HOME
CINEMA NEWS
GALLERY
TV NEWS
REVIEWS
CONTACT US
ಇ ವರ್ಸಸ್ ಇ ಟ್ರೈಲರ್ ಬಿಡುಗಡೆ ಮಾಡಿದದರ್ಶನ್
‘ಇಂಡಿಯಾ ವರ್ಸಸ್‍ಇಂಗ್ಲೇಡ್’ ಚಿತ್ರದಟ್ರೈಲರ್ ಬಿಡುಗಡೆಗೊಂಡಿತು.ಹಾಸನದಲ್ಲಿ ಹುಟ್ಟಿದ್ದು, ಇಂಜಿನಿಯರಿಂಗ್ ಮೈಸೂರು, ಮುಂದೆರಂಗಭೂಮಿ, ಸಣ್ಣ ಪಾತ್ರಗಳು, ಖಳ ನಟ. ಈಗ ಮೇಷ್ಟ್ರು ನಾಯಕನಾಗಿ ಬಡ್ತಿ ನೀಡಿದ್ದಾರೆ.ಇಷ್ಟು ದೀರ್ಘ ಪಯಣವನ್ನುಒಮ್ಮೆ ಹಿಂದುರಿಗಿ ನೋಡಿದಾಗ ಸೋಜಿಗ ಅನಿಸುತ್ತದೆ.ಬಿಡುಗಡೆ ಹತ್ತಿರ ಬರುತ್ತಿರುವಂತೆಆತಂಕ, ತವಕಆಗುತ್ತಿದೆ.ಬದುಕಿದರೆದರ್ಶನ್‍ತರಹ ಬದುಕಬೇಕೆಂದು ಕನಸು ಕಾಣುತ್ತಿದ್ದೆ.ಅವರುತೋಟ, ಪ್ರಾಣಿಗಳನ್ನು ಸಾಕುವುದು, ಕಾರು, ಬೈಕ್ ಪ್ರಿಯ, ಹಾಲು ಕರಿತಾರೆ. ನನ್ನಕನಸನ್ನುಒಡೆಯ ನಡೆಸ್ತಾಇದ್ದಾರೆ. ಇದಕ್ಕಿಂತಸಂತೋಷಬೇರೊಂದುಇಲ್ಲಎಂದರು ವಸಿಷ್ಟಸಿಂಹ.

ದರ್ಶನ್‍ಅವರನ್ನುಹಿರಿಯ ನಟಎಂದು ಹೇಳುವುದಕ್ಕೆ ಅರ್ಥವಿದೆ. ಇಂದುಚಿತ್ರಮಂದಿರಕ್ಕೆ ಹೋಗುವ ಸಂಖ್ಯೆಕಡಿಮೆಇರುವಕಾಲದಲ್ಲಿಜನರನ್ನುಅಲ್ಲಿಗೆಕರೆತರುವ ಶಕ್ತಿ ಅವರಿಗಿದೆ. ಮೈಸೂರಿನಲ್ಲಿ ದಿನಗೂಲಿ ನೌಕರನಾಗಿದ್ದಾಗತೂಗದೀಪಅವರೊಂದಿಗೆ ಸಂಪರ್ಕಇತ್ತು. ಮಹಿಳಾ ಸಮುದಾಯಕ್ಕೆ ಸುಮಲತಾದಾರಿಯಾಗಿದ್ದಾರೆ. ಪ್ರತಿಚಿತ್ರ ಮಾಡಿದಾಗಇನ್ನು ಈ ಉದ್ಯಮ ಸಾಕು ಅನಿಸುತ್ತದೆ. ಬಿಡುಗಡೆ ಹಂತಕ್ಕೆ ಬರುವಷ್ಟರಲ್ಲಿ ಮುಂದಿನ ಬಗ್ಗೆ ಯೋಚಿಸುತ್ತೇನೆ. ಇದೇ ನಮ್ಮಗಳ ಕಡೇ ಭೇಟಿ.ಇನ್ನುಏನಿದ್ದರೂಚಿತ್ರಮಂದಿರದಲ್ಲಿಅಂತಾರೆ ನಾಗತ್ತಿಹಳ್ಳೀ ಚಂದ್ರಶೇಖರ.
ತುಣುಕುಗಳಿಗೆ ಚಾಲನೆ ನೀಡಿದದರ್ಶನ್ ಮಾತನಾಡುತ್ತಾ, ಟೈಟಲ್‍ನ್ನು ಹೀಗೂ ಹೇಳಬಹುದು. ಮದರ್‍ಇಂಡಿಯಾ ಸುಮಲತಾಅಮ್ಮನಿಗೆ, ಗರ್ಲ್ ಫ್ರೆಂಡ್‍ಇಂಗ್ಲೇಡ್ ನಾಯಕಿ ಮಾನ್ವಿತಾ ಹರೀಶ್ ,ಮಧ್ಯದಲ್ಲಿರುವಡೈಮಂಡ್ ವಸಿಷ್ಟಸಿಂಹ. ಮೇಷ್ಟ್ರುಯಾವಾಗಲೂಎರಡುದೇಶದ ಭಾಷೆಯ ಬಗ್ಗೆ ಸ್ಪರ್ಶಕೊಡುತ್ತಾರೆ.ಗರುಡಎನ್ನುವ ಸಾಹಿತಿತೀರಿಕೊಂಡಾಗ ಮಗ ಸಾಹಿತಿಅಂದರೆ ಏನು ಅಂತ ಕೇಳಿದ. ಇಂದಿನ ಜನಾಂಗವು ನಮ್ಮ ಭಾಷೆ, ಕನ್ನಡದ ಬಗ್ಗೆ ತಿಳಿದುಕೊಂಡಿಲ್ಲ. ಹಾಡಿನಲ್ಲಿ ಹಿರಿಯ ಸಾಹಿತಿಗಳ ಭಾವಚಿತ್ರಗಳನ್ನು ತೋರಿಸಿರುವುದಕ್ಕೆ ಸ್ತುತ್ಯರ್ಹ ವ್ಯಕ್ತಪಡಿಸಬಹುದು. ಮಕ್ಕಳು ದೊಡ್ಡವರಾಗಿದ್ದಾರೆ.ನೀವು ಇಷ್ಟು ಗ್ಲಾಮರ್ ಆಗಿ ಬಂದರೆ ಹೇಗೆ ಎಂದು ಸುಮಲತಾಅವರನ್ನು ಕಿಚಾಯಿಸಿದರು.

25 ವರ್ಷಗಳ ನಂತರ ಭಾರತ ಬಿಟ್ಟು ವಿದೇಶದಲ್ಲಿತಂಗಿರುವ ದಂಪತಿಗಳ ಸಂಕಟಗಳನ್ನು ಚೆನ್ನಾಗಿತೋರಿಸಲಾಗಿದೆ.ಪ್ರಕಾಶ್‍ಬೆಳವಾಡಿ ಅವರೊಂದಿಗೆ ಅಭಿನಯಿಸಿದ್ದು ಖುಷಿ ತಂದಿದೆ.ನಾವುಗಳು ಎರಡುಘಂಟೆ ನೋಡಿಚೆನ್ನಾಗಿದೆ.ಚೆನ್ನಾಗಿಲ್ಲವೆಂದು ಸುಲಭವಾಗಿ ಹೇಳುತ್ತೇವೆ. ಆದರೆಅದರ ಹಿಂದಿನ ಶ್ರಮವನ್ನು ನೋಡಿದಾಗಇಂತಹ ಹೇಳಿಕೆಗಳನ್ನು ಕೊಡುವುದಿಲ್ಲ. ನಿರ್ಮಾಪಕರುಆಸಕ್ತಿಯಿಂದಚಿತ್ರ ಮಾಡಿದ್ದಾರೆ.ಇದರಲ್ಲೂದೇಶದ ಬಗ್ಗೆ ಪ್ರೇಮಇದೆಎಂದರು ಸುಮಲತಾ.

ಅವಕಾಶ ನೀಡಿದ್ದಕ್ಕೆಥ್ಯಾಂಕ್ಸ್. ನಿರ್ದೇಶಕ ಹದಿನೈದನೇಚಿತ್ರದಲ್ಲಿ ನಟಿಸಿದ್ದು ಸುಕೃತಎನ್ನಬಹುದುಅಂತಾರೆ ಮೇಘಿನಿ ಹೆಸರಿನ ನಾಯಕಿ ಮಾನ್ವಿತಾಹರೀಶ್. ವೈ.ಎನ್.ಶಂಕರೇಗೌಡಅವರೊಂದಿಗೆಕನ್ನಡಿಗ ಅನಿವಾಸಿ ಭಾರತೀಯರುಸೇರಿಕೊಂಡು ನಿರ್ಮಾಣ ಮಾಡಿರುವಚಿತ್ರವುಇದೇ 24ರಂದು ಪ್ರಪಂಚದಾದ್ಯತಂತೆ ಬಿಡುಗಡೆಯಾಗುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/01/20

ಇಂಡಿಯಾ ವರ್ಸಸ್‍ಇಂಗ್ಲೆಂಡ್‍ತೆರೆಗೆ ಸಿದ್ದ
ಹಿರಿಯ ನಿರ್ದೇಶಕ ನಾಗತ್ತಿಹಳ್ಳೀ ಚಂದ್ರಶೇಖರ್ ಮಗಳು ಕನಸುನಾಗತ್ತಿಹಳ್ಳಿ ಬರೆದಿರುವಕತೆಯು ‘ಇಂಡಿಯಾ ವರ್ಸಸ್‍ಇಂಗ್ಲೆಂಡ್’ ಚಿತ್ರವಾಗಿದೆ.ಇಂದು ಭಾರತವುತಾಂತ್ರಿಕತೆಯಲ್ಲಿಯಶಸ್ಸು ಗಳಿಸಿದ್ದಕ್ಕೆ ಇಂಗ್ಲೇಡ್‍ನವರು ಬಿಟ್ಟು ಹೋದದ್ದುಕಾರಣವಾಗಿದೆ.ಮತ್ತೋಂದುಕಡೆ ಬ್ರಿಟಿಷರು ಹೋಗುವಾಗ ನಮ್ಮ ಸಂಪತ್ತನ್ನು ನಾಶ ಮಾಡಿಹೋದರು.ಇದರ ವಿಷಯಗಳ ಕುರಿತಂತೆ ವಾದ ಮಾಡುತ್ತಾರೆ.ಇಂತಹುದೆ ಅಂಶಗಳು ಕತೆಯಲ್ಲಿ ಬರಲಿದೆಎಂದುಚಿಕ್ಕದಾದ ಮಾಹಿತಿಯನ್ನು ನಿರ್ದೇಶಕರು ನೀಡುತ್ತಾರೆ. ನಾಯಕ ವಸಿಷ್ಟಸಿಂಹ ಅಲ್ಲಿನ ದೇಸಿ ಹುಡುಗನಾಗಿ ಆ ಭಾಗದವರು ಮಾತನಾಡುವಂತೆತರಭೇತಿ ಪಡೆದುಕೊಂಡುಡಬ್ಬಿಂಗ್ ಮಾಡಿದ್ದಾರೆ. ಭಾರತದಗ್ರಾಮೀಣ ಭಾಗದ ಹುಡುಗಿಯಾಗಿ ಮಾನ್ವಿತಾಕಾಮತ್ ನಾಯಕಿ.ಇವರೊಂದಿಗೆಅನಂತ್‍ನಾಗ್, ಪ್ರಕಾಶ್‍ಬೆಳವಾಡಿ, ಸಾಧುಕೋಕಿಲ, ಸುಮಲತಾಅಂಬರೀಷ್, ಗಿರಿರಾಜ್, ಶಿವಮಣಿ ಮತ್ತುಅಲ್ಲಿನಕಲಾವಿದರು ನಟಿಸಿದ್ದಾರೆ.

ವಿಲ್ಸ್‍ಪ್ರೈಸ್-ಸತ್ಯಹೆಗೆಡೆ, ಕೆ.ಕೃಷ್ಣಕುಮಾರ್‍ಛಾಯಾಗ್ರಾಹಕರುಗಳಾಗಿ ಕೆಲಸ ಮಾಡಿದ್ದಾರೆ.ಐದು ಹಾಡುಗಳಿಗೆ ಅರ್ಜುನ್‍ಜನ್ಯಾ ಸಂಗೀತ, ಶ್ರೀಕಾಂತ್‍ಸಂಕಲನವಿದೆ. ಇಷ್ಟಕಾಮ್ಯ ನಿರ್ಮಾಣ ಮಾಡಿದ್ದ ವೈ.ಎನ್.ಶಂಕರೇಗೌಡ, ಟೆಂಟ್ ಸಿನಿಮಾ ವಿದ್ಯಾರ್ಥಿಗಳಾದ ಭರತ್, ಅಶೋಕ್ ಮತ್ತುಕನ್ನಡಿಗ ಎನ್‍ಆರ್‍ಐಗಳು ಸೇರಿಕೊಂಡುಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಪುನೀತ್‍ರಾಜ್‍ಕುಮಾರ್ ನಿರೂಪಣೆ, ಗೀತೆ ಹಾಡುವುದರಜೊತೆಗೆಒಂದು ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಉಳಿದ ಹಾಡುಗಳನ್ನು ಪ್ರತ್ಯೇಕವಾಗಿ ಮಾಜಿಕ್ರಿಕೆಟಿಗ ಅನಿಲ್‍ಕುಂಬ್ಳೆ, ರಕ್ಷಿತ್‍ಶೆಟ್ಟಿ, ದರ್ಶನ್ ಮತ್ತುಯಶ್ ಸದ್ಯದಲ್ಲೆ ಲೋಕಾರ್ಪಣೆ ಮಾಡುತ್ತಿದ್ದಾರೆ.ಮೇಷ್ಟ್ರು ಈ ಬಾರಿ ವಿತರಣೆಜವಬ್ದಾರಿಯನ್ನು ಹೂತ್ತುಕೊಂಡಿದ್ದು, ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/12/19


ಮೇಷ್ಟ್ರು ಹೊಸ ಚಿತ್ರ ಇಂಡಿಯಾ ವರ್ಸಸ್ ಇಂಗ್ಲೆಂಡ್
ಹಿರಿಯ ನಿರ್ದೇಶಕ ನಾಗತ್ತಿಹಳ್ಳೀ ಚಂದ್ರಶೇಖರ್ ಮಗಳು ಕನಸುನಾಗತ್ತಿಹಳ್ಳಿ ಬರೆದಿರುವ ಕತೆಯು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವಾಗಿದೆ. ಪ್ರಚಾರದ ಮೊದಲ ಹಂತವಾಗಿ ರವಿಚಂದ್ರನ್ ಚಿತ್ರದ ಪೋಸ್ಟರ್, ಮೇಕಿಂಗ್‍ನ್ನು ಅನಾವರಣಗೊಳಿಸಿದರು. ನಂತರ ಮಾತನಾಡುತ್ತಾ ಮೇಷ್ಟ್ರು ಯಾವುದೇ ಹೊಸ ಚಿತ್ರ ಮಾಡುವ ಮುನ್ನ ಇದರ ಕುರಿತಂತೆ ಹೇಳಲು ಭೇಟಿ ಮಾಡುತ್ತಾರೆ. ಪ್ರತಿ ಸಾರಿ ಬಂದಾಗಲೂ ನಿಮ್ಮ ಸಿನಿಮಾ ಏನಾಯಿತು ಅಂತ ಕೇಳುತ್ತಾರೆ. ಅದನ್ನು ಅಲ್ಲಿಗೆ ನಿಲ್ಲಿಸಿದ್ದೇನೆ, ಮತ್ತೆ ಶುರು ಮಾಡುತ್ತೇನೆಂದು ಹೇಳುತ್ತಾ ಬಂದಿದ್ದೇನೆ. ನಮ್ಮೂರು ಬಿಟ್ಟು ಬೇರೆ ಕಡೆ ಹೋದಾಗ ನಾವುಗಳು ಚೆನ್ನಾಗಿ ನಗುತ್ತ್ತೆವೆಂದು ತುಣುಕುಗಳನ್ನು ನೋಡಿದಾಗ ತಿಳಿಯುತ್ತದೆ. ಮೇಷ್ಟ್ರು ಸಿನಿಮಾದ ಗುಣಗಳನ್ನು ಕೊಂಡಾಡಿದರು.

ಇಂದು ಭಾರತವು ತಾಂತ್ರಿಕತೆಯಲ್ಲಿ ಯಶಸ್ಸು ಗಳಿಸಿದ್ದಕ್ಕೆ ಇಂಗ್ಲೇಡ್‍ನವರು ಬಿಟ್ಟು ಹೋದದ್ದು ಕಾರಣವಾಗಿದೆ. ಮತ್ತೋಂದು ಕಡೆ ಬ್ರಿಟಿಷರು ಹೋಗುವಾಗ ನಮ್ಮ ಸಂಪತ್ತನ್ನು ನಾಶ ಮಾಡಿಹೋದರು. ಇದರ ವಿಷಯಗಳ ಕುರಿತಂತೆ ವಾದ ಮಾಡುತ್ತಾರೆ. ಇಂತಹುದೆ ಅಂಶಗಳು ಕತೆಯಲ್ಲಿ ಬರಲಿದೆ ಎಂದು ಚಿಕ್ಕದಾದ ಮಾಹಿತಿಯನ್ನು ನಿರ್ದೇಶಕರು ನೀಡುತ್ತಾರೆ. ನಾಯಕ ವಷಿಷ್ಟಸಿಂಹ ಅಲ್ಲಿನ ದೇಸಿ ಹುಡುಗನಾಗಿ ಆ ಭಾಗದವರು ಮಾತನಾಡುವಂತೆ ತರಭೇತಿ ಪಡೆದುಕೊಂಡು ಡಬ್ಬಿಂಗ್ ಮಾಡಿದ್ದಾರೆ. ಭಾರತದ ಗ್ರಾಮೀಣ ಭಾಗದ ಹುಡುಗಿಯಾಗಿ ಮಾನ್ವಿತಾಕಾಮತ್ ನಾಯಕಿ. ಇವರೊಂದಿಗೆ ಅನಂತ್‍ನಾಗ್, ಪ್ರಕಾಶ್‍ಬೆಳವಾಡಿ, ಸಾಧುಕೋಕಿಲ, ಸುಮಲತಾಅಂಬರೀಷ್, ಗಿರಿರಾಜ್, ಶಿವಮಣಿ ಮತ್ತು ಅಲ್ಲಿನ ಕಲಾವಿದರು ನಟಿಸಿದ್ದಾರೆ.

ವಿಲ್ಸ್‍ಪ್ರೈಸ್-ಸತ್ಯಹೆಗೆಡೆ, ಕೆ.ಕೃಷ್ಣಕುಮಾರ್ ಛಾಯಾಗ್ರಾಹಕರುಗಳಾಗಿ ಕೆಲಸ ಮಾಡಿದ್ದಾರೆ. ಐದು ಹಾಡುಗಳಿಗೆ ಅರ್ಜುನ್‍ಜನ್ಯಾ ಸಂಗೀತ, ಶ್ರೀಕಾಂತ್ ಸಂಕಲನವಿದೆ. ಇಷ್ಟಕಾಮ್ಯ ನಿರ್ಮಾಣ ಮಾಡಿದ್ದ ವೈ.ಎನ್.ಶಂಕರೇಗೌಡ, ಟೆಂಟ್ ಸಿನಿಮಾ ವಿದ್ಯಾರ್ಥಿಗಳಾದ ಭರತ್, ಅಶೋಕ್ ಮತ್ತು ಕನ್ನಡಿಗ ಎನ್‍ಆರ್‍ಐಗಳು ಸೇರಿಕೊಂಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದೇ ಸಂದರ್ಭದಲ್ಲಿ ಈ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಪುರಸ್ಕøತರನ್ನು ಕ್ರೇಜಿಸ್ಟಾರ್ ಗೌರವಿಸಿದರು. ಸ್ವಾತಂತ್ರ ದಿನಾಚರಣೆ ದಿನದಂದು ನಿರ್ದೇಶಕರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಗಣ್ಯರ ಸಮ್ಮುಖದಲ್ಲಿ ದಂಪತಿಗಳು ಕೇಕ್‍ನ್ನು ಕತ್ತರಿಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
15/08/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore