HOME
CINEMA NEWS
GALLERY
TV NEWS
REVIEWS
CONTACT US
ಜಾಗೋರೇ ಜಾಗೊ
ಹಿಂದಿ ಪದ ‘ಜಾಗೊ’ ಹೆಸರಿನ ಚಿತ್ರವೊಂದು ಕನ್ನಡ ದಿನದಂದು ಮಹೂರ್ತ ಆಚರಿಸಿಕೊಂಡಿತು. ರಾಜಕೀಯದಲ್ಲಿ ಅಧಿಕಾರಕ್ಕೆ ಬರಲು ನಾಲ್ಕು ಕಾಲುಗಳು ಇರುವ ಕುರ್ಚಿ ಮುಖ್ಯವಾಗಿರುತ್ತದೆ. ಒಂದೊAದು ಕಾಲಿಗೂ ಮಹತ್ವ ಇದೆ. ಆ ಪೈಕಿ ಒಂದು ಕಾಲು ವಿದ್ಯಾರ್ಥಿ ಎಂದು ಹೇಳುತ್ತದೆ. ಇದನ್ನೆ ಭಾಗವಾಗಿಟ್ಟುಕೊಂಡು ಸನ್ನಿವೇಶಗಳು ತೆರೆದುಕೊಳ್ಳುತ್ತವೆ. ೧೯೯೦ರ ಕಾಲಘಟ್ಟದಲ್ಲಿ ಕಾಲೇಜು ಘಟನೆಗಳು ಬರಲಿದೆ. ಅಂದು ವಿದ್ಯಾರ್ಥಿಯೊಬ್ಬ ಚುನಾವಣೆಗೆ ನಿಂತುಕೊAಡರೆ, ಮುಂದಿನ ಶಾಸಕ ಅಂತ ಬಿಂಬಿಸುತ್ತಿದ್ದರು. ಇದರೊಂದಿಗೆ ಭಾಷಾ ಸೌಮ್ಯತೆ, ಭರವಸೆಯ ವಿದ್ಯಾರ್ಥಿ ನಾಯಕ, ಯುವ ಶಕ್ತಿಯಾಗಿ ಯಾವ ರೀತಿಯಲ್ಲಿ ದೇಶದ ಅಭಿವೃದ್ದಿ ಪಥಕ್ಕೆ ಸಂದೇಶ ಕೊಡಲು ಇವರುಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಒಟ್ಟಾರೆ ಸಾರಾಂಶವಾಗಿದೆ.

ಕಿರುಚಿತ್ರಗಳಲ್ಲಿ ಬಾಲನಟನಾಗಿದ್ದ ವಿರೇನ್‌ಕೇಶವ್ ನಾಯಕ. ನಾಯಕಿ ಇನ್ನುಳಿದಂತೆ ತಾರಗಣದ ಆಯ್ಕೆ ಸದ್ಯದಲ್ಲೆ ಮುಗಿಯಲಿದೆ. ಕೃಷ್ಣರುಕ್ಮಣಿ ನಿರ್ದೇಶನ ಮಾಡಿರುವ ಸುಖೇಶ್‌ನಾಯಕ್ ಎರಡನೆ ಬಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಐದು ಹಾಡುಗಳಿಗೆ ವಾಸುಕಿವೈಭವ್ ಸಂಗೀತ, ರಚನೆ ಶಿವಪ್ರಸಾದ್ ಕೊಂಡೆಟಿ, ಸಂಭಾಷಣೆ ರಘುನಿಡುವಳ್ಳಿ, ಛಾಯಾಗ್ರಹಣ ಲಿವಿತ್, ಸಂಕಲನ ವಿಜಯ್‌ರಾಜ್ ಅವರದಾಗಿದೆ. ಕತೆಗೆ ತಕ್ಕಂತೆ ಬೆಳಗಾಂ, ಧಾರವಾಡ ಭಾಗಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಸ್ವಯಂನಿವೃತ್ತ ಐಇಎಸ್ ಅಧಿಕಾರಿ ಸೊರಬದ ಡಾ.ಶಿವಪ್ಪ ರಂಗಭೂಮಿ ಕಲಾವಿದ. ತನ್ನ ಆಸೆ ಈಡೇರಿಸಿಕೊಳ್ಳದಿದ್ದರೂ, ಮಗನನ್ನು ನಾಯಕ ಮಾಡಿ ನೆಮ್ಮದಿ ತಂದುಕೊAಡಿದ್ದಾರೆ. ಪುನೀತ್‌ರಾಜಕುಮಾರ್ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
1/11/19
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore