HOME
CINEMA NEWS
GALLERY
TV NEWS
REVIEWS
CONTACT US
ಎಚ್ಚರಿಕೆ ಕೀಚಕರು ಬರುತ್ತಿದ್ದಾರೆ
‘ಕೀಚಕರು’ ಹೆಸರು ಕೇಳಿದರೆ ನೆಗಟಿವ್ ಶೇಡ್ ಇರುವ ಕತೆ ಎಂದು ಸುಲಭವಾಗಿ ಹೇಳಬಹುದು. ನಿರ್ಭಯ ಕೇಸ್, ಮಹಿಳಯರ ಮೇಲೆ ದೌರ್ಜನ್ಯ ಇಂತಹ ಅಂಶಗಳು ಚಿತ್ರದಲ್ಲಿ ಇರಲಿದೆ. ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರಗಳನ್ನು ಸೂಕ್ಷವಾಗಿ ಗಮನಿಸಿ ಇದರ ಕುರಿತಂತೆ ಸನ್ನಿವೇಶಗಳನ್ನು ಸೃಷ್ಟಿಸಿ ಕ್ಲೈಮಾಕ್ಸ್‍ನಲ್ಲಿ ಅದಕ್ಕೊಂದು ಪರಿಹಾರ ನೀಡಲಾಗಿದೆ. ಒಂದು ಕುಟುಂಬದಲ್ಲಿ ಇಂತಹ ಘಟನೆ ನಡೆದಾಗ ಜನರು ಯಾವ ರೀತಿ ನೋಡುತ್ತಾರೆ. ನಾಲ್ಕು ಯುವಕರು ಕೊಲೆ ಮಾಡುವುದು. ಇವೆಲ್ಲವು ಇರುವುದರಿಂದ ಸೆನ್ಸಾರ್‍ನವರು ಏನು ಹೇಳದೆ ಎ ಪ್ರಮಾಣಪತ್ರಕ್ಕೆ ಮೊಹರು ಹಾಕಿದ್ದಾರೆ. ಆಂದ್ರಪ್ರದೇಶದ ಶಿವಮಣಿ ಕತೆ ಬರೆದು, ನಿರ್ದೇಶನ ಜೊತೆಗೆ ಅಭಿನಯಿಸಿದ್ದಾರೆ.

ಲೋಕೇಶ್ ಮತ್ತು ಸಾಯಿ ರಚಿಸಿರುವ ಗೀತೆಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ. ಇದರಲ್ಲಿ ಒಂದು ಹಾಡು ಸಮಾಜದ ಕುರಿತಂತೆ ಹೇಳಲಾಗಿದೆ. ಕೀಚಕ ಪೋಲೀಸ್ ಪಾತ್ರದಲ್ಲಿ ಉಗ್ರಂರೆಡ್ಡಿ ಇವರೊಂದಿಗೆ ಜಯನಾಯಕ್ ನಟನೆ ಇದೆ. ಶೀತಲ್ ಸಿನಿ ಕ್ರಿಯೆಶನ್ಸ್ ಮೂಲಕ ನಿರ್ಮಾಣವಾಗಿರುವ ಚಿತ್ರವು ಶುಕ್ರವಾರದಂದು ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
17/07/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore