HOME
CINEMA NEWS
GALLERY
TV NEWS
REVIEWS
CONTACT US
ಜರ್ಕ್ ಹಾಡುಗಳ ಸಮಯ
ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಬಿಡುವು ಮಾಡಿಕೊಂಡು ‘ಜರ್ಕ್’ ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಮಹಾಂತೇಶ್‍ಮದಕರಿ. ಇವರ ಕುರಿತು ಹೇಳುವುದಾದರೆ 2500 ಕವಿತೆಗಳನ್ನು ಬರೆದಿರುವ ಇವರಿಗೆ ಗೆಳಯರು ನಿರ್ದೇಶಕನಾಗಬೇಕೆಂದು ಹುಮ್ಮಸ್ಸು ತಂದರು. ಗುರುಗಳಾದ ಜಯತೀರ್ಥ ಅವರಿಂದ ಚಿತ್ರರಂಗದ ವಿಭಾಗಗಳನ್ನು ಕಲಿತುಕೊಂಡಿದ್ದಾರೆ. ಇದಕ್ಕೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಪ್ರೋತ್ಸಾಹ ನೀಡಿದರು. ಸಿನಿಮಾದಲ್ಲಿ ಒಟ್ಟು 62 ದೃಶ್ಯಗಳು ಇರಲಿದ್ದು, ಪ್ರತಿಯೊಂದಕ್ಕೂ ಸಂದೇಶವಿರುತ್ತದೆ. ಬೆಲ್ಲಿ ನೃತ್ಯವನ್ನು ಐಟಂ ಸಾಂಗ್‍ನಲ್ಲಿ ತ್ರಿಭುವನ್ ಮಾಸ್ಟರ್ ಚೆನ್ನಾಗಿ ಸಂಯೋಜಿಸಿ ಡ್ಯಾನ್ಸರ್ ಕಿರಣ್‍ಸಿಂಗ್ ಜೊತೆ ಹೆಜ್ಜೆ ಹಾಕಿಸಿದ್ದಾರೆ. ಊರಿನಲ್ಲಿರುವ ಜನರಿಗೆ ಪಟ್ಟಣ ಸಳೆಯುತ್ತದೆ. ಇಲ್ಲಿಗೆ ಬಂದಾಗ ಏನೇನು ಆಗುತ್ತದೆ. ಮೊದಲರ್ದ ಮಾಮೂಲು, ಮುಂದೆ ಸೆಸ್ಪನ್ಸ್ ಆಗಿ ಕುತೂಹಲ ಹುಟ್ಟಿಸುತ್ತದೆ.

ಐಎಎಸ್ ಓದಲು ಸಿಟಿಗೆ ಬರುವ ಬೀದರ್ ಮೂಲದ ಕೃಷ್ಣರಾಜ್ ಮತ್ತು ಶ್ರೀಮಂತ ಹುಡುಗನಾಗಿ ಸಚ್ಚಿನ್‍ಸಿದ್ದು ನಾಯಕರುಗಳು. ಸಮಾಜದ ಮೇಲೆ ಆಸಕ್ತಿ ಇರುವ ನಿತ್ಯಾರಾಜ್ ಹಾಗೂ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಶಿಕ್ಷಕಿಯಾಗಿ ಆಶಾಭಂಡಾರಿ ನಾಯಕಿಯರು. ಮೊದಲಬಾರಿ ದ್ವಿಪಾತ್ರದಲ್ಲಿ ಅಭಿನಯಿಸಿರುವ ಗಡ್ಡಪ್ಪ, ಗೆಳೆಯನಾಗಿ ಪವನ್‍ಕುಮಾರ್, ಪೇದೆಯಾಗಿ ಕುರಿರಂಗ ನಟನೆ ಇದೆ. ನೆಲೆಮನೆರಾಘವೇಂದ್ರ-ಪಾಲ್ಸ್‍ನಾಗ ಸಾಹಿತ್ಯದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಎಡ್ವರ್ಡ್‍ಷಾ ಅವರಿಗೆ ಹೊಸ ಅನುಭವ. ರವಿ.ಕೆ ಮತ್ತು ನಾಗರತ್ನಕಂಬಳಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಲಹರಿವೇಲು, ಹಿರಿಯ ಸಾಹಿತಿ ಪ್ರೊ,ದೊಡ್ಡರಂಗೇಗೌಡ, ಮೆಟ್ರೋ ಅಧಿಕಾರಿಗಳು ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿ ಶುಭಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
17/02/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore