HOME
CINEMA NEWS
GALLERY
TV NEWS
REVIEWS
CONTACT US
ಮನುಷ್ಯ ವರ್ಸಸ್ ಆತ್ಮಗಳು
‘ಕಾಣದಂತೆ ಮಾಯವಾದನು’ ಚಿತ್ರವು ಮನುಷ್ಯ ವರ್ಸಸ್‍ಆತ್ಮ ಇವುಗಳೊಂದಿಗೆ ಬೆಸೆದುಕೊಳ್ಳುತ್ತದೆ.ಎರಡು ಆತ್ಮಗಳು ಬೇರೆಯವರಿಗೆಕಾಣಿಸುವುದಿಲ್ಲ. ಆದರೆಒಬ್ಬನಿಗೆ ಮಾತ್ರಇವರಿಬ್ಬರು ಕಾಣಿಸಿಕೊಳ್ಳುತ್ತಾರೆ. ಬೇರೆಯವರಿಗೆ ಮೋಸ ಮಾಡುವುದೇಕಿಕ್‍ಅಂದುಕೊಂಡಿದ್ದಆತ, ಒಮ್ಮೆ ಪ್ರೀತಿಯಲ್ಲಿ ಬೀಳುತ್ತಾನೆ. ಅವಳೊಂದಿಗಿನ ನಡವಳಿಕೆ, ಸೇವೆÀ ಕಂಡುಜನ ಮೆಚ್ಚುವ ಕೆಲಸ ಮಾಡುವುದರಲ್ಲಿಕಿಕ್ ಸಿಗುತ್ತೆ ಅಂತ ನಂಬಿ ಕೆಟ್ಟದ್ದಕ್ಕೆತಿಲಾಂಜಲಿ ಇಡುತ್ತಾನೆ. ಇದನ್ನು ಸಹಿಸದಗ್ಯಾಂಗ್ ಲೀಡರ್‍ಆತನನ್ನು ಸಾಯಿಸುತ್ತಾನೆ. ಮುಂದೆಆತನಆತ್ಮವುಯಾವರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತದೆ ಎಂಬುದನ್ನುಚಿತ್ರಮಂದಿರದಲ್ಲಿ ನೋಡಬೇಕು. ಸ್ಲಂನಲ್ಲಿ ವಾಸಿಸುವ ಜನರನ್ನುಹೇಗೆ ಖಾಲಿ ಮಾಡಿಸುತ್ತಾರೆ, ಕಪಟ ಸ್ವಾಮೀಜಿಗಳು, ಕ್ಲಬ್‍ದಲ್ಲಿ ನಡೆಯುವ ದಂದೆಗಳು.ಇಂತಹ ಅಂಶಗಳನ್ನು ಹಾಗೆಯೇ ತೋರಿಸಿರುವುದನ್ನು ಮೆಚ್ಚ ಬಹುದು.

ಮನುಷ್ಯ, ಆತ್ಮಎರಡನ್ನು ನಿಭಾಯಿಸಿರುವ ನಾಯಕ ವಿಕಾಸ್‍ಕ್ಲಾಸ್, ಮಾಸ್‍ದಲ್ಲಿ ಸೈ ಅನಿಸಿಕೊಂಡಿದ್ದು, ಚಿತ್ರಕತೆ-ಸಂಭಾಷಣೆಯಲ್ಲಿತಮ್ಮ್ಮಛಾಪನ್ನು ತೋರಿಸಿದ್ದಾರೆ. ಎನ್‍ಜಿಓ ಪಾತ್ರದಲ್ಲಿ ಸಿಂಧೂಲೋಕನಾಥ್ ಸೆಂಟೆಮೆಂಟ್ ದೃಶ್ಯಗಳಲ್ಲಿ ಕಣ್ಣನ್ನುಒದ್ದೆ ಮಾಡಿಸುತ್ತಾರೆ.ಖಳನಟರಾಗಿ ಅರ್ಧ ಭಾಗಉದಯ್, ಎರಡನೇ ಭಾಗದಲ್ಲಿ ಬರುವ ಭಜರಂಗಿಲೋಕಿಇಬ್ಬರೂತಮ್ಮ ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ಟ್ಯಾಕ್ಷಿ ಚಾಲಕನಾಗಿ ಧರ್ಮಣ್ಣಕಡೂರುಜ್ಯೂನಿಯರ್, ಸೀನಿಯರ್ ಆತ್ಮಗಳಿಗೆ ಕಾಣಿಸಿಕೊಂಡಾಗ ಅವರುತೋರುವ ನಟನೆ ನಗೆ ತರಿಸುತ್ತದೆ. ಕಳ್ಳ ಸ್ವಾಮಿಯಾಗಿ ಸುಚೇಂದ್ರಪ್ರಸಾದ್ ಹಾವಭಾವ, ಖುಷಿ ಕೊಡುತ್ತದೆ. ಅಚ್ಯುತ್‍ಕುಮಾರ್ ಹಿರಿಯಆತ್ಮನಾಗಿ ಹೆಚ್ಚು ಅವಕಾಶ ಸಿಕ್ಕಿಲ್ಲ. ಉಳಿದಂತೆ ವಿನಯಾಪ್ರಸಾದ್, ಉಗ್ರಂಮಂಜು, ಸೀತಾಕೋಟೆ, ಬಸುಕುಮಾರ್, ಬಾಬುಹಿರಣಯ್ಯ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಭಗೀರನಾಗಿ ನಾಯಿ ಒಂದು ಪಾತ್ರವಾಗಿ ಕಾಣಿಸಿಕೊಂಡಿದೆ.ಕತೆ-ನಿರ್ದೇಶನ ಮಾಡರುವರಾಜ್‍ಪತ್ತಿಪಾಟಿ ಮೊದಲ ಪ್ರಯತ್ನದಲ್ಲೆಯಶಸ್ಸನ್ನುಕಂಡಿದ್ದಾರೆ. ಇವರಿಗೆ ಸ್ಪೂರ್ತಿಯಾಗಿ ಸಂಗೀತ ಗುಮ್ಮಿನೇನಿವಿಜಯ್, ಛಾಯಾಗ್ರಹಣಸುಜ್ಘಾನ್‍ಕೆಲಸ ಇದೆಲ್ಲಕ್ಕೂ ಪೂರಕವಾಗಿದೆ.
ನಿರ್ಮಾಣ: ಚಂದ್ರಶೇಖರನಾಯ್ಡು-ಸೋಮ್‍ಸಿಂಗ್
***
ಸಿನಿ ಸರ್ಕಲ್.ಇನ್ ವಿಮರ್ಶೆ
31/01/20

ಚಿತ್ರಮಂದಿರದಲ್ಲಿಕಾಣದಂತೆ ಮಾಯವಾದನು
ಫ್ಯಾಂಟಸಿ, ಆಕ್ಷನ್‍ಕುರಿತಾದ‘ಕಾಣದಂತೆ ಮಾಯವಾದನು’ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದುರಾಜ್‍ಪತ್ತಿಪಾಟಿ. ಕಥಾನಾಯಕರಮ್ಮಿ ಪ್ರಾರಂಭದಲ್ಲೆದುಷ್ಟನೊಬ್ಬನಿಂದಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂಆತ್ಮಅಲ್ಲಿಯೇಇರುತ್ತದೆ.ಎಲ್ಲಾಚಿತ್ರದಲ್ಲಿಆತ್ಮಕ್ಕೆ ಪವರ್‍ಇರುತ್ತದೆ. ಇದರಲ್ಲಿ ಆರೀತಿಇರದೆತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತುಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದುಒಂದು ಏಳೆಯ ಸಾರಾಂಶವಾಗಿದೆ. ಪ್ರೀತಿಸಿದ ಹುಡುಗಿಗೆ ಇವನು ಶೀರ್ಷಿಕೆಯಾಗಿರುತ್ತನೆ. ಭಟ್ಟರಕ್ಯಾಂಪಿನಲ್ಲಿ ಸಹಾಯಕ ನಿರ್ದೇಶನ, ಜಯಮ್ಮನ ಮಗ ಚಿತ್ರಕ್ಕೆ ನಿರ್ದೇಶನ ಮಾಡಿರುವ ವಿಕಾಸ್ ನಾಯಕ.

ಎನ್‍ಜಿಓದಲ್ಲಿ ಕೆಲಸ ಮಾಡುತ್ತಾ, ನಿರ್ಗತಿಕರಿಗೆಕೈಲಾದಷ್ಟು ಸೇವೆ ಮಾಡುವ ಪಾತ್ರದಲ್ಲಿಸಿಂಧೂಲೋಕನಾಥ್ ನಾಯಕಿ.ಉಳಿದಂತೆ ಅಚ್ಯುತಕುಮಾರ್, ಖಳನಟ ಉದಯ್ ಬದುಕಿದ್ದಾಗ ನಾಯಕನನ್ನುಕೊಲ್ಲುವದುಷ್ಟ. ಮುಂದೆ ವಿಜಯ್ ಸಿನಿಮಾದಲ್ಲಿ ಸಾಹಸ ಮಾಡಲು ಹೋಗಿ ಮರಣಗೊಂಡಿದ್ದರು. ಅದೇ ಪಾತ್ರಕ್ಕೆ ಭಜರಂಗಿ ಲೋಕಿ ವಿರಾಮದ ನಂತರ ಕಾಣಿಸಿಕೊಂಡಿದ್ದಾರೆ.ಟ್ರಕ್ ಚಾಲಕ, ಆಕಸ್ಮಿಕವಾಗಿ ಲಕ್ಷ ಸಿಗುತ್ತದೆ. ಅದುಎಲ್ಲಿಂದ ಬಂತುಎಂದು ತಿಳಿಯುವಷ್ಟರಲ್ಲೆ ಕಷ್ಟಕ್ಕೆ ಸಿಲುಕಿ ಅದರಿಂದ ತಪ್ಪಿಸಿಕೊಂಡು ಹೂರಬರುವ ಹಾಸ್ಯ ಪಾತ್ರಕ್ಕೆಧರ್ಮೇಂದ್ರ, ತಾಯಿಯಾಗಿ ಸೀತಾಕೋಟೆ ಮುಂತಾದವರು ನಟಿಸಿದ್ದಾರೆ. ಗುಮ್ಮಿನೇನಿವಿಜಯ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ಶಿಷ್ಯನ ಚಿತ್ರಕ್ಕೆ ಶುಭಹಾರೈಸಲುಯೋಗರಾಜಭಟ್ ಆಗಮಿಸಿ ತಂಡದ ಶ್ರಮವನ್ನು ಶ್ಲಾಘಿಸಿದರು. ನಿರ್ದೇಶಕರತಂದೆಚಂದ್ರಶೇಖರ್‍ನಾಯ್ಡು, ಇವರೊಂದಿಗೆ ಸೋಮ್‍ಸಿಂಗ್,ಪುಷ್ಟಸೋಮ್‍ಸಿಂಗ್ ಜಂಟಿಯಾಗಿ ನಿರ್ಮಾಣ ಮಾಡಿರುವು ಸಿನಿಮಾವುಜನವರಿ 31ರಂದು ತೆರೆಗೆಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
16/01/20

ಫ್ಯಾಂಟಸಿ ಚಿತ್ರಕಾಣದಂತೆ ಮಾಯವಾದನು
ಬಾಹುಬಲಿ ನಿರ್ದೇಶಕ ರಾಜಮೌಳಿ ಅಭಿಮಾನಿಯಾಗಿರುವರಾಜ್ ಪತ್ತಿಪಾಟಿಅವರದೇರೀತಿಯ ‘ಕಾಣದಂತೆ ಮಾಯವಾದನು’ ಫ್ಯಾಂಟಸಿ, ಆಕ್ಷನ್, ಕಾಮಿಡಿ, ಲವ್ ಕುರಿತಾದಚಿತ್ರಕ್ಕೆಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ಗೋರಿಆದ್ಮೇಲೆ ಹುಟ್ಟಿದ ಸ್ಟೋರಿಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಕಥಾನಾಯಕರಮ್ಮಿ ಪ್ರಾರಂಭದಲ್ಲೆರೂಕ್ಷನೊಬ್ಬನಿಂದಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂಆತ್ಮಅಲ್ಲಿಯೇಇರುತ್ತದೆ.ಎಲ್ಲಾಚಿತ್ರದಲ್ಲಿಆತ್ಮಕ್ಕೆ ಪವರ್‍ಇರುತ್ತದೆ. ಇದರಲ್ಲಿ ಆರೀತಿಇರದೆತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತುಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದುಒಂದು ಏಳೆಯ ಸಾರಾಂಶವಾಗಿದೆ. ಪ್ರೀತಿಸಿದ ಹುಡುಗಿಗೆ ಇವನು ಶೀರ್ಷಿಕೆಯಾಗಿರುತ್ತನೆ. ಭಟ್ಟರಕ್ಯಾಂಪಿನಲ್ಲಿ ಸಹಾಯಕ ನಿರ್ದೇಶನ, ಜಯಮ್ಮನ ಮಗ ಚಿತ್ರಕ್ಕೆ ನಿರ್ದೇಶನ ಮಾಡಿರುವ ವಿಕಾಸ್ ನಾಯಕ.

ಸಿಂಧೂಲೋಕನಾಥ್ ಎನ್‍ಜಿಓದಲ್ಲಿ ಕೆಲಸ ಮಾಡುತ್ತಾ, ನಿರ್ಗತಿಕರಿಗೆಕೈಲಾದಷ್ಟು ಸೇವೆ ಮಾಡುವ ಪಾತ್ರದಲ್ಲಿ ನಾಯಕಿ.ಸೀನಿಯರ್ ಆತ್ಮವಾಗಿಅಚ್ಯುತಕುಮಾರ್, ಖಳನಟ ಉದಯ್ ಬದುಕಿದ್ದಾಗ ನಾಯಕನನ್ನುಕೊಲ್ಲುವದುಷ್ಟ.ಮುಂದೆ ವಿಜಯ್ ಸಿನಿಮಾದಲ್ಲಿ ಸಾಹಸ ಮಾಡಲು ಹೋಗಿ ಮರಣಗೊಂಡಿದ್ದರು. ಅದೇ ಪಾತ್ರಕ್ಕೆ ಭಜರಂಗಿ ಲೋಕಿ ವಿರಾಮದ ನಂತರ ಕಾಣಿಸಿಕೊಂಡಿದ್ದಾರೆ.ಟ್ರಕ್ ಚಾಲಕ, ಆಕಸ್ಮಿಕವಾಗಿ ಲಕ್ಷ ಸಿಗುತ್ತದೆ. ಅದುಎಲ್ಲಿಂದ ಬಂತುಎಂದು ತಿಳಿಯುವಷ್ಟರಲ್ಲೆ ಕಷ್ಟಕ್ಕೆ ಸಿಲುಕಿ ಅದರಿಂದ ತಪ್ಪಿಸಿಕೊಂಡು ಹೂರಬರುವ ಹಾಸ್ಯ ಪಾತ್ರಕ್ಕೆಧರ್ಮೇಂದ್ರ, ತಾಯಿಯಾಗಿ ಸೀತಾಕೋಟೆ ಮುಂತಾದವರು ನಟಿಸಿದ್ದಾರೆ. ಗುಮ್ಮಿನೇನಿವಿಜಯ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ಸುಜ್ಘಾನ್‍ಮೂರ್ತಿ, ಸಂಕಲನ ಸುರೇಶ್‍ಆರುಮುಗಮ್, ಸಾಹಸ ವಿನೋಧ್ ನಿರ್ವಹಿಸಿದ್ದಾರೆ. ನಿರ್ದೇಶಕರತಂದೆಚಂದ್ರಶೇಖರ್‍ನಾಯ್ಡು, ಇವರೊಂದಿಗೆ ಸೋಮ್‍ಸಿಂಗ್,ಪುಷ್ಟಸೋಮ್‍ಸಿಂಗ್ ಜಂಟಿಯಾಗಿ ನಿರ್ಮಾಣ ಮಾಡಿರುವಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
7/10/19

ಕಾಣದಂತೆ ಮಾಯವಾದನುಚಿತ್ರಕ್ಕೆಅಡಿಬರಹ
‘ಕಾಣದಂತೆ ಮಾಯವಾದನು’ ಸಿನಿಮಾಕ್ಕೆಆಕರ್ಷಣೆತರುವ ಸಲುವಾಗಿ ಅಡಿಬರಹ ಬರೆದುಕೊಡುವ ಸ್ಫರ್ಧೆಯನ್ನು ಏರ್ಪಡಿಸಿದೆ. 3000ಕ್ಕೂ ಹೆಚ್ಚು ವ್ಯಾಕ್ಯಗಳ ಪೈಕಿ ‘ಕಾಲವಾದವನ ಪ್ರೇಮಕಾಲ’ ‘ಜೀವ ನಿಂತರೂ ಪ್ರೇಮತುಂತರು’ ‘ಜೀವ ಹೋದ ಪ್ರೇಮಯೋಧ’ ಹೀಗೆ ಒಂದಷ್ಟು ಬಂದಿದೆ. ಅದರಲ್ಲಿಐದನ್ನುಆಯ್ಕೆ ಮಾಡಿಕೊಂಡು, ಕೊನೆಗೆ ಮೇಲಿನದು ಸೂಕ್ತವೆಂದು ಭಾವಿಸಿ ಅದನ್ನೆ ಬಳಸಿದ್ದಾರೆ.ಕುಂದಾಪುರ ಪ್ರಾಧ್ಯಪಕ ನರೇಂದ್ರದೇವಡಿಗ ಸ್ಪರ್ಧೆಯಲ್ಲಿ ವಿಜೇತರಾಗಿ, ನಿರ್ಮಾಪಕರಿಂದಐವತ್ತು ಸಾವಿರ ಬಹುಮಾನವನ್ನು ಸ್ವೀಕರಿಸಿದ್ದಾರೆ.

ಕಲಾವಿದರುಗಳಾದ ವಠಾರಮಹೇಶ್ ಮತ್ತುಉದಯ್‍ಮರಣ, ನೋಟುಅಮಾನ್ಯಕರಣ, ಮೂವತ್ತು ನಿಮಿಷದಗ್ರಾಫಿಕ್ಸ್ ಇವುಗಳಿಗೆ ಹೆಚ್ಚು ಸಮಯತೆಗೆದುಕೊಂಡಿದ್ದರಿಂದ ಸಿನಿಮಾವುತಡವಾಗಿದೆಯಂತೆ. ವಿರಾಮದ ವರೆಗೂಉದಯ್ ನಂತರಇದೇ ಪಾತ್ರಕ್ಕೆ ಭಜರಂಗಿಲೋಕೇಶ್ ಕಾಣಿಸಿಕೊಂಡಿದ್ದಾರೆ.ಕಥಾನಾಯಕರಮ್ಮಿ ಪ್ರಾರಂಭದಲ್ಲೆರೂಕ್ಷನೊಬ್ಬನಿಂದಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂಆತ್ಮಅಲ್ಲಿಯೇಇರುತ್ತದೆ.ಎಲ್ಲಾಚಿತ್ರದಲ್ಲಿಆತ್ಮಕ್ಕೆ ಪವರ್‍ಇರುತ್ತದೆ. ಇದರಲ್ಲಿ ಆರೀತಿಇರದೆತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತುಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದುಒಂದು ಏಳೆಯ ಸಾರಾಂಶವಾಗಿದೆ. ಚಿತ್ರಕತೆ,ಸಂಭಾಷಣೆ ಮತ್ತು ನಾಯಕ ವಿಕಾಸ್, ನಾಯಕಿಯಾಗಿ ಸಿಂಧೂಲೋಕನಾಥ್ ಇದ್ದಾರೆ. ರಚನೆ-ನಿರ್ದೇಶನರಾಜ್‍ಪತ್ತಿಪಾಟಿಅವರದಾಗಿದೆ. ಗುಮ್ಮಿನೇನಿವಿಜಯ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ಸುಜ್ಘಾನ್‍ಮೂರ್ತಿ, ಸಂಕಲನ ಸುರೇಶ್‍ಆರುಮುಗಮ್, ಸಾಹಸ ವಿನೋಧ್ ನಿರ್ವಹಿಸಿದ್ದಾರೆ. ನಿರ್ದೇಶಕರತಂದೆಚಂದ್ರಶೇಖರ್‍ನಾಯ್ಡು, ಇವರೊಂದಿಗೆ ಸೋಮ್‍ಸಿಂಗ್,ಪುಷ್ಟಸೋಮ್‍ಸಿಂಗ್ ಜಂಟಿಯಾಗಿಬಂಡವಾಳ ಹೂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
13/09/19

ಪ್ರೀತಿ ಫ್ಯಾಂಟಸಿಯ ಕಾಣದಂತೆ ಮಾಯವಾದನು
‘ಚಲಿಸುವ ಮೋಡಗಳು’ ಚಿತ್ರದಲ್ಲಿ ಪುನೀತ್‍ರಾಜ್‍ಕುಮಾರ್ ಹಾಡಿದ್ದ ‘ಕಾಣದಂತೆ ಮಾಯವಾದನು’ ಇಂದಿಗೂ ಕೇಳಬೇಕು ಅನಿಸುತ್ತದೆ. ಇಂತಹ ತೂಕದ ಸಾಹಿತ್ಯದ ಮೊದಲ ಎರಡು ಪದಗಳು ಚಿತ್ರದ ಶೀರ್ಷಿಕೆಯಾಗಿದೆ. ನಾಲ್ಕು ವರ್ಷಗಳ ಹಿಂದೆ ಯೋಜನೆ ರೂಪಿಸಿ, 2016ರಲ್ಲಿ ಚಿತ್ರರೂಪ ಪಡೆಯಲು ವೇದಿಕೆ ಸಿದ್ದವಾಯಿತು. ಹೆಸರಿಗೆ ತಕ್ಕಂತೆ ಖಳನಾಗಿ ನಟಿಸಿದ್ದ ಉದಯ್ ಮತ್ತು ವಠಾರ ಮಹೇಶ್ ಸಾವು. ನೋಟು ಅಮಾನ್ಯಕರಣ ಸಂದರ್ಭ. ಇನ್ನು ಮುಂತಾದವು ಕಾಣದಂತೆ ಕಷ್ಟಗಳು ಆವರಿಸಿಕೊಂಡಿದೆ. ಆದರೂ ಚಲಬಿಡದ ತ್ರಿವಿಕ್ರಮನಂತೆ ಎಲ್ಲವನ್ನು ಸರಿದೂಗಿಸಿಕೊಂಡು ಬಿಡುಗಡೆ ಹಂತಕ್ಕೆ ತಂದಿರುವುದು ರಚನೆ, ನಿರ್ದೇಶನ ಮಾಡಿರುವ ರಾಜ್‍ಪತ್ತಿಪಾಟಿ.

ಕಿರುತೆರೆ,ಹಿರಿತೆರೆ ಪೋಷಕ ನಟ ಮತ್ತು ಜಯಣ್ಣನಮಗ, ದೊಡ್ಮನೆ ಹುಡುಗ ಚಿತ್ರಕ್ಕೆ ಕತೆ ಬರೆದಿರುವ ವಿಕಾಸ್ ನಾಯಕ. ಲಾಯರ್ ಆಗಿ ಎಂಟ್ರಿ ಕೊಟ್ಟು ಮುಂದೇನು ಮಾಡುತ್ತಾನೆ ಎಂಬುದನ್ನು ಚಿತ್ರ ನೋಡಬೇಕಂತೆ. ವಿವಾಹ ಬಳಿಕ ಬಣ್ಣ ಹಚ್ಚಿರುವ ಸಿಂಧೂಲೋಕನಾಥ್ ಎನ್‍ಜಓದಲ್ಲಿ ನೌಕರಿ ಮಾಡುವ ಹುಡುಗಿಯಾಗಿ ಮುಖ್ಯ ಪಾತ್ರ. ಈ ಚಿತ್ರದಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ದೂಡ್ಡ ಚಿತ್ರಗಳಲ್ಲಿ ಅವಕಾಶ ಸಿಕ್ಕಿದ್ದಕ್ಕೆ ನಾಯಕಿ ತಂದೆಯಾಗಿ ಕಾಣಿಸಿಕೊಂಡಿರುವ ಬಾಬುಹಿರಣಯ್ಯ ಅವರಿಗೆ ಇದು ಅದೃಷ್ಟದ ಚಿತ್ರವಂತೆ. ಅದರಂತೆ ತಾಯಿ ಪಾತ್ರ ಮಾಡಿರುವ ಸೀತಾಕೋಟೆ ಅಭಿನಯಿಸಿ ಮರೆತುಹೋಗಿದ್ದಾರೆ. ಹುಡುಕಿಕೊಂಡು ಬಂದು ಸಂಭಾವನೆ ನೀಡಿದ್ದರಿಂದ ಇವರಿಗೂ ಈ ತಂಡದ ಮೇಲೆ ವಿಶೇಷ ಗೌರವವಿದೆಯಂತೆ.

ಬಡವ,ಶ್ರೀಮಂತ ಹೀಗೆ ಎರಡು ರೀತಿಯಲ್ಲಿ ನಟನೆ ಮಾಡಿರುವುದು ರಾಮರಾಮರೇ ಖ್ಯಾತಿ ಧರ್ಮಣ್ಣ, ಸಣ್ಣದಾದರೂ ತಿರುವು ಕೊಡುವ ಪಾತ್ರದಲ್ಲಿ ಪ್ರಶಾಂತ್ ಅಭಿನಯಿಸಿದ್ದಾರೆ. ಚಿತ್ರಕತೆ ವಿಕಾಸ್-ರಾಜ್‍ಪತ್ತಿಪಾಟಿ, ಛಾಯಗ್ರಹಣ ಸುಜ್ಘಾನ್, ಸಂಗೀತ ಗುಮ್ಮಿನೇನಿವಿಜಯ್, ಸಂಕಲನ ಸುರೇಶ್‍ಆರ್ಮುಗಮ್, ಸಾಹಸ ವಿನೋದ್, ಸಲಹೆ-ನಿರ್ಮಾಣ ನಿರ್ವಹಣೆ ವೀರೇಂದ್ರಮಲ್ಲಣ್ಣ ನಿರ್ವಹಿಸಿದ್ದಾರೆ. ನಿರ್ದೇಶಕರ ನಂಬಿಕೆ ಮೇಲೆ ಚಂದ್ರಶೇಖರ್‍ನಾಯ್ಡು, ಸೋಮ್‍ಸಿಂಗ್, ಪುಷ್ಪಾಸೋಮ್‍ಸಿಂಗ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಸಿನಿಮಾವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
18/11/18


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore