HOME
CINEMA NEWS
GALLERY
TV NEWS
REVIEWS
CONTACT US
ಸೆಪ್ಟಂಬರ್27ಕ್ಕೆ ಕಿಸ್ ನೋಡಬಹುದು
ಕೀಪ್‍ಇಟ್ ಶಾರ್ಟ್‍ಅಂಡ್ ಸ್ವೀಟ್ ಎಂಬುದು ಶೀರ್ಷಿಕಗೆ ಅರ್ಥಕೊಡುತ್ತದೆ.ಋಷಿಕೇಶದಲ್ಲಿತೆಗೆದಒಂದುದೃಶ್ಯಕ್ಕೆ ಹದಿನಾಲ್ಕು ಲಕ್ಷಖರ್ಚುಆಗಿದೆ.ಆರ್ಧ ಭಾರತದ ಸುಂದರ ತಾಣಗಳಾದ ಬೆಂಗಳೂರು, ಕೇರಳ, ಮಡಕೇರಿ, ಊಟಿ, ಜೈಸಲ್‍ಮರ್, ಜೋಧ್‍ಪುರ್, ಕುದರೆಮುಖ, ಆಂಧ್ರಒಂದು ಹಾಡನ್ನು ಬ್ಯಾಂಕಾಂಕ್‍ದಲ್ಲಿಚಿತ್ರೀಕರಣ ನಡೆಸಲಾಗಿದೆ. ‘ನೀನೆ ಮೊದಲು ನೀನೇ ಕೊನೆ’ ಸಾಂಗ್‍ನ್ನುಎಲ್ಲೇ ಹೋದರೂರಾಷ್ಟ್ರಗೀತೆತರಹ ಹಾಡುತ್ತಾರೆ. ಇದೇ ಹಾಡಿಗೆ ವಿ.ಹರಿಕೃಷ್ಣ ಪುತ್ರ ಸಂಗೀತ ಸಂಯೋಜಿಸಿದ್ದಾರೆ. ಯುಟ್ಯೂಬ್‍ದಲ್ಲಿಒಂದುಕೋಟಿಜನರುವೀಕ್ಷಿಸಿದ್ದಾರೆ.ಅಮ್ಮನ ಶಿಪಾರಸ್ಸಿನಿಂದ 220 ಅಡಿಷನ್ ಹುಡುಗರಲ್ಲಿ ವಿರಾಟ್‍ಆಯ್ಕೆಯಾಗಿದ್ದಾರೆ. ಚಿಕ್ಕಣ್ಣ, ಸಾಧುಕೋಕಿಲ, ದತ್ತಣ್ಣ, ಶಿವರಾಜ್.ಕೆ.ಆರ್.ಪೇಟೆ ಅಲ್ಲದೆ 120 ಹೊಸ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಪುನೀತ್‍ರಾಜ್‍ಕುಮಾರ್‍ಒಂದುಗೀತೆಯನ್ನು ಹಾಡಿದ್ದಾರೆ.ಟ್ರೈಲರ್‍ಗೆಧ್ರುವಸರ್ಜಾಧ್ವನಿ ನೀಡಿದರೆ, ಯಶ್ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ. ಐದನೇ ನಿರ್ದೇಶನ, ಮೊದಲನೇ ನಿರ್ಮಾಣವಾಗಿದೆ.ಸೆನ್ಸಾರ್‍ನವರುದೃಶ್ಯಕ್ಕೆಕಟ್,ಮ್ಯೂಟ್ ಮಾಡದೆ ಶುದ್ದಯುಎ ಪ್ರಮಾಣ ಪತ್ರ ನೀಡಿದ್ದಾರೆಂದುಎ.ಪಿ.ಅರ್ಜುನ್ ದೀರ್ಘಕಾಲದ ಮಾತಿಗೆ ವಿರಾಮ ಹಾಕಿದರು.

ಪ್ರಚಲಿತ ಹುಡುಗೀರು ಹೇಗಿರುತ್ತಾರೆಂದುಅವರನ್ನು ಪ್ರತಿನಿಧಿಸುವ ಪಾತ್ರ ಮಾಡಿದ್ದೇನೆ. ಕಿಸ್‍ಇದೆ. ಅದುಎಷ್ಟರಮಟ್ಟಿಗೆಎಂಬುದನ್ನು ಸಿನಿಮಾ ನೋಡಿಅಂತಾರೆ ನಾಯಕಿ ಶ್ರೀಲೀಲಾ. ಶ್ರೀಮಂತ ಹುಡುಗನಾಗಿ ಸ್ನೇಹಿತರಿಗೆ ಪ್ರಾಣಕೊಡಲು ಸಿದ್ದ.ಅದೇತರಲೆ ಮಾಡಿದರೆಅದರಕತೆ ಬೇರೆನೇ ಮಾಡುತ್ತೆನೆಎಂದು ನಾಯಕ ವಿರಾಟ್ ಪಾತ್ರದ ಪರಿಚಯ ಮಾಡಿಕೊಂಡರು.ಖಳನಾಗಿ ಶಮಂತ್‍ಶೆಟ್ಟಿ, ನಾಯಕಿತಂದೆ ಸುಂದರ್‍ಗೋಷ್ಟಿಯಲ್ಲಿ ಹಾಜರಿದ್ದರು.ಕೊನೆಯಲ್ಲಿಮಿಸ್ ಮಾಡದೆಕಿಸ್ ನೋಡಿಎಂದು ಮತ್ತೋಮ್ಮೆಅರ್ಜುನ್ ಮಾದ್ಯಮದವರನ್ನುಕೋರಿಕೊಂಡರು.
ಸಿನಿ ಸರ್ಕಲ್.ಇನ್ ನ್ಯೂಸ್
16/09/19ಗಣೇಶನ ಮುಂದೆಕುಣಿದ ನಾಯಕ,ನಿರ್ದೇಶಕ
‘ಕಿಸ್’ ತುಂಟ ತುಟಿಗಳ ಆಟೋಗ್ರಾಫ್‍ಅಂತಅಡಿಬರಹದಲ್ಲಿಹೇಳಿಕೊಂಡಿರುವ ಚಿತ್ರಕ್ಕೆರಚನೆ, ನಿರ್ದೇಶನ ಮಾಡಿರುವುದು ಎ.ಪಿ.ಅರ್ಜುನ್. ಇಂದಿನ ಜನತೆಯುಕಾಫಿಡೇ, ಫೇಸ್‍ಬುಕ್, ಟ್ವಿಟರ್‍ದಲ್ಲಿ ಪ್ರೀತಿಯನ್ನುತೋರ್ಪಡಿಸುತ್ತಾರೆ. ಇದರ ಕಾರ್ಯವಿಧಾನಗಳು ಏನೆಲ್ಲಾ ಮಾಡಿಸುತ್ತದೆಎಂಬುದನ್ನುಚಿತ್ರದಲ್ಲಿ ಹೇಳಲಾಗಿದೆ. ಸಾಕಷ್ಟು ಯುವ ಪ್ರೇಮಿಗಳಿಗೆಇದುಜೋಡಣೆಯಾಗುತ್ತದೆ. ನಿರ್ದೇಶಕರಜೀವನದ ಶೇಕಡ 25 ರಷ್ಟು ಪ್ರೀತಿ ಮತ್ತುತಂತ್ರಜ್ಘರಜೀವನದ ಅನುಭವಗಳನ್ನು ಹೆಕ್ಕಿಕೊಂಡು ಸನ್ನಿವೇಶಕ್ಕೆ ಬಳಸಲಾಗಿದೆ. ಹಠ ಮಾಡಿಯಾವುದನ್ನುಬೇಕಾದರೂಪಡೆದುಕೊಳ್ಳಬೇಕೆಂಬ ಧೋರಣೆ ಗುಣವುಳ್ಳವನು. ಎಲ್ಲರು ಸುಖವಾಗಿರಬೇಕೆಂದು ಬಯಸುವ ಪಾತ್ರದಲ್ಲಿವಿರಾಟ್ ನಾಯಕ.

ಎಲ್ಲಾ ಹುಡುಗಿರುಮನೆಯಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು ಏನು ಮಾಡುತ್ತಾರೆಎನ್ನವಂತ ಹುಡುಗಿಯಾಗಿ ಶ್ರೀಲೀಲಾ ನಾಯಕಿ. ವಿ.ರವಿಕುಮಾರ್ ಮೊದಲಬಾರಿರಾಷ್ಟಕೂಟ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಗಣೇಶನನ್ನು ವಿಸರ್ಜನೆ ಮಾಡುವ ಸಂದರ್ಭದಲ್ಲಿರಸ್ತೆಯಲ್ಲಿ ನಿರ್ದೇಶಕಅರ್ಜುನ್, ನಾಯಕ ವಿರಾಟ್ ಹುಡುಗರೊಂದಿಗೆ ಹೆಜ್ಜೆ ಹಾಕಿರುವುದು ಸದ್ಯಎಲ್ಲಾಕಡೆ ವೈರಲ್‍ಆಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
7/09/19


ತುಂಟ ತುಟಿಗಳ ಮಾತುಗಳು
ಮೂವತ್ತು ತಿಂಗಳ ಕೆಳಗೆ ಮಹೂರ್ತ ಆಚರಿಸಿಕೊಂಡ ‘ಕಿಸ್’ ತುಂಟ ತುಟಿಗಳ ಆಟೋಗ್ರಾಫ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ಚಿತ್ರವು ಆಮೆ ವೇಗದಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಸಿನಿಮಾವು ತಡವಾಗಿರುವುದಕ್ಕೆ ಕಾರಣಗಳನ್ನು ಹೇಳುತ್ತಾ ಹೋದರು. ಹೊಸಬರು ಆಗಿದ್ದರಿಂದ ಅಡಿಷನ್ ಮಾಡಲು ಸಮಯ ತೆಗೆದುಕೊಂಡಿತು. ಮುಖ್ಯ ಪಾತ್ರಗಳಿಗೆ ನಟನೆ ಗೊತ್ತಿಲ್ಲದೆ ಇರುವುದರಿಂದ ಅಭಿನಯ, ಡ್ಯಾನ್ಸ್, ಫೈಟ್ ಅಂತ ಒಂಬತ್ತು ತಿಂಗಳು ತರಭೇತಿ ನೀಡಲಾಯಿತು. ನಾಯಕಿಗೆ ಪರೀಕ್ಷೆ, ನಾಯಕನ ಕಾಲಿಗೆ ಪೆಟ್ಟು ಆಗಿರುವುದರಿಂದ ಎರಡು ಮೂರು ಬಾರಿ ಮುಂದೂಡಲಾಯಿತು. ಒಂದು ದೃಶ್ಯವನ್ನು ಬಿಜಿಎಸ್ ಆಸ್ಪತ್ರೆಯಲ್ಲಿ ಸೆರೆಹಿಡಿಯಲಾಗಿತ್ತು. ಉಳಿದುದನ್ನು ಅಲ್ಲಿ ತೆಗೆಯಲು ಆರು ತಿಂಗಳು ನಂತರ ಅವಕಾಶ ಮಾಡಿಕೊಟ್ಟರು.

ಪ್ರತಿ ದೃಶ್ಯಗಳನ್ನು ಹೊಸ ಜಾಗಗಳಲ್ಲಿ ಕ್ಯಾಮಾರ ಇಡಲಾಗಿದೆ. ಬೆಂಗಳೂರು, ಗೋವ, ಮಡಕೇರಿ, ಬಂಗಿಜಂಪ್ ಸಲುವಾಗಿ ಹೃಷಿಕೇಶದಲ್ಲಿ ಶೂಟ್ ಮಾಡಲಾಗಿದೆ. ‘ನೀನೇ ಮೊದಲು’ ಗೀತೆಯನ್ನು ಏಳು ಸ್ಥಳಗಳಾದ ಜೋದ್‍ಪುರ್, ಜೈಸಲ್‍ಮರ್, ಆಗ್ರ, ಕುದುರೆಮುಖ, ಕೇರಳ, ಕೆಮ್ಮಣ್ಣುಗುಂಡಿ ಮತ್ತು ಒಂದು ಹಾಡುನ್ನು ಬ್ಯಾಂಕಾಕ್‍ದಲ್ಲಿ ಚಿತ್ರೀಕರಿಸಲಾಗಿದೆ. ಶೀರ್ಷಿಕೆಯು ಪೂರ್ಣ ಲವ್‍ಸ್ಟೋರಿ ಆಗಿದೆ. ಕಿಸ್ ಸಾರ್ವತ್ರಿಕ ಪದವಾಗಿದ್ದರಿಂದ ಹೆಚ್ಚಿನ ವಿವರ ಹೇಳಬೇಕಾಗಿಲ್ಲ. ಇಂದಿನ ಜನತೆಯು ಕಾಫಿಡೇ, ಫೇಸ್‍ಬುಕ್, ಟ್ವಿಟರ್‍ದಲ್ಲಿ ಪ್ರೀತಿಯನ್ನು ತೋರ್ಪಡಿಸುತ್ತಾರೆ. ಇದರ ಕಾರ್ಯವಿಧಾನಗಳು ಏನೆಲ್ಲಾ ಮಾಡಿಸುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಸಾಕಷ್ಟು ಯುವ ಪ್ರೇಮಿಗಳಿಗೆ ಇದು ಜೋಡಣೆಯಾಗುತ್ತದೆ. ನನ್ನ ಜೀವನದ ಶೇಕಡ 25 ರಷ್ಟು ಪ್ರೀತಿ ಮತ್ತು ತಂತ್ರಜ್ಘರ ಜೀವನದ ಅನುಭವಗಳನ್ನು ಹೆಕ್ಕಿಕೊಂಡು ಸನ್ನಿವೇಶಕ್ಕೆ ಬಳಸಲಾಗಿದೆ. ‘ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್’ ಅಂತ ಕಿಸ್‍ಗೆ ಅರ್ಥ ಕೊಡುತ್ತದೆ. ಆರು ಹಾಡುಗಳಿಗೆ ಸಾಹಿತ್ಯ ಬರೆದು, ಅದಕ್ಕೆ ಸುಮಧುರವಾದ ಸಂಗೀತವನ್ನು ಹರಿಕೃಷ್ಣ ಸಂಯೋಜಿಸಿದ್ದಾರೆ. ಟೈಟಲ್ ಕೇಳಿದಾಕ್ಷಣ ಮುಜುಗರ ತರಬಹುದು. ಆದರೆ ಚಿಕ್ಕವಯಸ್ಸಿನಿಂದ ಹಿರಿಯ ತಲೆಮಾರಿನವರು ಖುಷಿಯಿಂದ ನೋಡುವ ಚಿತ್ರವಾಗಿದೆ. ಕಿಸ್ ನಾವು ಕೊಡಲು ಸಿದ್ದರಿದ್ದೇವೆ. ಬ್ಲೆಸ್ ಮಾಡಲು ಜನ ಚಿತ್ರಮಂದಿರಕ್ಕೆ ಬರಬೇಕೆಂದು ಸಾದ್ಯಂತವಾಗಿ ನಿರ್ದೇಶಕರು ವಿವರಣೆ ನೀಡಿದರು.

ಶ್ರೀಮಂತ ಹುಡುಗನಾಗಿ ಹಠ ಮಾಡಿ ಯಾವುದನ್ನು ಬೇಕಾದರೂ ಪಡೆದುಕೊಳ್ಳಬೇಕೆಂಬ ಧೋರಣೆ ಗುಣವುಳ್ಳವನು. ಎಲ್ಲರು ಸುಖವಾಗಿರಬೇಕೆಂದು ಬಯಸುವ ಪಾತ್ರದಲ್ಲಿ ನಾಯಕನ ಪಾತ್ರಕ್ಕೆ ಅವಕಾಶ ಮಾಡಿಕೊಟ್ಟದ್ದಕ್ಕೆ ಥ್ಯಾಂಕ್ಸ್ ಎಂದು ವಿರಾಟ್ ಹೇಳಿದರು.

ಕಾಲೇಜು ವಿದ್ಯಾರ್ಥಿ ನಂದಿನಿ ಹೆಸರಲ್ಲಿ ಎಲ್ಲರ ಮಗಳು ಇರುವಂತೆ ಇದ್ದೇನೆ. ಎಲ್ಲಾ ಹುಡುಗಿರು ಮನೆಯ ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು ಏನು ಮಾಡುತ್ತಾರೆ ಎಂಬುದನ್ನು ತಿಳಿಯಲು ಇದನ್ನು ನೋಡಬಹುದು. ಹಿಂದಿನ ಬೆಂಚ್‍ನಲ್ಲಿ ತುಂಟತನ ಮಾಡುತ್ತಾ ಕಪ್ಪುಪಟ್ಟಿಗೆ ಸೇರಿಕೊಂಡಿರುತ್ತೇನೆಂದು ಮುಗ್ದ ನಗೆ ಚೆಲ್ಲಿದರು ನಾಯಕಿ ಶ್ರೀಲೀಲಾ.
ನಾಯಕಿಯ ತಂದೆಯಾಗಿ ಸುಂದರ್, ಅಜ್ಜನಾಗಿ ದತ್ತಣ್ಣ, ಛಾಯಗ್ರಾಹಕ ಅರ್ಜುನ್‍ಶೆಟ್ಟಿ, ಕೊರಿಯಾಗ್ರಾಫರ್ ಇಮ್ರಾನ್‍ಸರ್ದಾರಿಯಾ, ಕ್ಯಾಸ್ಟೂಮ್ ಡಿಸೈನರ್ ಸಾನಿಯಾಸರ್ದಾರಿಯಾ, ಕಾರ್ಯಕಾರಿ ನಿರ್ಮಾಪಕ ಶಂಸುದ್ದೀನ್ ಉಪಸ್ತಿತರಿದ್ದರು.

ವಿ.ರವಿಕುಮಾರ್ ಅವರು ಮೊದಲಬಾರಿ ರಾಷ್ಟಕೂಟ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಿರುವ ಸಿನಿಮಾವು ಮುಂದಿನ ತಿಂಗಳು ತೆರೆ ಕಾಣುವ ಸಾದ್ಯತೆ ಇದೆ ಎಂಬುದು ತಂಡದಿಂದ ಮಾಹಿತಿ ಲಭ್ಯವಾಯಿತು.
ಚಿತ್ರಗಳು; ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/01/19
ಕಿಸ್ ಪೋಸ್ಟರ್ ಬಿಡುಗಡೆ
ಅಂಬಾರಿಯಲ್ಲಿ ಯೋಗಿ, ಅದ್ದೂರಿ ಚಿತ್ರಕ್ಕೆ ಧ್ರುವಸರ್ಜಾ, ರಾಟೆಯಲ್ಲಿ ಧನಂಜಯ್,ಶೃತಿಹರಿಹರನ್‍ಗೆ ಲೈಫ್ ನೀಡಿ, ದರ್ಶನ್ ನಟನೆಯ ಐರಾವತ ಚಿತ್ರಗಳನ್ನು ನಿರ್ದೇಶನ ಮಾಡಿರುವ ಎ.ಪಿ.ಅರ್ಜುನ್ ಅವರ ಮತ್ತೋಂದು ಮಹೋನ್ನತ ಚಿತ್ರ ‘ಕಿಸ್’ ಅಡಿಬರಹದಲ್ಲಿ ತುಂಟ ತುಟಿಗಳ ಆಟೋಗ್ರಾಫ್ ಅಂತ ಹೇಳಿಕೊಂಡಿದೆ. ಶೀರ್ಷಿಕೆ ಹೇಳುವಂತೆ ಇದೊಂದು ಲವ್ ಸ್ಟೋರಿ ಕತೆಯಾಗಿದ್ದು, ಅಡಿಷನ್ ಮಾಡಿ ಇದರಲ್ಲಿ ವಿರಾಟ್ ನಾಯಕ, ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಕ್ಕೆ ಸಂಗೀತವನ್ನು ಹರಿಕೃಷ್ಣ ಸಂಯೋಜಿಸಿದ್ದಾರೆ. ಛಾಯಗ್ರಹಣ ಅರ್ಜುನ್‍ಶೆಟ್ಟಿ, ಸಂಕಲನ ದೀಪು.ಎಸ್.ಕುಮಾರ್, ಸಾಹಸ ಡಾ.ರವಿವರ್ಮ, ನೃತ್ಯ ಇಮ್ರಾನ್‍ಸರ್ದಾರಿಯಾ ಅವರದಾಗಿದೆ. ವಾಣ ಜ್ಯೋದಮಿ ವಿ.ರವಿಕುಮಾರ್ ನಿರ್ಮಾಣ ಮಾಡಿರುವ ಚಿತ್ರದ ಮೊದಲ ಪೋಸ್ಟರ್ ಮಂಗಳವಾರ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-4/02/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore