HOME
CINEMA NEWS
GALLERY
TV NEWS
REVIEWS
CONTACT US
ನೆನಪಲ್ಲುಳಿಯುವ ಜಾನಿ
ಚೌಕ ಮತ್ತು ಎರಡು ಕನಸು ಚಿತ್ರದ ನಂತರ ನಟ ವಿಜಯ್ ರಾಘವೇಂದ್ರ ನಾಯಕನಾಗಿ ಕಾಣ ಸಿಕೊಂಡಿರುವ `ಜಾನಿ' ಚಿತ್ರ ಈ ವಾರ ರಿಲೀಸಾಗಿದೆ. ಜೀವನದಲ್ಲಿ ಸದಾ ಜಾಲಿಯಾಗಿರಬೇಕೆಂದು ಬಯಸುವ ಹುಡುಗ `ಜಾನಿ' ಪಾತ್ರಕ್ಕೆ ವಿಜಯ್ ರಾಘವೇಂದ್ರ ಬಣ್ಣ ಹಚ್ಚಿದ್ದಾರೆ. `ಜಾನಿ'ಯ ಲೈಫ್ ಸ್ಟೈಲ್, ಅವನೊಂದಿಗೆ ಸದಾ ಜೊತೆಯಿರುವ ಜೋ (ನಾಯಿಯ ಹೆಸರು) ನಡುವೆ ಬರುವ ಹುಡುಗಿ ಜಾಸ್ಮಿನ್ ಸುತ್ತ ಸಾಗುವ ಕಥಾಹಂದರವೆ `ಜಾನಿ' ಚಿತ್ರದ ಒನ್‍ಲೈನ್ ಕಹಾನಿ. `ಜಾನಿ' ಚಿತ್ರದಲ್ಲಿ ಲವ್, ಆ್ಯಕ್ಷನ್, ಎಮೋಷನ್ ಸೇರಿದಂತೆ ಕಮರ್ಷಿಯಲ್ ಎಂಟರ್‍ಟೈನ್ಮೆಂಟ್ ಸಿನಿಮಾಗೆ ಬೇಕಾದ ಎಲ್ಲಾ ಎಲಿಮೆಂಟ್ಸ್‍ಗಳಿದ್ದು, ಕಂಪ್ಲೀಟ್ ಪ್ಯಾಕೇಜ್ ನೀಡಲು ಚಿತ್ರತಂಡ ಶ್ರಮಿಸಿದೆ ಎನ್ನಬಹುದು.

`ಜಾನಿ' ಚಿತ್ರದಲ್ಲಿ ನಾಯಕ ವಿಜಯ ರಾಘವೇಂದ್ರ ಅಭಿನಯ ಪರವಾಗಿಲ್ಲ, ನಾಯಕಿಯರಾಗಿ ಮಿಲನ ನಾಗರಾಜ್, ಜನನಿ ಸಿಕ್ಕ ಅವಕಾಶದಲ್ಲಿಯೇ ಉತ್ತಮ ಅಭಿನಯ ನೀಡುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ಸುಮನ್, ಮೂಗೂರು ಸುಂದರಂ, ಸುಮಿತ್ರ, ರಂಗಾಯಣ ರಘು, ಸಾ`Àುಕೋಕಿಲ, ಪವನ್(ಮಜಾ ಟಾಕೀಸ್), ಶೋಭರಾಜ್, ಡ್ಯಾನಿಯಲ್ ಕುಟ್ಟಪ್ಪ, ಮನದೀಪ್‍ರಾಯ್ ಮುಂತಾದ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಒಬ್ಬ ಛಾಯಾಗ್ರಾಹಕರಾಗಿ ಈವರೆಗೆ ಸದಭಿರುಚಿ ಚಿತ್ರಗಳಿಗೆ ಕ್ಯಾಮರಾ ಕಾರ್ಯ ನಿರ್ವಹಿಸಿದ್ದ ಪಿಕೆಹೆಚ್. ದಾಸ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್‍ದಾರೆ. ಅವರು ಒಂದು ಸರಳÀ ಕಥೆಯನ್ನು ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ `ಜಾನಿ' ಚಿತ್ರ ತಾಂತ್ರಿಕವಾಗಿಯೂ ಉತ್ತಮವಾಗಿ ಮೂಡಿಬಂದಿದೆ. ಚಿತ್ರದ ಅದ್ದೂರಿ ತಾರಾಗಣ, ಲೊಕೇಶನ್, ಮೇಕಿಂಗ್ ಹೀಗೆ ಚಿತ್ರವನ್ನು ಶ್ರೀಮಂತವಾಗಿ ತೆರೆಮೇಲೆ ತರಲು ನಿರ್ಮಾಪಕ ಎಸ್.ಪುರುಷೋತ್ತಮ್ ಜೆ.ಜಾನಕಿರಾಮ್, ಎಂ.ಅರವಿಂದ್ ಸಾಕಷ್ಟು ಖರ್ಚು ಮಾಡಿರುವುದು ಎದ್ದು ಕಾಣುತ್ತದೆ. ಚಿತ್ರದ ಮತ್ತೊಂದು ಹೈಲೈಟ್ಸ್ ಎಂದರೆ ಸಂಗೀತ. ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿದೆ. ಕುಮಾರ್ ಚಕ್ರವರ್ತಿ ತಮ್ಮ ಕ್ಯಾಮರಾದಲ್ಲಿ ಜಾನಿಯನ್ನು ಸುಂದರವಾಗಿ ಸೆರೆಹಿಡಿದಿದ್ದಾರೆ. ಇದರ ಜೊತೆ ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಹಾಗೂ ರವಿ ಸಂತೆಹಕ್ಲು ಕಲಾ ನಿರ್ದೇಶನ ಅಲ್ಲಲ್ಲಿ ಗಮನ ಸೆಳೆಯುತ್ತದೆ.
-Cine Circle News
-11/08/17

JANI TO RELEASE ON AUGUST 11
P
.K.H. Das, a well-known cinematographer in Sandalwood as well as Tollywood, is making arrangements to release his maiden Kannada film Jani on August 11 across the state. Das is making debut as a director with Jani.

Vijaya Raghavendra, Milana Nagaraj, Suman, Sadhu Kokila, Rangayana Raghu and well-known choreographer Mugur Sundaram Master have acted in this film. Jassie Gift scored music for this romantic comedy film produced by J. Janakiram and M Aravind.

“I want to thank all artistes and technicians for cooperating with me during the shooting. It has all the ingredients to make the movie buffs happy while watching this film. A dog also acted in this film. I am promising an out-and-out comedy with romance in this film,’’ said Das.

Speaking on the occasion, Rangayana Raghu said that he played the role of a police officer who supports hero to lead life with dignity. “It is a different role. I have to thank director Das for selecting me for the police inspector’s role. I happened to see Mugur Sundaram Master during the shooting. I am amazed with his enthusiasm and energy,’’ said Rangayana Raghu.

Vijaya Raghavendra has also thanked director Das for selecting him for the hero role in this film. “My role is different. I am lucky to act along with famous choreographer Mugur Sundaram Master. Rangayana Raghu sir has encouraged me a lot. He played a very good character role in this film,’’ Vijaya Raghavendra said.
-Cine Circle News
-5/08/17ಜಾನಿ ಹಾಡುಗಳ ವೈಭವ
ೆರೆಗೆ ಬರಲು ಸಿದ್ದವಾಗಿರುವ ‘ಜಾನಿ’ ಚಿತ್ರವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಹಿರಿಯ ಛಾಯಗ್ರಾಹಕ ಪಿ.ಕೆ.ಹೆಚ್.ದಾಸ್ ಪ್ರಥಮ ನಿರ್ದೇಶನದ ಸಿನಿಮಾ. ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಜಿಸ್ಸಿಗಿಫ್ಟ್ 25ನೇ ಚಿತ್ರವಾಗಿದೆ. ವಿಜಯರಾಘವೇಂದ್ರರವರಿಗೆ ಜೋಡಿಯಾಗಿ ಮಿಲನನಾಗರಾಜ್, ಜನನಿ ಮೊದಲ ಬಾರಿ ಕಾಣ ಸಿಕೊಂಡಿದ್ದಾರೆ. ಹಾಡುಗಳನ್ನು ಎ.ಆರ್.ರೆಹಮಾನ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ. ಬೆಂಗಳೂರು, ಮಂಗಳೂರು, ಮಲೇಶಿಯಾದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆಡಿಯೋ ಬಿಡುಗಡೆ ಮಾಡಿದ ಚಿತ್ರತಂಡವು ಸಿನಿಮಾದ ಕುರಿತು ಹೆಚ್ಚಿನ ಮಾಹಿತಿ ನೀಡಲಿಲ್ಲ. ಲಹರಿ ಕಂಪನಿಯು ಹಾಡುಗಳನ್ನು ಹೊರತಂದಿದ್ದು, ಅಂದು ವೇಲುರವರು ತಮಿಳುನಾಡಿನಲ್ಲಿ ಪೋಲಿಸರು ಅಶ್ಲೀಲ ಸಂಭಾಷಣೆ ಹಾಗೂ ಸಾಹಿತ್ಯಗಳಿಗೆ ಕಡಿವಾಣ ಹಾಕಬೇಕೆಂದು ಕಲಾವಿದರನ್ನು ಕೋರಿಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣ ಗೆ. ಅದೇ ರೀತಿ ನಮ್ಮಲ್ಲೂ ಆದಲ್ಲಿ 3 ದರ್ಜೆ ಡೈಲಾಗ್,ಹಾಡುಗಳು ಕಡಿಮೆಯಾಗಬಹುದು. ಜೆಸ್ಸಿಗಿಫ್ಟ್ ಉತ್ತಮ ರಾಗಗಳನ್ನು ಗಿಫ್ಟ್ ನೀಡಿದ್ದಾರೆ ಎಂದರು.

ಚಿತ್ರರಂಗಕ್ಕೆ ಹೊಸ ನಿರ್ದೇಶಕರು, ನಿರ್ಮಾಪಕರುಗಳು ಬರುತ್ತಿರುವುದು ಸಂತಸ ತಂದಿದೆ. ಜಾನಿ ಮೇಲೆ ಸಾಕಷ್ಟು ಭರವಸೆಗಳನ್ನು ಇಡಲಾಗಿದೆ. ಇವನ ಮೇಲೆ ವಿಶೇಷ ಕಳಕಳ ಇರಲಿ ಅಂತಾರೆ ನಾಯಕ ವಿಜಯರಾಘವೇಂದ್ರ, ಹಿರಿಯ ನೃತ್ಯ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ. ಪಾತ್ರವು ಚೆನ್ನಾಗಿದೆ ಎಂಬ ಮಾತು ನಾಯಕಿ ಮಿಲನನಾಗರಾಜ್ ಅವರದಾಗಿತ್ತು. ನಿರ್ದೇಶಕರು 28 ವರುಷ ಅನುಭವದಲ್ಲಿ ಆಕ್ಷನ್ ಕಟ್ ಹೇಳಿದ್ದೇನೆ. ಬೆಳಸಿ, ಹರಸಿ ಎಂದಷ್ಟೇ ಹೇಳಿದರು. ಒಂದು ಗೀತೆಗೆ ನೃತ್ಯ ನಿರ್ದೇಶನ ಮಾಡಿರುವ ಮೂಗುರುಸುಂದರ್ ತಮ್ಮ ಮಾತಿನಲ್ಲಿ ನಾನು ಹಳಬನಲ್ಲ. ಯುವಕ. ಇಂದು ಆರೋಗ್ಯ ಸರಿಇಲ್ಲದ ಕಾರಣ ಹೆಜ್ಜೆ ಹಾಕುವುದು ಕಷ್ಟ. ಸಿನಿಮಾ ಸಕ್ಸಸ್ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತೇನೆಂದು ಹೇಳುತ್ತಾರೆ. ಸಾಧುಕೋಕಿಲ, ರಂಗಾಯಣರಘು ನಟಿಸಿರುವ ಚಿತ್ರವನ್ನು ಜೆ.ಜಾನಿಕಿರಾಮ್, ಎಂ.ಅರವಿಂದ್ ನಿರ್ಮಾಪಕರಾಗಿ ಗಾಂಧಿನಗರಕ್ಕೆ ಪರಿಚಯವಾಗಿದ್ದಾರೆ.
-6/05/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore