HOME
CINEMA NEWS
GALLERY
TV NEWS
REVIEWS
CONTACT US
ಕೊನೆಗೂ ಜುಗಾರಿ ಕ್ರಾಸ್ ಸಿನಿಮಾ ಆಗುತ್ತಿದೆ
1994ರಲ್ಲಿ ಪ್ರಕಟಗೊಂಡ, ಕೆ.ಪಿ,ಪೂರ್ಣಚಂದ್ರತೇಜಸ್ವಿ ಬರೆದಿರುವ ‘ಜುಗಾರಿ ಕ್ರಾಸ್’ ಅಂತಿಮವಾಗಿ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ. ಕಂತುಗಳಲ್ಲಿ ಪ್ರಕಟಗೊಂಡು, ಪ್ರತಿ ವಾರವು ಸೆಸ್ಪೆನ್ಸ್‍ನೊಂದಿಗೆ ಕೊನೆಗೊಳ್ಳುವ ಗುಣ ಕಾದಂಬರಿಗೆ ಇತ್ತು. ನಿರ್ದೇಶಕ ನಾಗಭರಣ ಹದಿನೆಂಟನೇ ವರ್ಷನ್‍ಗೆ ಓಕೆ ಮಾಡಿಕೊಂಡಿದ್ದು, ಚಿತ್ರೀಕರಣ ಸಂದರ್ಭದಲ್ಲಿ ಬದಲಾವಣೆಯಾಗುವ ಸಾದ್ಯತೆ ಇದೆಯಂತೆ. ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳಬೇಕು. ಅದನ್ನು ದುರುಪಯೋಗಪಡಿಸಿಕೊಂಡರೆ, ಅಲ್ಲಗೆಳೆದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಲೆ ಎತ್ತಿದ್ದು ಧರೆಗೆ ಉರುಳಲೇ ಬೇಕು. ಮುಂದೆ ಏನಾಗುತ್ತೆ ಎಂಬಂತಹ ವಿಷಯಗಳನ್ನು ತೇಜಸ್ವಿ 25 ವರ್ಷಗಳ ಹಿಂದೆ ಭವಿಷ್ಯವಾಣಿ ನುಡಿದಿದ್ದರು. ಅದಕ್ಕೆ ಸಾಕ್ಷಿ ಮಡಕೇರಿ, ಕೇರಳ ಕಣ್ಣಮುಂದೆ ಬರುತ್ತದೆ.

ಕತೆಯಲ್ಲಿ ಬರುವ ಸುರೇಶ ನೇರ ದಿಟ್ಟ ನಿರಂತರ ಗುಣವುಳ್ಳವ ಪಾತ್ರವನ್ನು ನಿರ್ವಹಿಸುತ್ತಿರುವುದು ಚಿರಂಜೀವಿಸರ್ಜಾ. ಇವರ ಮೂಲಕ ತೇಜಸ್ವಿ ಅವರನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತದೆ. ಇಬ್ಬರು ನಾಯಕಿಯರು ಉಳಿದಂತೆ ಕಲಾವಿದರ ಆಯ್ಕೆ ಸದ್ಯದಲ್ಲೆ ಮುಗಿಯಲಿದೆ. ಒಟ್ಟು 18 ಪಾತ್ರಗಳ ಪೈಕಿ, 6 ಪಾತ್ರಗಳು ಮುಖ್ಯವಾಗಿ ಬರುತ್ತವೆ. ಮಲೆನಾಡ ಪ್ರದೇಶದಲ್ಲಿ ಇಡೀ ಕತೆ ಸಾಗಲಿದೆ. ಅದಕ್ಕಾಗಿ ನಿರ್ದೇಶಕರು ದಾಂಡೇಲಿ, ಯಲ್ಲಾಪುರ, ಯಡಕಮುರಿ ಕಾಡುಗಳನ್ನು ನೋಡಿಕೊಂಡಿದ್ದು, ಇದರಲ್ಲಿ ಒಂದನ್ನು ಕಾದಂಬರಿಯಲ್ಲಿರುವ ದೇವಪುರ ಊರಿನಂತೆ ಸೃಷ್ಟಿಸಲು ಚಿಂತನೆ ನಡೆಸಿದ್ದಾರೆ. ಸಂಗೀತ ವಾಸುಕಿವೈಭವ್, ಛಾಯಾಗ್ರಹಣ ವೇಣು ಅವರದಾಗಿದೆ.

ರಂಗಾಯಣರಘು, ಕರಿಸುಬ್ಬು ಸಮಾರಂಭದಲ್ಲಿ ಹಾಜರಿದ್ದು ಇವರಿಗೆ ಪಾತ್ರ ಸಿಗುವ ಸಾದ್ಯತೆಗಳು ಇರಲಿದೆ. ಇವರೊಂದಿಗೆ ನಿರ್ಮಾಪಕರು ಬಣ್ಣ ಹಚ್ಚುವ ಸಾದ್ಯತೆ ಇದೆ. ಭಾನುವಾರ ನಿಮಿಷಾಂಬ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಚಿರಂಜೀವಿಸರ್ಜಾ ನಟನೆ ಮಾಡುವ ಮೊದಲ ದೃಶ್ಯಕ್ಕೆ ಪುನೀತ್‍ರಾಜ್‍ಕುಮಾರ್ ಕ್ಲಾಪ್ ಮಾಡಿದರೆ, ಯಶ್ ಕ್ಯಾಮಾರ ಸ್ವಿಚ್ ಆನ್ ಮಾಡಿದರು. ಹಿತೈಷಿಗಳಾದ ಸುಂದರ್‍ರಾಜ್ ದಂಪತಿಗಳು, ಮೇಘನಾರಾಜ್, ಸಿನಿಪಂಡಿತರು ಆಗಮಿಸಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/02/19

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore