HOME
CINEMA NEWS
GALLERY
TV NEWS
REVIEWS
CONTACT US
ಇದಂ ಪ್ರೇಮಂ ಜೀವನಂ ಬಿಡುಗಡೆಗೆ ಸಿದ್ದ ?
ಟೆಕ್ಕಿಗಳೇ ಸೇರಿಕೊಂಡು ಸಿದ್ದಪಡಿಸಿರುವ ‘ಇದಂ ಪ್ರೇಮಂ ಜೀವನಂ’ ಚಿತ್ರದಲ್ಲಿ ವಿದ್ಯಾರ್ಥಿಗಳ ಕಾಲೇಜು ಜೀವನದ ಘಟನೆಗಳು, ಅವರ ಬದುಕಿನ ಹಲವು ಮುಖಗಳನ್ನು ಅಂತರ್ಗತವಾಗಿ ಪರಿಚಿಯಿಸುವುದು, ದುಖ: ಮತ್ತು ಅಭಿವ್ಯಕ್ತಿಯ ಜೀವನದ ಸತ್ಯಗಳನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲಾದಕ್ಕಿಂತ ಹೆಚ್ಚಾಗಿ ತಂದೆ-ತಾಯಿ ಪ್ರೀತಿಗಿಂತ ಬೇರೆ ಯಾವುದು ದೊಡ್ಡದಲ್ಲ ಎಂಬುದನ್ನು ಹೇಳಲಾಗಿದೆ. ಗುಡಿಬಂಡೆ, ದೇವನಹಳ್ಳಿ, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಬೆಂಗಳೂರಿನ ಸನತ್ ನಾಯಕ ಮತ್ತು ಹುಬ್ಬಳ್ಳಿಯ ಶಾನ್ಯಕೊಪ್ಪ ನಾಯಕಿಯಾಗಿ ಕಾಣ ಸಿಕೊಂಡಿದ್ದಾರೆ. ನಾಯಕನ ಚಿಕ್ಕಪ್ಪನಾಗಿ ರಂಗಭೂಮಿ ಕಲಾವಿದ ಬಲರಾಜ್‍ವಾಡಿ ಕತೆಗೆ ತಿರುವು ಕೊಡುವ ಪಾತ್ರದಲ್ಲಿ ನಟನೆ ಇದೆ. ರಿಯಲ್ ದಂಪತಿಗಳಾದ ಅವಿನಾಶ್-ಮಾಳವಿಕ ರೀಲ್‍ನಲ್ಲಿ ಅದೇ ಪಾತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷ. ವಿನಯ್-ವಿಜಯಲಕ್ಷೀ ನಾಯಕಿಯ ಪೋಷಕರಾಗಿದ್ದಾರೆ.

ಪ್ರಚಾರದ ಸಲುವಾಗಿ ತಂಡವು ಬೆಂಗಳೂರು ಕಾಲೇಜುಗಳಿಗೆ ಭೇಟಿ ನೀಡಿ ಚಿತ್ರದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದೆ. ಅಲ್ಲದೆ ಮೆಟ್ರೋ ನಿಲ್ದಾಣಗಳಲ್ಲಿ ಸ್ಟಾಂಡೀಸ್‍ಗಳನ್ನು ಅಳವಡಿಸಿ ಸಾದ್ಯವಾದಷ್ಟು ಜನರು ಚಿತ್ರಮಂದಿರಕ್ಕೆ ಬರುವಂತೆ ವಿನೂತನ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ನಿರ್ದೇಶಕ ರಾಘವಾಂಕಪ್ರಭು ಶ್ರಮಕ್ಕೆ ಗೆಳಯರಾದ ಗೋಕುಲ್.ಎನ್.ಕೆ ಮತ್ತು ನವೀನ್ ಕುಮಾರ್ ಜಂಟಿಯಾಗಿ ಹಣ ಹೂಡಿದ್ದಾರೆ. ಇದೇ ಶುಕ್ರವಾರದಂದು ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿತ್ತು ಆದರೆ ಯುಎಫ್‍ಓ ಮತ್ತು ಕ್ಯೂಬ್ ದರ ಜಾಸ್ತಿಯಾಗಿರುವ ಹಿನ್ನಲೆಯಲ್ಲಿ ದಕ್ಷಿಣ ಭಾರತ ಚಿತ್ರರಂಗವು ಇದರ ವಿರುದ್ದ ಹೋರಾಡಲು ಪ್ರತಿಭಟನೆ ನಡೆಸುತ್ತಿರುವ ಕಾರಣ ಸಿನಿಮಾವು ತೆರೆಗೆ ಬರುವುದು ಕೊಂಚ ಮಟ್ಟಿಗೆ ಸಂದೇಹವಿದೆ. ಬಹುಶ: ಕ್ಯೂಬ್‍ನವರು ವಾಣ ಜ್ಯ ಮಂಡಳಿ ಕೋರಿಕೆಯಂತೆ ಸ್ಪಂದಿಸಿದಲ್ಲಿ ಶುಕ್ರವಾರ ಬಿಡುಗಡೆ ಮಾಡುವುದು ಖಚಿತವೆಂದು ತಂಡವು ಹೇಳಿಕೊಂಡಿದೆ
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/03/18


ಅಪ್ಪ-ಅಮ್ಮನ ಪ್ರೀತಿ ಮುಂದೆ ಬೇರೆಲ್ಲವು ಗೌಣ
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ತಂದೆ-ಮಗನ ಬಾಂದವ್ಯವನ್ನು ಚೆನ್ನಾಗಿ ತೋರಿಸಲಾಗಿತ್ತು. ಈಗ ರಾಘವಾಂಕಪ್ರಭು ಎನ್ನುವವರು ಅಪ್ಪನ ಜೊತೆಗೆ ಅಮ್ಮನ ಸಂಬಂದವನ್ನು ‘ಇದಂ ಪ್ರೇಮಂ ಜೀವನಂ’ ಎನ್ನುವ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಇವರು ಹೇಳುವಂತೆ ಇಂದಿನ ಯುವ ಪೀಳಿಗೆಯು ಪ್ರೀತಿ ಎಂದರೆ ಹುಡುಗ-ಹುಡುಗಿ ಅಂತ ತಿಳಿದುಕೊಳ್ಳುತ್ತಾರೆ. ಆದರೆ ಇದು ಹುಟ್ಟಿಕೊಳ್ಳಲು ತಂದೆ-ತಾಯಿ ಇದ್ದರೆ ಸಾದ್ಯವಾಗುತ್ತದೆ. ಇವರುಗಳ ಭಾವನಾತ್ಮಕ ಅಂಶಗಳು ಸನ್ನಿವೇಶದಲ್ಲಿ ಹೆಚ್ಚಾಗಿ ಬರುತ್ತದೆ. ಪೋಷಕರ ಮುಂದೆ ಗೆಳತನ, ಪ್ರೇಮ ಎಲ್ಲವು ಲೆಕ್ಕಕ್ಕೆ ಬರುವುದಿಲ್ಲ. ಅದಕ್ಕಾಗಿ ಚಿತ್ರವನ್ನು ಎಲ್ಲಾ ತಂದೆ-ತಾಯಿಗೆ ಅರ್ಪಿಸಲಾಗುತ್ತ್ತಿದೆ. ಫ್ಯಾಮಲಿ ಡ್ಯಾಮವನ್ನು ಸರಳತನದ ರೀತಿಯಲ್ಲಿ ತೋರಿಸಿರುವುದರಿಂದ ಸೆನ್ಸಾರ್‍ನವರು ಮೆಚ್ಚುಗೆ ವ್ಯಕ್ತಿ ಪಡಿಸಿ ಯಾವುದೇ ದೃಶ್ಯಕ್ಕೆ ತೊಂದರೆ ಮಾಡದೆ ಯು ಸರ್ಟಿಫಿಕೇಟ್ ನೀಡಿರುವುದು ಪ್ಲಸ್‍ಪಾಯಿಂಟ್. ಸಂಸ್ಕ್ರತ ಪದವನ್ನು ಶೀರ್ಷಿಕಗೆ ಬಳಸಲಾಗಿದೆ ಎನ್ನುತ್ತಾರೆ.

ತಂದೆ-ತಾಯಿ ಮುಂದೆ ಯಾವುದು ದೊಡ್ಡದಲ್ಲ ಎಂದು ಸಾರುವ ಪಾತ್ರದಲ್ಲಿ ಸನತ್ ನಾಯಕ. ಹುಬ್ಬಳ್ಳಿಯ ಶಾನ್ಯಕಾಪ್ಟೆ ನಾಯಕಿ, ತಂಗಿಯಾಗಿ ಸಿರಿರಾಜು. ಮೂವರಿಗೂ ನಟನೆ ಹೊಸ ಅನುಭವ. ರಿಯಲ್ ದಂಪತಿಗಳಾದ ಅವಿನಾಶ್-ಮಾಳವಿಕಾ ಮೊದಲಬಾರಿ ರೀಲ್‍ನಲ್ಲಿ ನಾಯಕನ ಪೋಷಕರಾಗಿ ಕಾಣ ಸಿಕೊಂಡಿದ್ದಾರೆ. ವಿನಯ್-ವಿಜಯಲಕ್ಷೀ ನಾಯಕಿಯ ಜನ್ಮದಾತರು. ನಿರ್ದೇಶಕರು,ಅಭಿಕನಸಿನಕವನ ಹಾಗೂ ಹೃದಯಶಿವ ಸಾಹಿತ್ಯದ ಐದು ಗೀತೆಗಳಿಗೆ ಜ್ಯೂಡೋಸ್ಯಾಂಡಿ ಸಂಗೀತ ಸಂಯೋಜನೆ ಇದೆ. ಛಾಯಗ್ರಹಣ ನವೀನ್‍ಪ0ಚಾಕ್ಷರಿ, ಸಂಕಲನ ಕುಮಾರ್.ಪಿ.ಕೆ ಅವರದಾಗಿದೆ. ಮೂರು ಹಂತಗಳಲ್ಲಿ 45 ದಿನಗಳ ಕಾಲ ಗುಡಿಬಂಡೆ, ದೇವನಹಳ್ಳಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಗೋಕುಲ್.ಎನ್.ಕೆ. ಮತ್ತು ನವೀನ್‍ಕುಮಾರ್.ಜೆ.ಪಿ ಜಂಟಿಯಾಗಿ ಹಣ ಹೂಡಿರುವ ಚಿತ್ರವು ತೆರೆಗೆ ಬರಲು ಸನ್ನಿಹಿತವಾಗಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-13/02/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore