HOME
CINEMA NEWS
GALLERY
TV NEWS
REVIEWS
CONTACT US

`ಹೊಂಬಾಳೆ ಫಿಲಂಸ್’ ನೂತನ ಕಚೇರಿ ಕಾರ್ಯಾರಂಭ
ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಣ ಸಂಸ್ಥೆಯಾಗಿ `ಹೊಂಬಾಳೆ ಫಿಲಂಸ್’ ಹೊರ ಹೊಮ್ಮಿದೆ. ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ತನ್ನ ಬಳಗ, ವ್ಯವಹಾರಗಳನ್ನು ವಿಸ್ತಾರವಾಗಿಸಿಕೊಂಡಿರೋ ಈ ಸಂಸ್ಥೆಯ ಹೊಸಾ ಕಚೇರಿ ಇದೀಗ ಕಾರ್ಯಾರಂಭ ಮಾಡಿದೆ. ಇದುವರೆಗೂ ಚಿತ್ರ ನಿರ್ಮಾಣ ಮಾಡುತ್ತಿದ್ದ ವಿಜಯ್ ಕಿರಗಂದೂರು ಅವರು ಈ ಮೂಲಕ ಕೆಆರ್‍ಜಿ ಸ್ಟುಡಿಯೋಸ್ ಹೆಸರಿನಡಿಯಲ್ಲಿ ಚಿತ್ರ ವಿತರಣೆಗೂ ಮುಂದಾಗಿದ್ದಾರೆ.

ಶಿವಾನಂದ ಸರ್ಕಲ್‍ನಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆಯ ಕೆಆರ್‍ಜಿ ಸ್ಟುಡಿಯೋಸ್ ವಿತರಣಾ ಸಂಸ್ಥೆಯ ಸುಸಜ್ಜಿತವಾದ ಕಟ್ಟಡಕ್ಕೆ ಇತ್ತೀಚೆಗೆ ಚಾಲನೆ ಸಿಕ್ಕಿದೆ. ಹೊಂಬಾಳೆ ಫಿಲಂಸ್‍ನ ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಇದೇ ಸಂಸ್ಥೆ ನಿರ್ಮಾಣ ಮಾಡಿರೋ ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಸೇರಿದಂತೆ ಅನೇಕರ ಸಮ್ಮುಖದಲ್ಲಿ ಹೊಂಬಾಳೆ ಕಚೇರಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.

ಈ ಮೂಲಕ ಪ್ರತಿಭಾವಂತ ಯುವ ನಿರ್ಮಾಪಕರು ಮತ್ತು ನಿರ್ದೇಶಕರುಗಳ ಸದಭಿರುಚಿಯ ಚಿತ್ರಗಳಿಗೆ ಪ್ರೋತ್ಸಾಹÀ ನೀಡಬೇಕೆಂಬುದು ವಿಜಯ್ ಕಿರಗಂದೂರರ ಬಯಕೆ. ಕೆಆರ್‍ಜಿ ಸ್ಟುಡಿಯೋಸ್ ಮೂಲಕ ಸದಭಿರುಚಿಯ ಚಿತ್ರಗಳು ಇನ್ನು ಮುಂದೆ ವಿರರಣೆಯಾಗಲಿವೆ.

ರಾಜಕುಮಾರ ಚಿತ್ರದ ಭಾರೀ ಯಶದ ನಂತರ ಹೊಂಬಾಳೆ ಫಿಲಂಸ್ ಸಂಸ್ಥೆ ಚಿತ್ರರಂಗದಲ್ಲಿ ವ್ಯಾಪಕವಾಗಿ ಗಮನ ಸೆಳೆದಿದೆ. ಇದೇ ಸಂಸ್ಥೆಯಿಂದ ಇನ್ನೂ ಅನೇಕ ಚಿತ್ರಗಳು ಹೊರ ಬರುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ಹೀಗಿರೋವಾಗಲೇ ಈ ಸಂಸ್ಥೆ ಕೆಆರ್‍ಜಿ ಸ್ಟುಡಿಯೋಸ್ ಅಡಿಯಲ್ಲಿ ಅಚ್ಚುಕಟ್ಟಾದ ಕಚೇರಿ ತೆರೆದು ಚಿತ್ರ ವಿತರಣೆಯ ಕ್ಷೇತ್ರಕ್ಕೂ ಕಾಲಿಟ್ಟಿದೆ.
-Cine Circle News
-8/08/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore