲ. ಇದರ ಮಧ್ಯೆ ಸುಂದರ ಪ್ರೀತಿ ಕತೆಯನ್ನು ಹೇಳಲಾಗಿದೆ. ಮುಂದೆ ಅಲ್ಲಿನ ಜನರು ಮಿಸ್ಸಿಂಗ್ ಆಗುತ್ತಾರೆ. ಅದು ಏನು ಅಂತ ತಿಳಿಯಲು ಸಿನಿಮಾ ನೋಡಬೇಕು ಎಂದರು.

ರಾಮರಾಮರೇ ಖ್ಯಾತಿಯ ನಟರಾಜ್ ನಾಯಕ. ಕಿರುತೆರೆ ಸ್ಟಾರ್ ನಟಿ ಶ್ವೇತಾ.ಆರ್.ಪ್ರಸಾದ್ ನಾಯಕಿಯಾಗಿ ಮೊದಲ ಚಿತ್ರ. ಉಳಿದಂತೆ ಹೇಮಂತ್‍ಸುಶೀಲ್ ಜೊತೆಗೆ ರಂಗಭೂಮಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಯಾಮಾರಿಸುವ ಪಾತ್ರದಲ್ಲಿ ರಂಗಭೂಮಿ ಕಲಾವಿದ ಗೌತಂ, ನಾಯಕಿ ತಂದೆ ಪಂಚಾಯತ್ ಅಧ್ಯಕ್ಷನಾಗಿ ಸಿದ್ದರಾಜ್‍ಕಲ್ಯಾಣ್‍ಕರ್, ಗಣೇಶ್‍ರಾವ್ ಮುಂತಾದವರು ತಾರಬಳಗದಲ್ಲಿ ಇದ್ದಾರೆ. ಕತೆಗಾರ ಅನುಷ್.ಎ.ಶೆಟ್ಟಿ ಹೇಳುವಂತೆ ಕುಣಿಗಲ್ ಬಳಿ ಹನಗೂಡು ಬೆಟ್ಟವಿದ್ದು, ಈಗಲೂ ದರೋಡೆ ನಡೆಯುತ್ತದೆ. ಅದರ ಆಧಾರದ ಲೇಖನಿ ಹಿಡಿಯಲು ಸಹಕಾರಿ ಆಗಿದೆ ಅಂತಾರೆ. ಮೂರು ಗೀತೆಗಳಿಗೆ ಅನೂಪ್‍ಸೀಳನ್ ಸಂಗೀತದಲ್ಲಿ ‘ಓ ಕಮಲಿ’ ಹಾಡಿಗೆ ನಾರಾಯಣಶರ್ಮ ಧ್ವನಿಯಾಗಿದ್ದಾರೆ. ಕಿರಣ್‍ಕುಮಾರ್-ವಿನಯ್-ಶ್ರೀವತ್ಸ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ವಿತರಕ ರಮೇಶ್‍ಬಾಬು ಸಾರಥ್ಯದಲ್ಲಿ ಇದೇ ತಿಂಗಳ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/02/19
ಹನಗೂಡು ಪ್ರದೇಶದ ದರೋಡೆಕೋರರು
ಚಂದನವನದಲ್ಲಿ ರಿಮೇಕ್, ಕಲ್ಪಿತ ಕತೆಗಳು ಹೆಚ್ಚಾಗಿ ಬರುತ್ತಿರುವ ಸಂದರ್ಭದಲ್ಲಿ ಮರಳುಗಾಡಿನಲ್ಲಿ ನೀರು ಸಿಕ್ಕಂತೆ ಕಾದಂಬರಿ ಆಧಾರಿತ ‘ಕಳ್ಬೆಟ್ಟದ ದರೋಡೆಕೋರರು’ ಎನ್ನುವ ಸಿನಿಮಾವು ಸದ್ದಿಲ್ಲದೆ ಮಂಡ್ಯಾ, ಮದ್ದೂರು ಭಾಗಗಳಲ್ಲಿ ಚಿತ್ರೀಕರಣ ನಡೆಸಿದೆ. ಸುದ್ದಿ ಮಾಡಲು ಟ್ರೈಲರ್ ಬಿಡುಗಡೆ ನೆಪ ಮಾಡಿಕೊಂಡು ಮಾದ್ಯಮದವರನ್ನು ಆಹ್ವಾನಿಸಲಾಗಿತ್ತು. ಸರದಿಯಂತೆ ಮಾತನಾಡಿದ ನಿರ್ದೇಶಕ ದೀಪಕ್‍ಮದುವನಹಳ್ಳಿ ಎರಡೂವರೆ ವರ್ಷದ ನಂತರ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ. ಕಾದಂಬರಿ ಓದಿ ಸಿನಿಮಾ ಮಾಡಲು ಆಸಕ್ತಿ ಬಂತು. ಮುಂದೆ ಅನುಮತಿ ಪಡೆದುಕೊಂಡು ಚಿತ್ರ ಮುಗಿಸಲಾಗಿದೆ. ಹಳ್ಳಿಯ ಎರಡು ಓಣಿಯ ಹುಡುಗರು ಯಾವಗಲೂ ದ್ವೇಷವನ್ನು ಸಾಧಿಸುತ್ತಾರೆ. ಅಲ್ಲೋಂದು ಬೆಟ್ಟ ಇರಲಿದ್ದು, ರಾತ್ರಿ ಆದರೆ ದರೋಡೆ ಆಗುತ್ತದೆ. ಇದರಿಂದ ಆ ವೇಳೆಯಲ್ಲಿ ಜನರು ಆಚೆ ಬರುವುದಿಲ್ಲ. ಇದರ ಮಧ್ಯೆ ಸುಂದರ ಪ್ರೀತಿ ಕತೆಯನ್ನು ಹೇಳಲಾಗಿದೆ. ಮುಂದೆ ಅಲ್ಲಿನ ಜನರು ಮಿಸ್ಸಿಂಗ್ ಆಗುತ್ತಾರೆ. ಅದು ಏನು ಅಂತ ತಿಳಿಯಲು ಸಿನಿಮಾ ನೋಡಬೇಕು ಎಂದರು.

ರಾಮರಾಮರೇ ಖ್ಯಾತಿಯ ನಟರಾಜ್ ನಾಯಕ. ಕಿರುತೆರೆ ಸ್ಟಾರ್ ನಟಿ ಶ್ವೇತಾ.ಆರ್.ಪ್ರಸಾದ್ ನಾಯಕಿಯಾಗಿ ಮೊದಲ ಚಿತ್ರ. ಉಳಿದಂತೆ ಹೇಮಂತ್‍ಸುಶೀಲ್ ಜೊತೆಗೆ ರಂಗಭೂಮಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಅನುಷ್.ಎ.ಶೆಟ್ಟಿ ಹೇಳುವಂತೆ ಕುಣಿಗಲ್ ಬಳಿ ಹನಗೂಡು ಬೆಟ್ಟವಿದ್ದು, ಈಗಲೂ ದರೋಡೆ ನಡೆಯುತ್ತದೆ. ಅದರ ಆಧಾರದ ಮೇಲೆ ಕಾದಂಬರಿ ಬರೆಯಲು ಸ್ಪೂರ್ತಿಯಾಗಿದೆ ಅಂತಾರೆ. ಮೂರು ಹಾಡುಗಳಿಗೆ ಅನೂಪ್‍ಸೀಳನ್ ಸಂಗೀತವಿದೆ.

ಹಳ್ಳಿಯ ರಸ, ದರೋಡೆ ರುಚಿ ನೋಡಲು ಕಾತುರಳಾಗಿದ್ದೇನೆ. ಕಲಾವಿದರು ಭಾವ ಕೊಡುತ್ತಾರೆ. ಅದಕ್ಕೆ ರಸ ತುಂಬವ ಶಕ್ತಿ ಇರುವುದು ಸಂಗೀತಕ್ಕೆ. ಟ್ರೈಲರ್ ತುಂಬಾ ಚೆನ್ನಾಗಿ ಬಂದಿದೆ ಎಂದು ತಂಡದ ಶ್ರಮವನ್ನು ಶ್ಲಾಘಿಸಿದರು ರಾಧಿಕಾಚೇತನ್. ಫಸ್ಟ್ ರ್ಯಾಂಕ್ ರಾಜು ಗುರುನಂದನ್ ತುಣುಕುಗಳಿಗೆ ಫಸ್ಟ್ ರ್ಯಾಂಕ್ ಎಂದು ಹೇಳಿದರು. ಸುಮನ್‍ನಗರ್‍ಕರ್, ಲೂಸ್‍ಮಾದ ಯೋಗೇಶ್ ಉಪಸ್ತಿತರಿದ್ದು ತಂಡಕ್ಕೆ ಶುಭಹಾರೈಸಿದರು. ಮೂವರು ಛಾಯಗ್ರಾಹಕರು, ಕಲಾ ನಿರ್ದೇಶನ ಮೋಹನ್.ಬಿ.ಕರೆ ಅವರದಾಗಿದೆ. ಗುಬ್ಬಿಯ ಕಿರಣ್‍ಕುಮಾರ್-ವಿನಯ್ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ತೆರೆ ಕಾಣುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
26/06/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore