HOME
CINEMA NEWS
GALLERY
TV NEWS
REVIEWS
CONTACT US
ಚಂದನವನದ ಇಷ್ಕ್
ಬಾಲಿವುಡ್, ಟಾಲಿವುಡ್‍ನಲ್ಲಿ ‘ಇಷ್ಕ್’ ಚಿತ್ರವು ತೆರೆಕಂಡಿತ್ತು. ಈಗ ಸ್ಯಾಂಡಲ್‍ವುಡ್‍ನಲ್ಲಿ ಇದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ನನ್ನ ಹೆಸರು ರಾಹುಲ್. ಇವಳು ರಮ್ಯ. ನಾವು ಲವ್ ಮಾಡುವುದನ್ನು ಡೈರಿಯಲ್ಲಿ ಬರಿತಾ ಇದ್ದೇವೆ. ಪೂರ್ಣ ಬರೆದ ನಂತರ ನಿಮಗೆ ತೋರಿಸಲಾಗುವುದು. ನೋಡಲು ನೀವು ಸಿದ್ದರಾಗಿರಿ ಎಂದು ನಾಯಕ ಅರ್ಜುನ್‍ಯೋಗಿ ಕ್ಯಾಮಾರಕ್ಕೆ ಕೈ ತೋರಿಸುವ ದೃಶ್ಯಕ್ಕೆ ದರ್ಶನ್ ಕ್ಲಾಪ್ ಮಾಡಿ ಶುಭ ಹಾರೈಸಿ ನಿರ್ಗಮಿಸಿದರು. ತರುವಾಯ ತಂಡವು ಮಾದ್ಯಮದ ಬಳಿ ಹಾಜರಾಯಿತು. ಮಾತು ಶುರು ಮಾಡಿದ ನಿರ್ದೇಶಕ ನವೀನ್.ಆರ್.ಮಂಡ್ಯಾ ಈ ಮುಂಚೆ ಸಂಕಲನ ವಿಭಾಗದಲ್ಲಿ ಕೆಲಸ, ಎರಡು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಲಾಗಿದೆ. ಇದರ ಅನುಭವದಿಂದ ಕತೆ,ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಲಾಗುತ್ತಿದೆ. ನವಿರಾದ ಪ್ರೇಮಕತೆಯಲ್ಲಿ ಕಮರ್ಷಿಯಲ್ ಅಂಶಗಳು, ಕುಟಂಬ, ಗೆಳತನ ಇರುತ್ತದೆ. ನೋಡಿಗನಿಗೆ ರಿಯಾಲಿಟಿ ಕಂಡಂತೆ ಭಾವನೆಗಳು ತುಂಬಿರುತ್ತದೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರು, ಹಾಡಿಗೆ ತಾಜಮಹಲ್‍ಗೆ ಹೋಗುವ ಇರಾದೆ ಇದೆ. ತೂಕ ಇರುವ ಮಹತ್ವದ ಪಾತ್ರಕ್ಕೆ ರವಿಶಂಕರ್ ನಟಿಸಲಿದ್ದು, ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಅಕ್ಟೋಬರ್‍ಗೆ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ ಎಂದರು.

ಏನೆಂದು ಹೆಸರಿಡಲಿ, ಅತೃಪ್ತ ಚಿತ್ರಗಳ ನಂತರ ಉತ್ತಮವಾದ ಚಿತ್ರ ಕೊಡಬೇಕು ಎನ್ನುವ ಉದ್ದೇಶದಿಂದ ಧೈರ್ಯ ಮಾಡಿ ವಡಸಲಮ್ಮ ಕಂಬೈನ್ಸ್ ಮೂಲಕ ನಿರ್ಮಾಣ ಮಾಡಲಾಗುತ್ತ್ತಿದೆ. ಇದರೊಂದಿಗೆ ಮೂವರು ಹಿತೈಷಿಗಳು ಹಣ ಹಾಕುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿ ಮತ್ತು ಅರೆಕಾಲಿಕ ಉದ್ಯೋಗ ಮಾಡುತ್ತಿರುತ್ತೇನೆ. ಮುಂದೆ ಹುಡುಗಿ ಪರಿಚಯವಾಗುತ್ತದೆ. ಆಕೆಯತ್ತ ಎಲ್ಲಾ ಪಾತ್ರಗಳು ಸುತ್ತುತ್ತವೆ. ವಿಕ್ರಂ ನಾಲ್ಕು ಸಾಹಸ ಮಾಡಿಸಲು ಜವಬ್ದಾರಿ ಹೊತ್ತು ಕೊಂಡಿದ್ದಾರೆ. ಪಾತ್ರದ ಸಲುವಾಗಿ ಆರು ಕೆ.ಜಿ ತೂಕ ಕಡಿಮೆ ಮಾಡಬೇಕಾಯಿತು. ಸಾಧುಕೋಕಿಲ ಜೊತೆಗೆ ನೀನಾಸಂ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ಉಳಿದುದನ್ನು ಚಿತ್ರ ನೋಡಬೇಕೆಂದು ಪ್ರಶ್ನೆಗಳಿಂದ ಜಾರಿಕೊಂಡರು ಅರ್ಜುನ್‍ಯೋಗಿ.

ಕಿರುತೆರೆಯಲ್ಲಿ ನಟಿಸಿದ್ದು, ಇದು ಎರಡನೆಯದಾಗಿದೆ. ಕಾಲೇಜು ಹುಡುಗಿಯಾಗಿ ತುಂಟತನದಿಂದ ರೇಗಿಸುವುದು ಎಂದು ಪರಿಚಯಿಸಿಗೊಂಡಿದ್ದು ನಾಯಕಿ ಸಿರಿಪ್ರಹ್ಲಾದ್. ನಾಯಕಿಯ ಅಣ್ಣನಾಗಿ ರಂಗಭೂಮಿ ನಟ ವಿಕಾಸ್, ಖಳನಟನಾಗಿ ಮುರಳಿ, ಛಾಯಗ್ರಾಹಕ ಶಿವಸೀನ, ಸಂಕಲನಕಾರ ಸಿ.ರವಿಚಂದ್ರನ್ ಚುಟುಕು ಮಾತಿಗೆ ವಿರಾಮ ಹಾಕಿದರು.

ಜಯಂತ್‍ಕಾಯ್ಕಣಿ, ನಾಗೇಂದ್ರಪ್ರಸಾದ್ ಸಾಹಿತ್ಯದ ಐದು ಗೀತೆಗಳಿಗೆ ರಾಗಗಳನ್ನು ಹೊಸೆಯುತ್ತಿರುವುದಾಗಿ ಸುರೇಂದ್ರನಾಥ್ ಹೇಳುವುದರೊಂದಿಗೆ ಅಂದಿನ ಗೋಷ್ಟಿಗೆ ಮಂಗಳ ಹಾಡಲಾಯಿತು.
ಸಿನಿ ಸರ್ಕಲ್.ಇನ್ ನ್ಯೂಸ್
7/01/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore