HOME
CINEMA NEWS
GALLERY
TV NEWS
REVIEWS
CONTACT US
ಕೋಪದ ಕಿಡಿ ತಂದ ಅವಾಂತರಗಳು
ನಾಯಕ ಭುವನ್(ಭುವನ್‍ಚಂದ್ರ) ಓರ್ವ ಬ್ಯಾಂಕ್ ಉದ್ಯೋಗಿ. ಚಿಕ್ಕವನಿದ್ದಾಗಿನಿಂದಲೂ ಮೂಗಿನ ತುದಿಯಲ್ಲೇ ಕೋಪವನ್ನು ಮೈಗೂಡಿಸಿಕೊಂಡು ಬಂದ ಈತ ಮನೆಯಲ್ಲಿ ಹಾಗೂ ಬ್ಯಾಂಕ್‍ನಲ್ಲಿ ಎಲ್ಲರಿಂದಲೂ ತನ್ನ ಮುಂಗೋಪದಿಂದ ಸಿಡುಕ ಅಂತ ಹೆಸರುವಾಸಿಯಾಗಿರುತ್ತಾನೆ. ಆತನ ಸ್ವಭಾವದಿಂದ ಪತ್ನಿ(ಪಲ್ಲವಿ) ಕೂಡ ರೋಸಿ ಹೋಗಿರುತ್ತಾಳೆ. ಒಮ್ಮೆ ಸ್ನೇಹಿತರ ಮನೆಯ ಪಾರ್ಟಿಗೆಂದು ಹೋದಾಗ ಅಲ್ಲಿ ತನ್ನ ಸ್ನೇಹಿತನ(ಪವನ್) ಮೇಲೆ ಹರಿಹಾಯ್ದು ದೊಡ್ಡ ರಂಪವನ್ನೇ ಮಾಡಿಕೊಳ್ಳುತ್ತಾನೆ. ಒಮ್ಮೆ ತನ್ನ ಭಾಮೈದನಿಗೆ ಹೆಣ್ಣು ನೋಡಲೆಂದು ಹೋಗಲು ಅತ್ತೆ-ಮಾವ, ದಂಪತಿಗಳಿಬ್ಬರನ್ನೂ ಆಹ್ವಾನಿಸುತ್ತಾರೆ. ಆ ಕಾರಣದಿಂದ ಆಗುಂಬೆಯಲ್ಲಿರುವ ಮಾವನ ಮನೆಗೆ ಭುವನ್ ಹೊರಟಿರುತ್ತಾರೆ. ಆದರೆ ಗಂಡನ ಸಿಡುಕಿನ ನಡವಳಿಕೆಗೆ ಬೇಸತ್ತ ಪತ್ನಿ ಒಬ್ಬಳೇ ತವರಿಗೆ ಹೊರಡುತ್ತಾಳೆ. ಆದರೆ ಪತ್ನಿಯನ್ನು ಏಕಾಂಗಿಯಾಗಿ ಕಳಿಸಲು ಒಪ್ಪದ ಭುವನ್ ತಾನೂ ಹೊರಡುತ್ತಾನೆ. ಪಾರ್ಟಿಯಲ್ಲಿ ಜಗಳ ಮಾಡಿಕೊಂಡು ಹಾಗೇ ಬಂದಿದ್ದರಿಂದ ಕಾರಿನಲ್ಲಿ ಹೋಗುವಾಗ ಮಾರ್ಗಮಧ್ಯೆ ಊಟಮಾಡಲೆಂದು ಡಾಬಾವೊಂದಕ್ಕೆ ಹೋಗುತ್ತಾರೆ. ಅಲ್ಲಿ ಒಂದಷ್ಟು ಕುತೂಹಲಕರ ತಿರುವುಗಳು, ಅನಿರೀಕ್ಷಿತ ಘಟನಾವಳಿಗಳು ನಡೆಯುತ್ತವೆ. ಚಿಕ್ಕಮಗಳೂರಿನ ಮೂಡಿಗೆರೆ ಬಳಿ ಹಾಕಿರುವ ಈ ಡಾಬಾ ಸೆಟ್‍ನಲ್ಲಿಯೇ ಅರ್ದದಷ್ಟು ಚಿತ್ರೀಕರಣ ನಡೆಸಲಾಗಿದೆ.

ಮನುಷ್ಯನ ಜೀವನದಲ್ಲಿ ಎಲ್ಲಾ ಇದ್ದರೂ, ಕೆಲವೊಮ್ಮ ಏನೂ ಇಲ್ಲದ ಪರಿಸ್ಥಿತಿ ಬಂದಾಗ ಏನೆಲ್ಲಾ ನಡೆಯಬಹುದು ಎಂಬುದನ್ನು ನೈಜವಾಗಿ ಕಿಡಿ ಚಿತ್ರದಲ್ಲಿ ನಿರೂಪಿಸಲಾಗಿದೆ. ಪ್ರತಿದಿನ ನಮ್ಮ ಲೈಫ್‍ನಲ್ಲಿ ಫೇಸ್ ಮಾಡುವಂಥ ಸಣ್ಣಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಂಡರೆ ಅದರ ಪರಿಣಾಮ ಎಷ್ಟು ಘೋರವಾಗಿರುತ್ತದೆ ಎಂದು ಮುಂಗೋಪಿ ಯುವಕನೊಬ್ಬನ ಮೂಲಕ ನಿರೂಪಿಸಲಾಗಿದೆ. ನಿರ್ದೇಶಕ ರಘುಗೆ ಇದು ಮೊದಲ ಚಿತ್ರವಾದರೂ ಎಲ್ಲೂ ಎಡವದೆ ನೀಟಾಗಿ ಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ. ನಾಯಕನಟ ಭುವನ್ ಚಂದ್ರ ಆ್ಯಂಗ್ರಿ ಯಂಗ್‍ಮ್ಯಾನ್ ಆಗಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ನಾಯಕಿ ಪಲ್ಲವಿ ಇಡೀ ಚಿತ್ರದಲ್ಲಿ ಮುದ್ದು ಮುದ್ದಾಗಿ ಕಾಣುತ್ತಾರೆ. ಎಮಿಲ್ ಅವರ ಸಂಗೀರದಲ್ಲಿ ಮೂಡಿಬಂದಿರುವ ಹಾಡುಗಳು ಪರವಾಯಿಲ್ಲ. ಬೆನಕರಾಜು ಅವರ ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತದೆ. ಇನ್ನು ಈ ಚಿತ್ರಕ್ಕೆ ನಾಗರಾಜï, ಮಲ್ಲಿಕಾರ್ಜುನ್ ಹಾಗೂ ಧನಂಜಯï ಎಂಬ ತ್ರಿವಳಿ ನಿರ್ಮಾಪಕರು ಸೇರಿ ಬಂಡವಾಳ ಹಾಕಿ ಮೊದಲಬಾರಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
-7/10/17
ಕಿಡಿ ಅಕ್ಟೋಬರ್ 6ಕ್ಕೆ ಮುಕ್ತಿ
ಮಲೆಯಾಳಂದಲ್ಲಿ ಹಿಟ್ ಆಗಿದ್ದ ಕಲಿ ಕನ್ನಡದಲ್ಲಿ ‘ಕಿಡಿ’ ಎನ್ನುವ ಹೆಸರಿನಲ್ಲಿ ಸಿದ್ದಗೊಂಡಿದೆ. ಅದರ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಟಿಯಲ್ಲಿ ಚಿತ್ರತಂಡವು ಮಾದ್ಯಮದೊಂದಿಗೆ ಮಾತನಾಡಿ ಹಲವು ವಿಶೇಷತೆಗಳ ಬಗ್ಗೆ ಹೇಳಿಕೊಂಡಿತು. ನೃತ್ಯ ನಿರ್ದೇಶಕ ರಘು.ಎಸ್ ಮೊದಲಬಾರಿ ನಿರ್ದೇಶಕನಾಗಿರುವುದರಿಂದ ಮಾದ್ಯಮದ ಸಹಕಾರ ಬೇಕೆಂದು ಅವಲತ್ತು ಮಾಡಿಕೊಂಡು ಮೈಕನ್ನು ಎಲ್ಲರಿಗೂ ಹಸ್ತಾಂತರಿಸುತ್ತಿದ್ದರು. ಪರೀಕ್ಷೆ ಬರೆಯಲಾಗಿದೆ. ಫಲಿತಾಂಶಕ್ಕೆ ಕಾಯುತ್ತಿದ್ದೇವೆ. ಬ್ಯಾಂಕ್ ಉದ್ಯೋಗಿ ಪಾತ್ರದಲ್ಲಿ ನಾಯಕನಾಗಿ ಪ್ರಥಮ ಅನುಭವ. ಕೋಪವನ್ನು ಹತೋಟಿಗೆ ತಂದುಕೊಳ್ಳದೆ ಹೋದಲ್ಲಿ ಯಾವ ರೀತಿ ತೊಂದರೆ ಸಿಲುಕುತ್ತೇನೆ. ಮೂಲ ಚಿತ್ರದ ಅಂಶವನ್ನು ತೆಗೆದುಕೊಂಡು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಆಕ್ಷನ್ ದೃಶ್ಯಕ್ಕಾಗಿ ಏಳು ತಿಂಗಳು ತಾಲೀಮು ನಡೆಸಿದ್ದೇನೆ ಅಂತ ಪರಿಚಯ ಮಾಡಿಕೊಂಡರು ಭುವನ್‍ಚಂದ್ರ. ಪ್ರೇಮಿಯಾಗಿ ನಾಯಕನಿಗೆ ಕೋಪ ಬೇಡ ತಾಳ್ಮೆ ಇರಲಿ ಎಂದು ಬುದ್ದಿವಾದ ಹೇಳುತ್ತೇನೆ. ಒಂದು ಹಂತದಲ್ಲಿ ಸಂಕಷ್ಟಗಳು ತಿರುಗಿ ಬಿದ್ದಾಗ ತಿರುವು ಪಡೆದುಕೊಳ್ಳುತ್ತವೆ. ಮುಂದೇನು ಆಗುತ್ತದೆ ಅಂತ ಹೇಳಲು ಆಗುವುದಿಲ್ಲ ಎಂದರು ಎರಡನೆ ಚಿತ್ರದಲ್ಲಿ ನಟಿಸಿರುವ ನಾಯಕಿ ಪಲ್ಲವಿ.

ಲಾರಿ ಚಾಲಕನಾಗಿ ಡ್ಯಾನಿಕುಟ್ಟಪ್ಪ, ಡಾಬಾ ಮಾಲೀಕನ ಪಾತ್ರದಲ್ಲಿ ಉಗ್ರಂಮಂಜು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಗೆಳಯ ಭುವನ್ ಕಷ್ಟದ ದೃಶ್ಯಗಳನ್ನು ಡ್ಯೂಪ್ ಬಳಸದೆ ಮಾಡಿದ್ದಾರೆ. ಅವರಿಗೆ ಭವಿಷ್ಯ ಇದೆ ಅಂತಾರೆ ಸಾಹಸ ನಿರ್ದೇಶಕ ಅಪ್ಪುವೆಂಕಟೇಶ್. ನಾಲ್ಕು ಮೆಲೋಡಿ ಹಾಡುಗಳಿಗೆ ಸಂಗೀತ ನೀಡಿದ್ದೇನೆ ಎಂಬ ಮಾತು ಎಮಿಲ್ ಅವರದು. ನಿರ್ಮಾಪಕ ಟಿ.ನಾಗರಾಜ್, ಸಹ ನಿರ್ಮಾಪಕರುಗಳಾದ ಬಿ.ಟಿ.ಮಲ್ಲಿಕಾರ್ಜುನಯ್ಯ, ಆರ್.ಧನಂಜಯ್ ನಿರ್ಮಾಣ ಹೊಸ ಅನುಭವವಾಗಿದ್ದರಿಂದ ಎಲ್ಲರ ಪ್ರೋತ್ಸಾಹ ಬೇಕೆಂದರು. ಮೈಸೂರು ಟಾಕೀಸ್ ವಿತರಣೆ ಸಂಸ್ಥೆ ಮುಖಾಂತರ ಚಿತ್ರವು ತೆರೆಕಾಣಲಿದೆ.
-6/10/17

ಕಿಡಿ ಹಾಡು ಹುಟ್ಟಿದ ಸಮಯ
ಮಲಯಾಳಂ ಸೂಪರ್‍ಸ್ಟಾರ್ ಮುಮ್ಮಟಿ ಪುತ್ರ ನಟಿಸಿದ್ದ ಕಲಿ ಹಿಟ್ ಚಿತ್ರವನ್ನು ಚಂದನವನದಲ್ಲಿ ‘ಕಿಡಿ’ ಹೆಸರಿನೊಂದಿಗೆ ಬಿಡುಗಡೆ ಸಿದ್ದವಾಗಿದೆ. ಹದಿನೈದು ವರ್ಷಗಳಿಂದ ಕೋರಿಯೋಗ್ರಾಫರ್ ಆಗಿದ್ದ ಎಸ್.ರಘು ಮೊದಲ ಬಾರಿ ಕೆಲಸದ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಂಡರೆ, ಅದು ಎಲ್ಲಿಯವರೆಗೂ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಹೇಳಲಿದೆ. ಮೂಡಿಗೆರೆ ಸಮೀಪ ಡಾಬ ಸೆಟ್ ಹಾಕಿ ಸತತ 15 ದಿನಗಳ ಕಾಲ ರಾತ್ರಿ ವೇಳೆ ಚಿತ್ರೀಕರಣ, ಒಂದು ಹಾಡನ್ನು ಬ್ಯಾಂಕಕ್‍ನ ಪುಕಟೆ ಸ್ಥಳದಲ್ಲಿ ಶೂಟ್ ಮಾಡಲಾಗಿದೆ. ಭುವನ್‍ಚಂದ್ರ ಕಿಡಿಕಾರುವ ಯುವಕ, ನಾಯಕನಾಗಿ ಮೊದಲ ಪ್ರಯತ್ನ. ಕಿರುತೆರೆ ನಟಿ ಪಲ್ಲವಿ ನಾಯಕನನ್ನು ಹತೋಟಿಗೆ ತರುವ ಪಾತ್ರದಲ್ಲಿ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಪಾದರ್ಪಣೆ ಮಾಡಿದ್ದಾರೆ. ಖಳನಾಯಕನಾಗಿ ಉಗ್ರಂಮಂಜು ಹಾಗೂ ಲಾರಿ ಚಾಲಕನಾಗಿ ಡ್ಯಾನಿಕುಟ್ಟಪ್ಪ ನಟನೆ ಇದೆ. ಛಾಯಗ್ರಹಣ ಬೆನಕರಾಜು, ಸಂಕಲನ ಎನ್.ಎಂ.ವಿಶ್ವ, ಸಾಹಸ ಕುಂಗುಫು,ಅಪ್ಪು ವೆಂಕಟೇಶ್ ಅವರದಾಗಿದೆ.

ರಿಮೇಕ್ ಹಕ್ಕನ್ನು ಕೊಡಿಸಲು ಸಹಾಯ ಮಾಡಿದ್ದ ಅಲ್ಲದೆ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು ಎಮಿಲ್. ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್, ಲೋಕೇಶ್, ಕವಿರಾಜ್ ಸಾಹಿತ್ಯಕ್ಕೆ ಕಾರ್ತಿಕ್, ಚಂದನ್‍ಶೆಟ್ಟಿ, ಸಂಗೀತ ರವೀಂದ್ರನಾಥ್, ಅನುರಾಧಭಟ್ ಕಂಠದಾನ ಮಾಡಿದ್ದಾರೆ. ಸಹೋದರನ ಸಲುವಾಗಿ ಟಿ.ನಾಗರಾಜು ಚಿತ್ರಕ್ಕೆ ಹಣ ಹೂಡಿದ್ದು, ಇವರೊಂದಿಗೆ ಮಲ್ಲಿಕಾರ್ಜುನ್, ಧನಂಜಯ್ ಪಾಲುದಾರರು. ಇವರಿಗೆ ಇಲ್ಲಿಯವರೆವಿಗೂ ಯಾವುದೇ ರೀತಿಯ ಅವಘಡಗಳು ನೆಡೆದಿಲ್ಲದಿರುವುದರಿಂದ ಚಿತ್ರರಂಗ ಸುಂದರವೆನಿಸಿದೆಯಂತೆ. ಇತ್ತೀಚೆಗೆ ಚಿತ್ರದ ಟ್ರೈಲರ್, ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆದು ಮಿ.ಮೊಮ್ಮಗ ನಾಯಕ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಆನಂದ್ ಆಡಿಯೋ ಕಂಪೆನಿ ಹಾಡುಗಳನ್ನು ಹೂರತಂದಿದೆ.

-4/06/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore