HOME
CINEMA NEWS
GALLERY
TV NEWS
REVIEWS
CONTACT US
ಸರ್ಕಾರದತೀರ್ಮಾನಕ್ಕೆ ಬದ್ದರಾಗಿರುವ ಕೆಎಫ್‍ಸಿಸಿ ಮತ್ತುಕೆಎಫ್‍ಪಿಎ
ಕರೋನ ಭೀತಿಯಿಂದರಾಜ್ಯ ಸರ್ಕಾರವುತೆಗೆದುಕೊಂಡಿರುವತೀರ್ಮಾನವನ್ನು ಸ್ವಾಗತಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತುಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಕೆಲವೊಂದು ಆಂಶಗಳನ್ನು ಸುದ್ದಿಗೋಷ್ಟಿಯಲ್ಲಿ ಹೇಳಿಕೊಂಡಿದ್ದಾರೆ.
1) ಸರ್ಕಾರಆದೇಶ ನೀಡಿದ ಸಂದರ್ಭದಲ್ಲಿಟಾಕೀಸ್‍ದಲ್ಲಿಯಾವ ಚಿತ್ರಗಳು ಪ್ರದರ್ಶನಕಾಣುತ್ತಿತ್ತೋ, ಮುಂದೆಆದೇಶ ಹಿಂಪಡೆದ ದಿನದಿಂದಅದೇ ಚಿತ್ರಗಳಿಗೆ ಮೊದಲ ಆದ್ಯತೆಕೊಡುವುದು. ಇದಕ್ಕೆ ಪ್ರದರ್ಶಕರು, ಯುಎಫ್‍ಓ, ಕ್ಯೂಬ್ ಸಂಸ್ಥೆಗಳು ಸಹಕರಿಸುವುದು.
2) ಈಗಾಗಲೇ ಚಿತ್ರೀಕರಣ ನಡೆಸುತ್ತಿದ್ದು, 2-3 ದಿನಗಳಲ್ಲಿ ಶೂಟಿಂಗ್ ಪೂರ್ಣಗೊಳ್ಳುತ್ತದೆಂಬ ಸೂಚನೆ ಇದ್ದರೆಅಂತಹ ನಿರ್ಮಾಪಕರು ಸಾದ್ಯವಾದಷ್ಟುಅವಶ್ಯಕತೆಇರುವತಂತ್ರಜ್ಘರನ್ನು ಮಾತ್ರ ಬಳಸಿಕೊಂಡು, ಕೊರೋನ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿವುವುದು.
3) ಹೊರರಾಜ್ಯ,ದೇಶದಿಂದಕಲಾವಿದರು, ತಂತ್ರಜ್ಘರು ಭಾಗವಹಿಸುವ ಪ್ರಯುಕ್ತ ಮುನ್ನಚ್ಚರಿಕೆ ವಹಿಸಿ, ಅವರುಗಳಿಗೆ ಕೊರೋನ ಸೋಂಕು ಇದೆಯೇ? ಇಲ್ಲವೆಎಂಬುದನ್ನು ಖಚಿತಪಡಿಸಿಕೊಂಡು, ಆರೋಗ್ಯಇಲಾಖೆಯಿಂದ ಪ್ರಮಾಣ ಪತ್ರ ತರಿಸಿಕೊಳ್ಳುವುದು ಜೊತೆಗೆ ಪಾಲ್ಗೋಳ್ಳುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಿವುದು.
4) ಸಿಬಿಎಫ್‍ಸಿ ಸೂಚನೆಯಂತೆ ಸರ್ಕಾರಿಆದೇಶ ಹಿಂಪಡೆಯುವವರೆಗೂ ಸ್ಥಳೀಯ ಹಾಗೂ ಹೊರರಾಜ್ಯಗಳಲ್ಲಿ ಹೊಸ ಚಿತ್ರಗಳ ಮಹೂರ್ತ ಮತ್ತು ಶೂಟಿಂಗ್‍ನ್ನು ಮುಂದೂಡುವುದು.
5) ವಾಣಿಜ್ಯ ಮಂಡಳಿಯ ಸಭೆ-ಸಮಾರಂಭ, ವಲಯ ಸಮಿತಿ, ಉಪ ಸಮಿತಿಇನ್ನಿತರ ಸಭೆಗಳನ್ನು ಮಾಡುವಆಗಿಲ್ಲ.
6) ಏಪ್ರಿಲ್, ಮೇ ತಿಂಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿರುವ, ನಿರ್ಮಾಪಕರು ಮುಂದಿನ ದಿನಾಂಕವನ್ನು ಪ್ರಕಟಿಸುವಮುನ್ನಯಾವುದೇಗೊಂದಲಕ್ಕೆಒಳಗಾಗದಂತೆ ಮುನ್ನಚ್ಚರಿಕೆ ವಹಿಸಿ, ಮಂಡಳಿಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು.
7) ಇದಕ್ಕೂ ಮೀರಿ ಕೆಲವರು ಮುಂದೆ ಹೋದಲ್ಲಿ, ಮುಂದಾಗುವಅನಾಹುತಗಳಿಗೆ ಅವರೇ ಜವಬ್ದಾರಿಗಳಾಗಿರುತ್ತಾರೆ.
ನಂತರ ಮಾತನಾಡಿದಛೇಂಬರ್‍ಅಧ್ಯಕ್ಷರು ಕಳೆದವಾರ ಕೇಂದ್ರ ಮಂತ್ರ್ರ್ರಿಗಳನ್ನು ನಿಯೋಗದೊಂದಿಗೆ ಭೇಟಿ ಮಾಡಿಜಿಎಸ್‍ಟಿ ಸರಳಿಕರಣ ಮಾಡಬೇಕೆಂದು, ಹಾಗೆಯೇಟಿಡಿಎಸ್‍ನ್ನು ಮನ್ನಾ ಮಾಡಲುಕೋರಿಕೊಂಡಿದೆ.ಇದಕ್ಕೆ ಸಚಿªರುಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆಂದು ಹೇಳಿದರು.
ಸಿನಿ ಸರ್ಕಲ್.ಇನ್ ನ್ಯೂಸ್
19/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore