HOME
CINEMA NEWS
GALLERY
TV NEWS
REVIEWS
CONTACT US

ಆತ್ಯಹತ್ಯೆಗೆ ಶರಣಾದ ಕಪಾಲಿಮೋಹನ್
ಡಾ.ರಾಜ್‍ಕುಮಾರ್‍ಕುಟುಂಬಕ್ಕೆ ಹತ್ತಿರವಾಗಿದ್ದ ಕಪಾಲಿಮೋಹನ್ (ವಯಸ್ಸು 60) ನಿರ್ಮಾಪಕ, ಫೈನಾನ್ಸಿಯರ್, ನಟ ಮತ್ತುಉದ್ಯಮಿಯಾಗಿದ್ದರು. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರಿಂದ ಹಿಂಸೆ ತಾಳಲಾರದೆ ತನ್ನದೆಒಡತನದ ಪೀಣ್ಯದಲ್ಲಿರುವ ‘ಸುಪ್ರಿಮ್’ ಹೋಟೆಲ್‍ದಲ್ಲಿ ನೇಣುಹಾಕಿಕೊಂಡಿದ್ದಾರೆ.‘ಕೇಸ್ ನಂ.18/9’ ನಿರ್ಮಾಣ ಮಾಡಿದ್ದು, ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದರು.ಡಾ.ರಾಜ್‍ಕುಮಾರ್‍ಅಭಿನಯದ ‘ಶಬ್ದವೇದಿ’ ಸಿನಿಮಾದಲ್ಲಿ ಬರುವ ‘ಜನರಿಂದ ನಾ ಮೇಲೆ ಬಂದೆ’ ಹಾಡಿನಲ್ಲಿಅಣ್ಣಾವ್ರಿಗೆ ಹಾರ ಹಾಕುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಮೂರು ವರ್ಷದ ಕೆಳಗೆ ಪೀಣ್ಯಾ ಬಳಿ ಬಸ್ ಸ್ಟ್ಯಾಂಡ್ ಬರುವಕಾರಣದಿಂದ ಪಕ್ಕದಲ್ಲಿ ಹದಿನೈದು ಶಾಪ್‍ಗಳನ್ನು ತೆರೆಯಲುಕೋಟಿಗಟ್ಟಲೆ ಬಂಡವಾಳ ಹೂಡಿದ್ದರು. ಸರ್ಕಾರವು ಬೇರೆತೀರ್ಮಾನಕೈಗೊಂಡಿದ್ದರಿಂದಅಲ್ಲಿಯೂ ಲಾಸ್‍ಆಗಿತ್ತು. 2018ರಲ್ಲಿ ಆರ್.ಜಿ.ಕ್ರಿಯೇಶನ್ಸ್‍ಕ್ಲಪ್ ಮೇಲೆ ಸಿಸಿಬಿರವರು ದಾಳಿ ಮಾಡಿದÀ ಸಂದರ್ಭದಲ್ಲಿತಪ್ಪಿಸಿಕೊಂಡಿದ್ದರು. ಅಲ್ಲದೆ ಬಾಲಾಜಿ ಫೈನಾನ್ಸ್ ಸಂಸ್ಥೆ ನಡೆಸುತ್ತಿದ್ದು, ಕರ್ನಾಟಕ ಮನಿ ಲೆಂಡೆರ್ಸ್‍ಕಾಯ್ದೆ 1961ರ ಪ್ರಕಾರಇವರ ಮೇಲೆ ವೈಯಾಲಿ ಕಾವಲ್ ಪೋಲೀಸ್‍ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಸಿನಿ ಸರ್ಕಲ್.ಇನ್ ನ್ಯೂಸ್
23/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore