HOME
CINEMA NEWS
GALLERY
TV NEWS
REVIEWS
CONTACT US
ಡಾ.ರಾಜ್ ಆದರ್ಶ, ಗುಣಗಳನ್ನು ಕನಕನಲ್ಲಿ ಕಾಣಬಹುದು
ಡಾ.ರಾಜ್‍ಕುಮಾರ್ ನಮ್ಮನ್ನು ಅಗಲಿ ಹತ್ತು ವರುಷಗಳು ಕಳೆದರೂ ಅವರನ್ನು ನೆನಪಿಸುವಂತ ಚಿತ್ರಗಳು ಬರುತ್ತಿರುತ್ತವೆ. ಇದರ ಸಾಲಿಗೆ ಅದ್ದೂರಿ ವೆಚ್ಚದ ‘ಕನಕ’ ಚಿತ್ರ ಬಿಡುಗಡೆಯಾಗಿದೆ. ಇದನ್ನು ವಿಶೇಷ ಎನ್ನಬಹುದು. ಕತೆಯಲ್ಲಿ ನಾಯಕ ಚಿಕ್ಕಂದಿನಿಂದಲೂ ಅಣ್ಣಾವ್ರರ ಅಭಿಮಾನಿಯಾಗಿ ಅವರ ಚಿತ್ರಗಳನ್ನು ನೋಡಿಕೊಂಡು ಜೀವನವನ್ನು ಅದೇ ರೀತಿಯಲ್ಲಿ ರೂಪಿಸಿಕೊಂಡಿರುತ್ತಾನೆ. ಪೋಸ್ಟರ್ ಅಂಟಿಸುವ ಕಾಯಕದಲ್ಲಿ ನೆರೆಯ ಭಾಷೆಯವರು ತೊಂದರೆ ಕೊಟ್ಟಾಗ ಅವರನ್ನು ತದುಕಿ ಕನ್ನಡ ಭಾಷೆಯ ಕುರಿತು ಮಾತನಾಡುತ್ತಾ ಹಿಂದಿನ ನಮ್ಮ ಚಿತ್ರಗಳೇ ಇಂದು ತೆಲುಗು,ತಮಿಳು ಹಿಟ್ ಸಿನಿಮಾಗಳು ಆಗಿವೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಬೋಧನೆ ಹೇಳುತ್ತಾನೆ. ಮುಂದೆ ಆಟೋ ಚಾಲಕನಾಗಿ ವೃತ್ತಿಯಲ್ಲಿ ಕಾರ್ಯಪ್ರವೃತ್ತಿ ಮರೆದು ವೈದ್ಯಕೀಯ ವಿದ್ಯಾರ್ಥಿಯ ಮನಸ್ಸನ್ನು ಗೆಲ್ಲುತ್ತಾನೆ ಹೊರತು ಪ್ರೀತಿ ಮಾಡುವುದಿಲ್ಲ. ಈಕೆ ಪ್ರೀತಿಸಿ ಮದುವೆ ಮಾಡಲು ನಿರ್ಣಯ ತೆಗೆದುಕೊಳ್ಳುತ್ತಾಳೆ ಅಲ್ಲಿಂದ ಕತೆಯು ತಿರುವು ಪಡೆದುಕೊಂಡು ವಿರಾಮದ ನಂತರ ಹಳ್ಳಿ ಕಡೆಗೆ ಶಿಫ್ಟ್ ಆಗುತ್ತದೆ. ಅದು ಹೇಗೆ, ಏತಕ್ಕಾಗಿ ಎಂಬುದು ಸಸ್ಪೆನ್ಸ್.

ಮೂರು ಶೇಡ್‍ಗಳಲ್ಲಿ ಕಾಣ ಸಿಕೊಂಡಿರುವ ದುನಿಯಾವಿಜಯ್ ಮಾಸ್ ಪ್ರಿಯರಿಗೆ ಇಷ್ಟವಾಗುವಂತೆ ಜಬರ್‍ದಸ್ತ್ ಫೈಟ್ ಮಾಡಿ ರಂಜಿಸಿದ್ದಾರೆ ಎನ್ನಬಹುದು. ಅಭಿನಯ ಕುರಿತು ಎಂದಿನಂತೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಮಾನ್ವಿತಾಹರೀಶ್ ಮೆಡಿಕಲ್ ವಿದ್ಯಾರ್ಥಿಯಾಗಿ ಚೆಂದ ಕಾಣ ಸುತ್ತಾರೆ. ಹರಿಪ್ರಿಯಾಗೆ ಹೆಚ್ಚು ಸ್ಕೋಪ್ ಸಿಕ್ಕಿಲ್ಲ. ಸಾಧುಕೋಕಿಲ ಬಂದು ಹೋದರೂ ನಗು ತರಿಸುವುದಿಲ್ಲ. ಅಲ್ಲದೆ ಅವರ ದೃಶ್ಯಗಳು ಅವಶ್ಯಕವಾಗಿರಲಿಲ್ಲ. ರಂಗಾಯಣರಘು , ಬಹು ವರ್ಷಗಳ ನಂತರ ತೆರೆ ಹಂಚಿಕೊಂಡರುವ ಉದ್ಯಮಿ ಕೆ.ಪಿ.ನಂಜುಂಡಿ ಮೂರು ದೃಶ್ಯಗಳಲ್ಲಿ ಕಾಣ ಸಿಕೊಳ್ಳುತ್ತಾರೆ. ಮುಖ್ಯ ಖಳನಟನಾಗಿ ರವಿಶಂಕರ್ ಖದರ್ ನಟನೆ ಪ್ಲಸ್ ಪಾಯಿಂಟ್ ಆಗಿದೆ. ವಿರಾಮದವರೆಗೂ ರಾಜ್‍ಕುಮಾರ್ ಭಾವಚಿತ್ರಗಳು ಅಲ್ಲಲ್ಲಿ ಕಾಣ ಸಿಕೊಳ್ಳುತ್ತಾವೆ. ನವೀನ್‍ಸಜ್ಜು ಸಂಗೀತದಲ್ಲಿ ಒಂದು ಮಲೋಡಿ ಹಾಗೂ ಪಡ್ಡೆಹುಡುಗರಿಗೆ ಎಣ್ಣೆ ನಮ್ದು ಹಾಡುಗಳು ಕೇಳಬಲ್. ನಿರ್ಮಾಪಕ, ನಿರ್ದೇಶಕ ಒಮ್ಮೆಗೆ ಎರಡು ಜವಬ್ದಾರಿಗಳನ್ನು ಹೊತ್ತುಕೊಂಡಿರುವ ಆರ್.ಚಂದ್ರು ಹೆಚ್ಚು ಖರ್ಚು ಮಾಡಿರುವುದು ಪರದೆ ಮೇಲೆ ಕಾಣ ಸುತ್ತದೆ. ಅಣ್ಣಾವ್ರ ನೆನಪುಗಳು ಬೇಕು ಅನಿಸಿದಲ್ಲಿ, ಸಾಹಸ ಇಷ್ಟಪಡುವವರಿಗೆ ಕನಕನನ್ನು ಕಣ್ತುಂಬಿಕೊಳ್ಳಬಹುದು.

ಸಿನಿ ಸರ್ಕಲ್ ಡಾಟ್ ಇನ್ ವಿಮರ್ಶೆ
-26/01/18


ನಾಯಕನ ಮಾರ್ಕೆಟ್ ಬೆಲೆಗಿಂತ ಹೆಚ್ದು ಖರ್ಚು ಆಗಿದೆ – ಆರ್.ಚಂದ್ರು
ಅಣ್ಣಾವ್ರ ಅಭಿಮಾನಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ಕನಕ’ ಚಿತ್ರವು ಪ್ರಾರಂಭದಿಂದಲೂ ಸುದ್ದಿ ಮಾಡುತ್ತಲೆ ಇದೆ. ಈಗ ಅಂತಿಮ ಹಂತ ಅಂದರೆ ತೆರೆಗೆ ಬರಲು ಸನ್ನಿಹಿತವಾಗಿದ್ದರಿಂದ ನಿರ್ದೇಶಕರು ಕೊನೆ ಬಾರಿ ಮಾದ್ಯಮದ ಎದುರು ಹಾಜರಿದ್ದರು. ಅವರು ಹೇಳುವಂತೆ ಡಾ.ರಾಜ್‍ಕುಮಾರ್ ಆದರ್ಶ ಗುಣಗಳನ್ನು ನಾಯಕ ಅಳವಡಿಸಿಕೊಂಡಿರುತ್ತಾನೆ. ಬುದುವಾರ ಮುಖ್ಯ ಚಿತ್ರಮಂದಿರದಲ್ಲಿ ಅತಿ ಎತ್ತರದ ರಾಜ್‍ಕುಮಾರ್ ಕಟ್ ಔಟ್‍ನ್ನು ನಿಲ್ಲಿಸಲಾಗುವುದು. ಸುಮಾರು ಎರಡು ಸಾವಿರ ಆಟೋ ರಿಕ್ಷಾ ಮೆರವಣ ಗೆ , ಕಟ್‍ಔಟ್‍ಗೆ ಹಾಲಿನ ಅಭಿಷೇಕ ಮಾಡಲಾಗುವುದು. ಕಡಿಮೆ ಮಟ್ಟದಲ್ಲಿ ಹಾಲನ್ನು ಬಳಸಿಕೊಂಡು, ಉಳಿದುದನ್ನು ಅನಾಥಶ್ರಮಕ್ಕೆ ಕೊಡಲಾಗುವುದು. ಪ್ರಾರಂಭದಿಂದಲೂ ಕತೆಗೆ ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಬಜೆಟ್ ಬಗ್ಗೆ ಗಮನ ಕೊಡುವುದಿಲ್ಲ. ಚಿತ್ರೀಕರಣ ಸಂದರ್ಭದಲ್ಲಿ ಖರ್ಚು ಮಾಡುತ್ತಿರುವುದನ್ನು ನೋಡಿ ವಿಜಯ್‍ರವರು ನನ್ನ ಮಾರ್ಕೆಟ್ ಇಷ್ಟೋಂದು ಇಲ್ಲ. ಮಿತವಾಗಿ ಹಣ ಬಳಸಿ ಎಂದು ಸಲಹೆ ನೀಡಿದರು. ಆದರೂ ಕತೆ ಕೇಳುತ್ತಿರುವುದರಿಂದ ಧೈರ್ಯ ಮಾಡಿ ಅವರ ಬೆಲೆಗಿಂತ ಹೆಚ್ಚು ಮಾಡಲಾಗಿದೆ. ವಿತರಕರು ಸಿನಿಮಾ ನೋಡಿ ಒಳ್ಳೆ ಬೆಲೆ ನೀಡಿದ್ದಾರೆಂದು ಬಜೆಟ್ ಎಷ್ಟಾಗಿದೆ ಎಂದು ಹೇಳದೆ ಜಾರಿಕೊಂಡರು ನಿರ್ದೇಶಕ,ನಿರ್ಮಾಪಕ ಆರ್.ಚಂದ್ರು.

ಹಿಂದಿನ ಚಿತ್ರ ಕೆಂಡಸಂಪಿಗೆ, ಕ ಅಕ್ಷರದಲ್ಲಿತ್ತು. ಇದು ಸಹ ಅದೇ ಅಕ್ಷರದಲ್ಲಿ ಇರುವುದು ಅದೃಷ್ಟ ಎನ್ನಬಹುದು. ಕನಕವೃಷ್ಟಿ ಹರಿದುಬಂದರೆ ನಾನು ಎರಡು ಮೂಟೆ ಹೊತ್ತುಕೊಂಡು ಹೋಗುವುದಾಗಿ ಹೇಳಿಕೊಂಡರು ನಾಯಕಿ ಮಾನ್ವಿತಾಹರೀಶ್. ಮೊದಲಬಾರಿ ನವೀನ್‍ಸಜ್ಜು ಸಂಗೀತ ಸಂಯೋಜಿಸಿರುವ ಹಾಡುಗಳ ಪೈಕಿ ‘ಎಣ್ಣೆ ನಮ್ದು ಊಟ ನಿಮ್ದು’ ಗೀತೆಯು ಯು ಟ್ಯೂಬ್‍ನಲ್ಲಿ ಹಿಟ್ ಆಗಿರುವುದರಿಂದ ವಿತರಕರು ಇದನ್ನೆ ನೋಡಿ ನಮಗೆ ಕೊಡಿ ಅಂತ ದುಂಬಾಲು ಬಿದ್ದಿರುವುದಾಗಿ ವಿತರಕರಾದ ಸುಪ್ರಿತ್, ಪಿವಿಎಲ್.ಶೆಟ್ಟಿ ಮಾಹಿತಿ ನೀಡಿದರು. ವೈಯಕ್ತಿಕ ಕೆಲಸ ಇರುವುದರಿಂದ ದುನಿಯ್‍ವಿಜಯ್ ಅನುಪಸ್ಥಿತಿಯಲ್ಲಿ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿ ನಡೆಯಿತು ಗಣರಾಜೋತ್ಸವ ದಿನದಂದು ಸುಮಾರು 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕನಕನ ಅಬ್ಬರ ಶುರುವಾಗಲಿದೆ.
ಚಿತ್ರಗಳು. ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-24/01/18
ಕನಕನಿಗೆ ವಿನೂತನ ಪ್ರಚಾರ
ಗಾಯಕ ನವೀನ್‍ಸಜ್ಜು ‘ಕನಕ’ ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಅವರು ರಚಿಸಿ ತನ್ನದೆ ದುಡ್ಡಿನಲ್ಲಿ ಚಿತ್ರೀಕರಣ ಮಾಡಿರುವ ಗೀತೆಯನ್ನು ಮಾದ್ಯಮದವರಿಗೆ ತೋರಿಸಿದ ತರುವಾಯ ತಂಡವು ಮಾತುಗಳನ್ನು ಹಂಚಿಕೊಂಡಿತು. ವಿಶೇಷವಾಗಿ ಕೆ.ಪಿ.ನಂಜುಡಿ ಆಗಮಿಸಿದ್ದು ಅಂದಿನ ಗೋಷ್ಟಿಗೆ ಮೆರುಗು ತಂದಿತ್ತು. ಅವರು ಮಾತನಾಡುತ್ತಾ ಹದಿನಾಲ್ಕು ವರ್ಷದ ನಂತರ ಅಭಿನಯಿಸಿದ್ದೇನೆ. ವ್ಯಕ್ತಿತ್ವಕ್ಕೆ ಹತ್ತಿರ ಇರುವ ಪಾತ್ರವಾಗಿರುವ ಕಾರಣ ಒಪ್ಪಿಕೊಂಡೆ. ಚಂದ್ರು ಅವರು ಪ್ರಾರಂಭದಿಂದಲೂ ಗುಣಮಟ್ಟದ ಚಿತ್ರಗಳನ್ನು ಕೊಡುತ್ತಾ ಬಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಬಡತನ ನೆನಸಿಕೊಂಡರೆ ಸಣ್ಣಗೆ ಆಗುತ್ತಾರೆ. ಸಿರಿತನಕ್ಕೆ ಮಾರು ಹೋದರೆ ದಪ್ಪ ಆಗುವುದುಂಟು. ಎಂದು ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ರಂಗಾಯಣರಘು ಅವರು ಪ್ರತಿ ಚಿತ್ರದಲ್ಲೂ ನನ್ನ ಜೊತೆ ಇರುತ್ತಾರೆ. ನಂಜುಂಡಿ ಸರ್ ಮಾತುಗಳು ನಿಜವಾಗಿದೆ. ಚಂದ್ರು ಏನು ತಪ್ಪಿಲ್ಲದಿದ್ದರೂ ಮುನಿಸಿಕೊಳ್ಳುತ್ತಾರೆ, ಫೋನು ಎತ್ತುವುದಿಲ್ಲವೆಂದು ನಗುತ್ತಾ ದೂರಿದರು ದುನಿಯಾವಿಜಯ್.

ಕನಸಿನೊಂದಿಗೆ ಮೂರು ಸಾವಿರ ಕೈಯಲ್ಲಿ ಹಿಡಿದುಕೊಂಡು ಬೆಂಗಳೂರಿಗೆ ಬಂದೆ. ಕೆಂಡಸಂಪಿಗೆಯಿಲ್ಲಿ ಅವಕಾಶ ಸಿಕ್ಕಿತ್ತು. ಚಿತ್ರರಂಗವು ಕೈಹಿಡಿದುಕೊಂಡು ಇಲ್ಲಿಯ ತನಕ ಕರೆದುಕೊಂಡು ಬಂದಿದೆ. ರಂಗಾಯಣರಘು ಅವರೊಂದಿಗೆ ಪೂರ್ಣ ಪ್ರಮಾಣದಲ್ಲಿ ನಟಿಸುವ ಪಸೆ ಇದೆ. ಒಳ್ಳೆ ಹಾಡುಗಳನ್ನು ನೀಡಿದ್ದಕ್ಕೆ ನವೀನ್‍ಗೆ ಥ್ಯಾಂಕ್ಸ್ ಎಂದರು ನಾಯಕಿ ಮಾನ್ವಿತಾಹರೀಶ್. ಕನಕ ಹೆಸರು ದೊಡ್ಡದು. ಭಕ್ತಿ ಪಂಥದಲ್ಲಿ ಕನಕ ಹೆಸರು ಮಾಡಿದ್ದಾನೆ. ವರ್ತಮಾನದಲ್ಲಿ ಚಂದ್ರು-ವಿಜಯ್‍ಗೆ ಒಳ್ಳೆ ಶೀರ್ಷಿಕೆ ಸಿಕ್ಕಿದೆ. ಇಬ್ಬರ ಕನಸು ಸಾಕಾರಗೊಳ್ಳಲಿ. ಚಂದ್ರು ಕನಸುಗಾರರು. ಕನಸಿನಲ್ಲಿ ಅವರಿಗೆ ಬಡತನವಿಲ್ಲ. ಕನ್ನಡಕ್ಕೆ ಪರ್ವ ಕಾಲ ಬಂದಿದೆ ಅಂತ ರಂಗಾಯಣರಘು ಹೇಳಿದರು.

ಸುಮತಿ ಧಾರವಾಹಿಯಲ್ಲಿ ಕೆಲಸ ಮಾಡುವಾಗ ಒಂದು ವಿಷಯಕ್ಕೆ ತಂಡದಿಂದ ದೊರಬಂದೆ. ನಂಜುಂಡಿ ಸರ್ ಅದೇ ಸ್ಥಳದಲ್ಲಿ ಸೇರಲು ಸಹಾಯಮಾಡಿದರು. ಚಿತ್ರ ಮಾಡುವಾಗ ಅವರ ಬಳಿ ಹೋದರೆ ಏನು ಕೇಳದೆ ಹಣ ನೀಡುತ್ತಾರೆ. ತಾಜಮಹಲ್ ಸಮಯದಲ್ಲಿ ರೈತನ ಸಿನಿಮಾ ಮಾಡುತ್ತಿದ್ದೀಯಾ. ಒಳ್ಳೆಯದಾಗಲಿ ಎಂದು ಸಹಾಯ ಮಾಡಿದ್ದರು. ನವೀನ್‍ರವರು ಎಣ್ಣೆ ಹಾಡಿಗೆ ಖರ್ಚು ಮಾಡಲಾದ ವೆಚ್ಚವನ್ನು ನಿರ್ಮಾಪಕನಾಗಿ ಹಿಂದಿರುಗಿಸುತ್ತೇನೆ. ಹಾಡು ಅವಶ್ಯವಾಗಿರಲಿಲ್ಲ. ಬಾಲಿವುಡ್ ನಂತೆ ಬಿಡುಗಡೆಯಾಗಿ ಒಂದು ವಾರದ ನಂತರ ಸೇರಿಸಲಾಗುವುದು. ಗಣ ರಾಜೋತ್ಸವ ದಿನದಂದು ತೆರೆಗೆ ಬರಲಿದೆ ಎಂಬುದರ ಮಾಹಿತಿಯನ್ನು ಹೊರಹಾಕಿದರು ನಿರ್ದೇಶಕ ಆರ್.ಚಂದ್ರು.

-31/12/17ಕನಕ ಹಾಡುಗಳ ಪರ್ವ
‘ಕನಕ’ ಶುರುವಾದಾಗಿನಿಂದಲೂ ಸುದ್ದಿಯಲ್ಲಿದ್ದು, ಕೊನೆ ಹಂತ ಎನ್ನುವಂತೆ ಚಿತ್ರದ ಧ್ವನಿಸಾಂದ್ರಿಕೆಯು ಪಂಚತಾರ ಹೋಟೆಲ್‍ನಲ್ಲಿ ಅದ್ದೂರಿಯಾಗಿ ಅನಾವರಣಗೊಂಡಿತು. ಒಂದೊಂದು ಹಾಡನ್ನು ಗಣ್ಯರುಗಳು ಬಿಡುಗಡೆ ಮಾಡಿ ಸಿನಿಮಾಗೆ ಒಳ್ಳೆಯದಾಗಲಿ ಎಂದರು. ಹಾಡು, ಸಂಗೀತ ಎಲ್ಲರನ್ನು ಸೇರಿಸುತ್ತದೆ ಎಂಬುದಕ್ಕೆ ಉದಾಹರಣೆ ಕನಕ ಆಗಿದೆ. ಚಂದ್ರು ಹೇಳಿದಂತೆ ನಾನು ಗುರು ಅಲ್ಲ. ಕೊನೆ ಬೆಂಚ್‍ನ ಪೋಲಿ ಶಿಷ್ಯ ಅಂತ ನಗಿಸಿದ್ದು ಯೋಗರಾಜ್‍ಭಟ್. ಚಿನ್ನ ಯಾವ ಕಡೆ ಹುಡುಕಿದರೂ ಕನಕ ಆಗುತ್ತದೆ. ನಿರ್ದೇಶಕರು ತಲೆ ಕೆಡಿಸಿಕೊಂಡು ಮೇಕಿಂಗ್ ಮಾಡುತ್ತಾರೆ. ವಿಜಿರವರು ದುನಿಯಾ ಮಾಡುವ ಸಂದರ್ಭದಲ್ಲಿ ಹದಿನೈದು ಲಕ್ಷ ನೀಡಿದ್ದರಿಂದಲೇ ಚಿತ್ರ ಶುರುವಾಯಿತು. ಅವರ ಮಕ್ಕಳು ಚೆನ್ನಾಗಿ ಬೆಳೆದಿದ್ದಾರೆ. ಎಲ್ಲಿನವರು, ಹೇಗೆ ಬಂದವು. ಎಲ್ಲವು ಹಿಂದಕ್ಕೆ ಹೋದಂತಾಯಿತು ಅಂತ ಭಾವುಕರಾದರು ಟಗರು ಸೂರಿ.

ಹತ್ತು ವರ್ಷ ನಮ್ಮನ್ನು ಒಂದು ಕ್ಷಣ ಹಿಂದಕ್ಕೆ ಕರೆದುಕೊಂಡು ಹೋಯಿತು. ನಾವುಗಳು ಎಷ್ಟು ಸಿನಿಮಾ ಮಾಡಿದ್ದೇವೆ, ಎಷ್ಟು ದೂರ ಹೋಗಿದ್ದೇವೆ ಅದು ಮುಖ್ಯವಲ್ಲ. ಜನರ ಮನಸ್ಸಿನಲ್ಲಿ ಎಷ್ಟು ಸಿನಿಮಾಗಳು ನಿಂತುಕೊಂಡಿದೆ ಎಂಬುದನ್ನು ಗಮನಿಸಬೇಕು. ಜರಾಸಂದ ಗಂಬೀರ ಚಿತ್ರವಾಗಿದ್ದರೂ ವಿಜಯ್ ಸೆಟ್‍ನಲ್ಲಿ ಎಲ್ಲರನ್ನು ನಗಿಸುತ್ತಿದ್ದರು. ತಂಡಕ್ಕೆ ಕನಕವೃಷ್ಟಿ ಆಗಲಿ ಅಂತಾರೆ ಶಶಾಂಕ್. ಚಂದ್ರ್ರು ಬಗ್ಗೆ ಮಾತನಾಡುವುದೇ ಬೇಡ. ಕಡಿಮೆ ಆದರೆ ಇನ್ನು ಹೆಚ್ಚು ಖರ್ಚು ಮಾಡಲು ಹಿಂದೆ ನೋಡುವುದಿಲ್ಲ ಅಂತ ಹೊಗಳಿದರು ವಿತರಕ ಭಾಷಾ. ಒಬ್ಬ ನಿರ್ದೇಶಕನಾದವನಿಗೆ ಖುದ್ದು ದುಡ್ಡು ಹಾಕಿ ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ. ಅವರಿಗೆ ಅವರ ಮೇಲೆ ನಂಬಿಕೆ ಇರುವುದರಿಂದಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಹಿನ್ನಲೆ ಸಂಗೀತ ಒದಗಿಸದ್ದೇನೆ ಎಂದರು ಗುರುಕಿರಣ್.

ದುಡ್ಡು ಕೊಡಲು ಭಾಷಾ, ಸಿನಿಮಾ ಮಾಡಲು ಚಂದ್ರು, ಚಿತ್ರ ನೋಡಲು ಜನರು ಇದ್ದಾರೆ ಅಂತ ಬಣ್ಣನೆ ಮಾಡಿದರು ಕೆ.ಪಿ.ಶ್ರೀಕಾಂತ್. ನಿರ್ದೇಶಕರ ಶ್ರಮ ಪ್ರತಿ ದೃಶ್ಯದಲ್ಲಿ ಕಾಣ ಸುತ್ತದೆ. ಅದಕ್ಕೆ ಇಷ್ಟು ದೊಡ್ಡ ಹೆಸರು ಮಾಡಿದ್ದಾರೆ. ರಾಜಕೀಯದಲ್ಲಿ ಮನಸ್ಸಿದೆ. ನಾಯಕನಾಗುವ ಶಕ್ತಿ ಇದೆ. ದುರಾಸೆ ಇಲ್ಲ. ಯಾರೊಂದಿಗೂ ವೈರತ್ವ ಬೆಳೆಸಿಕೊಂಡಿಲ್ಲ. ಪಾಲಿಟಿಕ್ಸ್‍ಗೆ ಈ ಜಾಗವು ನಾಂದಿಯಾಗಲಿ ಎಂಬ ಮಾತುಗಳು ವಿಜಯ್‍ರಿಂದ ಕೇಳಿಬಂತು.

ರೇಷ್ಮೇ ವ್ಯಾಪಾರ ಮಾಡುತ್ತಿದ್ದ ನನಗೆ ರಾಜಕೀಯ ಆಸಕ್ತಿ ಇಲ್ಲ. ಸದ್ಯಕ್ಕೆ ಒಳ್ಳೆ ಚಿತ್ರ ನಿರ್ದೇಶನ, ನಿರ್ಮಾಣ ಮಾಡುವ ಗುರಿ ಇದೆ. ಹಳ್ಳಿಯಿಂದ ಬಂದವನನ್ನು ಈ ಹಂತಕ್ಕೆ ಬೆಳೆಸಿದ್ದು ಮಾದ್ಯಮದವರು. ತಪ್ಪು ಮಾಡಿದಾಗ ತಿದ್ದಿ ಬುದ್ದಿವಾದ ಹೇಳಿದ್ದೀರಾ. ಇಂದು ನನ್ನ ಚಿತ್ರಕ್ಕೆ ನಾಲ್ಕು ಸ್ಟಾರ್ ಲೆಜಂಡರಿ ನಿರ್ದೇಶಕರು ಆರ್ಶಿವಾದ ಮಾಡಿರುವುದು ಕನಕವೃಷ್ಟಿ ಬಂದಂತೆ ಆಗಿದೆ ಎಂದು ಹೇಳುವಲ್ಲಿಗೆ ಸುಂದರ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಲಾಯಿತು. ಇದಕ್ಕೂ ಮುನ್ನ ಖಳನಟಿಯಾಗಿ ಕಾಣ ಸಿಕೊಂಡಿರುವ ರೂಪಿಕಾ, ಚೂಚ್ಚಲಬಾರಿ ಸಂಗೀತ ನಿರ್ದೇಶಿಸಿರುವ ನವೀನ್‍ಸಜ್ಜು, ಶಾಸಕ ಸುಧಾಕರ್, ಯಶಸ್ವಿ ರೈತ ವೆಂಕಟೇಶ್ ಕನಕನಿಗೆ ಒಳ್ಳೆಯದಾಗಲೆಂದು ಚುಟುಕು ಮಾತನಾಡಿದರು. ನಾಯಕಿಯರಾದ ಮಾನ್ವಿತಾಹರೀಶ್, ಹರಿಪ್ರಿಯಾ ಹಾಡಿನಲ್ಲಿ ಕಾಣ ಸಿಕೊಂಡರು.
-21/11/17


\

ಕನ್ನಡ ದಿನದಂದು ಕನಕ ಟ್ರೈಲರ್

ಆರ್.ಚಂದ್ರು ನಿರ್ಮಾಣ, ನಿರ್ದೇಶನದ ‘ಕನಕ’ ಚಿತ್ರದ ಮೊದಲನೆ ಟ್ರೈಲರ್ ರಾಜ್ಯೋತ್ಸವ ದಿನದಂದು ಅನಾವರಣಗೊಂಡಿತು. ಟ್ರೈಲರ್‍ನಲ್ಲಿ ನಾಯಕ ಜಬರ್‍ದಸ್ತ್ ಫೈಟ್, ಕನ್ನಡ ನಮ್ಮ ಭಾಷೆ, ರಾಜಣ್ಣನ ಅಭಿಮಾನಿ ಎಂದು ಕೊಗುವುದು ಇವೆಲ್ಲಾ ತುಣುಕುಗಳು 120 ಸೆಕೆಂಡ್‍ಗಳಲ್ಲಿ ದೊಡ್ಡ ಪರದೆ ಮೇಲೆ ಅದ್ಬುತವಾಗಿ ಬಿತ್ತರಗೊಂಡಿತು. ಮಾತು ಶುರುಮಾಡಿದ ಆರ್.ಚಂದ್ರು ಕನಕ ಹುಟ್ಟಿದ ಪರಿ, ಪ್ರಾರಂಭದ ದಿನಗಳನ್ನು ನೆನಪು ಮಾಡಿಕೊಂಡು, ಇದೇ 19ರಂದು ಶಿಡ್ಲಘಟ್ಟದಲ್ಲಿ ಆಡಿಯೋ ಸಿಡಿ ಅನಾವರಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ಯೋಜನೆ ಇದೆ. ಸುಮಾರು ಒಂದೂವರೆ ಲಕ್ಷ ಜನರು ಪಾಲ್ಗೋಳಲಿದ್ದಾರೆ. ವಿಜಯ್‍ರವರು ಡಬ್ಬಿಂಗ್ ಮಾಡುವಾಗ ಖುಷಿ ಪಟ್ಟಿದ್ದಾರೆ. ಶ್ರೀಕಾಂತ್‍ರವರು ವಿಜಯ್ ಡೇಟ್ಸ್ ಕೊಡಿಸಿದ್ದು ಅಲ್ಲದೆ ಶೀರ್ಷಿಕೆಯನ್ನು ನೀಡಿದ್ದಾರೆ. ಬೆಂಗಳೂರು ಆಟೋ ಚಾಲಕರು ಶಂಕರ್‍ನಾಗ್ ಅಭಿಮಾನಿಯಾಗಿದ್ದು, ಅವರ ಹುಟ್ಟಹಬ್ಬ ನವೆಂಬರ್ 9ರಂದು ವಿಜಯ್‍ಗೆ ‘ಆಟೋ ರಾಯಭಾರಿ’ ಬಿರುದನ್ನು ನೀಡಿ ಗೌರವಿಸಲಿದ್ದಾರೆ. ಬಿಡುಗಡೆ ದಿವಸದಂದು 2000 ಆಟೋರಿಕ್ಷಾಗಳು ಸ್ವಯಂಪ್ರೇರಿತರಾಗಿ ಚಿತ್ರನೋಡಲು ಬರುತ್ತಿದ್ದಾರೆ. ಅವರುಗಳ ಆಶಿರ್ವಾದ ಇರುವುದರಿಂದ ಹಿಟ್ ಆಗುವ ಲಕ್ಷಣಗಳು ಕಾಣ ಸುತ್ತವೆ ಅಂತ ಸಂತಸ ಪಟ್ಟರು.

ಕನಕ ಅಂದರೆ ಬಂಗಾರ, ಅಭಿಮಾನಿಗಳು, ನಾಯಕನ ಹೆಸರಿನಲ್ಲಿ ವಿಜಯ ಇದೆ. ಚಂದ್ರ ಆಗಿ ನಾಯಕಿ ಇದ್ದಾರೆ ಅಂತ ಬಣ್ಣನೆ ಮಾಡಿದ್ದು ಗೆಳೆಯ ಕೆ.ಪಿ.ಶ್ರೀಕಾಂತ್. ಕಳೆದ ವರ್ಷ ಇದೇ ದಿನದಂದು ಬಾರಿಸು ಕನ್ನಡ ಡಿಂಡಿಮವ ಗೀತೆಗೆ ಸಂಗೀತ ಸಂಯೋಜಿಸಿ ಹಾಡಿದ್ದೆ. ಇಷ್ಟು ಬೇಗ ಸಂಗೀತ ನಿರ್ದೇಶಕನಾಗುತ್ತೆನೆಂದು ತಿಳಿದಿರಲಿಲ್ಲ. ಈಗ ಮೊದಲ ಅವಕಾಶದಲ್ಲೆ ದೊಡ್ಡ ಬ್ಯಾನರ್‍ನಲ್ಲಿ ಕೆಲಸ ಮಾಡಿರುವುದು ನನ್ನ ಸುಕೃತ ಎನ್ನಬಹುದು ಎಂದರು ನವೀನ್‍ಸಜ್ಜು.

ವಿಜಯ್, ಚಂದ್ರು, ಶ್ರೀಕಾಂತ್ ಬಿಳಿ ಶರ್ಟ್ ಧರಿಸಿರುವದನ್ನು ನೋಡಿದ ನಾಯಕಿ ಮಾನ್ವಿತಾಹರೀಶ್ ಇವರ ಮುಂದೆ ಏನು ಮಾತನಾಡಬೇಕೆಂದು ತಿಳಿದಿಲ್ಲವೆಂದು ಭಾವುಕರಾದರು. ನಂತರ ಸಂತೈಸಿಕೊಂಡು ಕುರ್ಚಿ ವಿಷಯವನ್ನು ವಿವರಿಸಿ ಮಾತಿಗೆ ವಿರಾಮ ಹಾಕಿದರು.

ಶ್ರೀಕಾಂತ್ ನಿರ್ಮಾಪಕರಾಗಿದಾಗಿನಿಂದಲೂ, ನಾನು ನಾಯಕನಾದರೂ ನಮ್ಮ ಗೆಳತನ ಹಾಗೆಯೇ ಇದೆ. ಅವರು ಕಷ್ಟದ ದಿನಗಳಲ್ಲಿ ಸಹಾಯ ಮಾಡಿದ್ದನ್ನು ಮರೆಯಲಾಗದು. ನವೀನ್‍ಸಜ್ಜು ಉತ್ತಮ ಸಂಗೀತ ಒದಗಿಸಿದ್ದಾರೆ. ಕಷ್ಟಪಡುವವರು ಕಂಡರೆ ಅವರ ಮೇಲೆ ಗೌರವ ಜಾಸ್ತಿಯಾಗುತ್ತದೆ. ತುಂಬಿದ ಸಂಸಾರದಲ್ಲಿ ಹೋರಾಡುವ ಮಗನ ಪಾತ್ರ ಮಾಡಿದ್ದೇನೆ. ಒಳ್ಳೆಯದಾಗಬೇಕೆಂದು ಶ್ರೀಕೃಷ್ಣ ಆಯುದ ಹಿಡಿದುಕೊಂಡಿದ್ದರು. ಅದೇ ರೀತಿ ಹೊಡೆದಾಡುವಾಗ ಅನಿವಾರ್ಯವಾಗಿ ಲಾಂಗ್ ಕೈಗೆ ಬಂದಿದೆ ಅಂತ ಮಾದ್ಯಮದ ಪ್ರಶ್ನೆಗೆ ಉತ್ತರವಾದರು ವಿಜಯ್.

ಕೊನೆಯಲ್ಲೆ ಮತ್ತೆ ಮೈಕ್ ತೆಗೆದುಕೊಂಡ ನಿರ್ದೇಶಕರು ವಿಜಯ್‍ರವರು ಸಾಹಸವನ್ನು ನೀರು ಕುಡಿದಂತೆ ಮಾಡುತ್ತಾರೆ. ಅಣ್ಣಾವ್ರರ ಅಭಿಮಾನಿಯಾಗಿ ಅವರ ಆದರ್ಶಗಳನ್ನು ಪಾಲಿಸುತ್ತಾರೆ. ಬಹುಶ: ರಾಜ್‍ಕುಮಾರ್ 206ನೇ ಸಿನಿಮಾವೆಂದು ಪ್ರೇಕ್ಷಕನಿಗೆ ಭಾಸವಾಗುತ್ತದೆ. ಆರು ಸಾಹಸಗಳಲ್ಲಿ ವಿನೋಧ್-3, ಥ್ರಿಲ್ಲರ್‍ಮಂಜು-2, ಡಿಫರೆಂಟ್ ಡ್ಯಾನಿ-1 ನಿರ್ದೇಶನ ಮಾಡಿದ್ದಾರೆ. ಕ್ಲೈಮಾಕ್ಸ್ ನೋಡುಗರಿಗೆ ಕಣ್ಣು ಒದ್ದೆ ಮಾಡುವುದು ಖಚಿತ. ಡಿಸೆಂಬರ್‍ನಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಳ್ಳಲಾಗಿದೆ ಎನ್ನುವಲ್ಲಿಗೆ ಕಾರ್ಯಕ್ರಮಕ್ಕೆ ತಿಲಾಂಜಲಿ ಹಾಡಲಾಯಿತು.
-3/11/17KANAKA SHOOTING TO BE COMPLETED IN 20 DAYS
T
he shooting of Dhuniya Vijay starrer Kanaka will be completed in 20 days. Producer-cum-director R. Chandru is planning to shift the shooting location to Chalakudy in Kerala shortly.

“The shooting of Kanaka began a year ago and it is expected to be completed in the next 20 days. This film has two heroines – Manvitha Harish and Haripriya. The portion of Manvitha Harish has already been completed and Haripriya’s portion will commence from August 14. Haripriya will attend the shooting of Kanaka for 14 days,’’ said R. Chandru.

This film has five fight sequences and the fourth one was picturized near a Shiva temple near NICE Road on Thursday. Dhuniya Vijay, Yuga Chandru and other junior artistes attended the shooting.

“Yuga Chandru was assisting me with the script and screenplay of the film. He was not aware that I will ask him to play a key role in this film. He was in a big surprise when I asked him to play the role Ravishankar’s brother in this film,’’ Chandru said.

Thanking director-cum-producer R. Chandru for giving him an opportunity to act in this film, Yuga Chandru said that he did not expect director to ask him to act in this film. “I am very happy when the director asked me to act in this film,’’ said Yuga Chandru.

Ravishankar is the main villain while K P Nanjundi also plays one of the villain characters in this film.
Speaking on the occasion, Vijay said that he has contemplating to act in one more film under R Chandru’s direction. “I am happy with the encouragement and support of R Chandru during the shooting. I am amazed with his enthusiasm. He never compromises with the quality of the film. I am planning to act in one more film, based on Kusti (Malla Yudhdha) on the lines of Hindi film Dangal. For that, director advised me to put up weight. I need one more year to meet the director’s expectations,’’ said Vijay.

Stunt master Vinod has also played a small role (as Ravishankar’s henchman) in this film.
-Cine Circle News
-11/08/17
KANAKA’ IS 60% COMPLETE
K
anaka has completed 60 to 65 percent shoot and is now shooting one of the major fight sequences on the NICE Road in Bengaluru. The film is produced and directed by R Chandru and it stars Duniya Vijay and Manvitha Harish in lead roles. Satya Hegde is the cameraman.

Director Chandru told visiting journalists that the film’s thrilling fight sequence which will entail three or four autorickshaws to go in the air is being shot. He said about 50 to 60 autos were being used for the shoot. K P Nanjundi plays an activist who warns the auto drivers and thus ensues in the fight sequence, the director said. The film has four more action scenes which will be composed by Vinod and added that the film will have a total of six action sequences.

Chandru said the film will move to North Karnataka for its next schedule. However, he did not confirm whether he had signed Rachita Ram to play another heroine in the film.

Duniya Vijay praised the director for his passion towards making a rich commercial film. He said he was more like a friend to the director and also with Vinod with whom he has been working for a long time. He said he had put on weight for the upcoming schedule which will happen in North Karnataka.

Manvitha said Duniya Vijay was one of her favourite actors because of the innocence that he carries in all his roles and performances. She said Vijay had told her that he visited the shooting sets as if he knew nothing which made it easier to work. She said she plays a medico with some amount of sophistication and also thanked the director for the opportunity to work with cameraman Satya Hegde.

Stunt composer Vinod said the fight sequences were being shot for seven days by employing about 40 fighters.
-9/06/17
SHOOT SCHEDULE FOR KANAKA BEGINS
T
he second shoot schedule for the film Kanaka began a few days back with Duniya Vijay joining in. The film is produced and directed by R Chandru and Manvitha plays one of the two heroines.

R Chandru told reporters on the sets of the film that Kanaka, his ninth film has drawn up a 33-day schedule and that the shoot for a fight sequence was in progress under Different Danny’s direction. Satya Hegde is the cameraman. He said the film is reflective about Duniya Vijay’s real character. He said Vijay is different in the outside but he is something else inside. He said the film is based on a real incident but did not divulge details. He said the second heroine is yet to be decided.  

Duniya Vijay said he plays an auto driver in the movie who is a fan of Dr Rajkumar. He said in the character he goes to every length to follow Annavru’s ideals. He said he has been working with Danny master from Duniya and that combination has come together for this film as well.  

Danny said Kanaka is his 541st film and appreciated Vijay’s commitment to doing stunts without dupes. He said Ugramm Manju is another hardworking guy who is giving his best. He said Vijay, himself and Satya Hegde are back together after Duniya.  

Naveen Sajju has composed the tunes. Ugramm Manju said he is playing a villain in the movie and has got a makeover in terms of the get-up and the looks.
-23/03/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore