HOME
CINEMA NEWS
GALLERY
TV NEWS
REVIEWS
CONTACT US
ಕಾಲಭೈರವನ ಜೀರ್ಣೋದ್ದಾರಕ್ಕೆ ಶ್ರಮಿಸಿದ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಆಸ್ತಿಕ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ರಾಯರ ಪರಮಭಕ್ತ. ಅವರು ಹುಟ್ಟೂರು ಜಡೆಮಾಯಸಂದ್ರದಲ್ಲಿ ಸುಮಾರು ನಾಲ್ಕು ನೂರು ವರ್ಷ ಕಾಲಭೈರವನ ದೇವಸ್ಥಾನವಿದೆ. ಇದನ್ನು ಪೂರ್ವಿಕರು ನಡೆಸಿಕೊಂಡು ಹೋಗುತಿದ್ದು, ಸದ್ಯ ದೇವಸ್ಥಾನವು ಶಿಥಿಲಗೊಂಡು ಪಾಳು ಬಿದ್ದಿದೆ. ಪ್ರತಿ ಬಾರಿ ಊರಿಗೆ ಹೋದಾಗ ಹಿರಿಯರು ವಿಷಯವನ್ನು ತಿಳಿಸಿ ಏನಾದರೂ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಅವರ ಆದೇಶದಂತೆ ದೇವಸ್ಥಾನವನ್ನು ಅಭಿವೃದ್ದಿ ಪಡಿಸಲು ಹೋದಾಗ ಏಕಾಏಕಿ ಈ ರೀತಿ ಮಾಡುವುದು ದೇವರಿಗೆ ಇಷ್ಟವಾಗುವುದಿಲ್ಲ. ತಾವು ಕಾಶಿ ಸನ್ನಿದಿಗೆ ಹೋಗಬೇಕು. ಒಂದು ದಿನ ಸ್ಮಶಾನವಾಸ ಮಾಡಬೇಕೆಂದು ನುರಿತ ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

ಅದರಂತೆ ಪುಣ್ಯ ಸ್ಥಳಕ್ಕೆ ಭೇಟಿ ನೀಡಿ ವಿಶ್ವನಾಥ ಸನ್ನಿದಿ ಮುಂದೆ ಒಂದು ಘಂಟೆ ಜಪ ಮಾಡಲಾಗಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ರಾತ್ರಿ 7ರಿಂದ ಬೆಳಿಗ್ಗೆ 4ರ ವರೆಗೂ ಸ್ನಶಾನವಾಸ ಕೈಗೊಂಡು, 12 ಶವಸಂಸ್ಕಾರದಲ್ಲಿ ಪಾಲ್ಗೋಂಡು ಸ್ಮಶಾನಸೇವೆ ನಿರ್ವಹಿಸಲಾಗಿದೆ. ಇವೆಲ್ಲವು ಆರ್‍ಎಸ್‍ಎಸ್ ಸಂಘಟಕರ ಸಹಾಯದಿಂದ ನಿರ್ವಿಘ್ನದಿಂದ ನೆರವೇರಿದೆ. ಶಿಥಿಲಗೊಂಡಿರುವ ವಿಗ್ರಹಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಂಡಿದ್ದೇವೆ. ಮೂಲ ಕಾಲಭೈರವನೊಂದಿಗೆ ದೊಡ್ಡದಾದ ವಿಗ್ರಹ ಇಡಲು ಮನಸ್ಸು ಮಾಡಿದಂತೆ, ಹೊರಗಡೆ ತಲಾಷ್ ಮಾಡುವ ಸಂದರ್ಭದಲ್ಲಿ ನಾಲ್ಕು ವರ್ಷದ ಕೆಳಗೆ ತಯಾರಾಗಿರುವ ಇದೇ ದೇವರ 800 ಕೆ.ಜಿ ವಿಗ್ರಹವನ್ನು ಮಲೇಶಿಯಾಗೆ ಸರಬರಾಜು ಮಾಡುವುದು ಅಸಾಧ್ಯವೆಂದು ತೆಗೆದುಕೊಂಡು ಹೋಗಿರುವುದಿಲ್ಲ. ಸದರಿ ದೇವಸ್ಥಾನದ ಪ್ರತಿಷ್ಟಾಪನೆಗೆ ಮೈಸೂರು ಮಹಾರಾಜರು ಆಗಮಿಸಿದ್ದು ವಿಶೇಷವಾಗಿತ್ತು. ಒಂಬತ್ತು ಮುಕ್ಕಾಲು ಅಡಿ ಎತ್ತರದ ಕಾಲಭೈರವ ದೇವರ ವಿಗ್ರವಹವನ್ನು ಮುಂದಿನ ವರ್ಷ ಪ್ರತಿಷ್ಟಾಪನೆ ಮಾಡಲು ಸಿದ್ದತೆಗಳು ನಡೆಯುತ್ತಿವೆ ಎಂದು ಜಗ್ಗೇಶ್ ತಿಳಿಸಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
10/02/19


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore