HOME
CINEMA NEWS
GALLERY
TV NEWS
REVIEWS
CONTACT US
ಆತ್ಮಗಳ ಕುರಿತಾದಕಾಣದಂತೆ ಮಾಯವಾದನು
ಫ್ಯಾಂಟಸಿ, ಆಕ್ಷನ್‍ಕುರಿತಾದ‘ಕಾಣದಂತೆ ಮಾಯವಾದನು’ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದುರಾಜ್‍ಪತ್ತಿಪಾಟಿ. ನಾಲ್ಕು ವರ್ಷಗಳ ಹಿಂದೆ ಶುರುವಾಗಿದ್ದಚಿತ್ರವುಈಗ ಬಿಡುಗಡೆ ಹಂತಕ್ಕೆಬಂದಿದೆ. ಕಥಾನಾಯಕರಮ್ಮಿ ಪ್ರಾರಂಭದಲ್ಲೆರೂಕ್ಷನೊಬ್ಬನಿಂದಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂಆತ್ಮಅಲ್ಲಿಯೇಇರುತ್ತದೆ. ಎಲ್ಲಾಚಿತ್ರದಲ್ಲಿಆತ್ಮಕ್ಕೆ ಪವರ್‍ಇರುತ್ತದೆ. ಇದರಲ್ಲಿ ಆರೀತಿಇರದೆತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತುಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದುಒಂದು ಏಳೆಯ ಸಾರಾಂಶವಾಗಿದೆ. ಪ್ರೀತಿಸಿದ ಹುಡುಗಿಗೆ ಇವನು ಶೀರ್ಷಿಕೆಯಾಗಿರುತ್ತನೆ. ಭಟ್ಟರಕ್ಯಾಂಪಿನಲ್ಲಿ ಸಹಾಯಕ ನಿರ್ದೇಶನ, ಜಯಮ್ಮನ ಮಗ ಚಿತ್ರಕ್ಕೆ ನಿರ್ದೇಶನ ಮಾಡಿರುವ ವಿಕಾಸ್ ನಾಯಕ.

ಎನ್‍ಜಿಓದಲ್ಲಿ ಕೆಲಸ ಮಾಡುತ್ತಾ, ನಿರ್ಗತಿಕರಿಗೆಕೈಲಾದಷ್ಟು ಸೇವೆ ಮಾಡುವ ಪಾತ್ರದಲ್ಲಿಸಿಂಧೂಲೋಕನಾಥ್ ನಾಯಕಿ.ಉಳಿದಂತೆ ಅಚ್ಯುತಕುಮಾರ್, ಖಳನಟ ಉದಯ್ ಬದುಕಿದ್ದಾಗ ನಾಯಕನನ್ನುಕೊಲ್ಲುವದುಷ್ಟ. ಮುಂದೆ ವಿಜಯ್ ಸಿನಿಮಾದಲ್ಲಿ ಸಾಹಸ ಮಾಡಲು ಹೋಗಿ ಮರಣಗೊಂಡಿದ್ದರು. ಅದೇ ಪಾತ್ರಕ್ಕೆ ಭಜರಂಗಿ ಲೋಕಿ ವಿರಾಮದ ನಂತರ ಕಾಣಿಸಿಕೊಂಡಿದ್ದಾರೆ.ಟ್ರಕ್ ಚಾಲಕ, ಆಕಸ್ಮಿಕವಾಗಿ ಲಕ್ಷ ಸಿಗುತ್ತದೆ. ಅದುಎಲ್ಲಿಂದ ಬಂತುಎಂದು ತಿಳಿಯುವಷ್ಟರಲ್ಲೆ ಕಷ್ಟಕ್ಕೆ ಸಿಲುಕಿ ಅದರಿಂದ ತಪ್ಪಿಸಿಕೊಂಡು ಹೂರಬರುವ ಹಾಸ್ಯ ಪಾತ್ರಕ್ಕೆಧರ್ಮೇಂದ್ರ, ತಾಯಿಯಾಗಿ ಸೀತಾಕೋಟೆ ಮುಂತಾದವರು ನಟಿಸಿದ್ದಾರೆ. ಗುಮ್ಮಿನೇನಿವಿಜಯ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ಶಿಷ್ಯನ ಚಿತ್ರಕ್ಕೆ ಶುಭಹಾರೈಸಲುಯೋಗರಾಜಭಟ್ ಆಗಮಿಸಿ ತಂಡದ ಶ್ರಮವನ್ನು ಶ್ಲಾಘಿಸಿದರು. ನಿರ್ದೇಶಕರತಂದೆಚಂದ್ರಶೇಖರ್‍ನಾಯ್ಡು, ಇವರೊಂದಿಗೆ ಸೋಮ್‍ಸಿಂಗ್,ಪುಷ್ಟಸೋಮ್‍ಸಿಂಗ್ ಜಂಟಿಯಾಗಿ ನಿರ್ಮಾಣ ಮಾಡಿರುವು ಸಿನಿಮಾವುಆಗಸ್ಟ್‍ದಲ್ಲಿ ಬರಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
2/07/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore