HOME
CINEMA NEWS
GALLERY
TV NEWS
REVIEWS
CONTACT US
ಕಬ್ಜದಲ್ಲಿಗಂಧದಗುಡಿ, ಶೋಲೆ ಪಿಸ್ತೂಲ್
‘ಗಂಧದಗುಡಿ’ ಚಿತ್ರದಲ್ಲಿಡಾ.ರಾಜ್‍ಕುಮಾರ್, ‘ಶೋಲೆ’ದಲ್ಲಿಅಮಿತಾಬ್ ಬಚ್ಚನ್ ಬಳಿಸಿದ್ದ ಒಂದೇ ಪಿಸ್ತೂಲ್‍ನ್ನು ಬೆಂಗಳೂರು ಗನ್ ಹೌಸ್ ಸರಬರಾಜು ಮಾಡಿತ್ತು.ನಂತರಇಲ್ಲಿಯವರೆವಿಗೂಯಾರುಅದನ್ನು ಬಳಸಿಲ್ಲ. ಇದನ್ನು ಹೇಳಲು ಕಾರಣವಿದೆ. ಈಗ ಆರ್.ಚಂದ್ರು ನಿರ್ಮಾಣ ಮತ್ತು ನಿರ್ದೇಶನದ ‘ಕಬ್ಜ’ ಸಿನಿಮಾದಕತೆಯುರೆಟ್ರೋ ಶೈಲಿಯಾಗಿದ್ದರಿಂದಅದರಲ್ಲಿ ಬಳಸಲಾಗಿದ್ದ ಪಿಸ್ತೂಲ್‍ನ್ನುಉಪೇಂದ್ರ ಹಿಡಿದುಕೊಂಡು ಸನ್ನಿವೇಶದಲ್ಲಿ ಅಭಿನಯಿಸಿದ್ದಾರೆ, ಶಾಟ್ ಮುಗಿದ ನಂತರಉಪ್ಪಿರವರುಅದನ್ನು ಹಿಡಿದುರೋಮಾಂಚಿತರಾಗಿರುವ ಬಗ್ಗೆ ಅನುಭವಗಳನ್ನು ಸಾಮಾಜಿಕಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾಯಕಿಇನ್ನೂಆಯ್ಕೆಯಾಗಿಲ್ಲ. ತಾರಗಣದಲ್ಲಿಟಾಲಿವುಡ್‍ನ ಜಗಪತಿಬಾಬು,ಕೋಟಶ್ರೀನಿವಾಸ್, ಸುಬ್ಬರಾಜು, ಬಾಲಿವುಡ್‍ನ ಕಬೀರ್‍ಸಿಂಗ್‍ದುಹಾನ್, ಜಾನ್‍ಕೊಕೇನ್, ಕನ್ನಡದ ಪ್ರಕಾಶ್‍ರೈ, ನವೀನ್ ಮುಂತಾದವರು ನಟಿಸುತ್ತಿದ್ದಾರೆ.

ಒಂದು ಹಂತದಚಿತ್ರೀಕರಣ ಮುಗಿಸಿ, ಎರಡನೇ ಹಂತದ ಶೂಟಿಂಗ್‍ನ್ನು ಬೆಂಗಳೂರು ಮತ್ತು ಹೈದರಬಾದ್ ಕಡೆಗಳಲ್ಲಿ ನಡೆಸಲುಯೋಜನೆರೂಪಿಸಲಾಗಿದೆ.ಇದಕ್ಕಾಗಿ ಹೈದರಬಾದ್‍ನಲ್ಲಿ ಬೋಟ್ ಹೂರಾಂಗಣ ಸೆಟ್, ಬೆಂಗಳೂರಿನ ಮಿನರ್ವ ಮಿಲ್‍ದಲ್ಲಿ ಒಳಾಂಗಣ ಬೋಟ್ ಸೆಟ್, ಇದರಜೊತೆಗೆಜೈಲು, ಪೋಲೀಸ್‍ಠಾಣೆ ಸೇರಿದಂತೆಒಟ್ಟು 18 ಸೆಟ್‍ಗಳು ಕಲಾ ನಿರ್ದೇಶಕ ಶಿವಕುಮಾರ್ ಸಾರಥ್ಯದಲ್ಲಿ ಸಿದ್ದವಾಗುತ್ತಿದೆ.ಎಲ್ಲದಕ್ಕೂ 50 ಕಾಲಘಟ್ಟದ ಫೀಲ್‍ಇರುವಂತೆ, ಅದೇಕಾಲದಕಾಸ್ಟ್ಯೂಮ್‍ಇರುವುದು ವಿಶೇಷ. ಸಂಗೀತರವಿಬಸ್ರೂರು, ಛಾಯಾಗ್ರಹಣ ಎ.ಜೆ.ಶೆಟ್ಟಿ, ಸಾಹಸ ರವಿವರ್ಮ-ರಾಮ್‍ಲಕ್ಷಣ್, ನೃತ್ಯರಾಜುಸುಂದರಂ-ಗಣೇಶ್‍ಆಚಾರ್ಯ, ಸಂಕಲನ ವಿನಯ್.ಎಂ.ಕುಮಾರ್‍ಅವರದಾಗಿದೆ.ಅಂದಾಜು80 ಕೋಟಿಯಲ್ಲಿ ನಿರ್ಮಾಣವಾಗುತ್ತಿರುವಚಿತ್ರವುಡಿಸೆಂಬರ್‍ದಲ್ಲಿಏಕಕಾಲಕ್ಕೆ ಎಲ್ಲಾ ಭಾಷೆಯಲ್ಲಿಬಿಡುಗಡೆಯಾಗುವ ಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
17/03/20

ಬಿರುಸಿನ ಚಿತ್ರೀಕರಣದಲ್ಲಿ ಕಬ್ಜ
ರೆಟ್ರೋ ಶೈಲಿಯ ಬಾರ್ ಸೆಟ್‍ದಲ್ಲಿ ‘ಕಬ್ಜ’ ಚಿತ್ರೀಕರಣ ನಡೆಯುತ್ತಿತ್ತು. ಇದು ನಾಯಕನ ಪರಿಚಯದೊಂದಿಗೆಆಕ್ಷನ್‍ಸನ್ನಿವೇಶಗಳು ತೆರೆದುಕೊಳ್ಳುತ್ತದೆ.ಮಾದ್ಯಮದವರು ಸಂಜೆ ಏಳು ಗಂಟೆಗೆ ಸೆಟ್‍ಗೆ ಭೇಟಿ ನೀಡಿದಾಗಉಪೇಂದ್ರತಮ್ಮ ಭಾಗದ ಕೆಲಸವನ್ನು ಮುಗಿಸಿದ್ದರು. ಒಂದುಗ್ಯಾಂಗ್‍ನವರುಪಬ್‍ದಲ್ಲಿಚರ್ಚೆ ನಡೆಸುವ ಸನ್ನಿವೇಶವನ್ನುಚಿತ್ರೀಕರಿಸಲಾಗುತ್ತಿತ್ತು.ಶಾಟ್‍ಓಕೆಯಾದ ನಂತರತಂಡವು ಅನುಭವಗಳನ್ನು ಹಂಚಿಕೊಂಡರು.ನಿರ್ದೇಶಕ, ನಿರ್ಮಾಪಕಆರ್.ಚಂದ್ರು ಮಾತು ಶುರುಮಾಡಿಇದೇಜಾಗದಲ್ಲಿಎಂಟು ಸೆಟ್‍ಗಳನ್ನು ಹಾಕಲಾಗುತ್ತಿದೆ.ಈಗ ನಡೆಯುತ್ತಿರುವುದು ಮೊದಲನೇ ಸೆಟ್‍ಆಗಿದೆ.ಪಕ್ಕದಲ್ಲೆ ಉಳಿದವು ಸಿದ್ದಗೊಳ್ಳುತ್ತಿದೆ.ಇದರ ನಂತರ ಹೈದರಬಾದ್‍ಗೆ ಹೋಗಲಿದ್ದೇವೆ. ಆರು ದಿನದರಷಸ್ ನೋಡಿದಾಗ ಖುಷಿ ಅನಿಸಿತು. ಹಾಲಿವುಡ್ ಮಾದರಿಯಲ್ಲಿ ಬಂದಂತೆಇದೆ. 1947ರಲ್ಲಿ ಶುರುವಾದಕತೆಯಾಗಿರುವುದರಿಂದ ಆ ಕಾಲಕ್ಕೆ ತಕ್ಕಂತೆಕಾಸ್ಟ್ಯೂಮ್‍ನ್ನುಕಲಾವಿದರಿಗೆ ನೀಡಲಾಗಿದ್ದು, ಗತಕಾಲದಂತೆ ಸ್ಥಳವನ್ನು ಸೃಷಿಸಲಾಗುತ್ತಿದೆ.ಈಗಿನ ಸನ್ನಿವೇಶವು ಪ್ರಾರಂಭ, ಮಧ್ಯ, ಅಂತ್ಯದಲ್ಲಿ ಬರಲಿದೆ.ಗುಣಮಟ್ಟದ ಸಲುವಾಗಿ ಎಲ್ಲೂರಾಜಿಯಾಗಿಲ್ಲ. ತೆಲುಗು ಭಾಷೆಯಲ್ಲಿ ಮಹೂರ್ತ ಆಚರಿಸಿಕೊಂಡಿದ್ದು, ಅಲ್ಲಿಯೂಚಿತ್ರ್ರದಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಮೂರು ಭಾಷೆಯಲ್ಲಿರಿಮೇಕ್ ಮಿಕ್ಕಂತೆ ನಾಲ್ಕು ಭಾಷೆಗೆಡಬ್ ಮಾಡಲಾಗುವುದು.ಪ್ಯಾನ್‍ಇಂಡಿಯಾ ಮಾದರಿಯಲ್ಲಿ ಬರುತ್ತಿರುವುದರಿಂದಕತೆಯುಎಲ್ಲಾ ಭಾಗಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗುತ್ತಿದೆ.ನಮ್ಮೊಡನೆಒಂದಷ್ಟುಜನರು ಹಣ ಹೂಡುತ್ತಿದ್ದಾರೆ.ನಾಯಕಿ ಸದ್ಯದಲ್ಲೆ ತಿಳಿಸಲಾಗುವುದು.ಈಗಾಗಲೇ ಪ್ರಕಾಶ್‍ರೈ, ಜಗಪತಿಬಾಬು ಮುಂತಾದವರು ನಟಿಸಲುಒಪ್ಪಿದ್ದಾರೆಎಂದರು.

ಸೆಟ್‍ಗೆಆರುಗಂಟೆಗೆ ಬಂದ್ರರೆ ಮಧ್ಯಾಹ್ನಕರೆಯುತ್ತಾರೆ.ನಾಳೆ ಸೆಟ್‍ದಲ್ಲಿ ಈ ರೀತಿತೆಗೆಯಬೇಕೆಂದು ಬಯಸುವವರುಅಂದೇ ಸಕ್ಸಸ್‍ಕಾಣುತ್ತಾರೆ.ಈ ಸಂತೋಷವೇಜನರನ್ನು ಕಬ್ಜ ಮಾಡಬೇಕು.ಕನ್ನಡಚಿತ್ರರಂಗಯಾರಿಗೂಕಡಿಮೆಇಲ್ಲ. ಓಂ ಮಾಡುವಾಗ ಪ್ರತಿದೃಶ್ಯವನ್ನುಎಂಜಾಯ್ ಮಾಡುತ್ತಿದ್ದೆ.ಅದೇ ನೆನಪು ಈಗ ಬರುತ್ತಿದೆ.ಚಂದ್ರು ಮಾಡುತ್ತಿರುವ ಕೆಲಸವು ಹೊಸತನದಿಂದಕೂಡಿದೆ.ಒಂದು ಏಳೆ ಹೇಳಿದ್ದು, ಪೂರ್ತಿ ಮೊನ್ನೆತಾನೇ ತಿಳಿದುಕೊಂಡೆ.ಒಂದೊಂದು ಶಾಟ್ ಸಿನಿಮಾ ನೋಡಿದಂತೆಆಗುತ್ತಿದೆಅಂತಾರೆ.ನಟಜಾನ್‍ಕೋಕೇನ್, ಸಾಹಸ ನಿರ್ದೇಶಕರವಿವರ್ಮ, ಛಾಯಾಗ್ರಾಹಕ ಕೆ.ಜಿ.ಶೆಟ್ಟಿ ಮಿತಭಾಷಿಯಾಗಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
16/01/20
ಕಬ್ಜಕ್ಕೆ ರೆಟ್ರೋ ಮಾದರಿ ಸೆಟ್
ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ,ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವ ‘ಕಬ್ಜ’ ಚಿತ್ರವುಪೂರ್ತಿ ಸೆಟ್‍ದಲ್ಲಿ ನಡೆಯುವುದು ವಿಶೇಷ. 1947 ರಿಂದ 1984 ವರೆಗಿನರೌಡಿಸಂಕತೆಇರುವುದರಿಂದ, ಆ ಕಾಲದಚಿತ್ರಣ ಮೂಡಿಸಬೇಕಾದರೆಅಂತಹ ಜಾಗಗಳು ಸಿಗುವುದಿಲ್ಲ. ಅದಕ್ಕೆಂದೆ ಸೆಟ್ ಮೊರೆ ಹೋಗಬೇಕಾಗಿದೆಅಂತ ನಿರ್ಮಾಪಕ, ನಿರ್ದೇಶಕಆರ್.ಚಂದ್ರು ವಿವರಣೆ ನೀಡುತ್ತಾರೆ. ಶೇಕಡ 50ರಷ್ಟು ‘ರಾಮೋಜಿರಾವ್ ಫಿಲಿಂ ಸಿಟಿ, ಉಳಿದದ್ದನ್ನು ಬೆಂಗಳೂರಿನ ಮಿನರ್ವ ಮಿಲ್ ಮತ್ತು ದೇವನಹಳ್ಳಿ ಬಳಿ ಮೂರುಎಕರೆಜಾಗ ಖರೀದಿಸಿದ್ದು ಅಲ್ಲಿಯೂಅದ್ದೂರಿ ಸೆಟ್ ನಿರ್ಮಿಸಲಾಗುವುದು. ಕೆಜಿಎಫ್ ಸಿನಿಮಾಗೆ ಕೆಲಸ ಮಾಡಿದ್ದ ಕಲಾ ನಿರ್ದೇಶಕ ಶಿವಕುಮಾರ್ ಸಾರಥ್ಯದಲ್ಲಿ ಕೆಲಸಗಳು ಶುರುವಾಗಿದೆ.

ಉಪೇಂದ್ರ ನಾಯಕನಾಗಿ ಮೂರು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ನಾಯಕಿಯಾರುಂಬುದು ಮುಂದಿನ ದಿನದಲ್ಲಿ ಲಭ್ಯವಾಗಲಿದೆ.ಪ್ರಥಮ ಹಂತದಲ್ಲಿಜಗಪತಿಬಾಬು, ನಾನಾಪಾಟೇಕರ್‍ಆಯ್ಕೆಯಾಗಿದ್ದಾರೆ.ಕರ್ನಾಟಕದ ಸುಂದರ ತಾಣಗಳು, ಬಾಂಬೆ, ಮಧ್ಯಪ್ರದೇಶ ಮುಂತಾದಕಡೆ ಪಯಣ ಬೆಳೆಸಲು ಯೋಜನೆ ಹಾಕಲಾಗಿದೆ. ಸಂಗೀತರವಿಬಸ್ರೂರು, ಛಾಯಾಗ್ರಹಣ ಎ.ಜೆ.ಶೆಟ್ಟಿ, ಸಾಹಸ ರವಿವರ್ಮ-ರಾಮ್‍ಲಕ್ಷಣ್, ನೃತ್ಯರಾಜುಸುಂದರಂ-ಗಣೇಶ್‍ಆಚಾರ್ಯ, ಪ್ರಸಾಧನ ಸಿದ್ದೇಶ್-ಅಶೋಕ್-ಸುರೇಶ್, ಸಂಕಲನ ವಿನಯ್.ಎಂ.ಕುಮಾರ್ ನಿರ್ವಹಿಸುತ್ತಿದ್ದಾರೆ.ಜನವರಿಎರಡರಂದು ಹೈದರಾಬಾದ್‍ದಲ್ಲಿತೆಲುಗು ಭಾಷೆಯ ಮಹೂರ್ತನಡೆಯಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
29/12/19

ಕಬ್ಜಕ್ಕೆ ಶುಭಹಾರೈಸಿದ ಶಿವಣ್ಣ
ಏಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವ ‘ಕಬ್ಜ’ ಚಿತ್ರವು 80ರ ದಶಕದ ಭೂಗತಲೋಕವನ್ನು ಹೇಳಲಿದೆ.ಹಾಗಂತಒಂದೇರಾಜ್ಯದಕತೆಯಾಗಿರದೆಎಲ್ಲಾಕಡೆಅನ್ವಯವಾಗುವಂತೆಚಿತ್ರಕತೆರೂಪಿಸಲಾಗಿದೆ. ಹೊಸ ರೀತಿಯ ಭೂಗತಲೋಕದ ನೋಟವೆಂದುಇಂಗ್ಲೀಷ್‍ಅಡಿಬರಹವಿದೆ. ಮೊದಲುಒಂದು ಏಳೆಯನ್ನು ಶಿವರಾಜ್‍ಕುಮಾರ್‍ಗೆ ಹೇಳಿದಾಗ ಇದೊಂದುಇಂಡಿಯನ್ ಸಿನಿಮಾವಾಗುತ್ತದೆಂದು ಪ್ರಶಂಸೆ ವ್ಯಕ್ತಿಪಡಿಸಿದರು.ನಂತರಉಪೇಂದ್ರ ಕೇಳಿ ಇವತ್ತಿನಟ್ರೆಂಡ್‍ಗೆ ಸರಿಹೊಂದುತ್ತದೆ ಮುಂದುವರೆಸಿ ಎಂದು ಹುರಿದುಂಬಿಸಿದ್ದಾರೆ.ಕನ್ನಡ-ತೆಲುಗು-ತಮಿಳು ಭಾಷೆಯಲ್ಲಿಚಿತ್ರೀಕರಣ ಗೊಳ್ಳುತ್ತದೆ.

ಒಂದಷ್ಟು ನೈಜ ಅಂಶಗಳನ್ನು ತೆಗೆದುಕೊಂಡುಅದಕ್ಕೆ ಸಿನಿಮಾಟಿಕ್ ಸ್ಫರ್ಶವನ್ನುಕೊಡಲಾಗುವುದು.ನೋಡುವವರಿಗೆಇದು ನಮ್ಮದೆಅಂತ ಭಾಸವಾಗುತ್ತದೆ.ಒಟ್ಟಾರೆ ಭೂಗತಜಗತ್ತಿಗೆ ಹೊಸ ಭಾಷ್ಯ ಬರೆಯಲಿದ್ದಾರಂತೆ.ಜಗಪತಿಬಾಬು ನಟಿಸುವುದು ಪಕ್ಕಾ ಆಗಿದೆ. ನಾನಾಪಾಟೇಕರ್, ನಾಯಕಿಯಾಗಿಕಾಜಲ್‍ಅಗರ್‍ವಾಲ್‍ಅವರೊಂದಿಗೆಒಂದು ಸುತ್ತಿನ ಮಾತುಕತೆಯು ಫಲಪ್ರದವಾಗಿದೆ.ಎಲ್ಲವೂ ಲಿಖಿತ ಮೂಲಕ ಸಹಿ ಮಾಡಿದಾಗಖಚಿತವಾಗುತ್ತದೆ.ಕರ್ನಾಟಕದ ಸುಂದರ ತಾಣಗಳು, ಬಾಂಬೆ, ಮಧ್ಯಪ್ರದೇಶ ಮುಂತಾದಕಡೆ ಪಯಣ ಬೆಳೆಸಲು ಯೋಜನೆ ಹಾಕಲಾಗಿದೆ. ಉಪೇಂದ್ರಅವರು ಮೂರು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಮಿಕ್ಕಂತೆ ವಿವರಗಳು ಮುಂದಿನ ದಿನಗಳಲ್ಲಿ ತಿಳಿಸಲಾಗುವುದೆಂದು ನಿರ್ದೇಶಕ, ನಿರ್ಮಾಪಕಆರ್.ಚಂದ್ರು ತಿಳಿಸಿದ್ದಾರೆ.ಕಂಠೀರವ ಸ್ಟುಡಿಯೋದಲ್ಲಿ ನಡೆದಅದ್ದೂರಿ ಮಹೂರ್ತ ಸಮಾರಂಭಕ್ಕೆ ಶಿವರಾಜ್‍ಕುಮಾರ್ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು.ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತುಆನಂದ್‍ಗುರೂಜಿ ಮುಂತಾದವರುಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
18/11/19


ಏಳು ಭಾಷೆಯ ಕಬ್ಜ
ರಿಯಲ್ ಸ್ಟಾರ್‍ಉಪೇಂದ್ರಅಭಿನಯದ ‘ಐ ಲವ್ ಯು’ ಶತ ದಿನ ಆಚರಿಸಿದೆ. ಇದೇ ಸಂದರ್ಭದಲ್ಲಿ ನಿರ್ದೇಶಕ, ನಿರ್ಮಾಪಕಆರ್.ಚಂದ್ರುಇವರೊಂದಿಗೆ ಮತ್ತೋಂದು ಸಿನಿಮಾ ಮಾಡುವುದಾಗಿಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಅದರಂತೆಚಿತ್ರದ ಹೆಸರು ‘ಕಬ್ಜ’.ಕನ್ನಡ ಸೇರಿದಂತೆತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಪೋಸ್ಟರ್‍ದಲ್ಲಿಉಪ್ಪಿರವರು ಲಾಂಗ್ ಹಿಡಿದು ನಡೆದುಕೊಂಡು ಬರುತ್ತಿದ್ದಾರೆ. ಹೊಸ ರೀತಿಯ ಭೂಗತ ಲೋಕದದರ್ಶನವೆಂದುಅಡಿಬರಹದಲ್ಲಿ ಹೇಳಲಾಗಿದೆ. ಚಂದನವನದ ಸ್ಟಾರ್‍ಗಳಾದ ರವಿಚಂದ್ರನ್, ಶಿವರಾಜ್‍ಕುಮಾರ್, ಉಪೇಂದ್ರ, ಸುದೀಪ್, ಪುನೀತ್‍ರಾಜ್‍ಕುಮಾರ್, ದರ್ಶನ್ ಮತ್ತುಯಶ್‍ಅಭಿಮಾನಿ ಸಂಘದಅಧ್ಯಕ್ಷರು, ಲಹರಿವೇಲು, ಹೆಸರಾಂತ ವಿತರಕರುಗಳಾದ ಮೋಹನ್‍ದಾಸ್ ಪೈ, ಮೋಹನ್ ಮುಂತಾದವರುಒಟ್ಟಿಗೆ ಸೇರಿಕೊಂಡು ಪೋಸ್ಟರ್‍ನ್ನು ಅನಾವರಣಗೊಳಿಸಿದರು.ಚಿತ್ರದ ಮತ್ತಷ್ಟು ಮಾಹಿತಿಗಳು ಮುಂದಿನ ದಿನಗಳಲ್ಲಿ ತಿಳಿಸಲಾಗುವುದೆಂದು ಆರ್.ಚಂದ್ರು ತಿಳಿಸಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
14/09/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore