HOME
CINEMA NEWS
GALLERY
TV NEWS
REVIEWS
CONTACT US

ಝಾನ್ಸಿ ಹಾಡುಗಳ ಸಮಯ
ಹೆಣ್ಣು ಮಗಳು ತನಗಾದ ಅನ್ಯಾಯದ ವಿರುದ್ದ ಸೇಡು ತೀರಿಸಿಕೊಳ್ಳುವುದು, ಪ್ರಸಕ್ತ ಸಮಾಜದಲ್ಲಿ ಡ್ರಗ್ಸ್, ಲ್ಯಾಂಡ್ ಮಾಫಿಯಾ ಹೆಚ್ಚಾಗಿ ನಡೆಯುತ್ತಿದ್ದು, ಇದರ ಕುರಿತಂತೆ ‘ಝಾನ್ಸಿ’ ಚಿತ್ರದ ಸಾರಾಂಶವಾಗಿದೆ. ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಪಿವಿಎಸ್.ಗುರುಪ್ರಸಾದ್ ಮಹಿಳಾ ಪ್ರಧಾನ ಕತೆ ಎಂದು ಒನ್ ಲೈನ್ ಹೇಳುತ್ತಿದ್ದಂತೆ ನಾಯಕಿ ಲಕ್ಷೀರೈ ಒಪ್ಪಿಕೊಂಡು ಕೆಲಸ ಮುಗಿಸಿಕೊಟ್ಟಿದ್ದಾರೆ. ಶೀರ್ಷಿಕೆ ಹೆಸರಿನಲ್ಲಿ ಐಪಿಎಸ್ ಅಧಿಕಾರಿಯಾಗಿ ದುರಳರೊಂದಿಗೆ ಸೆಣಸಾಡುವ ದ್ಯಶ್ಯಗಳು ಸಾಕಷ್ಟು ಇರುವ ಕಾರಣ, ಸಮಯ ತೆಗೆದುಕೊಂಡು ಮಾರ್ಷಲ್ ಆಟ್ರ್ಸ್ ತರಭೇತಿ ಪಡೆದುಕೊಂಡು ಆಕ್ಷನ್‍ದಲ್ಲಿ ಪಾಲ್ಗೋಂಡಿದ್ದಾರೆ. ಆರು ಫೈಟ್, ಒಂದು ಚೇಸ್ ದೃಶ್ಯದಲ್ಲಿ ನಟಿಸಿದ್ದರೂ ಯಾವುದೇ ರೀತಿಯ ಪೆಟ್ಟು ಬೀಳದೆ ಇರುವುದು ಸಂತಸ ತಂದಿದೆ ಎನ್ನುತ್ತಾರೆ.

ಶ್ರೀಜಿತ್ ನಾಯಕ ಮತ್ತು ವಿ.ಆರ್ಯನ್ ಖಳನಾಯಕ. ಉಳಿದಂತೆ ವಿಲನ್‍ಗಳಾಗಿ ರವಿಕಾಳೆ, ಮುಖೇಶ್‍ತಿವಾರಿ, ತಂಗಿ ಪಾತ್ರದಲ್ಲಿ ಇಳಾ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ಸಂಗೀತ ಒದಗಿಸಿರುವ ಎಂ.ಎನ್.ಕೃಪಾಕರ್ ಅವರಿಗೆ 50ನೇ ಚಿತ್ರ. ಆರು ಸಾಹಸ ಸಂಯೋಜನೆ ಮಾಡಿರುವ ಥ್ರಿಲ್ಲರ್‍ಮಂಜು ಅವರದು 500ನೇ ಚಿತ್ರವಾಗಿರುವುದು ವಿಶೇಷ. ಹಿಂದಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ರಾಜೇಶ್‍ಕುಮಾರ್, ಕಮಲ್‍ಬೋಹ್ರಾ ಕನ್ನಡ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಛಾಯಾಗ್ರಹಣ ವೀರೇಶ್.ಎನ್.ಟಿ.ಎ, ಸಂಕಲನ ಬಸವರಾಜ್‍ಅರಸು ಅವರದಾಗಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಪದಾದಿಕಾರಿಗಳು, ಸಿನಿಪಂಡಿತರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ನೆರೆ ಹಾವಳಿಗೆ ತುತ್ತಾಗಿರುವ ಜನರಿಗೆ ತಂಡವು ಸಹಾಯ ಮಾಡಲು ಮುಂದಾಗಿದೆ ಎಂಬ ವಿಷಯವನ್ನು ನಿರ್ದೇಶಕರು ಪ್ರಾರಂಭದಲ್ಲಿ ಹೇಳಿದರು.
ಸಿನಿ ಸರ್ಕಲ್.ಇನ್ ನ್ಯೂಸ್
11/08/19

ಗಣೇಶನ ಹಾಡಿಗೆ ಹೆಜ್ಜೆ ಹಾಕಿದ ಲಕ್ಷೀರೈ
ಆಕ್ಷನ್, ಕಮರ್ಷಿಯಲ್ ‘ಝಾನ್ಸಿ’ ಸಿನಿಮಾವು ಹೊಸಕೆರೆಹಳ್ಳಿಯ ಬಂಗಾರಪ್ಪ ಗುಡ್ಡದಲ್ಲಿ ಗಣೇಶನ ಕುರಿತ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಪತ್ರಕರ್ತರು ಸ್ಥಳಕ್ಕೆ ಹೋದಾಗ ಕೆ.ಕಲ್ಯಾಣ್ ಸಾಹಿತ್ಯದ ‘ಕೇಳಿದ್ದು ಕೊಡುವ ದಮ್ಮಿರೋ ದೇವ್ರೆ ನೀನೊಬ್ಬನೇ ಗಣಪ’ ಎನ್ನುವ ಹಾಡಿಗೆ ಲಕ್ಷೀರೈ ಗುಂಪಿನೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಬಿಸಿಲು, ಧೂಳು ಹೆಚ್ಚಾಗಿದ್ದರಿಂದ ಹೆಚ್ಚಿಗೆ ಮಾಡಿಸಬೇಡವೆಂದು ನಟಿ ಕೋರಿಕೊಳ್ಳುತ್ತಿದ್ದರು. 5-6 ಟೇಕ್ ನಂತರ ನೃತ್ಯ ನಿರ್ದೇಶಕ ಧನ್‍ಕುಮಾರ್ ಓಕೆ ಎಂದಾಗ ಅಲ್ಲಿದ್ದವರು ನಿರಾಳರಾದರು. ಕಟ್ ಮಾಡಿದರೆ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.

ಸರದಿಯಂತೆ ಮೊದಲು ಮಾತನಾಡಿದ್ದು ನಿರ್ದೇಶಕ ಗುರುಪ್ರಸಾದ್. ಅಧಿಕಾರದ ಶಿಪಾರಸ್ಸು ಇರುವರೊಬ್ಬರು ಇಲ್ಲಿರುವ ಜಾಗವನ್ನು ಕಬಳಿಸಲು ಪ್ರಯತ್ನ ಮಾಡುತ್ತಾರೆ. ಸ್ಲಂ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಬಾಂಬ್ ಇಟ್ಟರೆ ಖಾಲಿ ಮಾಡುವರೆಂದು ಒಂದು ಸ್ಥಳದಲ್ಲಿ ಇಡುತ್ತಾರೆ. ಅಲ್ಲೆ ಹುಟ್ಟಿ ಬೆಳದ ಝಾನ್ಸಿ ದುರುಳರ ಯೋಜನೆಯನ್ನು ದ್ವಂಸ ಮಾಡುತ್ತಾಳೆ. ಮುಂದೆ ಖುಷಿಯಿಂದ ಗಣೇಶನ ಹಾಡು ಬರುವುದನ್ನು ಶೂಟ್ ಮಾಡಲಾಗುತ್ತಿದೆ. ಈ ದೃಶ್ಯದಿಂದಲೇ ಅವರು ಪರಿಚಯವಾಗುತ್ತಾರೆ. ಹಾಡಿಗೆ ಪುನೀತ್‍ರಾಜ್‍ಕುಮಾರ್ ಧ್ವನಿಯಾಗಲಿದ್ದಾರೆ. ಪಕ್ಕಾ ಆಕ್ಷನ್ ಚಿತ್ರವಾಗಿದ್ದು, ಕತೆಯಲ್ಲಿ ಡ್ರಗ್ಸ್ ಮಾಫಿಯಾ, ಆಕೆಯ ಜೀವನದಲ್ಲಿ ನಡೆದ ಘಟನೆಗೆ ಸೇಡು ತೀರಿಸಿಕೊಳ್ಳುವುದು, ನಾಡು-ಮನೆಗಳನ್ನು ಉಳಿಸಲು ಏನೇನು ಮಾಡುತ್ತಾರೆ ಎಂಬುದನ್ನು ಹೇಳಲಾಗುವುದು. ಝಾನ್ಸಿ ಯಾರು ಏತಕ್ಕೆ ಇಲ್ಲಿಗೆ ಬಂದರು, ಯಾವ ಉದ್ದೇಶಕ್ಕಾಗಿ ಹೋರಾಟ ಮಾಡುತ್ತಾರೆ ಎಂಬುದು ಕ್ಲೈಮಾಕ್ಸ್‍ನಲ್ಲಿ ತಿಳಿಯಲಿದೆ. ರವಿಕಾಳೆ ಮೂರು ದಿವಸ ಭಾಗವಹಿಸಿದ್ದಾರೆ. ಬಾಲಿವುಡ್ ನಟ ಮುಖೇಶ್‍ರಿಷಿ ಮುಂದಿನ ದಿನಗಳಲ್ಲಿ ತಂಡಕ್ಕೆ ಬರಲಿದ್ದಾರೆ. ನಾಲ್ಕು ಅದ್ದೂರಿ ಫೈಟ್ ಮತ್ತು ಒಂದು ಭರ್ಜರಿ ಚೇಸಿಂಗ್ ಇರಲಿದೆ. ಇದಕ್ಕಾಗಿ ಮೇಡಂ ಮಾರ್ಷಲ್ ಆಟ್ರ್ಸ್ ತರಭೇತಿಯನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ಬಿಚ್ಚಿಟ್ಟರು.

ಇತ್ತೀಚೆಗೆ ನಾಯಕಿ ಪ್ರಧಾನ ಚಿತ್ರಗಳು ಬರುತ್ತಿರುವುದು ಖುಷಿ ತಂದಿದೆ. ಪಾತ್ರವು ಬೇರೆ ರೀತಿ,ರೂಪದಲ್ಲಿ ರೌಡಿ, ಕಾಪ್ ಅಂತ ಎಲ್ಲವು ಕೊನೆಯಲ್ಲಿ ತಿಳಿಯುತ್ತದೆ. ರಿಯಲ್ ಆಗಿ ಯಾರಿಗೂ ಹೆದರದ ನಾನು ನೇರಸ್ವಭಾವದವಳು. ಇದನ್ನು ರೀಲ್‍ನಲ್ಲಿ ಮಾಡುತ್ತಿದ್ದೇನೆ. ಚಿತ್ರರಂಗದ ಹಿನ್ನಲೆಯಿಂದ ಬಂದವಳಲ್ಲ. ಆದರೂ 12 ವರ್ಷ ಅನುಭವದಲ್ಲಿ ಯಶಸ್ಸು, ಸೋಲು, ಕಷ್ಟಗಳು ಎಲ್ಲವನ್ನು ಎದುರಿಸಲಾಗಿದೆ. ಬಾಲಿವುಡ್ ಸಿನಿಮಾಗೋಸ್ಕರ ಎರಡು ವರ್ಷ ಸೌತ್ ಇಂಡಿಯಾಗೆ ಬಂದಿರಲಿಲ್ಲ. ಹೀರೋಯಿನ್ ಚಿತ್ರದ ಮಾರ್ಕೆಟ್ ತೆರೆದುಕೊಂಡಿರುವುದರಿಂದ ಮುಂದೆ ಇಂತಹುದೆ ಸಿನಿಮಾಗಳು ಬರಬಹುದು. ಕುರುಕ್ಷೇತ್ರ, ಕೆಜಿಎಫ್ ಚಿತ್ರದಿಂದ ಕರೆ ಬಂದಿತ್ತು. ಸಗಟು ದಿನಗಳನ್ನು ಕೇಳಿದ್ದರಿಂದ ನಟಿಸಲು ಕಷ್ಟವಾಯಿತು. ಇಷ್ಟದ ದೇವರು ಗಣೇಶ. ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವುದು ಸುಕೃತ ಎನ್ನಬಹುದು ಎಂದು ಝಾನ್ಸಿ ಉರುಫ್ ಲಕ್ಷೀರೈ ಹೇಳುತ್ತಾ ಹೋದರು.

ನೃತ್ಯ ನಿರ್ದೇಶಕ ಧನ್‍ಕುಮಾರ್, ನಿರ್ಮಾಪಕ ರಾಜೇಶ್‍ಕುಮಾರ್ ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
4/09/18

ಮಹೂರ್ತ ಆಚರಿಸಿಕೊಂಡ ಝಾನ್ಸಿ
ಬಾಲಿವುಡ್, ಟಾಲಿವುಡ್, ಕಾಲಿವುಡ್‍ಗಳಲ್ಲಿ ಬ್ಯುಸಿ ಇರುವ ಕನ್ನಡತಿ ಲಕ್ಷೀರೈ ಕಲ್ಪನಾ ಚಿತ್ರದಲ್ಲಿ ಉಪೇಂದ್ರ ಅವರೊಂದಿಗೆ ಅಭಿನಯಿಸಿದ್ದರು. ಗ್ಯಾಪ್ ನಂತರ ಚಂದನವನಕ್ಕೆ ‘ಝಾನ್ಸಿ’ ಚಿತ್ರದಲ್ಲಿ ನಟಿಸುವುದರ ಮೂಲಕ ಮರಳಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹೆಸರು ಕೇಳದರೆ ಇದೊಂದು ಪೌರಾಣಿಕ ಕತೆ ಇರಬಹುದೆಂದು ಭಾವಿಸಬಹುದು. ವಿ.ಎಸ್.ಗುರುಪ್ರಸಾದ್ ನಿರ್ದೇಶನದ ಸಾರಥ್ಯದಲ್ಲಿ ಪಕ್ಕಾ ಕಮರ್ಷಿಯಲ್ ಚಿತ್ರವಾಗಿ ಮೂಡಿಬರಲಿದೆ. ಕೊಳಚೆ ಪ್ರದೇಶದಿಂದ ಹುಟ್ಟಿ ಬೆಳೆದ ನಾಂiÀಕಿ ಧೈರ್ಯ ಸಾಹಸ ಮಾಡಿದ್ದರಿಂದ ಝಾನ್ಸಿಯಾಗುತ್ತಾಳೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ತಾರಬಳಗದಲ್ಲಿ ರವಿಕಾಳೆ, ಮುಖೇಶ್‍ರಿಷಿ, ಡ್ಯಾನಿಕುಟ್ಟಪ್ಪ, ತೆಲುಗು ನಟ ಅಶೋಕ್ ಆಯ್ಕೆಯಾಗಿದ್ದಾರೆ. ಶೀರ್ಷಿಕೆ ಗೀತೆಗೆ ಹಿರಿಯ ಪತ್ರಕರ್ತ ಸ್ನೇಹಪ್ರಿಯ ನಾಗರಾಜ್ ಮತ್ತು ಪ್ರವೀಣ್ ಸಾಹಿತ್ಯಕ್ಕೆ ಎಂ.ಎನ್.ಕೃಪಾಕರ್ ಸಂಗೀತ, ವಿರೇಶ್ ಛಾಯಗ್ರಹಣ, ಥ್ರಿಲ್ಲರ್‍ಮಂಜು ಸಾಹಸವಿದೆ. ಬಾಂಬೆಯ ಉದ್ಯಮಿ ರಾಜೇಶ್‍ಕುಮಾರ್ ನಿರ್ಮಾಪಕರು. ಗುರುವಾರ ನಡೆದ ಮಹೂರ್ತ ಸಮಾರಂಭಕ್ಕೆ ಹಿರಿಯ ಐಪಿಎಸ್ ಅಧಿಕಾರಿ ನಂಜುಂಡಸ್ವಾಮಿ ಮೊದಲ ದೃಶ್ಯಕ್ಕೆ ಕ್ಲಾಪ್ ತಂಡಕ್ಕೆ ಶುಭ ಹಾರೈಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
31/08/18
ಕಮರ್ಷಿಯಲ್ ಝಾನ್ಸಿ
ಕನ್ನಡತಿ ಲಕ್ಷೀ ರೈ ಉಪೇಂದ್ರ ಜೊತೆ ಕಲ್ಪನಾ ಚಿತ್ರದಲ್ಲಿ ನಟಿಸಿದ ನಂತರ ಟಾಲಿವುಡ್, ಬಾಲಿವುಡ್‍ನಲ್ಲಿ ಬ್ಯುಸಿ ಆಗಿದ್ದರು. ಬಹು ಕಾಲ ತರುವಾಯ ಕನ್ನಡ ಸಿನಿಮಾಕ್ಕೆ ನಟಿಸಲು ಸಹಿ ಹಾಕಿದ್ದಾರೆ. ಮರ್ಯಾದೆ ರಾಮಣ್ಣ ಚಿತ್ರ ನಿರ್ದೇಶಿಸಿದ್ದ ಪಿವಿಎಸ್.ಗುರುಪ್ರಸಾದ್ ಕತೆ ಬರೆದು ಅದಕ್ಕೆ ‘ಝಾನ್ಸಿ’ ಹೆಸರಿಟ್ಟು, ಆ ಪಾತ್ರಕ್ಕೆ ಈಕೆಯೇ ಸೂಕ್ತವೆಂದು ಭಾವಿಸಿ ಒಂದು ಲೈನ್ ಸ್ಟೋರಿ ಕಳುಹಿಸಿಕೊಟ್ಟಿದ್ದಾರೆ. ಇದನ್ನು ನೋಡಿ ಆಸಕ್ತಿ ಹೊಂದಿ ಒಂದು ಸುತ್ತು ಚರ್ಚೆ ನಡೆಸಿ ಕಾಲ್‍ಶೀಟ್ ನೀಡಿದ್ದಾರೆ. ಪಾತ್ರದಲ್ಲಿ ಹೆಚ್ಚು ಆಕ್ಷನ್ ದೃಶ್ಯಗಳು ಬರುವುದರಿಂದ ಅದಕ್ಕೆ ಬೇಕಾದ ತರಭೇತಿ ಪಡೆಯಲು ಅಣಿಯಾಗುತ್ತಿದ್ದಾರೆ. ನಾಯಕ ಇದ್ದರೂ ಅವರಿಗೆ ಅವಕಾಶ ಕಡಿಮೆಯಂತೆ. ಹೆಣ್ಣು ಮಗಳು ತನಗಾದ ಅನ್ಯಾಯದ ವಿರುದ್ದ ಸೇಡು ತೀರಿಸಿಕೊಳ್ಳುವುದು, ಪ್ರಸಕ್ತ ಸಮಾಜದಲ್ಲಿ ಡ್ರಗ್ಸ್, ಲ್ಯಾಂಡ್ ಮಾಫಿಯಾ ಹೆಚ್ಚಾಗಿ ನಡೆಯುತ್ತಿದ್ದು, ಇದರ ವಿಷಯವನ್ನು ಎತ್ತಿ ಹಿಡಿಯಲಿದೆ.

ಮೊದಲ ಹಂತದಲ್ಲಿ ಬಾಲಿವುಡ್‍ನ ಮುಖೇಶ್‍ರಿಷಿ, ರವಿಕಾಳೆ ಮತ್ತು ಕನ್ನಡದ ಡ್ಯಾನಿಕುಟ್ಟಪ್ಪ ಹಾಗೂ ತೆಲುಗು ನಟ ಅಶೋಕ್ ಆಯ್ಕೆಯಾಗಿದ್ದಾರೆ. ನಿರ್ದೇಶಕರ ಬಳಿ ಆರನೆ ಬಾರಿ ಕೆಲಸ ಮಾಡುತ್ತಿರುವ ಕೃಪಾಕರ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಗ್ರಹಣ ವಿರೇಶ್.ಎನ್.ಟಿ.ಎ, ಸಂಕಲನ ಬಸವರಾಜಅರಸ್, ಸಾಹಸ ಥ್ರಿಲ್ಲರ್‍ಮಂಜು ಅವರದಾಗಿದೆ. ಬಾಂಬೆ ಮೂಲದ ರಾಜೇಶ್‍ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಆಗಸ್ಟ್ 29ರಂದು ನಡೆಯುವ ಮಹೂರ್ತ ಸಮಾರಂಭದಲ್ಲಿ ಹೆಚ್ಚಿನ ವಿವರ ನೀಡುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/07/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore