HOME
CINEMA NEWS
GALLERY
TV NEWS
REVIEWS
CONTACT US
ಯುಎಫ್‍ಓ, ಕ್ಯೂಬ್ ಮಾತುಕತೆ ವಿಫಲ
ಕಳೆದ ಒಂದು ವಾರದಿಂದ ಮುಸುಕಿನ ಗುದ್ದಾಟ ನಡೆಸುತ್ತಿದ್ದ ಯುಎಫ್‍ಓ ಮತ್ತು ಕ್ಯೂಬ್ ಹಾಗೂ ವಾಣ ಜ್ಯ ಮಂಡಳಿ ನಡೆಸಿದ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಮಾರ್ಚ್ 16ರಿಂದ ಯಾವುದೇ ಚಿತ್ರ ಪ್ರದರ್ಶನ ಮಾಡದಿರಲು ಕರ್ನಾಟಕ ವಾಣ ಜ್ಯ ಮಂಡಳಿ ತೀರ್ಮಾನಿಸಿದೆ. ಈ ಕುರಿತು ಶನಿವಾರ ತಮಿಳುನಾಡು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ವಿಶಾಲ್ ಹಾಗೂ ಉಪಾಧ್ಯಕ್ಷ ಪ್ರಕಾಶ್‍ರೈ ಜೊತೆ ಸುದ್ದಿಗೋಷ್ಟಿ ನಡೆಸಿದಂತೆ ಸಾರಾಗೋವಿಂದು ಮಾತನಾಡಿ ನಮ್ಮದೆ ಭೂಮಿ,ಫಸಲು ,ರೈತರು ಇದ್ದರೂ ಯುಎಫ್‍ಓ, ಕ್ಯೂಬ್ ಅವರು ನಮ್ಮ ಮನವಿಗೆ ಕಿಮ್ಮತ್ತು ಬೆಲೆ ನೀಡಿಲ್ಲ. ಇಷ್ಟು ವರ್ಷ ನಮ್ಮಿಂದ ಹಣ ಸಂದಾಯವಾಗುತ್ತೆ ಎಂದು ಯೋಚಿಸಿಯೂ ಇರಲಿಲ್ಲ. ಪ್ರತಿ ವರ್ಷ ಕಡಿಮೆ ಎಂದರೂ 450 ಕೋಟಿ ಲಾಭ ಮಾಡಿದ್ದಾರೆ. ನಾವು ಕೇಳಿದ್ದು ಶೇಕಡ 25ರಷ್ಟು ಕಡಿಮೆ ಮಾಡಿಕೊಳ್ಳಿ ಎಂದು ಕೇಳಿದರೆ ಒಪ್ಪಿಲ್ಲ. ಇದರಿಂದ ಹಲವು ಚಿತ್ರಮಂದಿರಗಳು ಕಲ್ಯಾಣ ಮಂಟಪಗಳಾಗಿ ಮಾರ್ಪಟ್ಟಿವೆ. ಇದಕ್ಕಾಗಿ ವಾಣ ಜ್ಯ ಮಂಡಳಿ, ನಿರ್ಮಾಪಕರ ಸಂಘದಿಂದ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

ರಾಕ್‍ಲೈನ್ ವೆಂಕಟೇಶ್ ಮಾತನಾಡಿ ಅವರಿಗೆ ಮೂರು ಷರತ್ತುಗಳನ್ನು ವಿಧಿಸಿದ್ದೇವೆ. ಮೊದಲನೆಯದಾಗಿ ಶೇಕಡ 25ರಷ್ಟು ಕೇಳಿದ್ದು, ಈಗ ಅದನ್ನು 50ಕ್ಕೆ ಕಡಿಮೆ ಮಾಡಬೇಕು. ಪ್ರದರ್ಶಕರ ಮೇಲೆ ಹಾಕಿರುವ 400 ಕೇಸ್‍ನ್ನು ಹಿಂದಕ್ಕೆ ಪಡೆಯಬೇಕು. ಪ್ರದರ್ಶಕರೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಸಡಿಲಗೊಳಿಸಬೇಕು. ಇದಕ್ಕೆ ಒಪ್ಪಿದ್ದಲ್ಲಿ ಅವರೊಂದಿಗೆ ಮುಂದಿನ ಮಾತುಕತೆ ನಡೆಸಲಾಗುವುದು. ಇಲ್ಲದೆ ಇದ್ದಲ್ಲಿ ಎರಡು ಸಂಘಗಳಲ್ಲಿ ಇರುವ ಕೋಟಿ ಹಣವನ್ನು ಮೊದಲ ಹಂತದಲ್ಲಿ 100 ಚಿತ್ರಮಂದಿರಕ್ಕೆ ಪ್ರೊಜೆಕ್ಟರ್ ಮತ್ತು ಸರ್ವರ್ ಜೋಡಿಸಿ ನಿರ್ಮಾಪಕರ ಸಹಾಯಕ್ಕೆ ನಿಲ್ಲುವ ಬಗ್ಗೆ ಯೋಜನೆ ಹಾಕಲಾಗಿದೆ. ಬಂದ ಲಾಭದಲ್ಲಿ ಚಲನಚಿತ್ರ ಕೋಆಪರೇಟಿವ್ ಬ್ಯಾಂಕ್ ತೆರೆಯಲಾಗುವುದು, ನಿರ್ಮಾಪಕರಿಗೆ 10 ಲಕ್ಷದ ವರೆಗೂ ವಿಮೆ ಮಾಡಿಸಲಾಗುವುದು ಎಂಬುದರ ಮಾಹಿತಿ ನೀಡಿದರು. ತಮಿಳು ನಿರ್ಮಾಪಕ ಸಂಘದ ಅಧ್ಯಕ್ಷ ವಿಶಾಲ್ ಹೇಳುವಂತೆ ನಿರ್ಮಾಪಕರಿಗೆ ತೊಂದರೆ ಯಾಗಬಾರದೆಂದು ಈ ರೀತಿಯ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಚಿತ್ರಕ್ಕೆ ಸಂಬಂದಿಸಿದಂತೆ ಯಾವುದೇ ಚಟುವಟಿಕೆಗಳನ್ನು ಮಾಡದಿರಲು ನಿರ್ಧರಿಸಲಾಗಿದೆ. ಮುಂದೆ ಪೈರಸಿ, ಜಿಎಸ್‍ಟಿ ವಿರುದ್ದವೂ ಹೋರಾಟ ಮಾಡಲಾಗುವುದು. ಇದನ್ನು ಮುಷ್ಕರ ಅಂತ ಹೇಳದೆ ಪುನರ್‍ವಿಮರ್ಶೆ ಎನ್ನಬಹುದೆಂದು ಅಭಿಪ್ರಾಯಪಟ್ಟರು. ಗೋಷ್ಟಿಯಲ್ಲಿ ಶಾಸಕ, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಎನ್.ಕುಮಾರ್, ಸೇರಿದಂತೆ ಪ್ರದರ್ಶಕರು, ನಿರ್ಮಾಪಕರುಗಳು ಉಪಸ್ತಿತರಿದ್ದರು
ಸಿನಿ ಸರ್ಕಲ್.ಇನ್ ನ್ಯೂಸ್
11/03/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore