HOME
CINEMA NEWS
GALLERY
TV NEWS
REVIEWS
CONTACT US
ಕಾಸಿದ್ರೆ ಕೈಲಾಸ ಸಿಗುತ್ತದೆ
ಹೊಸಬರ ‘ಕೈಲಾಸ’ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ. ಅಡಿಬರಹದಲ್ಲಿ ಕಾಸಿದ್ರೆ ಎಂದು ಹೇಳಿಕೊಂಡಿದೆ.ಯೂತ್, ಕ್ರೈಮ್‍ಕಾಮಿಡಿಜೊತೆಗೆ ಬಂಧುರಎರಕಕತೆಇದೆ. ಬದುಕಿನಅರ್ಥ ತಿಳಿದುಕೊಳ್ಳದ ಹುಡುಗನೊಬ್ಬನು, ಜವಬ್ದಾರಿಇರುವ ಹುಡುಗಿಯ ನಡುವೆ ಪ್ರೀತಿ ಶುರುವಾಗುತ್ತದೆ.ಆಕೆಯ ಮನಸ್ಸನ್ನುಗೆಲ್ಲಲುಆತ ಏನೇನು ಮಾಡುತ್ತಾನೆ?ಎಷ್ಟು ಕಷ್ಟ ಪಡುತ್ತಾನೆ?ಎಲ್ಲೆಲ್ಲಿ ಹೋಗುತ್ತಾನೆ. ಅಂತಿಮವಾಗಿಅವನ ಶ್ರಮಕ್ಕೆಫಲಿತಾಂಶ ಸಿಗುತ್ತಾದಾ ಎಂಬುದುಒಂದು ಏಳೆಯ ತಳಹದಿಯಾಗಿದೆ. ಹನ್ನೆರಡು ವರ್ಷಟೆಕ್ಕಿಯಾಗಿ ಕೆಲಸ ಮಾಡಿರುವ ಬಳ್ಳಾರಿ ಮೂಲದ ನಾಗ್‍ವೆಂಕಟ್‍ರಚನೆ, ಚಿತ್ರಕತೆ ಬರೆದುನಿರ್ದೇಶನ ಮಾಡುತ್ತಿದ್ದಾರೆ.

ಬಿಂದಾಸ್ ಹುಡುಗನಾಗಿ ವೈಭವ್ ನಾಯಕ.ಮಂಗಳೂರಿನ ರಾಶಿಬಾಲಕೃಷ್ಣ ನಾಯಕಿಯಾಗಿ ಮೂರನೆ ಅವಕಾಶ. ಗೆಳಯನಾಗಿ ಕಾಮಿಡಿ ಕಿಲಾಡಿಗಳುದಲ್ಲಿ ಗುರುತಿಸಿಕೊಂಡಿದ್ದ ಸೂರಜ್, ಇವರೊಂದಿಗೆಇಪ್ಪತೈದು ಪಾತ್ರಗಳು ಬರಲಿದೆ.ಖಳನಟನಾಗಿ ತೆಲುಗಿನ ಪ್ರಸಿದ್ದ ನಟಅಭಿನಯಿಸುವ ಸಾದ್ಯತೆಇದ್ದು, ಒಂದು ಸುತ್ತಿನಚರ್ಚೆ ನಡೆಸಲಾಗಿದೆ.ನಾಲ್ಕು ಹಾಡುಗಳಿಗೆ ಆಶಿಕ್‍ಅರುಣ್ ಸಂಗೀತವಿದೆ.ಛಾಯಾಗ್ರಹಣಟಾಲಿವುಡ್‍ನ ವಿನೋಧ್‍ರಾಜೇಂದ್ರನ್, ಸಂಕಲನ ತ್ಯಾಗು.ಎಂ, ಸಾಹಸ ಸ್ಟನ್ನರ್‍ಸ್ಯಾಮ್. ಇಬ್ಬರು ಕಾಲಿವುಡ್‍ಕಡೆಯವರು.ಅನಂತಪುರದ ವಾಸಿಕ್ ಅಲ್‍ಸಾದ್ ಸಿನಿಮಾ ಕೃಷಿಗೆ ಮಹದ್ ಪಿಕ್ಚರ್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ.ಮಹೂರ್ತ ಸಮಾರಂಭಕ್ಕೆಡಾಲಿಧನಂಜಯ್ ಆಗಮಿಸಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
8/02/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore