HOME
CINEMA NEWS
GALLERY
TV NEWS
REVIEWS
CONTACT US
ಪವರ್ ಸ್ಟಾರ್ ವರ್ಧಂತಿಗೆಎರಡು ಪೋಸ್ಟರ್ ಬಿಡುಗಡೆ
ಕರೋನ ಭೀತಿಯಿಂದ ಈ ಬಾರಿ ಪುನೀತ್‍ರಾಜ್‍ಕುಮಾರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಆದರೆ ಅಭಿಮಾನಿಗಳಿಗೆ ನಿರಾಸೆ ಮಾಡದೆ ‘ಯುವರತ್ನ’ ಮತ್ತು ‘ಜೇಮ್ಸ್’ ಚಿತ್ರದ ಪೋಸ್ಟರ್‍ನ್ನು ಬಿಡುಗಡೆ ಮಾಡಿ ಖುಷಿ ಪಡಿಸಿದ್ದಾರೆ. ‘ಖದರ್‍ಇಲ್ದಿರೋಕಡೆ ನಮ್ ಹುಡುಗ್ರೇಇರಲ್ಲ, ಇನ್ ನಾವ್‍ಇರ್ತೀವಾ? ಎನ್ನುವ ಮಾಸ್‍ಡೈಲಾಗ್‘ಯುವರತ್ನ’ ಸಿನಿಮಾದ್ದು, ಸಂತೋಷ್‍ಆನಂದ್‍ರಾಮ್ ನಿರ್ದೇಶನ, ವಿಜಯ್‍ಕಿರಗಂದೂರು ನಿರ್ಮಾಣದ ಸಿನಿಮಾವುಡಾ.ರಾಜ್‍ಕುಮಾರ್ ಹಬ್ಬದಂದುತೆರೆಕಾಣುವ ಸಾದ್ಯತೆಇದೆ. ದಿ ಪವರ್‍ಆಫ್‍ಯೂತ್‍ಅಡಿಬರಹವಿದ್ದು, ಗ್ಯಾಪ್ ನಂತರ ಪುನೀತ್‍ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಗೀತಎಸ್.ತಮನ್, ಸಾಹಸ ರಾಮ್-ಲಕ್ಷಣ್‍ಅವರದಾಗಿದೆ.

‘ಕಷ್ಟಬಂದಾಗ ಹೆದುರ್ಕೋಳೊರು ಕಾಮನ್, ಎಲ್ಲಾನೂ ಎದುರಿಸಿ ಮುಂದೆ ನಿಲ್ಲೋನು ನಂಬರ್-1 ಅದುಜೇಮ್ಸ್’ಎನ್ನುವ ಸಂಭಾಷಣೆಕಿಕ್ ನೀಡಿದೆ. ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡುತ್ತಿದ್ದು, ಚೇತನ್‍ಕುಮಾರ್ ನಿರ್ದೇಶನದಲ್ಲಿ, ಒಂದು ಹಂತದಚಿತ್ರೀಕರಣ ಮುಗಿದಿದೆ. ಚರಣ್‍ರಾಜ್ ಸಂಗೀತ, ಶ್ರೀಶಕೂದುವಳ್ಳಿ ಛಾಯಾಗ್ರಹಣ, ಡಾ.ಕೆ.ರವಿವರ್ಮ ಸಾಹಸ, ದೀಪು.ಎಸ್.ಕುಮಾರ್ ಸಂಕಲನ, ಎ.ಹರ್ಷ ಹಾಡಿಗೆ ಹೆಜ್ಜೆ ಹಾಕಿಸುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
21/03/20
ಪುನೀತ್‍ರಾಜ್‍ಕುಮಾರ್ ಹೊಸ ಚಿತ್ರಜೇಮ್ಸ್
ಪುನೀತ್‍ರಾಜ್‍ಕುಮಾರ್ ಅಭಿಮಾನಿಗಳ ಪಾಲಿಗೆ ‘ಜೇಮ್ಸ್’ ಆಗಲಿದ್ದಾರೆ.ಅಂದರೆಇದೇ ಹೆಸರಿನಚಿತ್ರದಲ್ಲಿ ನಟಿಸುತ್ತಿದ್ದಾರೆ.ದಿ ಟ್ರೇಡ್ ಮಾರ್ಕ್‍ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಚೇತನ್‍ಕುಮಾರ್ ಫ್ಯಾನ್ಸ್‍ಇಷ್ಟಪಡುವಂತೆಕತೆಯನ್ನು ಸಿದ್ದಪಡಿಸಿಕೊಂಡು ನಿರ್ದೇಶನ ಮಾಡುತ್ತಿದ್ದಾರೆ.ಆಕ್ಷನ್‍ಕಟ್ ಹೇಳುತ್ತಿದ್ದಾರೆ.ಪುನೀತ್‍ಅವರುಜೇಮ್ಸ್‍ಬಾಂಡ್, ಜೇಮ್ಸ್ ಟಿ ಶರ್ಟ್ ಹಾಕಿಕೊಂಡಿರುವ ಪೋಸ್ಟರ್‍ಗಳು ಇರಲಿದ್ದು, ಇದಕ್ಕೆ ವಿವರಣೆ ಕೇಳಲಾಯಿತು.ಕತೆಯಒಂದು ಏಳೆಯನ್ನು ಬಿಟ್ಟುಕೊಡದತಂಡವುಎಲ್ಲವನ್ನುಚಿತ್ರಮಂದಿರದಲ್ಲಿ ನೋಡಿದರೆಚೆಂದವೆಂದು ಜಾರಿಕೊಳ್ಳುತ್ತಾರೆ.ನಾಯಕಿ ಉಳಿದಂತೆ ಕಲಾವಿದರಆಯ್ಕೆ ಪ್ರಕ್ರಿಯೆಶುರುವಾಗಿದೆ.

ಅವನೇ ಶ್ರೀಮನ್‍ನಾರಾಯಣ ಖ್ಯಾತಿಯಖ್ಯಾತಿಯಚರಣ್‍ರಾಜ್ ಸಂಗೀತ, ಛಾಯಾಗ್ರಹಣ ಶ್ರೀಶಕೂದುವಳ್ಳಿ, ಸಾಹಸ ರವಿವರ್ಮ, ಸಂಕಲನ ದೀಪು.ಎಸ್.ಕುಮಾರ್, ಕಲೆ ರವಿಸಂತೇಹಕ್ಳು, ನೃತ್ಯ ಎ.ಹರ್ಷಅವರದಾಗಿದೆ. ‘ಸಂತೆಯಲ್ಲಿ ನಿಂತಕಬೀರ’ ನಿರ್ಮಾಣ ಮಾಡಿರುವ ಹೊಸಪೇಟೆಯಕಿಶೋರ್‍ಪತ್ತಿಕೊಂಡ ಬಂಡವಾಳ ಹೂಡುತ್ತಿದ್ದಾರೆ. ‘ಅಪ್ಪಅಮ್ಮ ಹೆಸರುಇಟ್ಟರೆ ವಾಡಿಕೆ, ನಮಗೇ ನಾವೇ ಇಟ್ಟುಕೊಂಡರೆ ಬೇಡಿಕೆ’ ಎಂದು ಹೇಳುವÀ ದೃಶ್ಯಕ್ಕೆ ಪತ್ನಿ ಅಶ್ವಿನಿಪುನೀತ್‍ರಾಜ್‍ಕುಮಾರ್‍ಕ್ಲಾಪ್ ಮಾಡಿದರು. ಇದೇ ಸಂದರ್ಭದಲ್ಲಿ ನಿರ್ಮಾಪಕರಕುಟುಂಬವರ್ಗ, ಸಿನಿಪಂಡಿತರು ಹಾಜರಿದ್ದರು.ಅಪ್ಪು ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್, ಡಿಸೆಂಬರ್‍ಗೆಚಿತ್ರತೋರಿಸುವುದಾಗಿ ನಿರ್ದೇಶಕರುಯೋಜನೆ ಹಾಕಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
19/01/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore