HOME
CINEMA NEWS
GALLERY
TV NEWS
REVIEWS
CONTACT US
ಟ್ರೈಲರ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಂಬರೀಷ್
ರೆಬಲ್‍ಸ್ಟಾರ್ ನಿಧನರಾಗುವ ಒಂದು ವಾರದ ಮುನ್ನ ‘ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ ಸಿನಿಮಾದ ಟ್ರೈಲರ್‍ನ್ನು ವೀಕ್ಷಿಸಿ ಖುಷಿ ಪಟ್ಟು, ತಂಡಕ್ಕೆ ಶುಭ ಹಾರೈಸಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮದುವೆ ಮುಂಚೆ, ನಂತರ ನಡೆಯುವ ಘಟನೆಗಳು, ಪ್ರೀತಿಸಿ ಮದುವೆಯಾದರೆ ದಂಪತಿಗಳ ಸರಸ, ವಿರಸ ಎಲ್ಲವನ್ನು ಮನರಂಜನೆ, ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ತೆಲುಗು ಹಾಸ್ಯ ನಟ ಗೌತಂರಾಜು ಪುತ್ರ ಕೃಷ್ಣ ನಾಯಕ, ಬಾಂಬೆ ಮೂಲದ ಕಿರಣ್‍ಚಟ್ವಾನಿ ನಾಯಕಿ. ಇವರಿಬ್ಬರು ವಿವಾಹದ ನಂತರ ತಮ್ಮ ಜೀವನ ಹೇಗೆ ಇರಬೇಕೆಂದು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮದುವೆ ಮುಂಚೆ ಒಂದು ಪ್ರಯಾಣ ಕೈಗೊಳ್ಳುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರುಗಳ ಭಾವನೆ, ಅಭಿರುಚಿ ಹಾಗೂ ಆಲೋಚನೆಗಳು ಹೊಂದಿಕೆಯಾದಲ್ಲಿ ಮದುವೆಯಾಗೋಣ. ಒಂದು ವೇಳೆ ಹೊಂದಿಕೆಯಾಗದಿದ್ದ ಪಕ್ಷದಲ್ಲಿ ದೂರಾಗಿಬಿಡೋಣ ಎಂದು ನಿರ್ಧಾರ ಮಾಡುವುದರೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಬೆಂಗಳೂರು, ಚಿಕ್ಕಮಗಳೂರು, ನಂದಿಬೆಟ್ಟ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂಬತ್ತು ಚಿತ್ರಗಳನ್ನು ನಿರ್ದೇಶಿಸಿ ನಂದಿ ಪ್ರಶಸ್ತಿಗೆ ಭಾಜನರಾಗಿದ್ದ ವೇಮುಗಂಟಿ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಸೈಕಿಯಾಟ್ರಿಕ್ ವೈದ್ಯರಾಗಿ ಸಾಯಿಕುಮಾರ್, ಪೋಷಕ ಕಲಾವಿದರಾದ ವಿಜಯ್‍ಚಂಡೂರ್, ರವಿಕಿರಣ್, ಬುಲೆಟ್‍ಪ್ರಕಾಶ್, ವೀಣಾಸುಂದರ್, ಅನಿರುದ್ದ್‍ಶಾಸ್ರ್ತೀ, ಚೇತನ್‍ನಾಯಕ್, ಹೇಮಂತ್, ಮೇಘನಾಜೋಷಿ ಮುಂತಾದವರ ನಟಿಸಿದ್ದಾರೆ. ಪ್ರಹ್ಲಾದ್ ಸಾಹಿತ್ಯದ ಐದು ಹಾಡುಗಳಿಗೆ ಯಲೇಂದ್ರಮಹಾವೀರ ಸಂಗೀತ, ಮನೋಹರ್ ಛಾಯಗ್ರಹಣ, ಸಂಜೀವ್‍ರೆಡ್ಡಿ ಸಂಕಲನ, ಥ್ರಿಲ್ಲರ್‍ಮಂಜು ಸಾಹಸ ನಿರ್ವಹಿಸಿದ್ದಾರೆ. ರಿರೆರ್ಕಾಡಿಂಗ್ ಮತ್ತು 5.1 ಮಿಕ್ಸಿಂಗ್ ಕೆಲಸವನ್ನು ಪಳನಿರವರು ಅದ್ಬುತವಾಗಿ ನಿರ್ವಹಿಸಿದ್ದಾರೆ. ಶ್ರೀನಿವಾಸ್‍ಯಾದವ್, ಪಿ.ವಿನಯ್‍ಕುಮಾರ್ ನಿರ್ಮಾಪಕರಾದರೆ, ಚಿಕ್ಕಬಳ್ಳಾಪುರ ಶ್ರೀನಿವಾಸ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಚಿತ್ರವು ಫೆಬ್ರವರಿ ತಿಂಗಳಲ್ಲಿ ಜಯಲಕ್ಷೀ ಮೂವೀಸ್ ಮುಖಾಂತರ ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
12/01/19


ಇಬ್ಬರು ಬಿ.ಟಿಕ್ ವಿದ್ಯಾರ್ಥಿಗಳ ಕಥನ
ಟಾಲಿವುಡ್ ತಂಡದಿಂದ ಸಿದ್ದಗೊಂಡಿರುವ ‘ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ ಚಿತ್ರದ ಕತೆಯಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮದುವೆ ಮುಂಚೆ, ನಂತರ ನಡೆಯುವ ಘಟನೆಗಳು, ಪ್ರೀತಿಸಿ ಮದುವೆಯಾದರೆ ದಂಪತಿಗಳ ಸರಸ, ವಿರಸ ಎಲ್ಲವನ್ನು ಮನರಂಜನೆ, ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಬೆಂಗಳೂರು, ಚಿಕ್ಕಮಗಳೂರು, ನಂದಿಬೆಟ್ಟ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂಬತ್ತು ಚಿತ್ರಗಳನ್ನು ನಿರ್ದೇಶಿಸಿ ನಂದಿ ಪ್ರಶಸ್ತಿಗೆ ಭಾಜನರಾಗಿದ್ದ ವೇಮುಗಂಟಿ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗು ಹಾಸ್ಯ ನಟ ಗೌತಂರಾಜು ಪುತ್ರ ಕೃಷ್ಣ ನಾಯಕ, ಬಾಂಬೆ ಮೂಲದ ಕಿರಣ್‍ಚಟ್ವಾನಿ ನಾಯಕಿ. ಸೈಕಿಯಾಟ್ರಿಕ್ ವೈದ್ಯರಾಗಿ ಸಾಯಿಕುಮಾರ್, ಪೋಷಕ ಕಲಾವಿದರಾದ ವಿಜಯ್‍ಚಂಡೂರ್, ರವಿಕಿರಣ್, ಬುಲೆಟ್‍ಪ್ರಕಾಶ್, ವೀಣಾಸುಂದರ್, ಅನಿರುದ್ದ್‍ಶಾಸ್ರ್ತೀ, ಚೇತನ್‍ನಾಯಕ್, ಹೇಮಂತ್, ಮೇಘನಾಜೋಷಿ ಮುಂತಾದವರ ನಟಿಸಿದ್ದಾರೆ. ಐದು ಹಾಡುಗಳಿಗೆ ಯಲೇಂದ್ರಮಹಾವೀರ ಸಂಗೀತ, ಮನೋಹರ್ ಛಾಯಗ್ರಹಣ, ಸಂಜೀವ್‍ರೆಡ್ಡಿ ಸಂಕಲನ, ಥ್ರಿಲ್ಲರ್‍ಮಂಜು ಸಾಹಸ ನಿರ್ವಹಿಸಿದ್ದಾರೆ.

ರೆಬಲ್ ಸ್ಟಾರ್ ಅಂಬರೀಷ್ ಸಿನಿಮಾದ ಟ್ರೈಲರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದರಿಂದ ತಂಡಕ್ಕೆ ಯಶಸ್ಸು ಸಿಗಲಿದೆ ಎಂಬ ಆಶಾಭಾವನೆಯಲ್ಲಿ ಇದ್ದಾರೆ. ಶ್ರೀನಿವಾಸ್‍ಯಾದವ್, ಪಿ.ವಿನಯ್‍ಕುಮಾರ್ ನಿರ್ಮಾಪಕರಾದರೆ, ಚಿಕ್ಕಬಳ್ಳಾಪುರ ಶ್ರೀನಿವಾಸ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಚಿತ್ರವು ಫೆಬ್ರವರಿ ತಿಂಗಳಲ್ಲಿ ಜಯಲಕ್ಷೀ ಮೂವೀಸ್ ಮುಖಾಂತರ ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
3/01/19


\
ಅಂಬರೀಷ್ ಶುಭ ಹಾರೈಸಿದ ಕಡೆಯ ಚಿತ್ರ
ಚಂದನವನಕ್ಕೆ ಬೇರೆ ಭಾಷೆಯ ಚಿತ್ರರಂಗದವರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ ಎನ್ನಬಹುದು. ಇದರಿಂದ ಎರಡು ಭಾಷೆಯ ಜನರ ಬಾಂದವ್ಯ ಬೆಳೆದಂತೆ ಆಗುತ್ತದೆ. ಅದರಂತೆ ಟಾಲಿವುಡ್‍ನವರು ‘ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ ಎನ್ನುವ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸೈಕಿಯಾಟ್ರಿಕ್ ವೈದ್ಯರಾಗಿ ಸಾಯಿಕುಮಾರ್, ಪೋಷಕ ಕಲಾವಿದರಾದ ವಿಜಯ್‍ಚಂಡೂರ್, ರವಿಕಿರಣ್, ಬುಲೆಟ್‍ಪ್ರಕಾಶ್, ವೀಣಾಸುಂದರ್ ಹೊರತುಪಡಿಸಿ, ಉಳಿದವರೆಲ್ಲರೂ ಹೊರಗಿನಿಂದ ಬಂದವರಾಗಿದ್ದಾರೆ. ತೆಲುಗು ಹಾಸ್ಯ ನಟ ಗೌತಂರಾಜು ಪುತ್ರ ಕೃಷ್ಣ ನಾಯಕ, ಬಾಂಬೆ ಮೂಲದ ಕಿರಣ್‍ಚಟ್ವಾನಿ ನಾಯಕಿ.

ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಕತೆಯಲ್ಲಿ ಮದುವೆ ಮುಂಚೆ, ನಂತರ ನಡೆಯುವ ಘಟನೆಗಳು, ಪ್ರೀತಿಸಿ ಮದುವೆಯಾದರೆ ದಂಪತಿಗಳ ಸರಸ, ವಿರಸ ಎಲ್ಲವನ್ನು ಮನರಂಜನೆ, ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಬೆಂಗಳೂರು, ಚಿಕ್ಕಮಗಳೂರು, ನಂದಿಬೆಟ್ಟ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂಬತ್ತು ಚಿತ್ರಗಳನ್ನು ನಿರ್ದೇಶಿಸಿ ನಂದಿ ಪ್ರಶಸ್ತಿಗೆ ಭಾಜನರಾಗಿದ್ದ ವೇಮುಗಂಟಿ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ರೆಬಲ್ ಸ್ಟಾರ್ ಅಂಬರೀಷ್ ಅವರು ನಿಧನರಾಗುವ ಒಂದು ವಾರದ ಮುನ್ನ ಟ್ರೈಲರ್, ಹಾಡುಗಳನ್ನು ವೀಕ್ಷಿಸಿ ಚಿತ್ರದ ಕುರಿತು ಮೂರು ನಿಮಿಷ ಮಾತನಾಡಿರುವುದನ್ನು ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ತೋರಿಸಿದಾಗ ಎಲ್ಲರ ಕಣ್ಣುಗಳು ಒದ್ದೆಯಾದವು. ದೂರದ ಊರಿಂದ ಇಲ್ಲಿ ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಿದ್ದಕ್ಕೆ ರಾಕ್‍ಲೈನ್‍ವೆಂಕಟೇಶ್, ದೊಡ್ಡಣ್ಣ, ಹಂಸಲೇಖಾ ತಂಡದ ಕುರಿತು ಹೇಳಿದ್ದು ದೊಡ್ಡ ಪರದೆ ಮೇಲೆ ಬಿತ್ತರಗೊಂಡಿತು. ಸೇನೆಯಲ್ಲಿ ಗನ್ನು ಹಿಡಿದಿದ್ದ ಬಿ.ಆರ್.ಪ್ರಹ್ಲಾದ್ ನಿವೃತ್ತಿ ನಂತರ ಪೆನ್ನು ಹಿಡಿದು ಆರು ಹಾಡುಗಳಿಗೆ ಸಾಹಿತ್ಯ ರಚಿಸಿರುವ ಗೀತೆಗಳಿಗೆ, ಯಲೇಂದ್ರಮಹಾವೀರ ಸಂಗೀತ ಸಂಯೋಜಿಸಿದ್ದಾರೆ. ಎರಡು ಹಾಡುಗಳಿಗೆ ಕಂಠದಾನ ಮಾಡಿರುವ ಅನಿರುದ್ ನಾಯಕನ ಪಾತ್ರದ ಎರಡು ಭಾಷೆಗೆ ಡಬ್ಬಿಂಗ್ ಮಾಡಿದ್ದಾರೆ. ಸೌಂಡ್ ಡಿಸೈನ್ ಪಳನಿರಾಜ್, ಸಂಕಲನ ಸಂಜೀವರೆಡ್ಡಿ, ಸಾಹಸ ಥ್ರಿಲ್ಲರ್‍ಮಂಜು ನಿರ್ವಹಿಸಿದ್ದಾರೆ. ಹಿರಿಯ ನಿರ್ಮಾಪಕ, ವಿತರಕ ಕೆ.ಸಿ.ಎನ್.ಚಂದ್ರಶೇಖರ್ ಜೆಂಕಾರ್ ಸಂಸ್ಥೆಯು ಹೊರತಂದಿರುವ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದರು. ಶ್ರೀನಿವಾಸ್‍ಯಾದವ್, ಪಿ.ವಿನಯ್‍ಕುಮಾರ್ ನಿರ್ಮಾಪಕರಾದರೆ, ಚಿಕ್ಕಬಳ್ಳಾಪುರ ಶ್ರೀನಿವಾಸ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಚಿತ್ರವು ಡಿಸೆಂಬರ್ ಕೊನೆವಾರದಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/12/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore