HOME
CINEMA NEWS
GALLERY
TV NEWS
REVIEWS
CONTACT US

ಜೀವನ ಯಜ್ಘದಲ್ಲಿ ನಾಲ್ಕು ಪಾತ್ರಗಳು
ನಾಲ್ಕು ಅನಾಥ ಹುಡುಗರನ್ನು ಒಂದೊಂದು ಜಾತಿಯವರು ಸಾಕಿ ಬೆಳೆಸಿರುತ್ತಾರೆ. ಮುಂದೆ ಇವರ ಬದುಕಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತದೆ ಎಂದು ಹೇಳುವದೇ ‘ಜೀವನ ಯಜ್ಘ’ ಚಿತ್ರದ ಸಾರಾಂಶ. ಇಷ್ಟು ಹೇಳಿದರೆ ಅರ್ಥವಾಗದು. ಮನುಷ್ಯ ಇರುವುದು ನಾಲ್ಕು ದಿನಗಳು ಮಾತ್ರ. ಅದರಂತೆ ಅವನ ಬದುಕು ನಾಲ್ಕು ದಿನ. ಇರುವಷ್ಟು ದಿನ ಚೆನ್ನಾಗಿ ಬಾಳಬೇಕು. ಎಲ್ಲವನ್ನು ಅರ್ಥ ಮಾಡಿಕೊಂಡರೆ ಸುಂದರ ಜೀವನವನ್ನು ಕಾಣಬಹುದೆಂದು ಕತೆಯ ಒಟ್ಟಾರೆ ಹೂರಣವಾಗಿದೆ. ಸನ್ನಿವೇಶಗಳು ಮಂಗಳೂರು ಭಾಗಕ್ಕೆ ಸೀಮಿತವಾಗಿರುವುದರಿಂದ ಅಲ್ಲಿನ ಪರಿಸರದಲ್ಲಿಯೇ ಪಾತ್ರಗಳು, ಮಾತುಗಳು, ಸೊಗಡು, ಸೊಬಗನ್ನು ಚೆನ್ನಾಗಿ ತೋರಿಸಿದ್ದಾರೆ. ಹಾಸ್ಯ ದೃಶ್ಯಗಳು ಕೆಲವೊಮ್ಮೆ ಬೇಕಿತ್ತಾ ಅನಿಸುತ್ತದೆ. ಬದುಕಿನುದ್ದಕ್ಕೂ ನಲಿವು, ನೋವು, ದುಮ್ಮಾನ, ಬೇಸರ, ಅನಪೇಕ್ಷಿತ ಘಟನೆಗಳು ಎಲ್ಲವು ಬಂದು ಹೋಗುತ್ತವೆ. ನೋಡುಗನು ಮ್ಯಾಜಿಕ್, ಲಾಜಿಕ್ ಎಲ್ಲವನ್ನು ಪಕ್ಕಕ್ಕೆ ಇಟ್ಟು ನೋಡಿದರೆ, ಮೂರು ದಿನದ ಬಾಳಿನಲ್ಲಿ ನೂರೆಂಟು ತಿರುವುಗಳು ಬಂದಾಗ , ಹೇಗೆಲ್ಲಾ ಮನಸ್ಥಿಗಳು ಬದಲಾಗುತ್ತವೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿರುವುದು ಕಾಣಿಸುತ್ತದೆ.

ಸಾಕು ಅಮ್ಮನನ್ನು ಹೆತ್ತಮ್ಮನಂತೆ ಕಾಣುವ ಶೈನ್‍ಶೆಟ್ಟಿ ರೇಡಿಯೋ ಜಾಕಿಯಾಗಿ ಇಷ್ಟವಾಗುತ್ತದೆ. ಹೆಂಡತಿಯ ಆಸೆ, ಆಕಾಂಕ್ಷೆಗಳನ್ನು ಈಡೇರಿಸುತ್ತಾ, ತಾಯಿ ಆಸರೆಗೆ ದೂರವಾಗಿ ಒದ್ದಾಡುವ ಮಗನಾಗಿ ಅದ್ವೈತ ಚೆನ್ನಾಗಿ ನಟಿಸಿದ್ದಾರೆ. ಇವರ ಪತ್ನಿಯಾಗಿ ಆದ್ಯಆರಾಧ್ಯ ಬಜಾರಿಯಾಗಿ ಮೊದಲ ಪ್ರಯತ್ನದಲ್ಲೆ ಗಮನ ಸೆಳೆದಿದ್ದಾರೆ. ಹಿರಿಯ ನಟ ರಮೇಶ್‍ಭಟ್ ಅವರನ್ನು ಕಡಿಮೆ ಬಳಿಸಿಕೊಂಡಿರುವುದು ಬೇಸರ ತರಿಸುತ್ತದೆ. ಆಶ್ಲೆಮೈಕಲ್ ಸಂಗೀತದಲ್ಲಿ ಎರಡು ಹಾಡು ಕೇಳಬಲ್. ಶಿವುಸರಳೇಬೆಟ್ಟು ಕತೆ ಬರೆದು ನಿರ್ದೇಶನ ಮಾಡಿದ್ದು, ಒಮ್ಮೆ ನೋಡುವಂತೆ ಮಾಡುವಲ್ಲಿ ಯಶಸ್ಸಿಯಾಗಿದ್ದಾರೆ. ಜೀವನದ ತಿರುವುಗಳನ್ನು ನೋಡಲು ಇಷ್ಟಪಡುವವರಿಗೆ ಚಿತ್ರ ಮೋಸ ಮಾಡುವುದಿಲ್ಲ.
ಸಿನಿ ಸರ್ಕಲ್.ಇನ್ ವಿಮರ್ಶೆ
ನಿರ್ಮಾಣ: ಕಿರಣ್‍ರೈ, ರಂಜನ್‍ಶೆಟ್ಟಿ
ರೇಟಿಂಗ್: ***
7/11/18

ಪಾರ್ಲೆಜಿಯಿಂದ ಗೂಗಲ್ ಜೀ ವರೆಗೆ ವರೆಗಿನ ಕಥನ
ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾದಿರುವಂತೆ ಜೀವನ ಯಗ್ನ’ ಚಿತ್ರತಂಡವು ಮಾದ್ಯಮದ ಮುಂದು ಹಾಜರಾಗಿದ್ದು. ಕತೆ,ಸಂಭಾಷಣೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿರುವ ಶಿವು ಸರಳೇಬೆಟ್ಟು ಹೇಳುವಂತೆ ಜೀ-ವನವನ್ನು ಜಿ ಗೆ ಹೋಲಿಸಲಾಗಿದೆ. ಪಾರ್ಲೆ-ಜಿ ಸಂತೋಷವನ್ನು ಉಂಟು ಮಾಡಿದರೆ, ಗೂಗಲ್ ಜಿ ಹುಡುಕಾಟವನ್ನು ನಡೆಸುತ್ತದೆ. ಪಂಚಭೂತಗಳಾದ ಭೂಮಿ, ಆಕಾಶ, ಜಲ, ಅಗ್ನಿ ಹಾಗೂ ವಾಯು ಇವೆಲ್ಲವು ಜೀವನದ ಒಂದು ಪಯಣವಾಗಿದೆ. ಇವುಗಳಲ್ಲಿ ನಾಲ್ಕು ಪಾತ್ರಗಳಿಗೆ ಹೆಸರನ್ನು ಇಡಲಾಗಿದೆ. ಉಳಿದ 50 ಪಾತ್ರಗಳ ಹೆಸರು ಇರುವುದಿಲ್ಲ. ಕಣ್ಣು, ಕಿವಿ, ಮೆದುಳು, ಮನಸ್ಸು ಜೊತೆಗೆ ಸಮಾಜ ಇರಲಿದ್ದು ಒಂದು ರೀತಿಯಲ್ಲಿ ಪ್ರೇಕ್ಷಕನಿಗೆ ಭಿನ್ನ ಸಿನಿಮಾ ಅನಿಸುತ್ತದೆ. ಜೀವನ ಯಾರು ಕಲಿಸಲಾಗದ, ಕಲಿಯಲಾಗದ ಪಾಠ. ಇದರ ಆಗುಹೋಗುಗಳು, ನೋವು ನಲಿವು ಎಲ್ಲವನ್ನು ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ಸಂಕ್ಷಿಪ್ತ ಮಾಹಿತಿಯನ್ನು ಬಿಚ್ಟಿಟ್ಟರು.

ಮಠಕೊಪ್ಪಳ್, ಮನೋಜ್‍ಪುತ್ತೂರು, ಶೈನ್‍ಶೆಟ್ಟಿ, ಅನೂಪ್‍ಸಾಗರ್ ನಾಯಕರು, ಜೋಡಿಯಾಗಿ ಸೌಜನ್ಯಹೆಗ್ಡೆ, ಅನ್ವಿತಾಸಾಗರ್, ಆದ್ಯಾಆರಾದ್ಯ, ಮೆರ್ವಿನ್‍ಶಿರ್ವ ನಾಯಕಿಯರು. ಇವರೊಂದಿಗೆ ಹಿರಿಯ ಕಲಾವಿದರಾದ ರಮೇಶ್‍ಭಟ್, ಬಿ.ಜಯಶ್ರೀ ಇನ್ನು ಮುಂತಾದವರು ಅಭಿನಯಿಸಿದ್ದಾರೆ. ಮಂಗಳೂರಿನ ಹೊಸ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಿತೀಶ್‍ರತ್ನಮಾಲ,ಸಂತು, ಶಿವುಸರಳೇಬೆಟ್ಟು ಸಾಹಿತ್ಯದ ಎಂಟು ಹಾಡುಗಳಿಗೆ ಅಕ್ಷಯ್‍ಮೈಕೆಲ್ ಸಂಗೀತ ಸಂಯೋಜನೆ ಇದೆ. ಎರಡೂವರೆ ನಿಮಿಷದ ಗೀತೆಯಲ್ಲಿ ಅರ್ಧ ಗಂಟೆಯ ಕತೆಯನ್ನು ಹೇಳುತ್ತದಂತೆ. ರಂಜನ್‍ಶೆಟ್ಟಿ ಕೆಆರ್‍ಎಸ್ ಕುಡ್ಲ ಕಂಬೈನ್ಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರವು ಸಚಿತ್ ಫಿಲಿಂಸ್‍ನ ವೆಂಕಟ್ ಮುಖಾಂತರ ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
29/10/18

ಭೂತ ವರ್ತಮಾನದ ಜೀ-ವನ
ಸದ್ಯ ಚಂದನವನದಲ್ಲಿ ಹೆಚ್ಚಾಗಿ ಮಂಗಳೂರು ಕಡೆಯಿಂದ ನಾಯಕಿಯರು ಬರುತ್ತಿದ್ದರೆ, ಮತ್ತೋಂದು ಕಡೆ ಇದೇ ಸ್ಥಳದಿಂದ ನಿರ್ಮಾಪಕರು,ನಿರ್ದೇಶಕರು ದಾಂಗುಡಿಯಿಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಇದರ ಸಾಲಿಗೆ ‘ಜೀ-ವನ ಯಗ್ನ’ ಚಿತ್ರವೊಂದು ಸೇರ್ಪಡೆಯಾಗಿದೆ. ಕತೆ,ಸಂಭಾಷಣೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿರುವ ಶಿವು ಸರಳೇಬೆಟ್ಟು ಹೇಳುವಂತೆ ಜೀ-ವನವನ್ನು ಜಿ ಗೆ ಹೋಲಿಸಲಾಗಿದೆ. ಪಾರ್ಲೆ-ಜಿ ಸಂತೋಷವನ್ನು ಉಂಟು ಮಾಡಿದರೆ, ಗೂಗಲ್ ಹುಡುಕಾಟವನ್ನು ನಡೆಸುತ್ತದೆ. ಪಂಚಭೂತಗಳಾದ ಭೂಮಿ, ಆಕಾಶ, ಜಲ, ಅಗ್ನಿ ಹಾಗೂ ವಾಯು ಇವೆಲ್ಲವು ಜೀವನದ ಒಂದು ಪಯಣವಾಗಿದೆ. ಇವುಗಳಲ್ಲಿ ನಾಲ್ಕು ಪಾತ್ರಗಳಿಗೆ ಹೆಸರನ್ನು ಇಡಲಾಗಿದೆ. ಉಳಿದ 50 ಪಾತ್ರಗಳ ಹೆಸರು ಇರುವುದಿಲ್ಲ. ಕಣ್ಣು, ಕಿವಿ, ಮೆದುಳು, ಮನಸ್ಸು ಜೊತೆಗೆ ಸಮಾಜ ಇರಲಿದ್ದು ಒಂದು ರೀತಿಯಲ್ಲಿ ಪ್ರೇಕ್ಷಕನಿಗೆ ಭಿನ್ನ ಸಿನಿಮಾ ಅನಿಸುತ್ತದೆ. ಸಂತ ಶಿಶುನಾಳ ಷರೀಫ, ಕನಕದಾಸರ ಒಂದೊಂದು ವ್ಯಾಕ್ಯಗಳನ್ನು ಆರಿಸಿಕೊಂಡು, ಹಾಗೆಯೇ ಹಿರಿಯ ಹೇಳಿದ ಒಂದೊಂದು ಪದಗಳನ್ನು ಬಳಸಿಕೊಂಡು ಕತೆ ಸಿದ್ದಪಡಿಸಲಾಗಿದೆ ಎಂದು ಒಂದೇ ಗುಕ್ಕಿಗೆ ಮಾಹಿತಿಗಳನ್ನು ಸಾಕು ಎನ್ನುವವರೆವಿಗೂ ಕೊಡುತ್ತಲೆ ಇದ್ದರು.

ಮಠಕೊಪ್ಪಳ್, ಮನೋಜ್‍ಪುತ್ತೂರು, ಶೈನ್‍ಶೆಟ್ಟಿ, ಅನೂಪ್‍ಸಾಗರ್ ನಾಯಕರು, ಜೋಡಿಯಾಗಿ ಸೌಜನ್ಯಹೆಗ್ಡೆ, ಅನ್ವಿತಾಸಾಗರ್, ಆದ್ಯಾಆರಾಧನ್, ಮೆರ್ವಿನ್‍ಶಿರ್ವ ನಾಯಕಿಯರು. ಇವರೊಂದಿಗೆ ಹಿರಿಯ ಕಲಾವಿದರಾದ ರಮೇಶ್‍ಭಟ್, ಬಿ.ಜಯಶ್ರೀ ಇನ್ನು ಮುಂತಾದವರು ಅಭಿನಯಿಸಿದ್ದಾರೆ. ಮಂಗಳೂರಿನ ಹೊಸ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಿತೀಶ್‍ರತ್ನಮಾಲ,ಸಂತು, ಶಿವುಸರಳೇಬೆಟ್ಟು ಸಾಹಿತ್ಯದ ಎಂಟು ಹಾಡುಗಳಿಗೆ ಅಕ್ಷಯ್‍ಮೈಕೆಲ್ ಸಂಗೀತ ಸಂಯೋಜನೆ ಇದೆ. ಎರಡೂವರೆ ನಿಮಿಷದ ಗೀತೆಯಲ್ಲಿ ಅರ್ಧ ಗಂಟೆಯ ಕತೆಯನ್ನು ಹೇಳುತ್ತದಂತೆ. ಕಿರಣ್ ರೈ–ರಂಜನ್‍ಶೆಟ್ಟಿ ಜಂಟಿಯಾಗಿ ಕೆಆರ್‍ಎಸ್ ಕುಡ್ಲ ಕಂಬೈನ್ಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರವು ನವೆಂಬರ್ ಎರಡರಂದು ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/10/18
ಭೂತ ವರ್ತಮಾನದ ಜೀ-ವನ
ಸದ್ಯ ಚಂದನವನದಲ್ಲಿ ಹೆಚ್ಚಾಗಿ ಮಂಗಳೂರು ಕಡೆಯಿಂದ ನಾಯಕಿಯರು ಬರುತ್ತಿದ್ದರೆ, ಮತ್ತೋಂದು ಕಡೆ ಇದೇ ಸ್ಥಳದಿಂದ ನಿರ್ಮಾಪಕರು,ನಿರ್ದೇಶಕರು ದಾಂಗುಡಿಯಿಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಇದರ ಸಾಲಿಗೆ ‘ಜೀ-ವನ ಯಗ್ನ’ ಚಿತ್ರವೊಂದು ಸೇರ್ಪಡೆಯಾಗಿದೆ. ಕತೆ,ಸಂಭಾಷಣೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿರುವ ಶಿವು ಸರಲೆಬೆಟ್ಟು ಹೇಳುವಂತೆ ಜೀ-ವನವನ್ನು ಜಿ ಗೆ ಹೋಲಿಸಲಾಗಿದೆ. ಪಾರ್ಲೆ-ಜಿ ಸಂತೋಷವನ್ನು ಉಂಟು ಮಾಡಿದರೆ, ಗೂಗಲ್ ಹುಡುಕಾಟವನ್ನು ನಡೆಸುತ್ತದೆ. ನಾವುಗಳು ಪಂಚಭೂತಗಳಾದ ಭೂಮಿ, ಆಕಾಶ, ಜಲ, ಅಗ್ನಿ ಹಾಗೂ ವಾಯು ಇವೆಲ್ಲವು ಜೀವನದ ಒಂದು ಪಯಣವಾಗಿದೆ. ಇವುಗಳಲ್ಲಿ ನಾಲ್ಕು ಪಾತ್ರಗಳಿಗೆ ಹೆಸರನ್ನು ಇಡಲಾಗಿದೆ. ಉಳಿದ 50 ಪಾತ್ರಗಳ ಹೆಸರು ಇರುವುದಿಲ್ಲ. ಕಣ್ಣು, ಕಿವಿ, ಮೆದುಳು, ಮನಸ್ಸು ಜೊತೆಗೆ ಸಮಾಜ ಇರಲಿದ್ದು ಒಂದು ರೀತಿಯಲ್ಲಿ ಪ್ರೇಕ್ಷಕನಿಗೆ ಭಿನ್ನ ಸಿನಿಮಾ ಅನಿಸುತ್ತದೆ. ಸಂತ ಶಿಶುನಾಳ ಷರೀಫ, ಕನಕದಾಸರ ಒಂದೊಂದು ವ್ಯಾಕ್ಯಗಳನ್ನು ಆರಿಸಿಕೊಂಡು, ಹಾಗೆಯೇ ಹಿರಿಯ ಹೇಳಿದ ಒಂದೊಂದು ಪದಗಳನ್ನು ಬಳಸಿಕೊಂಡು ಕತೆ ಸಿದ್ದಪಡಿಸಲಾಗಿದೆ ಎಂದು ಒಂದೇ ಗುಕ್ಕಿಗೆ ಮಾಹಿತಿಗಳನ್ನು ಸಾಕು ಎನ್ನುವವರೆವಿಗೂ ಕೊಡುತ್ತಲೆ ಇದ್ದರು.

ಮಠಕೊಪ್ಪಳ್, ಮನೋಜ್‍ಪುತ್ತೂರು, ಶೈನ್‍ಶೆಟ್ಟಿ, ಅನೂಪ್‍ಸಾಗರ್ ನಾಯಕರು, ಜೋಡಿಯಾಗಿ ಸೌಜನ್ಯಹೆಗ್ಡೆ, ಅನ್ವಿತಾಸಾಗರ್, ಆದ್ಯಾಆರಾಧನ್, ಮೆರ್ವಿನ್‍ಶಿರ್ವ ನಾಯಕಿಯರು. ಇವರೊಂದಿಗೆ ಹಿರಿಯ ಕಲಾವಿದರಾದ ರಮೇಶ್‍ಭಟ್, ಬಿ.ಜಯಶ್ರೀ ಇನ್ನು ಮುಂತಾದವರು ಅಭಿನಯಿಸಿದ್ದಾರೆ. ಮಂಗಳೂರಿನ ಹೊಸ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಿತೀಶ್‍ರತ್ನಮಾಲ,ಸಂತು, ಶಿವುಸರಳೆಬೆಟ್ಟು ಸಾಹಿತ್ಯ ಎಂಟು ಹಾಡುಗಳಿಗೆ ಅಕ್ಷಯ್‍ಮೈಕೆಲ್ ಸಂಗೀತ ಸಂಯೋಜನೆ ಇದೆ. ಎರಡೂವರೆ ನಿಮಷದ ಗೀತೆಯಲ್ಲಿ ಅರ್ಧ ಗಂಟೆಯ ಕತೆಯನ್ನು ಹೇಳುತ್ತದಂತೆ. ಕಿರಣ್ ರೈ–ರಂಜನ್‍ಶೆಟ್ಟಿ ಜಂಟಿಯಾಗಿ ಕೆಆರ್‍ಎಸ್ ಕುಡ್ಲ ಕಂಬೈನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವ ಚಿತ್ರವು ಸಪ್ಟಂಬರ್‍ನಲ್ಲಿ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/07/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore