HOME
CINEMA NEWS
GALLERY
TV NEWS
REVIEWS
CONTACT US
ಹೊಸಬರಜನತಾ ಬಜಾರ್
ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಜನತಾ ಬಜಾರ್’ ಚಿತ್ರವು ಹೆಸರೇ ಹೇಳುವಂತೆ ಶೇಕಡ 80ರಷ್ಟು ಕತೆಯು ಮಾರ್ಕೆಟ್‍ದಲ್ಲಿ ನಡೆಯುತ್ತದೆ. ವೈದವ್ಯ ಮಹಿಳೆಯು ಇಬ್ಬರುಗಂಡು ಮಕ್ಕಳೊಂದಿಗೆ ವ್ಯಾಪಾರ, ಇನ್ನಿತರ ವ್ಯವಹಾರಗಳನ್ನು ಮಾಡಿಕೊಂಡು ನೆಮ್ಮದಿಯ ಬಾಳ್ವೆ ನಡೆಸುತ್ತಿರುತ್ತಾರೆ.ಒಮ್ಮೆಅಮಾಯಕ ವ್ಯಕ್ತಿಯಿಂದತೊಂದgಗೆÉ ಸಿಲುಕುತ್ತಾರೆ. ಇದನ್ನು ಮಕ್ಕಳಾದವರು ಹೇಗೆ ಎದುರಿಸುತ್ತಾರೆ?ಅದರಿಂದಯಾವರೀತಿಯಲ್ಲಿ ಹೊರಗೆ ಬರುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ಅಂತಹ ಅವಘಡಗಳು ಏನು ಎಂಬುದನ್ನು ಸೆಸ್ಪನ್ಸ್‍ಥ್ರಿಲ್ಲರ್ ಮಾದರಿಯಲ್ಲಿತೋರಿಸಲಾಗುವುದು.ಮಂಗಳೂರು ಮೂಲದ ಆರ್.ಜೆ.ಪ್ರದೀಪ್ ಹಲವು ನಿರ್ದೇಶಕ ಬಳಿ ಅನುಭವ ಪಡೆದುಕೊಂಡು, ಚಿತ್ರಕ್ಕೆರಚನೆ, ನಿರ್ದೇಶನ ಮಾಡುತ್ತಿದ್ದಾರೆ. ಚೆನ್ನರಾಯಪಟ್ಟಣದ ಹಾಸನ, ಸಕಲೇಶಪುರ, ಶ್ರವಣಬೆಳಗೋಳ, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.

ರಾಹುಲ್‍ಅರ್ಜುನ್ ನಾಯಕ, ಅದಿತಿ ನಾಯಕಿ. ಕುಮಾರ್ ಮತ್ತು ಅಶ್ವಿತ ಮತ್ತೋಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.ಉಳಿದಂತೆ ವಿನಯ್, ರಘು, ಪ್ರಜ್ವಲ್, ಕಿರಣ್ ಮತ್ತು ಪವನ್ ನಟನೆಇದೆ.ಸುಪ್ರಿತಾಸಂತೋಷ್-ಅಂಜನ್‍ಕುಮಾರ್-ಶಿವರಾಜ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ವೈಭವ್‍ರಾಗ ಹೊಸೆಯುತ್ತಿದ್ದಾರೆ.ಚಿತ್ರಕತೆ-ಸಂಕಲನ-ಎಫೆಕ್ಟ್ಸ್ ಪವನ್‍ದೇವ್, ಸಂಭಾಷಣೆಕಿರಣ್‍ಅಣ್ಣೆಗೇರಿ, ಛಾಯಾಗ್ರಹಣರಾಜೇಶ್‍ಗೌಡ, ವಸ್ತ್ರವಿನ್ಯಾಸ ಶ್ರೀಧರ್‍ಕಲರ್-ಪ್ರವೀಣ್.ಆರ್.ಜೆಅವರದಾಗಿದೆ. ಯಲಹಂಕದ ಬಿಲ್ಡರ್ ಕೆ.ಎಂ.ಮುರಳಿ ನಿರ್ಮಾಪಕರು.ಗುರುವಾರ ವೀರಾಂಜನೇಯದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಶಾಸಕ ಎಸ್.ಆರ್.ವಿಶ್ವನಾಥ್ ಪತ್ನಿ ವಾಣಿಶ್ರೀವಿಶ್ವನಾಥ್ ಪ್ರಥಮದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು.
ಸಿನಿ ಸರ್ಕಲ್.ಇನ್ ನ್ಯೂಸ್
5/02/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore