HOME
CINEMA NEWS
GALLERY
TV NEWS
REVIEWS
CONTACT US
ಯಶಸ್ಸಿನ ಹಾದಿಯಲ್ಲಿಕಾಳಿದಾಸ ಕನ್ನಡ ಮೇಷ್ಟ್ರು
ಹಾಸ್ಯ, ಶಿಕ್ಷಣ ವ್ಯವಸ್ಥೆಕುರಿತಾದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾವು ಸಲೀಸಾಗಿಇಪ್ಪತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿ, ಮುಂದು ವರೆಯುತ್ತಿದೆ. ಇದನ್ವರುತಂಡವು ಸಂತಸ ಹಂಚಿಕೊಂಡಿತು.ಕಾಳಿದಾಸ ದಡ ಸೇರಿದ್ದನೆ. ಕನ್ನಡಿಗರು ಮನಸ್ಸು ಮಾಡಿ ಹೃದಯದಿಂದಇಲ್ಲಿಯತನಕತೆಗೆದುಕೊಂಡು ಹೋಗಿದ್ದಾರೆ.ಈಗ ಸಾಗರದಾಚೆ ಹೋಗುತ್ತಿರುವುದು ಸಂತಸತಂದಿದೆ.ಮೈಸೂರಿನಲ್ಲಿಒತ್ತಾಯದ ಮೇರೆಗೆ ಮರು ಪ್ರದರ್ಶನಕಾಣುತ್ತಿದೆ.ನೆಲಮಂಗಲ ಚಿತ್ರಮಂದಿರದವರು ಮುಂಗಡ ಹಣ ಪಡೆದು ಮೋಸ ಮಾಡಿದ್ದಾರೆ.ಅವರ ಮೇಲೆ ದಾವೆ ಹೂಡಲಾಗುವುದು.ಇಂದುಜನರು ನೆಟ್‍ಫ್ಲಿಕ್ಸ್, ಅಮೆಜಾನ್‍ಗೆ ಮಾರು ಹೋಗಿದ್ದಾರೆ.ಇದರ ಮಧ್ಯೆ ನಮ್ಮಚಿತ್ರವುಯಶಸ್ಸುಕಂಡಿರುವುದು ಸೋಜಿಗ ಅನಿಸಿದೆ.ಒಳ್ಳೆಯ ಅಂಶಗಳು ಇದ್ದರೆಜನರು ಎಂದಿಗೂ ಕೈ ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಇದಾಗಿದೆ.ಬೆಂಗಳೂರಿನಲ್ಲಿ ಒಳ್ಳೆಯ ಗಳಿಕೆ ಬರುತ್ತಿದ್ದರೂ ಏಕಾಏಕಿ ಬೇರೆಭಾಷೆಯ ಸಲುವಾಗಿ ನಮ್ಮಚಿತ್ರವನ್ನುತೆಗೆದುಹಾಕಿರುವುದುದುರಂತವಾಗಿದೆ.ವಾಣಿಜ್ಯ ಮಂಡಳಿ, ಸರ್ಕಾರವುಇದಕ್ಕೆ ಮಾನದಂಡರೂಪಿಸಬೇಕು.ಇಂತಹಉತ್ತಮಚಿತ್ರಗಳು ವಿದೇಶದಲ್ಲಿ ವ್ಯಾಪಾರ ಆಗಬೇಕು. ಮುಖ್ಯ ಮಂತ್ರಿಗಳು ಸಿನಿಮಾ ನೋಡುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿ ಮಾಯಾಸಂದ್ರಕ್ಕೆ ನಿರ್ಗಮಿಸಿದರು.

ಹಲವು ಚಿತ್ರಗಳು ಬಿಡುಗಡೆಯಾಗಿದ್ದವು. ಜನರು ಕಾಳಿದಾಸ ಮೊದಲುಎಂದು ಹೊಗಳಿದ್ದಾರೆ. ಪೋಷಕರುತಮ್ಮ ಮಕ್ಕಳನ್ನು ಓದಿಸುವ ಜೊತೆಗೆಅವರ ಮನಸ್ಸುಇಚ್ಚೆಯಂತೆ ಬಿಡಬೇಕು.ಇದರಲ್ಲಿಒಬ್ಬರು ಬದಲಾವಣೆಆದರೆ ಸಾಕೆಂದು ಬಯಸಿದ್ದೆ.ಆದರು ಸಾವಿರಾರು ಮಂದಿ ಬದಲಾಗಿ ಮಕ್ಕಳ ಆಸಕ್ತಿ ಬಗ್ಗೆ ಚಿಂತಿಸಿದ್ದಾರೆ. ವಿದೇಶದಲ್ಲಿ ಮೂರು ವಿತರಕರುಗಳಿಂದ ಬೇಡಿಕೆ ಬಂದಿದೆ. ಪ್ರಾಮಾಣಿಕವಾಗಿ ಸಿಲ್ವರ್‍ಜುಬ್ಲಿ ಡೇಸ್‍ಆಗಿದೆ. ಮೊದಲವಾರದಲ್ಲಿ ನಕಾರ ಮಾಡಿದ ಮಾಲೀಕರುಎರಡನೇ ವಾರಕ್ಕೂಜಾಗ ಕಲ್ಪಸಿದ್ದಾರೆ. ಇಂತಹ ಸ್ಥಿತಿ ಬಹಳ ಜಿಲ್ಲೆಗಳಲ್ಲಿ ನಡೆಯುತ್ತಿದೆ.ಇದಕ್ಕೆಲ್ಲಾಕಾರಣಜಗ್ಗೇಶ್ ಸಹಕಾರವೆಂದು ನಿರ್ದೇಶಕಕವಿರಾಜ್ ನೆನಪಿಸಿಕೊಂಡರು.

ಏಳು ಚಿತ್ರಗಳಲ್ಲಿ ನಟಿಸಿದ್ದರೂ ಇದು ನನ್ನ ಪಾಲಿಗೆ ಬೆಸ್ಟ್‍ಅನ್ನುತ್ತಾರೆ ನಾಯಕಿ ಮೇಘನಾಗಾಂವ್ಕರ್.ಇದೇರೀತಿ ಮುಂದುವರೆದರೆ 50 ದಿನ ಖಚಿತಎಂಬುದುಛಾಯಾಗ್ರಾಹಕಗುಂಡ್ಲುಪೇಟೆ ಸುರೇಶ್‍ಖುಷಿಗೆ ಕಾರಣವಾಗಿತ್ತು.ಸದ್ಯ ಬೆಂಗಳೂರಿನಲ್ಲಿ 25 ಪರದೆಗಳಲ್ಲಿ ಚಿತ್ರವು ಪ್ರದರ್ಶನಗೊಳ್ಳುತ್ತಿದೆ ಎಂಬುದರ ಮಾಹಿತಿಯನ್ನು ವಿತರಕ ದೀಪಕ್‍ಗಂಗಾಧರ್ ತಿಳಿಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
14/12/19


ಕನ್ನಡ ಶಿಕ್ಷಕ ಕಾಳಿದಾಸನ ಖುಷಿಯ ಮಾತುಗಳು
ಶಿಕ್ಷಣ ವ್ಯವಸ್ಥೆಕುರಿತಾದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರವು ಗಳಿಕೆಯಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ನಿರ್ದೇಶಕಕವಿರಾಜ್ ಸಂತೋಷಕೂಟದಲಿಲ ಹೇಳುತ್ತಿದ್ದರು. ಬಿಡುಗಡೆ ದಿನ ಜನರು ಟಾಕೀಸಿನಲ್ಲಿ ಕಡಿಮೆಇರುವುದನ್ನುಕಂಡುಇನ್ನು ಮುಂದೆ ಹಾಡು ಬರೆಯಲಿಕ್ಕೆ ಲಾಯಕ್ಕುಎಂದು ನಿರ್ಧಾರ ಮಾಡಿದ್ದೆ. ಮಾರನೆ ದಿವಸ ಪತ್ರಿಕೆಗಳಲ್ಲಿ ಬಂದ ವಿಮರ್ಶೆ ನೋಡಿ ಸಮಾಧಾನ ಬಂದು ನಿರ್ಣಯ ಬದಲಸಿಕೊಳ್ಳಲಾಯಿತು.ಚಿತ್ರವು ಪ್ರತಿ ಪೋಷಕರಿಗೂ ಪರಿಣಾಮ ಬೀರಿ, ಹೊರಬರುವಾಗಚಿಂತನೆ ನಡೆಸುತ್ತದೆ.ನಮ್ಮ ಪ್ರಾಮಾಣಿಕ ಪ್ರಯತ್ನದ ಸಂದೇಶವುಜನರಿಗೆಗಾಡವಾಗಿತಟ್ಟಿದೆ.ತಂದೆತಾಯಿ ಮಕ್ಕಳ ಬಗ್ಗೆ ಭ್ರಮೆಯಲ್ಲಿ, ಉನ್ಮಾದದಲ್ಲಿಓಡುತ್ತಿರುವಾಗ, ಕಾಳಿದಾಸ ಹಿಡಿದು ನಿಲ್ಲಿಸಿದೆಎಂದು ಭಟ್ಟರು ಹೇಳಿದ್ದಾರೆ. ನೋಡಿದವರುಒಬ್ಬರು ಬದಲಾದರೆ ಸಾಕು ಅಂದುಕೊಂಡವನಿಗೆ, 1000 ಜನರು ಬದಲಾಗಿದ್ದಾರೆ.ಇನ್ನು ಮೂರು ದಿವಸ ಪ್ರದರ್ಶನಕಂಡರೆ ಬಂಡವಾಳ ವಾಪಸ್ಸು ಬರುತ್ತದೆಂದು ವಿತರಕರು ಹೇಳಿದ್ದಾರೆ.ಇದರಿಂದಧೈರ್ಯ ಬಂದು2-3 ಸಿನಿಮಾಗೆಕತೆ ಬರೆಯಲುಧೈರ್ಯ ಬಂದಿದೆಅಂತಾರೆ.

ಪ್ರಾರಂಭದಲ್ಲಿಕವಿರಾಜ್ ಮೇಲೆ ಭಯಂಕರ ಕೋಪ ಬಂದಿತ್ತು. ಮುಂದೆಅವರಚಿಂತನೆ, ಕೆಲಸ ನೋಡಿದಾಗ ನಿಜಕ್ಕೂ ಹೆಮ್ಮೆಆಯಿತು. ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಇದರ ಮಧ್ಯೆ ಕಾಳಿದಾಸನಿಗೆ ಪ್ರತ್ಯೇಕ ಸ್ಥಾನಸಿಕ್ಕಿದೆ.ಮಾಲ್‍ಗಳು ನಮಗೆ ಕೊಡಿರೆಂದು ಬೇಡಿಕೆಇಟ್ಟಿದ್ದಾರೆ.ಉತ್ತಮವಾದ ಕೆಲಸಕ್ಕೆ ಪ್ರತಿಫಲ ಸಿಗುತ್ತದೆಎಂಬುದಕ್ಕೆ ಸಾಕ್ಷಿಇದಾಗಿದೆ. ಒಂದು ಸಿನಿಮಾ ನಿಂತರೆ ನೂರುಜನರಿಗೆ ಕೆಲಸ ಸಿಗುತ್ತದೆ.ದೇವರುಎಲ್ಲವನ್ನುಕೊಟ್ಟಿದ್ದಾನೆ. ಒಳ್ಳೆ ಕತೆಗಳು ಬಂದರೆ ಮಾತ್ರ ನಟಿಸುತ್ತೇನೆ. ಈ ಎಲ್ಲಾಕಾರಣದಿಂದ ಮತ್ತೆ ನಿರ್ದೇಶನ ಮಾಡಲು ಮನಸ್ಸು ಮಾಡಿದ್ದೇನೆಂದು ಮನದಾಳದ ಬಯಕೆಯನ್ನುಜಗ್ಗೇಶ್‍ಹೇಳಿಕೊಂಡರು.

ನಾನು ಸಹ ಕನ್ನಡ ಶಾಲೆಯಲ್ಲಿಓದಿದ್ದರಿಂದ, ಅದೇ ಶಾಲೆಯ ಮಕ್ಕಳಿಗೆ ಚಿತ್ರತೋರಿಸಲಾಗಿದೆ. ಮಕ್ಕಳನ್ನು ಬೆಳಸವ ರೀತಿ, ಸರ್ಕಾರಿ ಶಾಲೆಗಳಲ್ಲಿ ನಡೆಯುವ ಘಟನೆಗಳು ತೋರಿಸಿರುವುದರಿಂದ ಪ್ರತಿತಾಲ್ಲೋಕಿನ ಪ್ರೇಕ್ಷಕರುಇದರಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಇಲ್ಲದೆಇರುವುದರಿಂದ ಟೆಕ್ಕಿಗಳೊಂದಿಗೆ ಸರ್ಕಾರವು ಸೇರಿಕೊಂಡುಅಭಿವೃದ್ದಿ ಪಡಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ನಿರ್ಮಾಪಕಯು.ಆರ್.ಉದಯ್‍ಕುಮಾರ್‍ಅಭಿಪ್ರಾಯಪಟ್ಟರು.

ಎರಡು ವರ್ಷದ ನಂತರಉತ್ತಮಚಿತ್ರದಲ್ಲಿ ನಟಿಸಿದೆ ಅಂತ ಸಾರ್ಥಕ ಭಾವನೆ ಬಂದಿದೆಎಂದು ವೈಯಕ್ತಿಕ ವಿಷಯವನ್ನು ನಾಯಕಿ ಮೇಘನಾಗಾಂವ್ಕರ್ ಹಂಚಿಕೊಂಡರು. ನಿರ್ಮಾಪಕರಿಗೆ ಅಸಲು ಬಂದರೆಅದು ಸಕ್ಸಸ್‍ಎಂದು ಬಣ್ಣಿಸಿಕೊಂಡರು ಸಂಗೀತ ನಿರ್ದೇಶಕಗುರುಕಿರಣ್.ಸನ್ನಿವೇಶದಲ್ಲಿ ನಾಯಕಿಖಿನ್ನತೆಯಿಂದಆತ್ನಹತ್ಯೆಗೆ ಶರಣಾಗುವದೃಶ್ಯಇದ್ದರೆ, ಪ್ರೇರಿತರಾಗಬಹದು.ಇದರಿಂದ ನಕರಾತ್ಮಕ ಅಂಶ ಸೇರಿಸಿದಂತೆ ಆಗುತ್ತದೆ. ಹೃದಯಘಾತದಿಂದಅಸುನೀಗಿದರೆಚೆನ್ನಾಗಿರುತ್ತದೆಂದು ಮೇಘನಾ ಹೇಳಿದಂತೆ ಮಾಡಿದ್ದು ಒಳ್ಳೆಯದಾಯಿತು ಎಂದುಗುಟ್ಟನ್ನು ನಿರ್ದೇಶಕರುತೆರೆದಿಟ್ಟರು.
ಯಜಮಾನರ ಸರ್ವರ್ ಸೋಮಣ್ಣ ನಂತರ ಈ ಚಿತ್ರವು ಮನಸ್ಸಿಗೆ ಹತ್ತಿರವಾಗಿದೆಎಂದುಅವರುಚಿತ್ರರಂಗದಲ್ಲಿ ಬೆಳೆದು ಬಂದದಾರಿಯನ್ನು ಪರಿಮಳಜಗ್ಗೇಶ್ ಮೆಲುಕು ಹಾಕಿದರು.ಮಕ್ಕಳಾದ ಆರ್ಯ, ಗ್ರೀಷ್ಟ, ಓಂ, ಗೌತಂ, ಮನೀಷ್, ಶ್ರಾವಣಿ, ಸಹ ನಿರ್ಮಾಪಕ ಶಿವಪ್ರಸಾದ್.ಎಂ.ವಿ, ವಿತರಕ ದೀಪಕ್‍ಗಂಗಾಧರ್ ಹಾಜರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
26/11/19

ಕಾಳಿದಾಸ ಕನ್ನಡ ಪ್ರೇಮ ಮತ್ತು ಹೋರಾಟ
ಸರ್ವರಿಗೂ ಸಮಾನ ಶಿಕ್ಷಣ ನೀತಿ ಜಾರಿಗೆ ತರಬೇಕೆಂದು ಹೋರಾಡುವ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರವು ಮುಖ್ಯ ಕಥಾಹಂದರ ಹೊಂದಿದೆ. ಪ್ರಚಲಿತ ಸ್ಥಿತಿಯಲ್ಲಿ ಪೋಷಕರಾದವರು ಮಕ್ಕಳಿಗೆ ಸ್ವಾತಂತ್ರ ನೀಡದೆ ಕೇವಲ ಓದು ಎಂದು ಹೇಳುತ್ತಿರುತ್ತಾರೆ. ಅಲ್ಲದೆ ತಮ್ಮ ಸಾಮಥ್ರ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಆರ್‍ಟಿಈ ದುರುಪಯೋಗ, ಶಿಕ್ಷಣ ವ್ಯವಸ್ಥೆ ಸಮಸ್ಯೆಯಿಂದ ಮದ್ಯಮ ವರ್ಗದ ಜನರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮತ್ತೋಂದು ಕಡೆ ಹೊಸ ತಲೆಮಾರಿನ ಶಿಕ್ಷಕರು ಇದರ ವ್ಯವಸ್ಥೆಯಿಂದ ಹೈರಾಣಾಗುತ್ತಿದ್ದಾರೆ. ಸಿನಿಮಾ ನೋಡಿ ಹೊರಬರುವ ಪ್ರೇಕ್ಷಕರು ಮಕ್ಕಳನ್ನು ಇದೇ ರೀತಿ ನೋಡಿಕೊಳ್ಳಬೇಕೆಂದು ಸಣ್ಣ ಮಟ್ಟದ ಬದಲಾವಣೆ ಆಗಬಹುದು, ಸರ್ಕಾರಕ್ಕೂ ಮಹತ್ವದ ಸಂದೇಶ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಪೂರಕವಾಗಿ ಸಿನಿಮಾದಲ್ಲಿ ಹೇಳಲಾಗಿದೆ.

ಸಾಹಿತಿ ಕವಿರಾಜ್ ಇಂತಹ ಅರ್ಥಪೂರ್ಣ ಅಂಶಗಳನ್ನು ಹಾಸ್ಯದ ಲೇಪನದಲ್ಲಿ ನಿರ್ದೇಶಿಸಿರುವುದು ನೋಡುಗರಿಗೆ ಬೋರ್ ಆಗುವುದಿಲ್ಲ. ಇವರಿಗೆ ಶಕ್ತಿ ತುಂಬಲು ಕನ್ನಡ ಶಿಕ್ಷಕನಾಗಿ ಜಗ್ಗೇಶ್ ಪ್ರಸಕ್ತ ಶಿಕ್ಷಣ ವ್ಯವಸ್ಥೆ ವಿರುದ್ದ ಹೋರಾಡುವ ಪಾತ್ರದಲ್ಲಿ ನಗಿಸಿ ಅಳಿಸುತ್ತಾರೆ. ಇಂಗ್ಲೀಷ್ ಹುಚ್ಚು, ಪತ್ನಿಯಾಗಿ ಮೇಘನಾಗಾಂವ್ಕರ್ ನಾಯಕಿ. ಪ್ರಾಂಶುಪಾಲರಾಗಿ ಅಂಬಿಕಾ, ಮುಖ್ಯಮಂತ್ರಿ ಆಗಿ ಟಿ.ಎಸ್.ನಾಗಭರಣ, ಸಚಿವರಾಗಿ ಸುರೇಶ್‍ಚಂದ್ರ, ಶಿಕ್ಷಣ ಮಂತ್ರಿಯಾಗಿ ಸುಂದರ್, ಬಿಇಓ ಆಗಿ ಯತಿರಾಜ್, ತಬಲನಾಣಿ ಇವರೊಂದಿಗೆ ಸಾಕಷ್ಟು ಮಕ್ಕಳು ನಟಿಸಿದ್ದಾರೆ. ಒಂದು ಹಾಡಿನಲ್ಲಿ 19 ನಾಯಕಿಯರು ಹೆಜ್ಜೆ ಹಾಕಿದ್ದಾರೆ. ಎರಡು ಹಾಡಿಗೆ ಗುರುಕಿರಣ್ ಸಂಗೀತ, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಅಲ್ಲಲ್ಲಿ ಕೆಲಸ ಮಾಡಿದೆ. ಪೋಷಕರು ಮಕ್ಕಳೊಂದಿಗೆ ನೋಡಬಹುದಾದ ಚಿತ್ರ.
ನಿರ್ಮಾಣ: ಯು.ಆರ್.ಉದಯ್‍ಕುಮಾರ್
***
ಸಿನಿ ಸರ್ಕಲ್.ಇನ್ ವಿಮರ್ಶೆ
22/11/19

ಕಾಳಿದಾಸರಿಗೆ ಬಿಡುಗಡೆ ಹಾದಿ ಸುಗಮ
ಈಗಿನ ಪ್ರಚಲಿತ ಸ್ಥಿತಿಯಲ್ಲಿ ಪೋಷಕರಾದವರು ಮಕ್ಕಳಿಗೆ ಸ್ವಾತಂತ್ರ ನೀಡದೆ ಕೇವಲ ಓದುಎಂದು ಹೇಳುತ್ತಿರುತ್ತಾರೆ. ಅಲ್ಲದೆತಮ್ಮ ಸಾಮಥ್ರ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.ಆರ್‍ಟಿಈದುರುಪಯೋಗ, ಶಿಕ್ಷಣ ವ್ಯವಸ್ಥೆ ಸಮಸ್ಯೆಯಿಂದ ಮದ್ಯಮ ವರ್ಗದಜನರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮತ್ತೋಂದುಕಡೆ ಹೊಸ ತಲೆಮಾರಿನ ಶಿಕ್ಷಕರು ಇದರ ವ್ಯವಸ್ಥೆಯಿಂದ ಹೈರಾಣಾಗುತ್ತಿದ್ದಾರೆ. ಸಿನಿಮಾ ನೋಡಿ ಹೊರಬರುವ ಪ್ರೇಕ್ಷಕರು ಮಕ್ಕಳನ್ನು ಇದೇರೀತಿ ನೋಡಿಕೊಳ್ಳಬೇಕೆಂದು ಸಣ್ಣ ಮಟ್ಟದ ಬದಲಾವಣೆ ಆಗಬಹುದು, ಸರ್ಕಾರಕ್ಕೂ ಮಹತ್ವದ ಸಂದೇಶ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಕುರಿತಂತೆ ಪೂರಕವಾಗಿ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿಕತೆ,ನಿರ್ದೇಶಕಕವಿರಾಜ್ ಹೇಳುವ ಪ್ರಯತ್ನ ಮಾಡಿದ್ದಾರೆ.

ಜಗ್ಗೇಶ್‍ಕನ್ನಡ ಶಿಕ್ಷಕರಾಗಿ ಕಾಣಿಸಿಕೊಂಡಿದ್ದು, ಒಂದುಕಡೆ ಶಾಲೆ, ಮನೆಯಲ್ಲಿಇಂಗ್ಲೀಷ್ ವ್ಯಾಮೋಹಿ ಪತ್ನಿ.ಮಗನನ್ನುಆಂಗ್ಲ ಶಾಲೆಗೆ ಸೇರಿಸುವ ಹುನ್ನಾರ.ಕತೆಯು ಹಾಸ್ಯದಲ್ಲಿ ಶುರುವಾಗುತ್ತಾ, ಕ್ಲೈಮಾಕ್ಸ್‍ದಲ್ಲಿಗಂಭೀರ ಸ್ವರೂಪ ಪಡೆಯುತ್ತದೆ. ಮೇಘನಾಗಾಂವ್ಕರ್ ನಾಯಕಿ. ಪ್ರಾಂಶುಪಾಲರಾಗಿ ಅಂಬಿಕಾ, ಮುಖ್ಯಮಂತ್ರಿ ಆಗಿ ಟಿ.ಎಸ್.ನಾಗಭರಣ, ಸಚಿವರಾಗಿ ಸುರೇಶ್‍ಚಂದ್ರ, ಶಿಕ್ಷಣ ಮಂತ್ರಿಯಾಗಿ ಸುಂದರ್, ಬಿಎಓ ಆಗಿ ಯತಿರಾಜ್, ತಬಲನಾಣಿಇವರೊಂದಿಗೆ ಸಾಕಷ್ಟು ಮಕ್ಕಳು ನಟಿಸಿದ್ದಾರೆ.ಮತ್ತು ವಿಶೇಷ ಎನ್ನುವಂತೆ19 ನಾಯಕಿಯರು ಸಿನಿಮಾದ ಪ್ರಮೋಷನ್‍ಗೀತೆಗೆ ಹೆಜ್ಜೆ ಹಾಕಿದ್ದಾರೆ. ಹರಿಪ್ರಿಯಾ, ಕಾರುಣ್ಯರಾಮ್, ರೂಪಿಕಾ, ಮಾನ್ವಿತಾಹರೀಶ್, ಅದಿತಿಪ್ರಭುದೇವ.ಅದಿತಿರಾವ್,ಸಂಯುಕ್ತಹೂರನಾಡು,ಸೋನುಗೌಡ ಮುಂತಾದವರುಬರುತ್ತಾರೆ. ಎರಡು ಹಾಡಿಗೆಗುರುಕಿರಣ್ ಸಂಗೀತ, ಗುಂಡ್ಲುಪೇಟೆ ಸುರೇಶ್‍ಛಾಯಾಗ್ರಹಣ, ಕೆ.ಎಂ.ಸುರೇಶ್ ಸಂಕಲನ, ಮೋಹನ್.ಬಿ.ಕೆರೆ ಕಲೆ ಇರಲಿದೆ. ಯು.ಆರ್.ಉದಯ್‍ಕುಮಾರ್ ನಿರ್ಮಾಣ, ಶಿವಪ್ರಸಾದ್, ವಿವೇಕ್.ಯು.ಬಿ ಮತ್ತು ವರುಣ್‍ದೇವಕೊಲಪು ಪಾಲುದಾರರಾಗಿರುವಸಿನಿಮಾವು ಶುಕ್ರವಾರದಿಂದಚಿತ್ರಮಂದಿರದಲ್ಲಿಅಲಂಕರಿಸಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
19/11/19ಶಿಕ್ಷಣ ವ್ಯವಸ್ಥೆ ಸಾರುವ ಸಿನಿಮಾ
ಈಗಿನ ಪ್ರಚಲಿತ ಸ್ಥಿತಿಯಲ್ಲಿ ಪೋಷಕರಾದವರು ಮಕ್ಕಳಿಗೆ ಸ್ವಾತಂತ್ರ ನೀಡದೆ ಕೇವಲ ಓದುಎಂದು ಹೇಳುತ್ತಿರುತ್ತಾರೆ. ಅಲ್ಲದೆತಮ್ಮ ಸಾಮಥ್ರ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.ಆರ್‍ಟಿಈದುರುಪಯೋಗ, ಶಿಕ್ಷಣ ವ್ಯವಸ್ಥೆ ಸಮಸ್ಯೆಯಿಂದ ಮದ್ಯಮ ವರ್ಗದಜನರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮತ್ತೋಂದುಕಡೆ ಹೊಸ ತಲೆಮಾರಿನ ಶಿಕ್ಷಕರು ಇದರ ವ್ಯವಸ್ಥೆಯಿಂದ ಹೈರಾಣಾಗುತ್ತಿದ್ದಾರೆ. ಸಿನಿಮಾ ನೋಡಿ ಹೊರಬರುವ ಪ್ರೇಕ್ಷಕರು ಮಕ್ಕಳನ್ನು ಇದೇರೀತಿ ನೋಡಿಕೊಳ್ಳಬೇಕೆಂದು ಸಣ್ಣ ಮಟ್ಟದ ಬದಲಾವಣೆ ಆಗಬಹುದು, ಸರ್ಕಾರಕ್ಕೂ ಮಹತ್ವದ ಸಂದೇಶ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಕುರಿತಂತೆ ಪೂರಕವಾಗಿ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿಕತೆ,ನಿರ್ದೇಶಕಕವಿರಾಜ್ ಹೇಳುವ ಪ್ರಯತ್ನ ಮಾಡಿದ್ದಾರೆ.

ಜಗ್ಗೇಶ್‍ಕನ್ನಡ ಶಿಕ್ಷಕರಾಗಿ ಕಾಣಿಸಿಕೊಂಡಿದ್ದು, ಒಂದುಕಡೆ ಶಾಲೆ, ಮನೆಯಲ್ಲಿಇಂಗ್ಲೀಷ್ ವ್ಯಾಮೋಹಿ ಪತ್ನಿ. ಮಗನನ್ನುಆಂಗ್ಲ ಶಾಲೆಗೆ ಸೇರಿಸುವ ಹುನ್ನಾರ. ಕತೆಯು ಹಾಸ್ಯದಲ್ಲಿ ಶುರುವಾಗುತ್ತಾ, ಕ್ಲೈಮಾಕ್ಸ್‍ದಲ್ಲಿಗಂಭೀರ ಸ್ವರೂಪ ಪಡೆಯುತ್ತದೆ. ಮೇಘನಾಗಾಂವ್ಕರ್ ನಾಯಕಿ. ಪ್ರಾಂಶುಪಾಲರಾಗಿ ಅಂಬಿಕಾ, ಮುಖ್ಯಮಂತ್ರಿ ಆಗಿ ಟಿ.ಎಸ್.ನಾಗಭರಣ, ಸಚಿವರಾಗಿ ಸುರೇಶ್‍ಚಂದ್ರ, ಶಿಕ್ಷಣ ಮಂತ್ರಿಯಾಗಿ ಸುಂದರ್, ಬಿಎಓ ಆಗಿ ಯತಿರಾಜ್, ತಬಲನಾಣಿಇವರೊಂದಿಗೆ ಸಾಕಷ್ಟು ಮಕ್ಕಳು ನಟಿಸಿದ್ದಾರೆ.ಮತ್ತು ವಿಶೇಷ ಎನ್ನುವಂತೆಇಪ್ಪತ್ತೋಂದು ನಾಯಕಿಯರು ಸಿನಿಮಾದ ಪ್ರಮೋಷನ್‍ಗೀತೆಗೆ ಹೆಜ್ಜೆ ಹಾಕಿದ್ದಾರೆ. ಹರಿಪ್ರಿಯಾ, ಕಾರುಣ್ಯರಾಮ್, ರೂಪಿಕಾ, ಮಾನ್ವಿತಾಹರೀಶ್, ಅದಿತಿಪ್ರಭುದೇವ.ಅದಿತಿರಾವ್,ಸಂಯುಕ್ತಹೂರನಾಡು,ಸೋನುಗೌಡ ಮುಂತಾದವರುಬರುತ್ತಾರೆ. ಎರಡು ಹಾಡಿಗೆಗುರುಕಿರಣ್ ಸಂಗೀತ, ಗುಂಡ್ಲುಪೇಟೆ ಸುರೇಶ್‍ಛಾಯಾಗ್ರಹಣ, ಕೆ.ಎಂ.ಸುರೇಶ್ ಸಂಕಲನ, ಮೋಹನ್.ಬಿ.ಕೆರೆ ಕಲೆ ಇರಲಿದೆ. ಸಿನಿಮಾದಟ್ರೈಲರ್‍ನ್ನುದರ್ಶನ್ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. ಸೋಮವಾರ ದಿನಕರತೂಗದೀಪ ತುಣುಕುಗಳನ್ನು ವೀಕ್ಷಿಸಿ ತಂಡದ ಕೆಲಸವನ್ನು ಶ್ಲಾಘಿಸಿದರು.ಯು.ಆರ್.ಉದಯ್‍ಕುಮಾರ್ ನಿರ್ಮಾಣ, ಶಿವಪ್ರಸಾದ್, ವಿವೇಕ್.ಯು.ಬಿ ಮತ್ತು ವರುಣ್‍ದೇವಕೊಲಪು ಪಾಲುದಾರರಾಗಿರುವಮುಂದಿನ ತಿಂಗಳು ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
21/10/19


ಜಗ್ಗೇಶ್ ಎದುರಿಸಿದ ಸವಾಲುಗಳು
ನವರಸ ನಾಯಕ ಜಗ್ಗೇಶ್ ಮೊದಲ ಪುತ್ರನನ್ನು ಇದೇ ಶಾಲೆಗೆ ಕಳುಹಿಸಬೇಕೆಂದು ಪತ್ನಿ ವರಾತ ಮಾಡಿದ್ದಾರೆ. ಇದರಿಂದ ತಾಕಲಾಟ, ಪೀಕಲಾಟ ಜೊತೆಗೆ ವಿಟಮಿನ್ ಎಂ ಸಮಸ್ಯೆ ಕೊನೆಗೂ ಅಂದುಕೊಂಡಂತೆ ಅವಳ ಇಚ್ಚೆಯಂತೆ ಆಗಿದೆ. ಇದನ್ನು ಹೇಳಲು ಪೀಠಿಕೆ ಇದೆ. ಅವರು ನಟಿಸುತ್ತಿರುವ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಒಂದು ಏಳೆ ಕತೆಯು ಇವರ ಜೀವನದಲ್ಲಿ ನಡೆದ ಘಟನೆಯಾಗಿದೆ. ಇದರ ಜೊತೆಗೆ ಪ್ರಸಕ್ತ ಶಿಕ್ಷಣ ವ್ಯವಸ್ಥೆ, ಮನೆ ಮೊದಲ ಪಾಠ ಶಾಲೆ, ನಂತರ ವಿದ್ಯೆಯನ್ನು ಶಿಕ್ಷಕರು ಹೇಗೆ ಹೇಳಿಕೊಡಬೇಕು. ಇವತ್ತಿನ ಜಾಗತಿಕರಣದಲ್ಲಿ ನಮ್ಮ ಭಾವನೆಯಿಂದ ಯಾರು ಬರುತ್ತಾ ಇಲ್ಲ. ನಮಗೆ ಅರಿವಿಲ್ಲದೆ ಶಿಕ್ಷಣದ ಮನಸ್ಥಿತಿಗೆ ಮಕ್ಕಳನ್ನು ಸಿದ್ದಪಡಿಸುತ್ತೇವೆ. ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ. ಅದರ ಹುನ್ನಾರ ಏನು. ಇದರಿಂದ ಯಾರಿಗೆ ಲಾಭ ಎಂಬ ಸೂಕ್ಷವಾದ ಅಂಶಗಳನ್ನು ಶೇಕಡ 70 ಹಾಸ್ಯದೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಸರ್ಕಾರ ಜನರಿಗೆ ವಿವಿಧ ರೀತಿಯ ಸವಲತ್ತುಗಳನ್ನು ನೀಡುವ ಬದಲು ಶಿಕ್ಷಣವನ್ನು ಉಚಿತವಾಗಿ ನೀಡಿದಲ್ಲಿ ಮನೆಗೊಬ್ಬ ವಿದ್ಯಾವಂತ ಹುಟ್ಟಿಕೊಳ್ಳುತ್ತಾನೆ. ಪೋಷಕರಿಗೆ ಮಾರ್ಗದರ್ಶನ, ಸಮಾಜವನ್ನು ಎಚ್ಚರಿಸುವುದು ಇಂತದ ಅರ್ಥಪೂರ್ಣ ಸಂದೇಶವನ್ನು ಹೇಳಲಾಗಿ, ಇಂದಿನ ವ್ಯವಸ್ಥೆ ಸರಿಯಾಗಬೇಕೆಂಬ ಸಣ್ಣ ಕ್ರಾಂತಿಗೆ ಬೀಜ ಬಿತ್ತುವ ಕೆಲಸವನ್ನು ಸಿನಿಮಾದಲ್ಲಿ ಮಾಡಲಾಗುತ್ತಿದೆ. ಮದುವೆಯ ಮಮತೆಯ ಕರೆಯೋಲೆ ನಂತರ ಕತೆ ಬರೆದು ನಿರ್ದೇಶನ ಮಾಡುತ್ತಿರುವ ಸಾಹಿತಿ ಕವಿರಾಜ್ ಮೇಷ್ಟ್ರು ಚಿತ್ರಕ್ಕೆ ಎರಡನೆ ಬಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ವಿಭಿನ್ನ ಪಾತ್ರದಲ್ಲಿ ಅಭಿನಯಿಸಬೇಕೆಂದು ಹೇಳುತ್ತದ್ದ ಜಗ್ಗೇಶ್ ಚಿತ್ರದಲ್ಲಿ ಕನ್ನಡ ಶಿಕ್ಷಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಡ್ರನ್ ಹೆಂಡತಿ, ಒಂದು ಮಗುವಿನ ತಾಯಿ ಪಾತ್ರದಲ್ಲಿ ಗ್ಯಾಪ್ ನಂತರ ಅಭಿನಯಿಸುತ್ತಿರುವ ಮೇಘನಾಗಾಂವ್ಕರ್ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ಅಂಬಿಕಾ, ಉಳಿದಂತೆ ತಬಲನಾಣಿ, ಯತಿರಾಜ್, ಮಾಸ್ಟರ್ ಆರ್ಯ ಮುಂತಾದವರು ತಂಡದಲ್ಲಿ ಇದ್ದಾರೆ. ಮೂರು ಹಾಡುಗಳಿಗಿಂತ ಹಿನ್ನಲೆ ಸಂಗೀತಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಅಂತ ಗುರುಕಿರಣ್ ಹೇಳುತ್ತಾರೆ. ಛಾಯಗ್ರಹಣ ಗುಂಡ್ಲುಪೇಟೆ ಸುರೇಶ್, ಸಂಕಲನ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶನ ಮೋಹನ್.ಬಿ.ಕೆರೆ, ಸಾಹಸ ಥ್ರಿಲ್ಲರ್‍ಮಂಜು ನಿರ್ವಹಿಸುತ್ತಿದ್ದಾರೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.

ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಯಲ್ಲಿ ಓದಿ, ಇಂದು ನೂರಾರು ಜನರಿಗೆ ಉದ್ಯೋಗ ನೀಡಿರುವ ಉದಯ್‍ಕುಮಾರ್ ಮೂರು ಕತೆಗಳನ್ನು ಕೇಳಿ ಅಂತಿಮವಾಗಿ ಕಾಳಿದಾಸನ ಕತೆಗೆ ಬಂಡವಾಳ ಹೂಡಲು ಮನಸ್ಸು ಮಾಡಿದ್ದಾರೆ. ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
12/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore