HOME
CINEMA NEWS
GALLERY
TV NEWS
REVIEWS
CONTACT US

ಅಬ್ಬರಿಸಿ ಬೊಬ್ಬರಿಸಿದ ಕೆಂಪೆಗೌಡ
ನಿಷ್ಟಾವಂತ ಪೋಲೀಸ್ ಅಧಿಕಾರಿ, ನೇಮಕಗೊಂಡ ಎಂಟು ವರ್ಷಗಳಲ್ಲಿ ಹದಿನೈದು ಸಲ ವರ್ಗಾವಣೆ ಆಗಿರುತ್ತಾನೆ. ಕರ್ತವ್ಯದಲ್ಲಿ ಭಯಂಕರ. ಅಮ್ಮನ ಮಾತಿಗೆ ಬೆಲೆ ಕೊಡುತ್ತಾನೆ. ಹಿರಿಯ ನಾಗರೀಕನೊಬ್ಬ ಈತನ ಮುಂದೆ ನ್ಯಾಯ ಸಿಗಲಿಲ್ಲವೆಂದು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿಗೆ ಬಲಿಯಾಗುವುದರೊಂದಿಗೆ ಕತೆ ಬಿಚ್ಚಿ ಕೊಳ್ಳುತ್ತದೆ. ಇದನ್ನು ತನಿಖೆ ಮಾಡುವಾಗ ಕೇಸು ನಾನಾ ತಿರುವು ಪಡೆದುಕೊಳ್ಳುತ್ತದೆ. ಕೊನೆಗೆ ರಾಜ್ಯದ ಮುಖ್ಯ ವ್ಯಕ್ತಿ ಶಾಮೀಲು ಆಗಿದ್ದಾರೆಂದು ತಿಳಿದು ಬರುತ್ತದೆ. ಯಾವುದು ನ್ಯಾಯ, ಶಾಮೀಲಾಗಿರುವ ವ್ಯಕ್ತಿ ಯಾರು, ಇದರ ಹಿಂದಿನ ವಿಷಯ ಏನು? ಅಂತಿಮವಾಗಿ ಅಂದುಕೊಂಡಂತೆ ಫಲ ಸಿಗುತ್ತದಾ. ಚುನಾವಣೆಯಲ್ಲಿ ಮತಗಳನ್ನು ಹ್ಯಾಕ್ ಮಾಡುವುದು. ಇವೆಲ್ಲಾವನ್ನು ತಿಳಿಯಲು ‘ಕೆಂಪೆಗೌಡ-2’ ಸಿನಿಮಾ ನೋಡಬೇಕು.

ಮೊದಲಬಾರಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿರುವ ಕೋಮಲ್‍ಕುಮಾರ್ ಸಿನಿಮಾ ಪೂರ್ತಿ ಆವರಿಸಿಕೊಂಡಿದ್ದರಿಂದ ಅವರ ಫಿಟ್‍ನೆಸ್, ನಡೆದುಕೊಂಡು ಬರುವ ಪರಿ, ಡೈಲಾಗ್ ಡಿಲಿವರಿ, ಸಾಹಸ ಎಲ್ಲವು ಸೂಪರ್. ಮಾಜಿ ಕ್ರಿಕೆಟ್ ಆಟಗಾರ ಶ್ರೀಶಾಂತ್ ಸ್ಟೈಲಿಶ್ ವಿಲನ್, ತೆಲುಗು ನಟರಾದ ನಾಗಬಾಬು, ಆಲಿ, ಬಾಲಿವುಡ್‍ನ ಯಾತಿನ್‍ಕಾರ್ಯೇಕರ್, ಮಂಗಳೂರಿನ ಯಕ್ಷಗಾನ ಕಲಾವಿದ ಚೇತನ್‍ರೈ ತೆರೆ ಹಂಚಿಕೊಂಡಿದ್ದಾರೆ. ನಾಯಕಿಯಾಗಿ ರಶ್ಮಿಕಾವರ್ಮ ಇದ್ದಾರೆ ಎನ್ನಬಹುದು. ಲೂಸ್‍ಮಾದ ಯೋಗಿ ಒಂದು ಹಾಡು, ನಾಯಕನೊಂದಿಗೆ ಒಂದಷ್ಟು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ದತ್ತಣ್ಣ, ಸುಚೇಂದ್ರಪ್ರಸಾದ್, ಲೋಹಿತಾಶ್ವ, ನಾಗರಾಜಮೂರ್ತಿ ಕೊಟ್ಟ ಕೆಲಸವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವ ಶಂಕರ್‍ಗೌಡ ಕೆಲಸ ಅಚ್ಚುಕಟ್ಟಾಗಿದೆ. ವರುಣ್‍ಉಣ್ಣಿ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ರೋಷ್ ಮೋಹನ್-ಕಾರ್ತಿಕ್ ಕ್ಯಾಮಾರದಲ್ಲಿ ಸುಂದರ ತಾಣಗಳು ಕಣ್ಣಿಗೆ ಮುದ ಕೊಡುತ್ತದೆ. ನಿರ್ಮಾಪಕರು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಾಹಸಪ್ರಿಯರಿಗೆ ಚಿತ್ರವು ಖಂಡಿತ ಇಷ್ಟವಾಗುತ್ತದೆ.
ನಿರ್ಮಾಣ: ಎ.ವಿನೋದ್
ಸಿನಿ ಸರ್ಕಲ್.ಇನ್ ವಿಮರ್ಶೆ
***
9/08/19ಬರುತ್ತಿದ್ದಾರೆ ಕೆಂಪೆಗೌಡ-2
ಮೂರು ವರ್ಷಗಳ ನಂತರಕೋಮಲ್‍ಅಭಿನಯದ ‘ಕೆಂಪೆಗೌಡ-2’ ಚಿತ್ರವುಅಬ್ಬರಿಸಲು ಸಿದ್ದವಾಗಿದೆ.ಪೋಲೀಸ್‍ಅಧಿಕಾರಿಯೊಬ್ಬಗಣ್ಯ ವ್ಯಕ್ತಿಯ ವಿರುದ್ದಕಾನೂರು ಕ್ರಮಕೈಗೊಳ್ಳಲು ಮುಂದಾದಾಗಆತನಿಗೆ ಎಷ್ಟು ಒತ್ತಡಇರುತ್ತದೆಎನ್ನುವ ಸುತ್ತವೇಕತೆ ಸಾಗುತ್ತದೆ.ಉನ್ನತ ಅಧಿಕಾರಿಗಳ ಮಟ್ಟದಲ್ಲಿಕಿರಿಯ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ಇರುವುದು ಸಹಜ. ಇನ್ನುಠಾಣಾಮಟ್ಟದಲ್ಲಿಇನ್ಸ್‍ಪೆಕ್ಟರ್‍ಗೂಇರುವುದಿಲ್ಲವೇ?ಅದನ್ನುಆತ ಹೇಗೆ ನಿಭಾಯಿಸುತ್ತನೆಎನ್ನುವುದೇ ಸಿನಿಮಾದ ತಿರುಳು ಆಗಿದೆ.ಮಾಜಿಕ್ರಿಕೆಟ್‍ಆಟಗಾರ ಶ್ರೀಶಾಂತ್ ಮತ್ತುತೆಲುಗು ನಟ ಆಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ನಾಯಕಿಯಾಗಿ ರಶ್ಮಿಕಾವರ್ಮ ಇವರೊಂದಿಗೆಯೋಗಿ, ನವನೀತ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ,ಕೊಚ್ಚಿನ್, ಚನ್ನೈ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ವರುಣ್ ಉನ್ನಿ-ಶ್ರೀನಿಧಿ ಅವರದಾಗಿದೆ.ಕೆಂಪೆಗೌಡ ನಿರ್ಮಾಣ ಮಾಡಿದ್ದಶಂಕರೇಗೌಡಭಾಗ-2ಕ್ಕೆ ಕತೆ ಬರೆದು ಪ್ರಥಮ ಬಾರಿ ನಿರ್ದೇಶನ ಮಾಡಿರುವಚಿತ್ರಕ್ಕೆಟಾಲಿವುಡ್‍ನ ಎ.ವಿನೋಧ್ ಬಂಡವಾಳ ಹೂಡಿದ್ದಾರೆ. ಇದೇ ಶುಕ್ರವಾರದಂದುರಾಜ್ಯದ್ಯಂತಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
2/08/19


ಕೋಮಲ್‍ಕುಮಾರ್ ಈಗ ಕಂಪೆಗೌಡ
ಕೆಂಪೆಗೌಡ ನಿರ್ಮಾಣ ಮಾಡಿದ್ದ ಶಂಕರ್‍ರೆಡ್ಡಿ ‘ಕಂಪೆಗೌಡ-II’ ಚಿತ್ರಕ್ಕೆ ಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆಯನ್ನು ರಿಯಲ್ ಪೋಲೀಸ್ ಅಧಿಕಾರಿಗಳು ಅನಾವರಣಗೊಳಿಸಿದರು. ಪೋಲೀಸ್ ಆಯುಕ್ತ ಸುನಿಲ್‍ಕುಮಾರ್ ಮಾತನಾಡಿ ಹಾಡುಗಳಿಗೆ ಶಕ್ತಿ ಇದೆ. ತಂತ್ರಜ್ಘಾನ ಬೆಳೆದಂತೆ ಹಾವಭಾವ ಬದಲಾವಣೆ ಆಗಿದೆ. ಪೋಲೀಸ್ ಆಧಾರಿತ ಚಿತ್ರಗಳು ಹಿಟ್ ಆಗಿದೆ. ಪೋಲೀಸರು ಕೆಟ್ಟವರಲ್ಲ. ಸಮಾಜದ ಕೊಳಕುಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ. ಆದರೆ ಕೆಲವು ಚಿತ್ರದಲ್ಲಿ ನಮ್ಮನ್ನು ಜೋಕರ್, ಭ್ರಷ್ಟರಂತೆ ತರಹ ತೋರಿಸುತ್ತಾರೆ. ಕೊನೆಗೆ ನಾವೇ ಸುಪ್ರೀಂ ಎಂದು ಹೇಳುತ್ತಾರೆ. ಒಳ್ಳೆಯದಾಗಲಿ ಎಂದರು.

ಚಿತ್ರರಂಗಕ್ಕೆ ಬಂದಾಗಿನಿಂದಲೂ ಗಾಡ್‍ಫಾದರ್ ಅಂದರೆ ಅದು ಮಾದ್ಯಮದವರು. ಸರ್ಕಲ್ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಕರೆ ಬಂದಾಗ ದುಗುಡ ಶುರುವಾಯಿತು. ಯೋಗದ ಮೂಲಕ ತೂಕವನ್ನು ಇಳಿಸಿಕೊಂಡು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆಯಲ್ಲಿದ್ದೇನೆ. ಯಾರು ಹೇಳಿಲ್ಲದ ಹೊಸ ವಿಷಯವನ್ನು ಹೇಳಲಾಗಿದೆ. ಪೋಲೀಸ್ ಅಧಿಕಾರಿಯು ಕೆಲಸದಲ್ಲಿ ಒತ್ತಡ ಇದ್ದರೂ, ಸಾಮಾನ್ಯ ಸೈನಿಕನಂತೆ ಸಮಾಜವನ್ನು ಹೇಗೆ ಸರಿಪಡಿಸುತ್ತಾನೆಂದು ಹೇಳಲಾಗಿದೆ ಅಂತ ನಾಯಕ ಕೋಮಲ್‍ಕುಮಾರ್ ಸಿನಿಮಾದ ಕುರಿತಂತೆ ಒಂದಷ್ಟು ಮಾಹಿತಿ ಹಂಚಿಕೊಂಡರು. ಇದಕ್ಕೂ ಮುನ್ನ ಮೈಕ್ ತೆಗೆದುಕೊಂಡ ಜಗ್ಗೇಶ್ ಮಾತನಾಡುತ್ತಾ ನಮ್ಮ ಕಾಲದಲ್ಲಿ ಬರಹಗಾರರು ಹಾಗೇ ಇದ್ದ ಕಾರಣ ಚಿತ್ರಗಳು ಅದೇ ರೀತಿ ಬರುತ್ತಿತ್ತು. ಈಗ ಬುದ್ದಿವಂತ ಯುವ ಬರಹಗಾರರು ಇರುವುದರಿಂದ ಪೋಲೀಸ್ ಪವರ್ ಏನೆಂದು ತೋರಿಸುತ್ತಿದ್ದಾರೆ. ಕೋಮಲ್ ಕಷ್ಟಪಟ್ಟು ನಾಲ್ಕು ವರ್ಷ ದೇಹವನ್ನು ದಂಡಿಸಿ, ಯಾರಿಗೂ ಕಾಲ್‍ಶೀಟ್ ಕೊಡದೆ ಈ ಸಿನಿಮಾಗೆ ತ್ಯಾಗ ಮಾಡಿದ್ದಾರೆ. ಅವನಿಗೆ ಯಶಸ್ಸು ಸಿಗಬೇಕು. ಪ್ರತಿ ಫ್ರೇಮು ಹೊಸದಾಗಿದ್ದು, ವಿನೂತನ ಕತೆಯಾಗಿದೆ.ನಗಿಸೋ ಕಲಾವಿದ ಸ್ವಮೇಕ್ ಸಿನಿಮಾ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಯಾವ ಚಿತ್ರದ ಪ್ರೇರಣೆಯಾಗಿರುವುದಿಲ್ಲವೆಂದು ಖಚಿತವಾಗಿ ಹೇಳಬಹುದು. ಎಲ್ಲರು ಎಲ್ಲವನ್ನು ಮಾಡಬಹುದು ಎಂಬುದಕ್ಕೆ ಈತನೇ ಸಾಕ್ಷಿ ಎಂದು ಹೇಳಿದರು.

ತೆಲುಗು ನಟ ಆಲಿ ಆಗಮಿಸಿದ್ದು ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟಿತ್ತು. ಅವರು ಮಾತನಾಡುತ್ತಾ ಆಂದ್ರಕ್ಕೆ ಡಾ.ಎನ್‍ಟಿಆರ್, ಕರ್ನಾಟಕ್ಕೆ ಡಾ.ರಾಜ್‍ಕುಮಾರ್. ಒಮ್ಮೆ ರಾಜ್‍ಕುಮಾರ್ ಹಾಡುವ ಗೀತೆಗೆ ಅವರ ಸಮ್ಮುಖದಲ್ಲೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿದ್ದು ಸುಕೃತ. ಹೊರಗಡೆ ಹೋದಾಗ ನೀವು ಶಿವರಾಜ್‍ಕುಮಾರ್ ಅಂತ ಕೇಳುತ್ತಾರೆ. ಪುಟ್ಟ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಗುಣದಲ್ಲಿ ರಜನಿಕಾಂತ್‍ರಂತೆ ಇಲ್ಲಿ ಕೋಮಲ್‍ಕುಮಾರ್. ಅವರು ಡ್ಯಾನ್ಸ್, ಫೈಟ್, ನಟನೆ ಮತ್ತು ರೋಮಾನ್ಸ್ ಎಂಬುದು ಅವರ ನುಡಿಯಾಗಿತ್ತು. ನಿರ್ದೇಶಕರು, ನಾಯಕಿಯರಾದ ರಶ್ಮಿಕಾಶರ್ಮ, ನವನೀತ, ಕೊರಿಯೋಗ್ರಾಫರ್ ಮುರಳಿ, ಲಹರಿವೇಲು, ನಿರ್ಮಾಪಕ ಎ.ವಿನೋಧ್, ಹಿರಿಯ ಅಧಿಕಾರಿ ದೇವರಾಜ್ ಮತ್ತು ಸಂಗೀತ ನಿರ್ದೇಶಕ ವರುಣ್‍ಉನ್ನಿ ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
18/06/19\
KOMAL IS NOW KEMPEGOWDA 2
F
inally, the cat is out of the bag. Komal is now taking up the lead role of cop Kempegowda in Kempegowda 2 that was launched in a grand fashion. If Kempegowda was a remake of Tamil hit Singham that had Sudeep playing the lead role as well as wielding the megaphone, Kempegowda 2 is not a sequel or a remake of Singham but a original film, according to the film producer. Kempegowda 2 is produced by Shankar Gowda, Shankar Reddy and Vinod Gowda. The film is directed by Rosh Mohan.

Besides the film launch, the team of producers also launched their company called S Company. The film will make films, manage events and also be in fashion business besides providing for business support service. The launch saw fashion shows which displayed bridal wear costumes among others designed by Ramesh Dembla and also the launch of Kempegowda 2 teaser by former union minister Sushil Kumar Shinde. The company was inaugurated by Rajya Sabha member K C Ramamurthy and his wife Savitha in the presence of Jeevan Reddy, Bhairathi Suresh, Biligondlu Gowda and others.

Later, Komal told reporters that he had lost 21 kilos to don the police colours which he said he was looking forward to playing for a long time in his career. He said he hadn’t taken up any new offer in the last one-and-a-half years and said the film’s presentation will be stylish and unique. He said he will be seen in the role without any make-up and added that he will sweat it out which will also be natural.

He said director Rosh Mohan has worked on the script for several months and promised that the film will be one of the most interesting films in his career. He said the comedy will be natural and spontaneous and the film will be shot for 125 days. Komal said family life of the cops will also be touched. He said the film is about white collar crimes.
-16/04/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore