HOME
CINEMA NEWS
GALLERY
TV NEWS
REVIEWS
CONTACT US
ದುನಿಯಾ ವಿಜಿ ನಿರ್ಮಾಣದಲ್ಲಿ ಜಾನಿ ಜಾನಿ ಯಸ್ ಪಪ್ಪಾ
ದುನಿಯಾ ಟಾಕೀಸ್ ಬ್ಯಾನರ್‍ನಡಿ ನಿರ್ಮಾಣವಾಗುತ್ತಿರುವ ಚೂಚ್ಚಲ ಚಿತ್ರ ‘ಜಾನಿ ಜಾನಿ ಯೆಸ್ ಪಪ್ಪಾ’ ಇಲ್ಲಿಯವರೆಗೂ ಶೇಕಡ 50 ಚಿತ್ರೀಕರಣ ಮುಗಿಸಿದೆ. ನೆಲಮಂಗಲ ಬಳಿ ಇರುವ ಮೋಹನ್.ಬಿ.ಕೆರೆ ಸ್ಟುಡಿಯೋದ ಸಂರ್ಕೀಣ ಸೆಟ್‍ಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಸದ್ಯ ಹಾಡಿನ ದೃಶ್ಯಗಳನ್ನು ಸೆರೆಹಿಡಿಯುತ್ತಿರುವುದರಿಂದ ಮಾದ್ಯಮದವರನ್ನು ಆಹ್ವಾನಿಸಲಾಗಿತ್ತು. ಪತ್ರಕರ್ತರು ಸೆಟ್ ಹೋದಾಗ ಶಿವಾಜಿನಗರದ ರೆಸಲ್ ಮಾರ್ಕಟ್, ಸಿಟಿಮಾರ್ಕೆಟ್, ಮಸೀದಿ, ದೇವಸ್ಥಾನದ ಬೀದಿ ಇವೆಲ್ಲವು ರಿಯಲ್‍ನಂತೆ ಸೃಷ್ಟಿಸಿರುವುದು ಕಂಡುಬಂತು. ಕೆಲಸವು ಸಾಯಂಕಾಲ ಶುರುವಾಗಬೇಕಾಗಿರುವುದರಿಂದ ತಂಡವು ಚಿತ್ರದ ಕುರಿತು ಮಾತುಗಳನ್ನು ಹಂಚಿಕೊಂಡಿತು. ಮೊದಲು ಮಾತನಾಡಿದ ವಿಜಯ್ ಇಲ್ಲಿಯವರೆಗೂ 60 ದಿನಗಳ ಚಿತ್ರೀಕರಣ ನಡೆಸಲಾಗಿದೆ. ರೈನ್‍ಬೋ ಕಾಲೋನಿಯಲ್ಲಿ ಮೂರು ಧರ್ಮಗಳ ಬೀದಿಯನ್ನು ಸೃಷ್ಟಿಸಲಾಗಿದೆ. ಈ ಕಾಲೋನಿಗೆ ಸಣ್ಣವರಿಂದ ಹಿಡಿದು ದೊಡ್ಡವರು ಬರುತ್ತಾರೆ. ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ನಾಲ್ಕು ಆಕ್ಷನ್, ಕಾಮಿಡಿ ಇದೆ ಎಂದರು.

ವಿಜಯ್-ರಂಗಾಯಣರಘು ಜುಗಲ್‍ಬಂದಿಯ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಇಬ್ಬರು ಎಂಟು ಗೆಟ್‍ಪ್‍ಗಳಲ್ಲಿ ಕಾಣ ಸಿಕೊಳ್ಳುತ್ತಿರುವುದು ವಿಶೇಷ. ವಿಜಯ್‍ರವರು ಹೊಸ ಪದ್ಮಾವತಿ ಗೀತೆಗೆ ದೇಹವನ್ನು ದಂಡಿಸಿ ವಿಭಿನ್ನ ಲುಕ್‍ನಲ್ಲಿ ನೋಡುವುದೇ ಖುಷಿ ಕೊಡುತ್ತದೆ. ಜನವರಿಯಲ್ಲಿ ಧ್ವನಿಸಾಂದ್ರಿಕೆ ಬಿಡುಗಡೆ, ಮುಂದಿನ ದಿನಗಳಲ್ಲಿ ಪ್ರಚಾರದ ಕೆಲಸವನ್ನು ಶುರುಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಜಾನಿ ಮೇರಾ ನಾಮ್ ಮುಂದುವರಿದ ಭಾಗವಾಗಿದ್ದು, ಅಲ್ಲಿನವರೆ ಇರಲಿದ್ದು ಹೊಸದಾಗಿ ರಚಿತಾರಾಮ್, ಬಾಲಕ ಹೇಮಂತ್ ಸೇರ್ಪಡೆಯಾಗಿದ್ದಾರೆ, ಅಚ್ಯುತಕುಮಾರ್ ನಾಯಕಿ ತಂದೆ ಪಾತ್ರ ಎಂಬುದರ ಮಾಹಿತಿ ಬಿಚ್ಚಿಟ್ಟರು ನಿರ್ದೇಶಕ ಪ್ರೀತಂಗುಬ್ಬಿ. ಈ ಸ್ಟುಡಿಯೋ ಸ್ಥಾಪಿಸಲು ಜಾನಿ ಮೇರಾ ಸಿನಿಮಾ ಪ್ರೇರಣೆಯಾಗಿದೆ. ಪ್ರಾರಂಬದಲ್ಲಿ ಸ್ಕೆಚ್ ಹಾಕಿ ತೋರಿಸಿದಾಗ ವಿಜಯ್‍ರವರು ಇದನ್ನು ಮಾಡಲು ಸಾದ್ಯನಾ ಅಂತ ಕೇಳಿದ್ದರು. ನಂತರ ಎಲ್ಲವನ್ನು ನೋಡಿ ಖುಷಿ ಪಟ್ಟಿದ್ದಾರೆ. 70 ದಿನ, 150 ಕೆಲಸಗಾರರು, ಒಂದೂ ಮುಕ್ಕಾಲು ಕೋಟಿ ಖರ್ಚಾಗಿರುವುದಾಗಿ ವಿವರ ನೀಡಿದರು ಮೋಹನ್.ಬಿ.ಕೆರೆ.

ಕಿರಿಕ್‍ಪಾರ್ಟಿಗೆ ಸಾಹಿತ್ಯ ಒದಗಿಸಿದ್ದ ಧನಂಜಯ್‍ರಂಜನ್ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ನೋಡುಗನಿಗೆ ಸಿನಿಮಾ-ಸಂಗೀತ ಮುದ ನೀಡುತ್ತದೆ. ಎರಡು ಹಾಡುಗಳಿಗೆ ವಿಜಯ್‍ಪ್ರಕಾಶ್ ಧ್ವನಿಯಾಗಿದ್ದಾರೆ ಎಂಬ ನುಡಿ ಸಂಗೀತ ನಿರ್ದೇಶಕ ಅಜನೀಶ್‍ಲೋಕನಾಥ್ ಅವರದಾಗಿತ್ತು. ಸರ್ಕಾರ, ವಿದ್ಯ, ಯೌವ್ವನ ಇವೆಲ್ಲಾ ಸಮಸ್ಯೆಗಳು ಕಾಲೋನಿಗೆ ಬಂದಾಗ ಅವೆಲ್ಲಾವನ್ನು ಪ್ರಹಸನ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ರಂಗಭೂಮಿಯಂತೆ ತಾಲೀಮು ನಡೆಸಲು ಅವಕಾಶ ಇದೆ. ಎಲ್ಲವು ಒಳಗಡೆ, ಅಲ್ಲದೆ ಜನರ ತೊಂದರೆ ಇಲ್ಲದೆ ಇರುವುದರಿಂದ ಸುಗಮವಾಗಿ ಅಭಿನಯಿಸಬಹುದು ಅಂತಾರೆ ರಂಗಾಯಣರಘು. ನನ್ನದು ಕನ್ನಡ-ಇಂಗ್ಲೀಷ್ ಮಿಶ್ರಣ ಮಾಡಿ ಮಾತನಾಡಿದ್ದೇನೆ. ಬಯಕೆಗಳನ್ನು ಹೊಂದಿರುವ ವೆಸ್ಟ್ರನ್ ಹುಡುಗಿ, ನನ್ನ ಗ್ಲಾಮರ್‍ನ್ನು ಸುಂದರವಾಗಿ ತೋರಿಸಲಾಗಿದೆ. ನಟಿಸುವಾಗ ನಗು ತಡೆಯಲಾರದೆ ಕಷ್ಟವಾಗುತ್ತಿತ್ತು. ಆ ಜಾಗದಲ್ಲಿ ನಮ್ಮದೆ ಡೈಲಾಗ್ ಹೇಳಿದ್ದೇವೆ. ಹೊಸ ಪದ್ಮಾವತಿ ಇಷ್ಟದ ಹಾಡು. ಆಡಿಯೋ ರಿಲೀಸ್‍ಗೆ ಕಾಯುತ್ತಿದ್ದೇನೆ. ಟೈಟಲ್ ಕ್ಯಾಚಿಯಾಗಿದೆ ಅಂತ ಕಿರುನಗೆ ಚೆಲ್ಲಿದರು ರಚಿತಾರಾಮ್.
-6/12/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore