HOME
CINEMA NEWS
GALLERY
TV NEWS
REVIEWS
CONTACT US
ಸ್ವೀಟ್ ಜಿಲೇಬಿಗೆ ಡಿಮ್ಯಾಂಡ್!
ಜಿಲೇಬಿ... ಇದೊಂದು ಸಸ್ಪೆನ್ಸ್, ಹಾರರ್ ಅಂಶ ಒಳಗೊಂಡಿರುವ ಯೂತ್ಸ್ ಸಿನಿಮಾ. ಇಲ್ಲಿ ಎಷ್ಟು ಮಜವೆನಿಸುವ ದೃಶ್ಯಗಳಿವೆಯೋ, ಒಂದಷ್ಟು ಸೆಂಟಿಮೆಂಟ್ ಅಂಶಗಳೂ ಇವೆ. ನಿರ್ದೇಶಕ ಲಕ್ಕಿ ಶಂಕರ್ ಈ ಚಿತ್ರದಲ್ಲಿ ಕಥೆಗಿಂತ, ಘಟನೆಯನ್ನು ಇಟ್ಟುಕೊಂಡು ಹೊಸ ನಿರೂಪಣೆ ಮೂಲಕ ಪ್ರೇಕ್ಷಕರನ್ನು ಗಮನಸೆಳೆದಿದ್ದಾರೆ. ಪೂಜಾಗಾಂಧಿ ಅವರ ಸುತ್ತವೇ ಸುತ್ತುವ ಈ ಕಥೆಯಲ್ಲಿ ನಾಲ್ಕೈದು ಪಾತ್ರಗಳು ಸೇರಿಕೊಂಡು ಒಂದು ಅದ್ಭುತ ಎನಿಸುವಂತಹ ಥ್ರಿಲ್ ಆಗುವಂತಹ ದೃಶ್ಯಗಳನ್ನು ಕಟ್ಟಿಕೊಡುತ್ತ ಹೋಗುತ್ತವೆ. ಇಲ್ಲಿ ಹೊಸದೊಂದು ಪ್ರಯೋಗವಿದೆ. ಅದನ್ನಿಲ್ಲಿ ಕ್ಯಾಮೆರಾ ಕೆಲಸ ಅರ್ಥ ಮಾಡಿಸುತ್ತಾ ಹೋಗುತ್ತದೆ. ಒಂದು ಮನೆಯಲ್ಲಿ ಮೂವರು ಯುವಕರು ವಾಸ ಮಾಡುತ್ತಿರುತ್ತಾರೆ. ಅವರೆಲ್ಲರೂ ಒಂದು ಹೋಟೇಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದು, ಆ ಹೋಟೇಲ್ ಮಾಲೀಕ, ಅವರಿಗೆ ದುಬೈನಲ್ಲೊಂದು ಹೊಸ ಹೋಟೇಲ್ ರೆಡಿ ಮಾಡಿ, ಅಲ್ಲಿಗೆ ಕಳುಹಿಸುವ ಉz್ದÉೀಶ ಇಟ್ಟುಕೊಂಡಿರುತ್ತಾನೆ. ಇನ್ನೇನು ದುಬೈಗೆ ಹಾರಬೇಕು ಅಂದುಕೊಂಡಿರುವ ಹುಡುಗರಲ್ಲಿ ಏನೋ ಒಂದು ಆಸೆ ಚಿಗುರೊಡೆಯುತ್ತೆ. ಮೂವರಲ್ಲೂ ಹುಡುಗಿಯ ಜತೆ ಕಾಲ ಕಳೆಯಬೇಕು ಎಂಬ ಮನಸ್ಸಾಗುತ್ತದೆ. ಅಲ್ಲಿಂದ ಅವರ ಜರ್ನಿ ಶುರುವಾಗುತ್ತದೆ. ಹುಡುಗಿಯೊಬ್ಬಳನ್ನು ಮನೆಗೆ ಕರೆತಂದು ಎಂಜಾಯ್ ಮಾಡಬೇಕು. ಆ ಬಳಿಕ ದುಬೈಗೆ ಹಾರಬೇಕು ಎಂಬ ಉz್ದÉೀಶ ಅವರದ್ದಾಗಿರುತ್ತದೆ. ಇನ್ನೇನು ಕೆಲ ಹುಡುಗಿಯರನ್ನೆಲ್ಲಾ ನೋಡಿ ಬರುತ್ತಾರೆ. ಯಾರೂ ಸರಿಹೊಂದುವುದಿಲ್ಲ. ಕೊನೆಗೆ ತಬಲಾನಾಣಿ ಎಂಬ `ಮಾಮ' ನ ಬಳಿ ಕೆಲ ಸಲಹೆಗಳನ್ನು ಪಡೆದು, ಒಬ್ಬಳನ್ನು ಭೇಟಿ ಮಾಡೋಕೆ ಹೋಗುತ್ತಾರೆ. ಅವಳ ಹೆಸರು ಜಿಲೇಬಿ. ಅದೇ ಪೂಜಾಗಾಂಧಿ. ಜಿಲೇಬಿ ಒಬ್ಬ ವೇಶ್ಯೆ. ಅವಳನ್ನು ಮಾತನಾಡಿಸಿ, ತಮ್ಮ ಮನೆಗೆ ಕರೆತರುವ ಆ ತರುಣರು, ಮುಂದೆ ಅವಳ ಜತೆ ಎಂಜಾಯ್ ಮಾಡುತ್ತಾರೋ, ಇಲ್ಲವೋ ಎಂಬುದೇ ಒನ್‍ಲೈನ್ ಸ್ಟೋರಿ.

ಕಥೆಯಲ್ಲಿ ನಿರ್ದೇಶಕರು ಒಂದು ಟ್ವಿಸ್ಟ್ ಕೊಟ್ಟಿದ್ದಾರೆ. ಅದನ್ನು ತೆರೆಯ ಮೇಲೆಯೇ ನೋಡಬೇಕು. ಯಾಕೆಂದರೆ, ಇಲ್ಲಿ ಜಿಲೇಬಿಯನ್ನು ತಮ್ಮ ಮನೆಗೆ ಕರೆದುಕೊಂಡು ಬರುವ ಆ ಬ್ಯಾಚ್ಯುಲರ್ಸ್, ಅವಳ ಜತೆ ಎಂಜಾಯ್ ಮಾಡುತ್ತಾರೋ ಇಲ್ಲವೋ ಎಂಬುದೇ ಸಸ್ಪೆನ್ಸ್. ಯಾಕೆಂದರೆ, ಅಲ್ಲೊಂದು ಕೊಲೆ ನಡೆದು ಹೋಗುತ್ತದೆ. ಅದು ಜಿಲೆಬಿಯz್ದÉೀ. ರಾತ್ರಿ ಎಲ್ಲರೂ ಪಾರ್ಟಿ ಮಾಡಿ, ಎಚ್ಚರವಿಲ್ಲದೆಯೇ ಮಲಗಿರುತ್ತಾರೆ. ಆದರೆ, ಬೆಳಗ್ಗೆ ಎದ್ದು ನೋಡಿದರೆ ಜಿಲೇಬಿ ಕೊಲೆಯಾಗಿ ಬಿದ್ದಿರುತ್ತಾಳೆ. ಆ ಕೊಲೆ ಯಾರು ಮಾಡಿದ್ದು, ಹೇಗೆ ನಡೆದಿದ್ದು ಎಂಬುದೇ ಸಸ್ಪೆನ್ಸ್. ಆ ವಿಷಯವನ್ನು ನಿರ್ದೇಶಕ ಲಕ್ಕಿಶಂಕರ್ ಇಲ್ಲಿ ತುಂಬಾ ಚೆನ್ನಾಗಿಯೇ ನಿರೂಪಿಸುತ್ತಾ ಹೋಗಿದ್ದಾರೆ.

ಇನ್ನು ಚಿತ್ರದಲ್ಲಿ ಹಾಡುಗಳು ಇಷ್ಟವಾಗುತ್ತವೆ. ನಿರ್ದೇಶಕರು ಇಲ್ಲಿ ಕಥೆಯನ್ನು ಸಂಕ್ಷಿಪ್ತವಾಗಿ ಹೇಳದೇ ಇದ್ದರೂ, ಕೆಲ ಘಟನೆಗಳನ್ನು ಇಟ್ಟುಕೊಂಡೇ ಒಂದಷ್ಟು ಆಟವಾಡಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ಇಡೀ ಸಿನಿಮಾ ನಡೆಯೋದೇ ಒಂದು ಮನೆಯಲ್ಲಿ. ಒಂದು ರೂಮ್ ಮತ್ತು ಇನ್ನೊಂದು ಹಾಲ್. ಇದರಲ್ಲೇ ಕಥೆ ಸಾಗುತ್ತದೆಯಾದರೂ, ಎಲ್ಲೂ ಕೂಡ ಬೋರ್ ಹೊಡೆಸುವುದಿಲ್ಲ. ಅಷ್ಟರಮಟ್ಟಗೆ. ಥ್ರಿಲ್ಲರ್ ಅಂಶ ಇಟ್ಟು, ಜತೆಗೆ ಹಾರರ್ ಅಂಶವನ್ನೂ ಸೇರಿಸಿಕೊಂಡು ನೋಡುಗರನ್ನು ಬೆಚ್ಚಿಬೀಳಿಸುವ ಪ್ರಯತ್ನ ಮಾಡಲಾಗಿದೆ.

ಎಂ.ಆರ್.ಸೀನು ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಇನ್ನು, ಚಿತ್ರದಲ್ಲಿ ನಟಿಸಿರುವ ಪೂಜಾಗಾಂಧಿ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ಹಾಡಲ್ಲಿ ಉತ್ತಮವಾಗಿಯೇ ಕುಣಿದಿದ್ದಾರೆ. ಯಶಸ್ ಸೂರ್ಯ, ನಾಗೇಂದ್ರ ಹಾಗೂ ವಿಜಯ್ ಚೆಂಡೂರ್ ಅವರಿಗೆ ಇದು ಹೊಸ ಬಗೆಯ ಸಿನಿಮಾ ಆಗಿ ಹೊರಹೊಮ್ಮಲಿದೆ. ಮೂವರು ಹೀರೋಗಳು ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಚಿತ್ರದಲ್ಲಿ ಮಿತ್ರ, ಶೋಭರಾಜ್, ದತ್ತಣ್ಣ ಹಾಗೂ ಇತರೆ ಕಲಾವಿದರು ಗುರುತಿಸಿಕೊಳ್ಳುತ್ತಾರೆ. ಒಟ್ಟಾರೆ, `ಜಿಲೇಬಿ' ಈಗಿನ ಯೂತ್ಸ್‍ಗೆ ತಕ್ಕಂತೆ ಇರುವಂತಹ ಸಿನಿಮಾ. ಎರಡು ಗಂಟೆಗಳ ಕಾಲ ಯಾವುದೇ ಬೋರ್ ಹೊಡೆಸದೆ, ಒಂದು ಅಪ್ಪಟ ಮನರಂನಾತ್ಮಕ ಚಿತ್ರ ಇದಾಗಿದೆ.

-4/03/17

JILEBI’ AUDIO RELEASED, DUE ON FEB 24
K
annada film ‘Jilebi’ starring Pooja Gandhi in the title role will release in about 200 theatres all over Karnataka on the festival day of Mahashivaratri on Feb.24. The film is produced and directed by Lucky Shankar. The film also stars Vijay Chendur, Nagendra and Yashas Surya. James Architect has scored the music. Thippeswamy, a visually impaired has penned the lyrics for a song in the movie.

Director Lucky Shankar told reporters that people have liked the film’s publicity posters as they have pasted all over the state. He said Jilebi is a colourful film and has no story. The film revolves around an incident and there are three bachelors who are caught eyeing a call girl played by Pooja Gandhi. Shankar said fun elements have been created in the movie which is sweet and hot. He said all the team members were responsible in the making of the film. He said music is a highpoint with four songs in it.  

The film has got an ‘A’ certificate from the censors without any cuts as the board members said it is an adultery film. However, he said the film is a family entertainer.  

Music composer James Architect said he was an architect who left his profession to pursue music. He said the director had drawn the best from him in the commercial format in terms of background music and the tunes.  

Vijay Chendur said the situations are comical for the audiences and added that the characters don’t laugh but make people laugh. He said he found it difficult to dance but the film has been picturised differently.  

Nagendra said he plays Guruprasad and is in competition with his two friends  to win Jilebi. Who wins her is the story. He said the film has got an A certificate because of the concept but it can be watched by families.  

Cameraman Seenu said background music in the movie is good. Yashas Surya said the film will be hot and sweet as the title suggests.  

Shyam of Anand Audio was also present and wished the team good luck.  
-15/02/17

JILEBI’ COMPLETES SHOOT, GETS ‘A’ CERTIFICATE
K
annada film ‘Jilebi’ starring Pooja Gandhi in the title role has completed its shoot and has also got an ‘A’ certificate from the censors without any cuts. The film is written, produced and directed by Lucky Shankar with Shiva Kabbina being one of the other producer of the movie. The film also stars Yashas Surya, Vijay Chandur, Nagendra and Rockline Sudhakar among others. M R Seenu is the cameraman. James has scored the music.

Director Shankar told reporters that the film is an adult comedy without any vulgarity or sleaziness. He said just as the title suggests the film is colourful and sweet without any message whatsoever. He said the film is a total entertainer with no story. However, he said the film’s story will start towards the end making it an incident-based and a screenplay oriented film from start to finish. He said the film has enough story material for two more sequels which will be made after the release of the first one. He said the second part will be shot in Dubai and the third part will be shot in England.

The director said the film centres around three bachelors and the girl and the story happens in about 48 hours. He said the film is aptly titled as it is hot and sweet, colourful and tasty. The film is based on real incidents with three songs in it. The film has no flashbacks or no reverse screenplay as the director described the movie as a straight narrative subject.

Yashas said he plays a bar manager in the film. Vijay Chandur said he plays a character who is a day dreamer while Nagendra said he plays a comic role in an acting oriented film. Rockline Sudhakar said he cannot reveal details of his role as he says it would give the story away.

Music composer James said the music is of Bollywood style with Punjabi and bhangra music.

Pooja Gandhi said Jilebi is a light-hearted comedy which is lively, vibrant, colourful and she herself plays a bold girl in the movie. She said her character is simple, straight forward, blunt and intelligent with not many dialogues to mouth. She said dialogues are natural and common and added that it was difficult to get the timing right while working in a comedy.
-18/01/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore