HOME
CINEMA NEWS
GALLERY
TV NEWS
REVIEWS
CONTACT US
ಅಕ್ಟೋಬರ್23ರಂದು ಕೆಜಿಎಫ್‍ಛಾಪ್ಟರ್ 2
2018ರಲ್ಲಿ ಬಿಡುಗಡೆಗೊಂಡ ‘ಕೆಜಿಎಫ್’ ವಿಶ್ವದಾದ್ಯಂತ ಹೆಸರು ಮಾಡಿದ್ದುಅಲ್ಲದೆಯಶ್‍ಗೆ ಅಭಿಮಾನಿಗಳು ಎಲ್ಲಾಕಡೆ ಹುಟ್ಟಿಕೊಂಡಿದ್ದರು.ನಂತರ ಮಾರ್ಚ್ 13, 2019ರಲ್ಲಿ ‘ಕೆಜಿಎಫ್ ಛಾಪ್ಟರ್-2’ ಸೆಟ್ಟೇರಿತು. ಬಾಲಿವುಡ್‍ನ ಸಂಜಯ್‍ದತ್, ರವೀನಾತಂಡನ್ ಅಭಿನಯಿಸಿದ ನಂತರ ಸಾಕಷ್ಟು ಸದ್ದು ಮಾಡಿತ್ತು.ಚಂದನವನದ ಈ ವರ್ಷದ ಬಹುನಿರೀಕ್ಷಿತಚಿತ್ರಎಂದೇ ಹೇಳಲಾಗುತ್ತಿದ್ದು, ಎಂದು ಬಿಡುಗಡೆಯಾಗುತ್ತದೆಂದು ಕೇಳಲಾಗುತ್ತಿದ್ದ ಪ್ರಶ್ನೆಗೆ ನಾಯಕ ನಟಯಶ್ ಕೊನೆಗೂ ರಿಲೀಸ್‍ಆಗುತ್ತಿರುವಅಧಿಕೃತ ದಿನಾಂಕದ ಮೋಷನ್ ಪೋಸ್ಟರ್ ವಿಡಿಯೋವನ್ನುತಮ್ಮಟ್ವಿಟರ್‍ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಹಿನ್ನಲೆಯಲ್ಲಿರಾಕಿಬಾಯ್‍ಗನ್ ಹಿಡಿದು ಸಾಗುತ್ತಿರುವಂತೆತೋರಿಸಲಾಗಿ, ಅಕ್ಟೋಬರ್ 23 ಅಂತ ಹೇಳಿಕೊಂಡು ‘ಮೇ ಐ ಕಮ್‍ಇನ್...’ ಎಂದು ಪ್ರೇಕ್ಷಕರನ್ನು ಕೇಳುತ್ತಿರುವಂತೆ ಅಡಿಬರಹಇಡಲಾಗಿದೆ.

ನಾಯಕಿಯಾಗಿ ಶ್ರೀನಿಧಿಶೆಟ್ಟಿಇವರೊಂದಿಗೆಘಟಾನುಘಟಿಕಲಾವಿದರು ನಟಿಸಿದ್ದಾರೆ. ಪ್ರಶಾಂತ್‍ನೀಲ್ ನಿರ್ದೇಶನ, ರವಿಬಸ್ರೂರು ಸಂಗೀತ, ಭುವನ್‍ಗೌಡಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನವಿದೆ. ಹೊಂಬಾಳೆ ಫಿಲ್ಮಿಸ್‍ಮೂಲಕ ವಿಜಯ್‍ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಪ್ರಪಂಚದಾದ್ಯಂತಏಕಕಾಲಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅದ್ದೂರಿಯಾಗಿಜನರಿಗೆತೋರಿಸಲುಸಿದ್ದತೆಗಳು ನಡೆಯುತ್ತಿದೆ.ದಸರಾ ಹಬ್ಬದಂದುತೆರೆಕಾಣಲಿದೆಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಅದೆಲ್ಲಕ್ಕೂ ಈಗ ಇತಿಶ್ರೀ ಹಾಡಲಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
15/03/20

ಕೆಜಿಎಫ್‍ಚಾಪ್ಟರ್ 2 ರಾಕಿ ಫಸ್ಟ್ ಲುಕ್
‘ಕೆಜಿಎಫ್‍ಚಾಪ್ಟರ್-2’ ಚಿತ್ರಕ್ಕೆಎಂಟ್ರಿ ನೀಡಿದ್ದ ಸಂಜಯ್‍ದತ್‍ನಟಿಸಿರುವ ಅಧೀರನಲುಕ್‍ನ್ನು ಬಿಡುಗಡೆ ಮಾಡಿದ್ದು ವೈರಲ್‍ಆಗಿತ್ತು.ಮುಂದೆಯಶ್‍ಅವರದುಯಾವರೀತಿಇರುತ್ತದೆಂದು ಅಭಿಮಾನಿಗಳು ಕಾಯುತ್ತಿದ್ದರು.ಈಗ ರಾಕಿ ಬಾಯ್ ಹೊಸ ಅವತಾರ ಬಹಿರಂಗಗೊಂಡಿದೆ.ಕೆಜಿಎಫ್ ಮೊದಲ ಅವತರಣಿಕೆಯಲ್ಲಿಗರುಡನಆಳ್ವಿಕೆಯ ನರಾಚಿಯನ್ನು ಕೈವಶ ಮಾಡಿಕೊಂಡಿದ್ದರಾಕಿ, ಈಗ ಅದೇ ಭಾಗಕ್ಕೆಒಡಯನಾಗಿದ್ದಾನೆ. ಭಾರಿ ನಷ್ಟ ಉಂಟಾಗಿ ಹಾನಿಯಾಗಿದ್ದ ಸ್ಥಳವನ್ನು ಮರು ನಿರ್ಮಾಣಕ್ಕೆಅಲ್ಲಿನ ಕೆಲಸಗಾರರಜೊತೆ ಕೈ ಜೋಡಿಸಿ, ಹರಿದ ಬಟ್ಟೆ, ಕೆದರಿದಕೂದಲಲ್ಲಿ ಕೂಲಿಯ ಆಳಂತೆ ಕಂಡಿದ್ದರು. ಈಗ ಉದ್ಯಮಿಯಂತೆ ಕೆಲಸಗಾರರೊಂದಿಗೆದಪ್ಪಅಗ್ಗವನ್ನು ಎಳೆಯುತ್ತಾ, ಸಿಗರೇಟ್ ಸೇದುತಾ ನಡೆದು ಬರುತ್ತಿರುವ ಸ್ಟಿಲ್ ಮಾಸ್‍ಆಗಿದೆ. ಇಲ್ಲಿಯವರೆಗೆ ಮೈಸೂರು, ಬೆಂಗಳೂರು ಮತ್ತು ಮುಂಬೈ ಕಡೆಗಳಲ್ಲಿ ಶೇಕಡ 60 ರಷ್ಟುಚಿತ್ರೀಕರಣ ಮುಗಿದಿದೆ.

ಶ್ರೀನಿಧಿಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಕೆಜಿಎಫ್ ಸಿನಿಮಾ ಬಿಡುಗಡೆಯಾದ ದಿನದಂದೇ ಫಸ್ಟ್ ಲುಕ್‍ಅನಾವರಣಗೊಂಡಿದ್ದು ವಿಶೇಷ. ಪ್ರಶಾಂತ್‍ನೀಲ್ ನಿರ್ದೇಶನ ಮಾಡಿರುವಚಿತ್ರಕ್ಕೆ ವಿಜಯ್‍ಕಿರಂಗದೂರುಬಂಡವಾಳ ಹೂಡುತ್ತಿದಾರೆ. ಚಾಪ್ಟರ್-1 ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಯಲ್ಲಿ ಬಿಡುಗಡೆಗೊಂಡಂತೆಇದನ್ನು ಸಹ ಅದೇ ಮಾದರಿಯಲ್ಲಿ ಪೋಸ್ಟರ್‍ನ್ನು ಲೋಕಾರ್ಪಣೆ ಮಾಡಿರುವುದಾಗಿಕಾರ್ಯಕಾರಿ ನಿರ್ಮಾಪಕಕಾರ್ತಿಕ್‍ಗೌಡ ಹೇಳಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
28/12/19

ಆಕರ್ಷಕ ಲುಕ್‍ದಲ್ಲಿ ಯಶ್
ಕೆಜಿಎಫ್ ವಿಶ್ವದಾದ್ಯಂತ ಹೆಸರು ಮಾಡಿದಂತೆ, ‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಚಿತ್ರೀಕರಣವು ಮೊದಲವಾರದಿಂದ ಮೈಸೂರಿನಲ್ಲಿ ನಡೆಸಲು ನಿರ್ದೇಶಕ ಪ್ರಶಾಂತ್‍ನೀಲ್ ಯೋಜನೆ ಹಾಕಿಕೊಂಡಿದ್ದಾರೆ. ಇದರ ನಡುವೆಯೇ ನಟ ಯಶ್ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉದ್ದ ಕೂದಲು ಮತ್ತು ದಾಡಿಯೊಂದಿಗೆ ಅವರು ಕೈಯಲ್ಲೊಂದು ಸ್ಟಿಕ್ ಹಿಡಿದು ಕೂತಿರುವ ರಾಯಲ್ ಲುಕ್ ಅಭಿಮಾನಿಗಳಿಗೆ ಖುಷಿ, ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಬರುವ ಯಶ್ ಲುಕ್‍ಗಳಲ್ಲಿ ಒಂದು ಎಂದು ಹೇಳಲಾಗುತ್ತಿದ್ದರೂ, ಚಿತ್ರತಂಡ ಮಾತ್ರ ಇದರ ಬಗ್ಗೆ ಮಾಹಿತಿ ನೀಡಿಲ್ಲ. ಹಾಗಾದ್ರೆ ಇದು ಯಾವ ಚಿತ್ರಕ್ಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕೆಲವರು ಹೊಸ ಜಾಹೀರಾತಿಗಾಗಿ ಫೋಟೊ ಶೂಟ್ ಮಾಡಿಸಿರಬಹುದೆಂದು ಹೇಳಲಾಗುತ್ತಿದೆ. ಅದಲ್ಲಕ್ಕೂ ಚಾಪ್ಟರ್-2 ಅಥವಾ ಜಾಹೀರಾತು ಹೂರಬಂದ ನಂತರ ಉತ್ತರ ಸಿಗಬಹುದು. ಅಲ್ಲಿಯವರೆಗೂ ನಾವುಗಳು ಕಾಯಬೇಕಷ್ಟೇ.
ಸಿನಿ ಸರ್ಕಲ್.ಇನ್ ನ್ಯೂಸ್
4/06/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore