HOME
CINEMA NEWS
GALLERY
TV NEWS
REVIEWS
CONTACT US
ಗಾಣಗಟ್ಟಿ ಮಾಯಮ್ಮನ ಚರಿತೆ
ಹಾರರ್, ಥ್ರಿಲ್ಲರ್ ಚಿತ್ರಗಳ ಭರಾಟೆ ಮದ್ಯದಲ್ಲಿ ಭಕ್ತಿ ಪ್ರಧಾನ ಚಿತ್ರ ‘ಜ್ಯೋತಿರ್ಗಮಯ’ ಸದ್ದಿಲ್ಲದೆ ಬಳ್ಳಾರಿ, ಕೂಡ್ಲಗಿ ತಟಗಳಲ್ಲಿ ಚಿತ್ರೀಕರಣ ನಡೆಸಿ ಸುದ್ದಿ ಮಾಡಲು ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ಮಾದ್ಯಮದ ಎದುರು ತಂಡವು ಹಾಜರಾಗಿತ್ತು. ದುಗುಡದಿಂದಲೇ ಮೈಕ್ ತೆಗೆದುಕೊಂಡ ನಿರ್ದೇಶಕ ಡಿ.ವಿ.ಜಿ.ನಾಗರಾಜ್ ಸಿನಿಮಾದ ಕುರಿತು ಮಾತು ಹಂಚಿಕೊಂಡಿದ್ದು ಈ ರೀತಿ ಇತ್ತು: ಕತ್ತಲಿನಿಂದ ಬೆಳಕಿನಡೆಗೆ ಎನ್ನುವಂತೆ ಕತೆಯನ್ನು ಸಿದ್ದಪಡಿಸಲಾಗಿದೆ. ಕೂಡ್ಲಗಿ ತಾಲ್ಲೊಕಿನ ಗಾಣಗಟ್ಟಿಯಲ್ಲಿ ಮಾಯಮ್ಮ ದೇವಿ ಇದೆ. ಈ ದೇವಿಗೆ ಹರಕೆ ಹೊತ್ತವರಿಗೆ ಶ್ರೇಯ ಲಭಿಸುತ್ತದೆ. ಪ್ರಚಲಿತ ಯುವಕರು ದೈವವನ್ನು ನಂಬದೆ, ಮಾಠಮಂತ್ರದ ಕಡೆ ಹೋದಾಗ ದೇವಿ ಯಾವ ರೀತಿ ಕಾಪಾಡುತ್ತದೆ. ಈಕೆಯ ಪವಾಡಗಳನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬುದರ ವಾಖ್ಯಾನ ಬಿಚ್ಚಿಟ್ಟರು. ರಂಗಭೂಮಿಯಿಂದ ಬಂದವನಾಗಿದ್ದು, ಅವಕಾಶ ನೀಡಿದ್ದಕ್ಕೆ ನಿರ್ಮಾಪಕ,ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಉದ್ಯಮಿ ಮಗನ ಪಾತ್ರದಲ್ಲಿ ಕಾಣ ಸಿಕೊಂಡು, ರಥದ ಗಾಲಿ ನನ್ನ ಮೇಲೆ ಹೋದಂತೆ ಕನಸು ಬರುತ್ತಿದ್ದನ್ನು ಅಜ್ಜಿಗೆ ಹೇಳಿದಾಗ, ದೇವಿ ದರ್ಶನ ಪಡದುಕೊಂಡು ಬಾ ಅಂತ ಸಲಹೆ ನೀಡುತ್ತಾರೆ. ಅದರಂತೆ ಅಲ್ಲಿಗೆ ಬಂದಾಗ ಅರ್ಚಕರು 42 ದಿನ ವೃತ ಮಾಡಿದರೆ ಸರಿಯಾಗುತ್ತದೆಂದು ಹೇಳುತ್ತಾರೆ. ಆ ದಿನಗಳಲ್ಲಿ ಪ್ರೀತಿ, ಕಷ್ಟ, ನಲಿವು ಎಲ್ಲವನ್ನು ಅನುಭವಿಸುತ್ತೇನೆಂದು ಪೂರ್ಣ ಕತೆಯನ್ನು ಹೇಳುತ್ತಿರುವಾಗ ಮಾದ್ಯಮ ಕಡೆಯಿಂದ ಸಾಕು ಅಂತ ಕೂಗು ಬಂದಿದ್ದನ್ನು ನೋಡಿ ಸುಮ್ಮನಾದರು ನಾಯಕ ಭೀಮೇಶ್.

ಹಿನ್ನಲೆ ಸಂಗೀತ ಒದಗಿಸಿರುವ ಜೇಮ್ಸ್ ಆರ್ಕಿಟೆಕ್ಟ್, ಸಹ ನಿರ್ಮಾಪಕ ನಾಗಲಿಂಗಪ್ಪ, ನೃತ್ಯ ನಿರ್ದೇಶಕ ರಾಜದೇವ್, ಕಲಾವಿದ ರೇವಣ್ಣಬಳ್ಳಾರಿ ಇವರುಗಳು ಚುಟುಕು ಮಾತನಾಡಿದರು. ತಡವಾಗಿ ಆಗಮಿಸಿದ ಸಿಂಧೂರಾವ್ ಇದು ಬಣ್ಣ ಹಚ್ಚಿದ ಮೊದಲ ಸಿನಿಮಾವಾಗಿದೆ. ನಾಯಕಿ, ದೇವಿ, ಆತ್ಮ ಹೀಗೆ ಮೂರು ಶೇಡ್‍ಗಳಲ್ಲಿ ಕಾಣ ಸಿಕೊಂಡಿದ್ದೇನೆ ಎಂದರು. ಸುದೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷ ರವೀಂದ್ರಸಿಂಗ್ ಧ್ವನಿಸಾಂದ್ರಿಕೆ ಲೋಕಾರ್ಪಣೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ವಿನುಮನಸು ಸಾರಥ್ಯದಲ್ಲಿ ಐದು ಗೀತೆಗಳು ಸಿದ್ದಗೊಂಡಿದೆ. ಇದೇ ಸಂದರ್ಭದಲ್ಲಿ ನಿರ್ದೇಶಕರ ಮುಂದಿನ ಚಿತ್ರ ‘ಕೆಟಿಜಿ ನಗರ’ ಪೋಸ್ಟರ್‍ನ್ನು ಅನಾವರಣಗೊಳಿಸಲಾಯಿತು. ನಿರ್ಮಾಪಕ ಜಿ.ಗೋವಿಂದರಾಜು ಪರವಾಗಿ ಅಳಿಯ ಸುದೀಂದ್ರ ಹಾಜರಿದ್ದರು.
-4/12/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore