HOME
CINEMA NEWS
GALLERY
TV NEWS
REVIEWS
CONTACT US
ಮನಸ್ಸಿಗೆ ತಂಪು ನೀಡುವ ಕೃಷ್ಣ ತುಳಸಿ
‘ಕೃಷ್ಣ ತುಳಸಿ’ ಹೆಸರು ಕೇಳಿದಾಗ ಮನಸ್ಸಿನೊಳಗೊಂಡು ಖುಷಿಯ ಅನುಭವ ಕೊಡುತ್ತದೆ. ಅದರಂತೆ ಇಡೀ ಚಿತ್ರದಲ್ಲಿ ಇಬ್ಬರ ಅಂದರ ನವಿರಾದ ಪ್ರೇಮ ಕಥನ ನೋಡಲು ಬೇಜಾರು ಆಗುವುದಿಲ್ಲ. ಅಂದರ ಲವ್‍ಸ್ಟೋರಿ ಎಂದಾಗ ಸಹಜವಾಗಿ ಏನಿರುತ್ತದೆ ಅಂದುಕೊಂಡವರಿಗೆ ಚಿತ್ರಮಂದಿರದ ಒಳಹೊಕ್ಕಾಗ ಬೇರೆಯದೆ ಅನುಭವ ಕೊಡುತ್ತದೆ. ಅವನಿಗೆ ಪತ್ನಿಯಾಗಿ ಕೈ ಹಿಡಿಯುವವಳ ಮೂಲಕ ಪ್ರಪಂಚವನ್ನು ನೋಡುವ ಪಸೆ. ಅಪ್ಪನ ಆಶ್ರಯದಲ್ಲಿ ಬೆಳೆದ ಆಕೆಗೆ ಆತನೇ ಬೆಳಕು ಕೊಡುವ ಸೂರ್ಯ ಅಂತ ನಂಬಿರುತ್ತಾಳೆ. ಪ್ರಾರಂಭದಲ್ಲಿ ಆತ ಕುರುಡ ಅಂತ ಈಕೆಗೆ ತಿಳಿದಿರುವುದಿಲ್ಲ. ಈತನಿಗೆ ಅವಳು ಕುರುಡಿ ಎಂದು ಗೊತ್ತಿರವುದಿಲ್ಲ. ಹೀಗೆ ಪರಸ್ಪರ ಗಾಡವಾದ ಗೆಳೆತನ ಬೆಸೆದು ಹಾಕುವುದು ಮೈಸೂರು ನಗರದ ರಸ್ತೆಗಳು ಹಾಗೂ ಅಲ್ಲಿನ ಘಮ ಘಮ ತರಿಸುವ ಮಲ್ಲಿಗೆ ವಾಸನೆ. ಮುಂದೆ ಇಬ್ಬರಿಗೂ ಸತ್ಯ ಅರಿವಾಗುತ್ತದೆ. ನಂತರ ಇಬ್ಬರು ಒಂದಾಗುತ್ತಾರಾ ಪ್ರೀತಿ ಉಳಿಯುತ್ತದಾ ಎನ್ನುವುದಕ್ಕೆ ಸಿನಿಮಾ ನೋಡುವುದು ಒಳಿತು.

ಪ್ರಚಲಿತ ಚಿತ್ರಗಳಲ್ಲಿ ಲಾಂಗ್, ಮಚ್ಚು, ಐಟಂ ಹಾಡುಗಳನ್ನು ನೋಡಿ ಬೇಸತ್ತಿದ್ದ ಪ್ರೇಕ್ಷಕನಿಗೆ ಈ ಸಿನಿಮಾವು ಮನಸ್ಸನ್ನು ಕದಡುತ್ತದೆ. ಮೊದಲ ಪ್ರಯತ್ನದಲ್ಲೆ ನಿರ್ದೇಶಕ ಸುಖೇಶ್‍ನಾಯಕ್ ಹೊಸ ಬಗೆಯ ಕತೆಯನ್ನು ನೀಡಿ ತಾನು ಸಧುಬಿರುಚಿಯ ಚಿತ್ರ ನೀಡಬಲ್ಲೆ ಎಂದು ಸಾಬೀತು ಮಾಡುವಲ್ಲಿ ಸಪಲರಾಗಿದ್ದಾರೆ. ಬಿಳಿ ಹಾಳೆಯಲ್ಲಿ ಏನು ಬೇಕಾದರೂ ಬರೆದುಕೊಳ್ಳಬಹುದು ಎನ್ನುವಂತೆ ನಾಯಕ ಸಂಚಾರಿವಿಜಯ್ ಯಾವುದೇ ಪಾತ್ರಕ್ಕೆ ಬೇಕಾದರೂ ಸೈ ಅನಿಸಿಕೊಳ್ಳುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಅಂದರಾಗಿ ಅವರ ಅಭಿನಯ ಮತ್ತೋಮ್ಮೆ ನೋಡುವಂತಿದೆ. ತುಳಸಿಯಾಗಿ ಮೇಘಶ್ರೀ ಅಭಿನಯ ಜೊತೆಗೆ ಸುಂದರವಾಗಿ ತೆರೆ ಮೇಲೆ ಕಾಣಿಸುತ್ತಾರೆ. ನಗಿಸಲು ಕುರಿಪ್ರತಾಪ್, ತಬಲನಾಣಿ ಇದ್ದರೆ, ಭಾವನೆಗಳ ಲೋಕಕ್ಕೆ ಕರೆದುಕೊಂಡು ಹೋಗಲು ರಮೇಶ್‍ಭಟ್ ನಟನೆ ಇದೆ. ಕಿರಣ್‍ರವೀಂದ್ರನಾಥ್ ಸಂಗೀತದಲ್ಲಿ ಎರಡು ಹಾಡುಗಳು ಕೇಳವಂತಿದೆ. ಇರುವುದರಲ್ಲೆ ಚೊಕ್ಕದಾಗಿ ಚಿತ್ರೀಕರಿಸಿರುವ ನವೀನ್‍ಅಕ್ಕಿ ಛಾಯಗ್ರಹಣ ಮತ್ತೋಂದು ಪ್ಲಸ್ ಪಾಯಿಂಟ್. ದೇವನಹಳ್ಳಿಯ ನಾರಾಯಣಸ್ವಾಮಿ ಪ್ರಥಮ ಪ್ರಯತ್ನದಲ್ಲೆ ಅದ್ಬುತ ಚಿತ್ರ ನಿರ್ಮಾಣ ಮಾಡಿರುವುದಕ್ಕೆ ನಮ್ಮ ಕಡೆಯಿಂದ ಒಂದು ಸಲಾಂ.
ಸಿನಿ ಸರ್ಕಲ್.ಇನ್ ವಿಮರ್ಶೆ
21/04/18

ಮಾತಿನ ಮಂಟಪದಲ್ಲಿ ಕೃಷ್ಣ ತುಳಸಿ
ಬಿಡುಗಡೆಯಾಗುತ್ತಿರುವ ‘ಕೃಷ್ಣ ತುಳಸಿ’ ಚಿತ್ರತಂಡವು ಸಿನಿಮಾದ ಮತ್ತಷ್ಟು ಮಾಹಿತಿಗಳನ್ನು ಮಾಧ್ಯಮದ ಎದುರು ಹಂಚಿಕೊಂಡಿತು. ನಾನು ಅವನಲ್ಲ ಅವಳು, ಅರಿವು ಚಿತ್ರಗಳ ನಂತರ ಹೊಸ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ತುಡಿತವಿತ್ತು. ಅಂತಹ ಸಂದರ್ಭದಲ್ಲಿ ಈ ಸಿನಿಮಾಕ್ಕೆ ಕರೆ ಬಂತು. ಕತೆ ಕೇಳಿ ಅಂದನ ಪಾತ್ರ ಎಂದಾಗ ಒಂದು ಕ್ಷಣ ದೇಹವೆಲ್ಲಾ ಕಂಪನವಾಯಿತು. ನಿರ್ದೇಶಕರು ಅಣಕ ಅಭಿನಯದಲ್ಲಿ ಪರಿಣಿತರಾಗಿದ್ದರಿಂದ ಸೆಟ್‍ನಲ್ಲಿ ಅಂದುಕೊಂಡಂತೆ ಅಭಿನಯವನ್ನು ತೆಗೆಸುತ್ತಿದ್ದರು. ಅಂದರ ಜೀವನ ಚರಿತ್ರಯನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ನವಿರಾದ ಪ್ರೇಮಕತೆಯಲ್ಲಿ ಅದ್ಬುತ ದೃಶ್ಯಕಾವ್ಯಗಳು ಚೆನ್ನಾಗಿ ಮೂಡಿಬಂದಿದೆ. ಅಂದರ ಶಾಲೆಗೆ ಭೇಟಿ ಅವರ ಹಾವಭಾವ, ಮಾತನಾಡುವ ರೀತಿಯನ್ನು ಗಮನಿಸಿ ಅದರಂತೆ ಕ್ಯಾಮರ ಮುಂದೆ ನಿಲ್ಲಲಾಯಿತು. ಕುರುಡನಾಗಿದ್ದರೂ ನಾಯಕಿ ಮುಖಾಂತರ ಪ್ರಪಂಚವನ್ನು ಅಂತರಾಳದಲ್ಲಿ ನೋಡುತ್ತಾನೆ. ಪ್ರಾಚ್ಯವಸ್ತು ಇಲಾಖೆಯಲ್ಲಿ ಗೈಡ್ ಪಾತ್ರವನ್ನು ಮಾಡಲಾಗಿದೆ. ಚಿತ್ರವು ಗೆಲ್ಲಬಹುದೆಂಬ ಆಶಾಭಾವನೆ ಇದೆ ಎಂದು ನಾಯಕ ಸಂಚಾರಿವಿಜಯ್ ಹೇಳಿದರು.

ಚಿತ್ರಕ್ಕೆ ಧ್ವನಿ ನೀಡದೆ ಕಾರ್ಟನ್, ಜಾಹಿರಾತುಗಳಿಗೆ ಕಂಠದಾನ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಖುಷಿ ಕೊಟ್ಟಿತ್ತು ಎಂಬುದು ನಾಯಕಿ ಮೇಘಶ್ರೀ ನುಡಿ. ಇದಕ್ಕೂ ಮುನ್ನ ಮಾತನಾಡಿದ ನಿರ್ದೇಶಕ ಸುಖೇಶ್‍ನಾಯಕ್ ಒಳ್ಳೆ ನಿರ್ಮಾಪಕ ಸಿಕ್ಕರೆ ಉತ್ತಮ ಚಿತ್ರ ಮಾಡಬಹುದು ಎಂಬುದಕ್ಕೆ ಸಾಕ್ಷಿ ಕೃಷ್ಣತುಳಸಿ ಆಗಿದೆ. ಕತೆಯಲ್ಲಿ ಬಸ್ ಪ್ರಮುಖವಾಗಿರುವ ಕಾರಣ ಬಸ್‍ನೊಳಗೆ ಟ್ರಾಲಿ ಬಳಸಿ ಚಿತ್ರೀಕರಿಸಲಾಗಿದೆ. ಪ್ರೀತಿಯ ಕುರಿತ ಹಾಡನ್ನು ಮೈಸೂರು ಅರಮನೆ ಮುಂಬಾಗ ಮಳೆಯಲ್ಲಿ , ನಿಜವಾದ ಅಂದರನ್ನು ಬಳಸಿಕೊಂಡು ಮಡಕೇರಿಯಲ್ಲಿ ಒಂದು ಹಾಡನ್ನು ಸೆರೆಹಿಡಯಲಾಗಿದೆ. ನಾಯಕ ಗೈಡ್ ಆಗಿರುವುದರಿಂದ ಪ್ರಾಚ್ಯವಸ್ತು ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಪಾತ್ರ ಮಾಡಿಸಲಾಗಿದೆ. ಯು ಪ್ರಮಾಣಪತ್ರ ಹೊಂದಿರುವ ಚಿತ್ರಕ್ಕೆ ಪತ್ರಕರ್ತರು ಪ್ರೋತ್ಸಾಹ ನೀಡಬೇಕೆಂದು ಅಲವತ್ತು ಮಾಡಿಕೊಂಡರು.

ಯೋಗರಾಜಭಟ್, ಜಯಂತ್‍ಕಾಯ್ಕಣಿ, ಹೃದಯಶಿವ, ಧನಂಜಯ್ ಸಾಹಿತ್ಯದ ಹಾಡುಗಳು ಎಲ್ಲರ ಮನ ಸೆಳೆದಿದೆ ಎನ್ನುತ್ತಾರೆ ಸಂಗೀತ ನಿರ್ದೇಶಕ ಕಿರಣ್‍ರವೀಂದ್ರನಾಥ್.

ಅಂದುಕೊಂಡಂತೆ ನಿರ್ದೇಶಕರು ಮಾತು ಉಳಿಸಿಕೊಂಡಿದ್ದಾರೆ. ಹೊಸಬರ ಚಿತ್ರಕ್ಕೆ ಹಣ ಹೂಡಿದ್ದು 50 ಚಿತ್ರ ಮಾಡಿದಷ್ಟು ಅನುಭವವಾಗಿದೆ. ಎಲ್ಲಿಯೂ ಡಬ್ಬಲ್ ಮೀನಿಂಗ್ ಡೈಲಾಗ್ ಇರದಂತೆ ಚಿತ್ರ ಬಂದಿದೆ. ಸ್ವಲ್ಪ ಮಟ್ಟಿಗೆ ಬಜೆಟ್ ಜಾಸ್ತಿ ಆದರೂ ದೃಶ್ಯಗಳು ಅದ್ಬುತವಾಗಿದೆ. ತೆಲುಗು ಚಿತ್ರರಂಗದವರು ಹಕ್ಕು ನೀಡಿ ಎಂದು ಕೇಳುತ್ತಿದ್ದಾರೆ. ಮತ್ತು ವಾಹಿನಿಯವರಿಂದ ಬೇಡಿಕೆ ಬಂದಿದೆ. ಎಲ್ಲವು ಬಿಡುಗಡೆ ನಂತರ ತೀರ್ಮಾನಿಸುವುದಾಗಿ ಹೇಳಿದರು ನಿರ್ಮಾಪಕ ಎಂ.ನಾರಾಯಣಸ್ವಾಮಿ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
17/04/18

ಕೃಷ್ಣ ತುಳಸಿ ಬಿಡುಗಡೆಗೆ ಮಹೂರ್ತ ಫಿಕ್ಸ್
‘ಕೃಷ್ಣ ತುಳಸಿ’ ಚಿತ್ರಕ್ಕೆ ನಿರ್ದೇಶಕ ಸುಖೇಶ್‍ನಾಯಕ್ ಕತೆಯನ್ನು ಸಿದ್ದಪಡಿಸಲು ಮೂರು ವರ್ಷ ಸಮಯ ತೆಗೆದುಕೊಂಡಿದ್ದಾರೆ. . ನಾಯಕ ಪ್ರವಾಸಿ ಗೈಡ್ ಆಗಿರುವ ಕಾರಣ ಮೈಸೂರು, ಮಡಕೇರಿ ತಟಗಳಲ್ಲಿ 55 ದಿನ ಚಿತ್ರೀಕರಣ ನಡೆಸಲಾಗಿದೆ. ಕಲಾವಿದರೊಂದಿಗೆ ಒಂದು ಬಸ್ ಪ್ರಮುಖ ಪಾತ್ರವಾಗಿ ಕಾಣ ಸಿಕೊಳ್ಳಲಿದೆ. ಹೊಸ ಅನುಭವ ಎನ್ನುವಂತೆ ಕುರುಡನಾಗಿ ಅಭಿನಯ ಮಾಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಚಿತ್ರದ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ನಾಯಕಿ ಮೇಘಶ್ರೀ ತಮ್ಮ ಪಾತ್ರಕ್ಕೆ ಧ್ವನಿ ನೀಡಿರುವುದು ವಿಶೇಷವಾಗಿದೆ. ಆತ್ಮವಿಶ್ವಾಸ ತುಂಬುವ ಪಾತ್ರದಲ್ಲಿ ನಟನೆ ಮಾಡಿರುವುದು ತಬಲನಾಣ . ಜಯಂತ್‍ಕಾಯ್ಕಣ , ಯೋಗರಾಜಭಟ್, ಹೃದಯಶಿವ ಸಾಹಿತ್ಯದ ಗೀತೆಗಳಿಗೆ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಕಿರಣ್‍ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ನವೀನ್.ಎಸ್.ಅಕ್ಕಿ, ಸಂಕಲನ ದೀಪು.ಎಸ್.ಕುಮಾರ್ ನಿರ್ವಹಣೆ ಇದೆ. ರಿಯಲ್ ಎಸ್ಟೆಟ್ ಉದ್ಯಮಿ ಮಜ್ಜಿಗೆ ಹೊಸಹಳ್ಳಿಯ ಎಂ.ನಾರಾಯಣಸ್ವಾಮಿ ಈ ಚಿತ್ರದ ಜೊತೆಗೆ ಕಫೆಗ್ಯಾರೇಜ್, ಉಮಾಗೋಲ್ಡ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ತಿಂಗಳು 20ರಂದು ಸುಮಾರು 80 ಕೇಂದ್ರಗಳಲ್ಲಿ ಚಿತ್ರವು ತೆರೆಗೆ ಬರಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
13/04/18

ಕೃಷ್ಣ ತುಳಸಿ ಯು ಪ್ರಮಾಣ ಪತ್ರ
ತುಳಸಿ ಹಬ್ಬದ ಹಿಂದಿನ ದಿನದಂದು ಬಿಡುಗಡೆಮಾಡಲಾದ ‘ಕೃಷ್ಣ ತುಳಸಿ’ ಚಿತ್ರದ ಒಂದು ಹಾಡು ವೈರಲ್ ಆಗಿತ್ತು. ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಸುಖೇಶ್‍ನಾಯಕ್ ಕತೆಯನ್ನು ಸಿದ್ದಪಡಿಸಲು ಮೂರು ವರ್ಷ ಸಮಯ ತೆಗೆದುಕೊಂಡಿದ್ದಾರೆ. ನಾಯಕ ಪ್ರವಾಸಿ ಗೈಡ್ ಆಗಿರುವ ಕಾರಣ ಮೈಸೂರು, ಮಡಕೇರಿ ತಟಗಳಲ್ಲಿ 55 ದಿನ ಚಿತ್ರೀಕರಣ ನಡೆಸಲಾಗಿದೆ. ಕಲಾವಿದರೊಂದಿಗೆ ಒಂದು ಬಸ್ ಪ್ರಮುಖ ಪಾತ್ರವಾಗಿ ಕಾಣಿಸಿಕೊಳ್ಳಲಿದೆ. ಹೊಸ ಅನುಭವ ಎನ್ನುವಂತೆ ಕುರುಡನಾಗಿ ಅಭಿನಯ ಮಾಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಚಿತ್ರದ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ನಾಯಕಿ ಮೇಘಶ್ರೀ ತಮ್ಮ ಪಾತ್ರಕ್ಕೆ ಧ್ವನಿ ನೀಡಿರುವುದು ವಿಶೇಷವಾಗಿದೆ. ಆತ್ಮವಿಶ್ವಾಸ ತುಂಬುವ ಪಾತ್ರದಲ್ಲಿ ನಟನೆ ಮಾಡಿರುವುದು ತಬಲನಾಣಿ. ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಕಿರಣ್‍ರವೀಂದ್ರನಾಥ್ ಸಂಗೀತ, ಛಾಯಗ್ರಹಣ ನವೀನ್.ಎಸ್.ಅಕ್ಕಿ, ಸಂಕಲನ ದೀಪು.ಎಸ್.ಕುಮಾರ್ ನಿರ್ವಹಣೆ ಇದೆ. ರಿಯಲ್ ಎಸ್ಟೆಟ್ ಉದ್ಯಮಿ ಮಜ್ಜಿಗೆ ಹೊಸಹಳ್ಳಿಯ ಎಂ.ನಾರಾಯಣಸ್ವಾಮಿ ಈ ಚಿತ್ರದ ಜೊತೆಗೆ ಕಫೆಗ್ಯಾರೇಜ್, ಉಮಾಗೋಲ್ಡ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸೆನ್ಸಾರ್‍ನವರು ಯು ಪ್ರಮಾಣ ಪತ್ರ ನೀಡಿ ಪ್ರಶಂಸೆ ವ್ಯಕ್ತಪಡಿಸಿರುವ ಚಿತ್ರವು ಇದೇ ತಿಂಗಳು 20ರಂದು ತೆರೆಕಾಣುವ ಸಾದ್ಯತೆಗಳು ಇವೆ.
ಸಿನಿ ಸರ್ಕಲ್.ಇನ್ ನ್ಯೂಸ್
9/04/18ತುಳಸಿ ಹಬ್ಬಕ್ಕೆ ಕೃಷ್ಣ ತುಳಸಿ ಹಾಡು
ತುಳಸಿ ಹಬ್ಬ ಮುನ್ನ ದಿನ ‘ಕೃಷ್ಣ ತುಳಸಿ’ ಚಿತ್ರದ ಒಂದು ಹಾಡನ್ನು ಮಾದ್ಯಮದವರಿಗೆ ತೋರಿಸಲಾಯಿತು. ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಸುಖೇಶ್‍ನಾಯಕ್ ಕತೆಯನ್ನು ಸಿದ್ದಪಡಿಸಲು ಮೂರು ವರ್ಷ ಸಮಯ ತೆಗೆದುಕೊಳ್ಳಲಾಗಿದೆ. ನಾಯಕ ಪ್ರವಾಸಿ ಗೈಡ್ ಆಗಿರುವ ಕಾರಣ ಮೈಸೂರು, ಮಡಕೇರಿ ತಟಗಳಲ್ಲಿ 55 ದಿನ ಚಿತ್ರೀಕರಣ ನಡೆಸಿದ್ದು, ಒಂದು ಹಾಡು ಬಾಕಿ ಇದೆ. ಕಲಾವಿದರೊಂದಿಗೆ ಒಂದು ಬಸ್ ಪ್ರಮುಖ ಪಾತ್ರವಾಗಿ ಕಾಣ ಸಿಕೊಳ್ಳಲಿದೆ ಎಂಬುದರ ವಿವರ ನೀಡಿದರು. ಇಲ್ಲಿಯವರೆಗೂ ನಟಿಸಿರುವ ಚಿತ್ರಗಳಲ್ಲಿ ಈ ಪಾತ್ರ ನೆನಪಿನಲ್ಲಿ ಉಳಿಯಲಿದೆ. ಕುರುಡನಾಗಿ ಅಭಿನಯ ಮಾಡಿದ್ದು ಛಾಲೆಂಜಿಂಗ್ ಮತ್ತು ಇಷ್ಟವಾಯಿತು ಅಂತಾರೆ ಸಂಚಾರಿವಿಜಯ್. ನಿರ್ದೇಶಕರು ಕತೆ ಹೇಳಿದಾಗ ಪಾತ್ರಕ್ಕೆ ತೂಕ ಇದೆಯಾ ಎಂಬುದರ ಅನುಮಾನವಿತ್ತು. ಡಬ್ಬಿಂಗ್ ಮಾಡುವಾಗ ಮನಸ್ಸಿಗೆ ನೆಮ್ಮದಿ ಬಂತು ಅಂತ ಹೇಳಿಕೊಂಡರು ನಾಯಕಿ ಮೇಘಶ್ರೀ. ಅಂದರಿಗೆ ಆತ್ಮವಿಶ್ವಾಸ ತುಂಬುವ ಪಾತ್ರದಲ್ಲಿ ನಟನೆ ಮಾಡುವುದರ ಜೊತೆಗೆ ನೋಡುಗರಿಗೆ ಖುಷಿ ಕೊಡುತ್ತೇನೆಂದು ಮಾತನಾಡಿದ್ದು ತಬಲನಾಣ .

ಕಿರಣ್‍ರವೀಂದ್ರನಾಥ್ ಸಂಗೀತ, ಛಾಯಗ್ರಹಣ ನವೀನ್.ಎಸ್.ಅಕ್ಕಿ, ಸಂಕಲನ ದೀಪು.ಎಸ್.ಕುಮಾರ್ ನಿರ್ವಹಣೆ ಇದೆ. ಮಜ್ಜಿಗೆ ಹೊಸಹಳ್ಳಿಯ ಎಂ.ನಾರಾಯಣಸ್ವಾಮಿ ರಿಯಲ್ ಎಸ್ಟೆಟ್ ನಡೆಸುತ್ತಿದ್ದು, ಇದರ ಜೊತೆಗೆ ಕಫೆಗ್ಯಾರೇಜ್, ಉಮಾಗೋಲ್ಡ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದಾಗಿ ಮಾದ್ಯಮದ ಸಹಕಾರ ಬೇಕೆಂದು ಅವಲತ್ತು ಮಾಡಿಕೊಂಡರು. ಸಹ ನಿರ್ಮಾಪಕ ಶ್ರೀಧರ್‍ಕುಲಕಣ ್ ಉಪಸ್ತಿತರಿದ್ದರು.
-03/11/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore