HOME
CINEMA NEWS
GALLERY
TV NEWS
REVIEWS
CONTACT US
ನೈಜ ಘಟನೆಯ ಹೊಸ ಕ್ಲೈಮಾಕ್ಸ್
ಪ್ರಯೋಗಾತ್ಮಕ, ನಿಜ ಜೀವನದ ಘಟನೆಗಳ ಚಿತ್ರಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವುದರಿಂದ ಸಾಕಷ್ಟು ಇಂತಹುದೆ ಸಿನಿಮಾಗಳು ಬರುತ್ತಿವೆ. ಇದರ ಸಾಲಿಗೆ ‘ಹೊಸ ಕ್ಲೈಮಾಕ್ಸ್’ ಚಿತ್ರ ಸೇರ್ಪಡೆಯಾಗಿದೆ. ಕೂರ್ಗ್ ಮೂಲದವರಾದ ಡಾ.ಶ್ಯಾಲಿ ಅನಿವಾಸಿ ಭಾರತೀಯರಾಗಿದ್ದು, ಸದ್ಯ ಜರ್ಮನಿ ನಿವಾಸಿಯಾಗಿದ್ದಾರೆ. ಇವರ ಕುರಿತು ಹೇಳುವುದಾದರೆ ಅಂತರರಾಷ್ಟ್ರೀಯ ವಕೀಲೆ, ಸೈಕಾಲಜಿ ತಿಳಿದವರಾಗಿದ್ದು, 55 ದೇಶಗಳನ್ನು ಸುತ್ತಿದ್ದಾರೆ, ಬ್ಯುಸಿನೆಸ್ ಐಕಾನ್ ಆಗಿರುವ ಇವರಿಗೆ ನಟ,ನಿರ್ದೇಶಕ ಎಂ.ಡಿ.ಕೌಶಿಕ್ ವಿಮಾನದಲ್ಲಿ ಆಕಸ್ಮಿಕವಾಗಿ ಭೇಟಿ ಮಾಡಿ ಉಭಯಕುಶಲೋಪರಿ ಸಂದರ್ಭದಲ್ಲಿ ಕತೆ ಹೇಳಿದ್ದಾರೆ. ತುಂಬಾ ಚೆನ್ನಾಗಿದೆ ಸಿನಿಮಾ ಏಕೆ ಮಾಡಬಾರದೆಂದು ಸ್ಪೂರ್ತಿ ತುಂಬಿದಂತೆ ಶ್ಯಾಲಿ ಕತೆ ಬರೆದು ನಿರ್ದೇಶನ, ನಿರ್ಮಾಣ ಜೊತಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರದಲ್ಲಿ ನಾಯಕನಿಗೆ ಸ್ಟಾರ್ ಆಗುವ ಬಯಕೆ. ನಾಯಕಿ ಮಾಡಲ್. ಇಬ್ಬರು ಪ್ರೀತಿಸುತ್ತಿದ್ದು ಮಾತಿನ ಒಪ್ಪಂದ ಮಾಡಿಕೊಂಡು ಸಹಮತ ಸಂಬಂದದಲ್ಲಿ (ಲಿವ್ ಇನ್ ರಿಲೇಷನ್‍ಶಿಪ್) ಇರುತ್ತಾರೆ. ಒಂದು ಹಂತದಲ್ಲಿ ತಾರಕಕ್ಕೆ ಹೋದಾಗ ಇವನನ್ನು ಅಸಡ್ಡೆಯಿಂದ ಕಾಣುತ್ತಾಳೆ. ಇದರಿಂದ ಇವನ ಕನಸು ಈಡೇರದೆ ಇದ್ದಾಗ, ಅದೇ ಮನೆಗೆ ಮತ್ತೋಬ್ಬಳ ಪ್ರವೇಶವಾಗುತ್ತದೆ. ಆಕೆಯು ಈತನ ಪ್ರತಿಭೆ, ಬುದ್ದಿವಂತಿಕೆಯನ್ನು ಕಂಡು ಇವನ ಇಚ್ಚೆಯಂತೆ ಮೇಲೆ ಬರಲು ಸಲಹೆ,ಮಾರ್ಗದರ್ಶನ ನೀಡುತ್ತಾಳೆ. ಮುಂದೆ ತನ್ನ ತಪ್ಪಿನ ಅರಿವಾಗಿ ವಾಪಸ್ಸು ಬಂದಾಗ, ಅವನು ಹಳೇ ಕ್ಲೈಮಾಕ್ಸ್ ಮರೆತಿದ್ದು, ಜೀವನದಲ್ಲಿ ಹೊಸ ಕ್ಲೈಮಾಕ್ಸ್‍ನಿಂದ ನೆಮ್ಮದಿಯಾಗಿದ್ದೇನೆ ಎಂದು ಹೇಳುವುದೇ ಕತೆಯ ತಿರುಳು. ಸೆನ್ಸಾರ್‍ನವರು ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.

ಪೋಷಕ ಪಾತ್ರಗಳಲ್ಲಿ ಅಭಿನಯಸಿದ್ದ ನರೇಶ್‍ಗಾಂಧಿ, ಅದರಂತೆ ಉಪನಾಯಕಿಯಾಗಿ ಗುರುತಿಸಿಕೊಂಡಿದ್ದ ಅನಿತಾಭಟ್ ಇಬ್ಬರಿಗೂ ಪೂರ್ಣಪ್ರಮಾಣದ ಪಾತ್ರಕ್ಕೆ ಮೊದಲಬಾರಿ ಅವಕಾಶ ಸಿಕ್ಕಿದೆ. . ನಾಯಕನಿಗೆ ಧೈರ್ಯ ತುಂಬವ ಪಾತ್ರದಲ್ಲಿ ನಿರ್ಮಾಪಕಿ ನಟನೆ ಇದೆ. ಅಲ್ಲದೆ ಇವರ ಜೀವನದ ಶೇಕಡ 90ರಷ್ಟು ಘಟನೆಯನ್ನು ಸನ್ನಿವೇಶಕ್ಕೆ ಬಳಸಿಕೊಂಡಿದ್ದಾರೆ. ಎರಡು ಹೆಣ್ಣುಗಳ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಪ್ರಯತ್ನ ಮಾಡಿರುವುದು ವಿಶೇಷವಾಗಿದೆ.

ಮೂರು ಹಾಡುಗಳಿಗೆ ಸಂಗೀತ ಒದಗಿಸಿರುವುದು ಮಾರುತಿ, ತಾಂತ್ರಿಕ ನಿರ್ದೇಶನ ಎಂ.ಡಿ.ಕೌಶಿಕ್, ಛಾಯಗ್ರಹಣ ಗೌರಿವೆಂಕಟೇಶ್, ಸಂಕಲನ ಅರುಣ್‍ಥಾಮಸ್-ಡಿ.ಐ.ಥಾಮ್ಸನ್, ಸಂಭಾಷಣೆಗೆ ಶೇಷಗಿರಿ ಪೆನ್ನು ಕೆಲಸ ಮಾಡಿದೆ. ಪೂನಾ ಫಿಲಿಂ ಶಾಲೆಯ ಪ್ರಾಧ್ಯಪಕ ರಮೇಶ್‍ಕಾಮತ್, ಶರತ್ ತಾರಗಣದಲ್ಲಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
13/06/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore