HOME
CINEMA NEWS
GALLERY
TV NEWS
REVIEWS
CONTACT US
ಶುಕ್ರವಾರ ಕಂತ್ರಿ ಬಾಯ್ಸ್ ಆಗಮನ
ಎಸ್.ರಾಜು ಚಟ್ಟಳ್ಳಿ ಅವರು ಹಲವು ಚಿತ್ರ, ಧಾರವಾಹಿಗಳಿಗೆ ಬರಹಗಾರನಾಗಿ ಕೆಲಸ ಮಾಡಿದ ಅನುಭವ ಇರುವುದರಿಂದ ‘ಕಂಟ್ರಿ ಬಾಯ್ಸ್’ ಎನ್ನುವ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ಚೊಚ್ಚಲಬಾರಿ ನಿರ್ದೇಶನ ಮಾಡಿದಾರೆ. ಹಳ್ಳಿಗಳಲ್ಲಿ ಸೋಮಾರಿ ಹುಡುಗರಿಗೆ ಈ ರೀತಿ ಕರೆಯುವುದುಂಟು. ಇವರುಗಳು ಮುಂದೆ ಒಳ್ಳೆ ಕೆಲಸ ಮಾಡಿ ಕಂಟ್ರಿಬಾಯ್ಸ್ ಆಗುತ್ತಾರೆ. ಒಂದು ಹೆಣ್ಣು ಯಾವ ಕಾರಣಕ್ಕಾಗಿ ಬೆಲವೆಣ್ಣು ಆಗುತ್ತಾಳೆ. ಅದರಿಂದ ಹೊರ ಬರುವುದಾದರೂ ಹೇಗೆ. ಇದರಲ್ಲಿ ಪುರುಷರ ತಪ್ಪು ಇದೆ. ಪ್ರಚಲಿತ ಹುಡುಗರು ಮನಸ್ಸು ಮಾಡಿದಲ್ಲಿ ಏನು ಬೇಕಾದರೂ ಮಾಡಬಹುದು. ಥ್ರಿಲ್ಲರ್ ವಿಷಯವನ್ನು ಹಾಸ್ಯದ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆಯಂತೆ. ಉದಾಸೀನತೆ, ಯಾರನ್ನು ಕೇರ್ ಮಾಡುವುದಿಲ್ಲ. ಗೆಳಯರ ಮೂಲಕ ಸಂಕಷ್ಟಗಳನ್ನು ಎದುರಿಸುವ ಅರವಿಂದ್ ನಾಯಕನಾಗಿ ಮೂರನೆ ಚಿತ್ರ. ಮಹಿಳೆ ದಾರಿ ತಪ್ಪಿದಾಗ ಗಂಡಸರು ಯಾವ ರೀತಿ ನೋಡುತ್ತಾರೆ ಎನ್ನುವ ಪಾತ್ರದಲ್ಲಿ ಸಂದ್ಯಾ. ಉಳಿದಂತೆ ವಸಂತಿ ಮತ್ತು ಅನಕಾ ನಾಯಕಿಯರು. ಮತ್ತೋಂದು ಮುಖ್ಯ ಪಾತ್ರಕ್ಕೆ ಗಡ್ಡಪ್ಪ ಬಣ್ಣ ಹಚ್ಚಿದ್ದಾರೆ.

ಛಾಯಗ್ರಹಣ ಪಿ.ವಿಆರ್.ಸ್ವಾಮಿ, ಸಂಕಲನ ಕೆ.ಎಂ.ಕಾರ್ತಿಕ್ ನಿರ್ವಹಿಸಿದ್ದಾರೆ. ನಾಲ್ಕು ಹಾಡುಗಳಿಗೆ ರವೀಂದ್ರನಾಥ್ ಸಂಗೀತ ಸಂಯೋಜನೆ ಇದೆ. ಚಿತ್ರರಂಗ, ಪತ್ರಿಕೋದ್ಯಮ, ಕೃಷಿ, ವ್ಯಾಪಾರ ಹೀಗೆ ಎಲ್ಲಾ ವಿಭಾಗಗಳಲ್ಲಿ ಕೈಯಾಡಿಸಿರುವ ಶ್ರವಣಬೆಳಗೊಳದ ಎಂ.ಸಿ.ಹೇಮಂತ್‍ಗೌಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಬರಹಗಾರ ಚಟ್ಟಳ್ಳಿಯ ರಾಜು ಅವರು ಮರ್ಡರ್ ಮಿಸ್ಟ್ರೀ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ನೇಗ್ಲು, ಬೀಜ, ಬಿತ್ತನೆ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ಚಿತ್ರವು ಶುಕ್ರವಾರದಂದು ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-13/02/18





ಕಂತ್ರಿ ಬಾಯ್ಸ್ ಅಲ್ಲ ಕಂಟ್ರಿ ಬಾಯ್ಸ್
ಎಸ್.ರಾಜು ಚಟ್ಟಳ್ಳಿ ಅವರು ಹಲವು ಚಿತ್ರ, ಧಾರವಾಹಿಗಳಿಗೆ ಬರಹಗಾರನಾಗಿ ಕೆಲಸ ಮಾಡಿದ ಅನುಭವ ಇರುವುದರಿಂದ ‘ಕಂಟ್ರಿ ಬಾಯ್ಸ್’ ಎನ್ನುವ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ಚೊಚ್ಚಲಬಾರಿ ನಿರ್ದೇಶನ ಮಾಡಿದಾರೆ. ಹಳ್ಳಿಗಳಲ್ಲಿ ಸೋಮಾರಿ ಹುಡುಗರಿಗೆ ಈ ರೀತಿ ಕರೆಯುವುದುಂಟು. ಇವರುಗಳು ಮುಂದೆ ಒಳ್ಳೆ ಕೆಲಸ ಮಾಡಿ ಕಂಟ್ರಿಬಾಯ್ಸ್ ಆಗುತ್ತಾರೆ. ಒಂದು ಹೆಣ್ಣು ಯಾವ ಕಾರಣಕ್ಕಾಗಿ ಬೆಲವೆಣ್ಣು ಆಗುತ್ತಾಳೆ. ಅದರಿಂದ ಹೊರ ಬರುವುದಾದರೂ ಹೇಗೆ. ಇದರಲ್ಲಿ ಪುರುಷರ ತಪ್ಪು ಇದೆ. ಪ್ರಚಲಿತ ಹುಡುಗರು ಮನಸ್ಸು ಮಾಡಿದಲ್ಲಿ ಏನು ಬೇಕಾದರೂ ಮಾಡಬಹುದು. ಥ್ರಿಲ್ಲರ್ ವಿಷಯವನ್ನು ಹಾಸ್ಯದ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆಯಂತೆ. ಉದಾಸೀನತೆ, ಯಾರನ್ನು ಕೇರ್ ಮಾಡುವುದಿಲ್ಲ. ಗೆಳಯರ ಮೂಲಕ ಸಂಕಷ್ಟಗಳನ್ನು ಎದುರಿಸುವ ಪಾತ್ರದಲ್ಲಿ ನಾಯಕನಾಗಿ ಅರವಿಂದ್‍ಗೆ ಮೂರನೆ ಚಿತ್ರ. ಸಂಧ್ಯಾ, ವಸಂತಿ ಮತ್ತು ಅನಕಾ ನಾಯಕಿಯರು. ಮತ್ತೋಂದು ಮುಖ್ಯ ಪಾತ್ರಕ್ಕೆ ಗಡ್ಡಪ್ಪ ಬಣ್ಣ ಹಚ್ಚಿದ್ದಾರೆ.

ನಾಲ್ಕು ಹಾಡುಗಳಿಗೆ ರವೀಂದ್ರನಾಥ್ ಸಂಗೀತ ಸಂಯೋಜನೆ ಇದೆ. ಮಂಡ್ಯಾ, ಹಾಸನ, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರರಂಗ, ಪತ್ರಿಕೋದ್ಯಮ, ಕೃಷಿ, ವ್ಯಾಪಾರ ಹೀಗೆ ಎಲ್ಲಾ ವಿಭಾಗಗಳಲ್ಲಿ ಕೈಯಾಡಿಸಿರುವ ಶ್ರವಣಬೆಳಗೊಳದ ಎಂ.ಸಿ.ಹೇಮಂತ್‍ಗೌಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರದ ಟ್ರೈಲರ್‍ನ್ನು ಬಿಡುಗಡೆ ಮಾಡಿದ ಶಾಸಕ ಸಿ.ಎನ್.ಬಾಲಕೃಷ್ಣ ಸ್ಪರ್ಧೆ ಇದ್ದರೆ ಗುಣಾತ್ಮಕ ಚಿತ್ರಗಳು ಬರುತ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿ, ತಂಡಕ್ಕೆ ಶುಭಹಾರೈಸಿದರು. ಬರಹಗಾರ ನಿರ್ದೇಶಕ ನಾದರೆ ಒಳ್ಳೆ ಸಿನಿಮಾ ಬರುತ್ತದೆಂದು ನಂಬಲಾಗಿದೆ. ನಾನು ಇದೇ ವೃತ್ತಿಯೊಂದಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದೆ. ಮರ್ಡರ್ ಮಿಸ್ಟ್ರೀ ಕತೆಯನ್ನು ಕಾಮಿಡಿಯಾಗಿ ತೋರಿಸುವುದು ಕಷ್ಟ. ಅಂತಹ ಕೆಲಸವನ್ನು ರಾಜು ಮಾಡಿರುವುದು ಶ್ಲಾಘನೀಯವಾಗಿದೆ ಎನ್ನುವುದು ನಟ ಮೋಹನ್ ನುಡಿ. ರಂಗಿತರಂಗ ಖ್ಯಾತಿಯ ಅರವಿಂದ್ ಉಪಸ್ತಿತರಿದ್ದರು. ನೇಗ್ಲು, ಬೀಜ, ಬಿತ್ತನೆ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.
-15/11/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore