HOME
CINEMA NEWS
GALLERY
TV NEWS
REVIEWS
CONTACT US
ಹೇ ಗಯ್ಸ್ ಹಾಡಿಗೆ ಶಿವಣ್ಣ ಫಿದಾ
ಆನಂದ್‍ಆಡಿಯೋಯೂಟ್ಯೂಬ್‍ದಲ್ಲಿ ಬಿಡುಗಡೆಯಾಗಿರುವ ‘ಇನ್ಸ್‍ಪೆಕ್ಟರ್ ವಿಕ್ರಂ’ ಚಿತ್ರಕ್ಕೆ ಪ್ರಮೋದ್ ಸಾಹಿತ್ಯ, ಅನೂಪ್‍ಸೀಳನ್ ಸಂಗೀತದ ‘ಹೇ ಗಯ್ಸ್‍ಕೂಲಿಂಗ್‍ಗ್ಲಾಸು ಹಾಕ್ಕೊಂಡುಕೂಲಾಗಿರಿ, ಬ್ಯಾಡ್ ಬಾಯ್ಸ್ ಸೈಲೆಂಟ್ ಮೋಡ್‍ಗೆ ಹಾಕ್ಕಳಿ ಗೂಂಡಾಗಿರಿ’ ಎಂದು ಸಾಗುವ ಗೀತೆಯನ್ನು ಆಲಿಸಿದ ಶಿವರಾಜ್‍ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಳೇ ‘ಇನ್ಸ್‍ಪೆಕ್ಟರ್ ವಿಕ್ರಂ’ ನನ್ನಇಷ್ಟದಚಿತ್ರವೆಂದುಅದನ್ನು ನೆನಪಿಸಿಕೊಳ್ಳುತ್ತಾ ತಂಡಕ್ಕೆ ಶುಭಹಾರೈಸಿದರು.

ಖಾಕಿದಾರಿಯಾಗಿ ಪ್ರಜ್ವಲ್‍ದೇವರಾಜ್ ನಟಿಸಿದ್ದು, ಸಹದ್ಯೋಗಿಗಳೊಂದಿಗೆ ಕುಣಿಯುವ ಹಾಡುಚೆನ್ನಾಗಿ ಮೂಡಿಬಂದಿರುವುದರಿಂದ ಕೆಲವೇ ಘಂಟೆಗಳಲ್ಲಿ ವೈರಲ್‍ಆಗಿರುವುದುಎಲ್ಲರಿಗೂ ಖುಷಿ ತರಿಸಿದೆ.ಇಲ್ಲಿಯವರೆಗೂಕತೆಯಒಂದು ಏಳೆಯನ್ನು ಬಿಟ್ಟುಕೊಡದೆಏನಿದ್ದರೂಟಾಕೀಸ್‍ದಲ್ಲಿ ನೋಡಬೇಕೆಂದುಕೋರಿಕೊಂಡಿದ್ದಾರೆ.ಮೊದಲಬಾರಿಜೋಡಿಯಾಗಿ ಭಾವನಾಮೆನನ್ ನಾಯಕಿ, ಉಳಿದಂತೆ ರಘುಮುಖರ್ಜಿ, ಧರ್ಮಣ್ಣಕಡೂರು ಮುಂತಾದವರು ನಟಿಸಿದ್ದಾರೆ.ನವೀನ್‍ಕುಮಾರ್‍ಛಾಯಾಗ್ರಹಣ, ಗುರುಕಶ್ಯಪ್ ಸಂಭಾಷಣೆ, ಹರೀಶ್‍ಕೊಮ್ಮೆ ಸಂಕಲನ, ಥ್ರಿಲ್ಲರ್‍ಮಂಜು-ವಿನೋಧ್ ಸಾಹಸವಿದೆ.ನರಸಿಂಹ ನಿರ್ದೇಶನ, ಎ.ಆರ್.ವಿಖ್ಯಾತ್ ಬಂಡವಾಳ ಹೂಡಿದ್ದು, ಸದ್ಯದಲ್ಲೆತೆರೆಗೆ ಬರುವಸಾದ್ಯತೆಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
21/03/20
ಇನ್ಸ್‍ಪೆಕ್ಟರ್ ವಿಕ್ರಂ 2ನೇ ಟೀಸರ್ ಲೋರ್ಕಾಪಣೆ
ಆಕ್ಷನ್‍ಚಿತ್ರ ‘ಇನ್ಸ್‍ಪೆಕ್ಟರ್ ವಿಕ್ರಂ’ ಚಿತ್ರದಎರಡನೇಟೀಸರ್‍ಪ್ರಜ್ವಲ್‍ದೇವರಾಜ್ ಹುಟ್ಟಹಬ್ಬದ ಮುನ್ನ ದಿನ ಬಿಡುಗಡೆಗೊಂಡಿತು. ಪ್ರಜ್ವಲ್ ಮಾತನಾಡಿ ಹನ್ನೆರಡು ವರ್ಷದಅನುಭವ, 30ನೇ ಚಿತ್ರದಲ್ಲಿ ನಟಿಸಲಾಗುತ್ತಿದೆ.ಕ್ಯಾಮಾರಾ ಮುಂದೆ ನಿಲ್ಲಲು ಭಯ ಆಗುವುದಿಲ್ಲ ಆದರೆ ವೇದಿಕೆ ಮುಂದೆ ಮೈಕ್ ಹಿಡಿದಾಗ ಏನು ಹೇಳುವುದೆಂದು ತಿಳಿಯುವುದಿಲ್ಲ. ಇದೇ ಹೆಸರಿನಚಿತ್ರವು ಶಿವಣ್ಣ ನಟನೆಯಲ್ಲಿತೆರೆಕಂಡಿತ್ತು. ನಿರ್ದೇಶಕರು ಶೀರ್ಷಿಕೆ ಹೇಳಿದಾಗ ಜವಬ್ದಾರಿ ಜಾಸ್ತಿ ಆಯಿತು. ಶಿವಣ್ಣರಿಗೆ ಹೇಳಿದಾಗ ಖುಷಿ ಪಟ್ಟು ಅಭನಂದಿಸಿದರು.ಪ್ರಾಮಾಣಿಕಇನ್ಸ್‍ಪೆಕ್ಟರ್, ಸ್ವಭಾವದಲ್ಲಿಕಾಲೇಜು ಹುಡುಗನಾಗಿ, ಕೆಲಸದಲ್ಲಿ ಪಕ್ಕಾ. ಈಗಿನ ತಲೆಮಾರಿನಲ್ಲಿ ಸಾಮಾಜಿಕಜಾಲತಾಣದ ಮೂಲಕ ಪ್ರಸಿದ್ದಿಹೊಂದಿ, ಹೇಗೆ ಅಪರಾಧಗಳನ್ನು ಕಂಡುಹಿಡಿಯುತ್ತೆನೆಂದುಚಿತ್ರ ನೋಡಿಎಂದರು.ದರ್ಶನ್ ಸರ್ ನಟನೆಯನ್ನುಇಲ್ಲಿ ಹೇಳಲು ಆಗದು.ಸುಮಾರು ಏಳು ಕೋಟಿಖರ್ಚಾಗಿದೆ.ಅಂದುಕೊಂಡಂತೆಆದರೆ ಸೆಪ್ಟಂಬರ್‍ದಲ್ಲಿಜನರಿಗೆತೋರಿಸಲು ಪ್ರಯತ್ನ ಮಾಡಲಾಗುವುದುಎನ್ನುತ್ತಾರೆ ನಿರ್ಮಾಪಕ ವಿಖ್ಯಾತ್.ಎ.ಆರ್.

ಹ್ಯೂಮರ್, ರೋಮಾಂಟಿಕ್, ಆಕ್ಷನ್ ಮಾದರಿಯಲ್ಲಿಕತೆ ಸಾಗುತ್ತದೆ. ಒಂದು ಸಾಮಾಜಿಕ ಕಳಕಳಿ ಇರುವಚಿತ್ರವಾಗಿದೆ.ಎಲ್ಲರಿಗೂ ಸಂಬಂದಿಸಿದ್ದು, ಗೊತ್ತಿರುವ, ನೋಡಿರುವ, ಕೇಳಿರುವ, ಅನುಭವಿಸಿರುವ ವಿಷಯಇರಲಿದೆ.ಆ ತರಹದ ವಿಷಯಗಳನ್ನು ನಾಯಕನಾದವನು ಹೇಗೆ ಬಗೆ ಹರಿಸುತ್ತಾನೆಂಬುದುಒಂದು ಏಳೆಯ ಸಾರಾಂಶವಾಗಿದೆಎಂಬುದರ ವ್ಯಾಖ್ಯಾನವನ್ನುತೆರೆದಿಟ್ಟಿದ್ದು ಮೊದಲಬಾರಿ ನಿರ್ದೇಶನ ಮಾಡಿರುವ ಶ್ರೀನರಸಿಂಹ.

ಸಂಗೀತ ನಿರ್ದೇಶಕ ಅನೂಪ್‍ಸೀಳನ್,ರಘುಮುಖರ್ಜಿ, ದೇವೇಂದ್ರರೆಡ್ಡಿ, ಸಂಕಲನಕಾರ ಹರೀಶ್‍ಕೊಮ್ಮೆ, ಛಾಯಾಗ್ರಾಹಕ ನವೀನ್‍ಕುಮಾರ್ ಶುಭ ಸಂದರ್ಭದಲ್ಲಿ ಹಾಜರಿದ್ದು ಸಂತಸ ಹಂಚಿಕೊಂಡರು. ಹಿಟ್‍ಚಿತ್ರ ಚೌಕಗೆ ಪ್ರಚಾರದಲ್ಲಿ ಕೈಜೋಡಿಸಿದ್ದ ಬ್ಯಾಗ್‍ಪೈಪರ್ ಸಂಸ್ಥೆಯುಇದಕ್ಕೂ ಸಹಭಾಗಿತ್ವವನ್ನು ಪಡೆದುಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/07/19

ಇನ್ಸ್‍ಪೆಕ್ಟರ್ ವಿಕ್ರಂಗೆ ರಾಗಿಣಿಚಂದ್ರನ್ ಸೇರ್ಪಡೆ
ಪ್ರಜ್ವಲ್ ದೇವರಾಜ್ ನಾಯಕತ್ವದ ‘ಇನ್ಸ್‍ಪೆಕ್ಟರ್ ವಿಕ್ರಂ’ ಚಿತ್ರಕ್ಕೆ ಭರತನಾಟ್ಯ ಕಲಾವಿದೆ, ಮಾಡಲ್ ಆಗಿರುವ ರಾಗಿಣಿಚಂದ್ರನ್ ಸೇರ್ಪಡೆಯಾಗಿದ್ದಾರೆ. ಇವರು ಪ್ರಜ್ವಲ್‍ದೇವರಾಜ್ ಪತ್ನಿಯಾಗಿದ್ದು, ಮೊಟ್ಟ ಮೊದಲಬಾರಿ ಪತಿಯೊಂದಿಗೆ ತೆರೆ ಹಂಚಿಕೊಂಡಿರುವುದು ಸಂತಸ ತಂದಿದೆಯಂತೆ. ಇದಕ್ಕೂ ಮುನ್ನ ರಿಶಬಪ್ರಿಯಾ ಎನ್ನುವ ಕಿರುಚಿತ್ರದಲ್ಲಿ ಅಭಿನಯಿಸಿದ ನಂತರ ಹಲವಾರು ಅವಕಾಶಗಳು ಬಂದರೂ ಒಲ್ಲೆ ಎಂದಿದ್ದರಂತೆ. ಚಿತ್ರದ ನಿರ್ದೇಶಕ ವಿಖ್ಯಾತ್ ನೇರವಾಗಿ ಸಂಪರ್ಕಿಸಿ ಸನ್ನಿವೇಶವನ್ನು ತಿಳಿಸಿ, ನಟಿಸಲು ಕೋರಿಕೊಂಡರು. ಪಾತ್ರವು ವಿಶೇಷವಾಗಿದ್ದರಿಂದ ಅಭಿನಯಿಸಬೇಕಾಯಿತು. ಜಾಹಿರಾತುಗಳಲ್ಲಿ ಒಬ್ಬಳೆ ಇರುವುದರಿಂದ ಸುಲಭವಾಗಿರುತ್ತದೆ. ಚಿತ್ರದಲ್ಲಿ ಬೇರೆ ಪಾತ್ರಗಳು ಸೇರಿಕೊಳ್ಳುವುದರಿಂದ ಸ್ಪಲ್ಪಮಟ್ಟಿಗೆ ಭಯವಾಗಿ, ಮುಂದೆ ಸರಿ ಆಯಿತು. ಮನೆಯಲ್ಲಿ ಪ್ರಜ್ವಲ್ ಸೇರಿದಂತೆ ಅತ್ತೆ-ಮಾವ ಪ್ರೋತ್ಸಾಹ ನೀಡಿದ್ದರಿಂದಲೇ ಭರತನಾಟ್ಯ ಶಾಲೆಯನ್ನು ತೆರೆಯಲಾಗಿದೆ. ಅವರಿಗೆ ಲಾಂಗ್ ರೈಡ್ ಬೈಕ್ ಓಡಿಸುವುದು ಅಂದರೆ ಇಷ್ಟವಾಗುತ್ತದೆ. ಆದರೆ ಅವರೊಂದಿಗೆ ದೂರ ಹೋಗಲು ಕಷ್ಟವಾಗುತ್ತದೆ. ಅದು ಬಿಟ್ಟರೆ ಒಟ್ಟಿಗೆ ಕುಳಿತು ಊಟ, ವ್ಯಾಯಾಮ ಮಾಡತ್ತೇವೆಂದು ಖುಷಿಯಿಂದ ರಾಗಿಣಿಚಂದ್ರನ್ ಹೇಳುತ್ತಾರೆ. ಅವರ ಪಾತ್ರದ ವಿವರ ತಿಳಿಯಲು ಸಿನಿಮಾ ಬಿಡುಗಡೆ ತನಕ ಕಾಯಬೇಕಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
17/09/18
ಪ್ರಜ್ವಲ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ
ಪ್ರಜ್ವಲ್ ದೇವರಾಜ್ ಬುದುವಾರ ಹುಟ್ಟಹಬ್ಬವಾಗಿದ್ದರಿಂದ ‘ಇನ್ಸೆಪೆಕ್ಟರ್ ವಿಕ್ರಂ’ ಚಿತ್ರದ ಟೀಸರ್‍ನ್ನು ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷದಲ್ಲಿ 30 ಚಿತ್ರಗಳಲ್ಲಿ ನಟಿಸಲಾಗಿದೆ. ಮಾಸ್ ಚಿತ್ರದಲ್ಲಿ ಮಾಡಿಲ್ಲವೆಂಬ ಕೊರಗು ಇತ್ತು. ಅದು ಈಗ ಈಡೇರಿದೆ. ತುಂಟಾಟ ಮಾಡುವವನಿಗೆ ಪೋಲೀಸ್ ಹುದ್ದೆ ಸಿಕ್ಕರೆ ಯಾವ ರೀತಿ ಇರುತ್ತಾನೆ ಎಂಬುದನ್ನು ಇದರಲ್ಲಿ ನೋಡಬಹುದು. ಆದರೂ ತನ್ನ ಕೆಲಸವನ್ನು ಶ್ರದ್ದೆ, ಪ್ರಾಮಾಣಿಕತೆಯಿಂದ ಮಾಡುತ್ತಾನೆಂದು ಪಾತ್ರದ ಪರಿಚಯ ಮಾಡಿಕೊಂಡರು ನಾಯಕ ಪ್ರಜ್ವಲ್ ದೇವರಾಜ್.

ಟೀಸರ್ ಲೋಕಾರ್ಪಣೆ ಮಾಡಿದ ದೇವರಾಜ್ ಮಗ ಪೂರ್ಣ ಪ್ರಮಾಣದ ಇನ್ಸೆಪೆಕ್ಟರ್ ಆಗಿ ಜನ್ಮ ತಾಳುತ್ತಿದ್ದಾನೆ. ಇಂತಹುದೆ ಪಾತ್ರಗಳನ್ನು ಮಾಡಿಕೊಂಡು ಹೆಸರು ಸಂಪಾದಿಸಿದ್ದೇನೆ. ಅದೇ ರೀತಿ ಅವನಿಗೂ ಆಗಲಿ ಎಂದರು.
ಖಳ ನಟನೆ ನೋಡಿ ಮೆಚ್ಚಿಕೊಂಡು, ಮುಂದೆ ಪೋಲೀಸ್ ಪಾತ್ರಗಳನ್ನು ಇಷ್ಟಪಡುತ್ತಿದ್ದೆ. ಪುತ್ರ ಈಗ ಖಾಕಿ ತೊಟ್ಟಿರುವುದು ಸಂತಸ ತಂದಿದೆ. ಅವರಂತೆ ಆಗಲಿ ಎಂದು ಚಂದ್ರಕಲಾ ಹೇಳಿದರು.
ಪ್ರಜ್ವಲ್ ಮೊದಲ ಚಿತ್ರದಲ್ಲಿ ಒಂದು ಹಾಡಿಗೆ ಧ್ವನಿಯಾಗಿದ್ದೆ. ಇಂದು ಅವರ ಚಿತ್ರಕ್ಕೆ ಕೆಲಸ ಮಾಡಿದ್ದು ತೃಪ್ತಿ ನೀಡಿದೆ ಅಂತಾರೆ ಸಂಗೀತ ನಿರ್ದೇಶಕ ಅನೂಪ್‍ಸೀಳನ್.

ಕಾಶಿನಾಥ್ ಗರಡಿಯಲ್ಲಿ ಪಳಗಿರುವ ನಿರ್ದೇಶಕ ಶ್ರೀನರಸಿಂಹ ಅವರನ್ನು ನೆನಸಿಕೊಂಡು ಭಾವುಕರಾಗುತ್ತಾ, ಬೆಂಗಳೂರು, ಗೋಕರ್ಣ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ. ಶೇಕಡ 50 ರಷ್ಟು ಬಾಕಿ ಇದೆ ಎಂಬುದಾಗಿ ಮಾಹಿತಿ ನೀಡಿದರು.
ನಿರ್ದೇಶಕನಾಗಬೇಕೆಂದು ಬಂದವನಿಗೆ ಸೈಕಲ್ ಹೊಡೆದರೂ ಅವಕಾಶ ಸಿಗಲಿಲ್ಲ. ಕೊನೆಗೆ ಪುಷ್ಪಕ ವಿಮಾನದ ಮೂಲಕ ನಿರ್ಮಾಪಕನಾಗಬೇಕಾಯಿತು. ಎರಡನೆ ಚಿತ್ರಕ್ಕೆ ಮಾದ್ಯಮದವರ ಸಹಕಾರಬೇಕೆಂದು ಕೋರಿದರು ವಿಖ್ಯಾತ್. ನಾಯಕಿ ಭಾವನಾಮೆನನ್ ಅನುಪಸ್ಥಿತಿಗೆ ಕಾರಣ ತಿಳಿಯಲಿಲ್ಲ.
ಸಿನಿ ಸರ್ಕಲ್.ಇನ್ ನ್ಯೂಸ್
4/07/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore