HOME
CINEMA NEWS
GALLERY
TV NEWS
REVIEWS
CONTACT US

HEBBULI’ TEAM THANKS MEDIA, PEOPLE FOR GOOD INITIAL
T
he team of ‘Hebbuli’ took turns to thank the media and the people of Karnataka for the support extended to the film and for patronizing it in a big way. The team held a special thanksgiving meet on Tuesday night to celebrate the good initial that the film has drawn after its release ahead of the Mahashivaratri festival.  

While thanking the media and people of Karnataka, producer Raghunath said all the presspersons had encouraged the movie and added that Kannada films should win at the box-office. Producer Umapathi said there’s a lot of time to talk about the success of the movie but added that it is just a thanksgiving meet for all of them associated with the film. However, the producers did not disclose the collection figures or numbers that the film had made.  

Director S Krishna said he hadn’t met reporters after the title launch of Hebbuli but the journalists had extended support to the team wholeheartedly during the making of the film and thanked all of them for doing so.  

Kichcha Sudeep said people have enjoyed the film right through from the opening day on Wednesday midnight last week and on the release day on Thursday. He said he didn’t expect this kind of response from the people. He said media reviews were positive and added that the film had given him a new life. He said he has kept all the clippings of the movie’s reviews that have appeared in the newspapers.  

Sudeep said records are not important but it is important to make a good film. He said he had learnt a lot during the making of the film. He said if the producer and director are happy it also made him happy. He said the next get-together will be the families and promised that he will bring members of his family. Sudeep said there is no need to boast about the movie or its collections but added that he was happy about the film’s response even outside the state.  

Sudeep said he will accompany the producer on a tour to London and the Gulf next week before embarking on a road show that has been planned as part of Hebbuli promotion in cities.
-1/03/17

ಸೋದರರ ಪ್ರೀತಿ, ಪ್ರತೀಕಾರ; ಇದು ಹೆಬ್ಬುಲಿಯ ಅವತಾರ
ಸೋದರರಿಬ್ಬರ ನಡುವಿನ ಪ್ರೀತಿ-ಪ್ರೇಮ. ಪ್ರಾಮಾಣ ಕ ಅಧಿಕಾರಿಗೆ ಸಿಕ್ಕ ಬಹುಮಾನ, ಅಣ್ಣನ ಸಾವಿಗೆ ತಮ್ಮನ ಪ್ರತೀಕಾರ. ಇದಿಷ್ಟು ಈವಾರ ಬಿಡುಗಡೆಯಾದ ಹೆಬ್ಬುಲಿ ಚಿತ್ರದ ಹೈಲೈಟ್ಸ್. ಸೋದರರಿಬ್ಬರೂ ದೊಡ್ಡವರಾದ ಮೇಲೆ ಒಬ್ಬ ಐ.ಎ.ಎಸ್. ಮುಗಿಸಿ ಕಲೆಕ್ಟರ್ (ರವಿಚಂದ್ರನ್) ಆದರೆ ಮತ್ತೊಬ್ಬ ದೇಶಕಾಯುವ ಯೋಧ ಅಂದರೆ ಪ್ಯಾರಾ ಮಿಲಿಟರಿ ಕಮಾಂಡೋ(ಸುದೀಪ್) ಆಗುತ್ತಾನೆ. ಇಲ್ಲಿ ಇಬ್ಬರದೂ ಬೇರೆ ಬೇರೆ ರೀತಿಯ ಸಮಾಜಸೇವೆ. ಈ ಹಾದಿಯಲ್ಲಿ ಎದುರಾಗುವ ಸಂಕಷ್ಟಗಳು ಒಬ್ಬ ಸಹೋದರನ ಜೀವವನ್ನೇ ಬಲಿತೆಗೆದುಕೊಳ್ಳುತ್ತದೆ. ಮೇಲುನೋಟಕ್ಕೆ ಆತ್ಮಹತ್ಯೆ ಎಂದು ಬಿಂಬಿತವಾದ ತನ್ನ ಪ್ರೀತಿಯ ಅಣ್ಣನ ಸಾವಿನ ರಹಸ್ಯ ಬಯಲಿಗೆಳೆಯಲು ಪಣ ತೊಡುವ ತಮ್ಮನಿಗೆ ಆ ರಹಸ್ಯವನ್ನು ಬೇಧಿಸುತ್ತಾ ಹೋದಂತೆ ಅದರ ಹಿಂದಿರುವ ದೊಡ್ಡ ಜಾಲವೇ ಕಾಣುತ್ತದೆ. ಮೆಡಿಸಿನ್ ಮಾಫಿಯಾದ ಹಿಂದಿರುವ ಕುಳಗಳನ್ನು ಬಯಲಿಗೆಳೆದು ಅವರನ್ನು ಸೆದೆಬಡಿಯುವ ಕಥೆಯನ್ನು ಹೆಬ್ಬುಲಿ ಮೂಲಕ ನಿರ್ದೇಶಕ ಕೃಷ್ಣ ತುಂಬಾ ಕಲರ್‍ಫುಲ್ ಆಗಿ ನಿರೂಪಿಸಿದ್ದಾರೆ, ಇಡೀ ಚಿತ್ರವು ರಿಚ್‍ನೆಸ್ ಆಗಿ ಮೂಡಿಬಂದಿದೆ. ಸುದೀಪ್ ಅವರ ಇಮೇಜಿಗೆ ತಕ್ಕ ಹಾಗೆ ನಿರ್ದೇಶಕ ಕೃಷ್ಣ ಚಿತ್ರದಲ್ಲಿ ಹಲವು ಸನ್ನಿವೇಶಗಳನ್ನು ಸೃಷ್ಠಿಸಿದ್ದಾರೆ. ನಾಯಕ ಕಿಚ್ಚ ಸುದೀಪ್ ಅವರ ಎಂಟ್ರಿ ಅವರ ಸ್ಟಾರ್‍ವ್ಯಾಲ್ಯೂಗೆ ತಕ್ಕಂತೆಯೇ ಇದೆ. ಆರಂಭದ ಒಂದೆರಡು ಸನ್ನಿವೇಶಗಳಲ್ಲಿ ಕಂಡುಬರುವ ಸೇನಾಪಡೆಯ ಸೀನ್‍ಗಳು ಮುಂದೆ ಕಣ್ಮರೆಯಾಗಿ ಚಿತ್ರಕಥೆ ಫ್ಯಾಮಿಲಿ ಸೆಂಟಿಮೆಂಟ್ ಆಗಿ ಕನ್ವರ್ಟ್ ಆಗುತ್ತದೆ. ಮೆಡಿಕಲ್ ಓದುತ್ತಿರುವ ನಾಯಕಿ ಅಮಲಾ ಪೌಲ್ ಇಲ್ಲಿ ನಾಯಕನ ಕೆಲಸಕ್ಕೆ ಬೆಂಗಾವಲಾಗಿ ನಿಲ್ಲುತ್ತಾಳೆ. ಇಲ್ಲಿ ಸುದೀಪ್ ಮತ್ತು ಅಮಲಾ ಅಭಿನಯದ ಹಾಡು, ಅದಕ್ಕೆ ಬಳಸಲಾಗಿರುವ ಕಾಶ್ಮೀರದ ಪರಿಸರದಲ್ಲಿ ಮಂಜು ತುಂಬಿದ ವಾತಾವರಣವನ್ನು ಛಾಯಾಗ್ರಾಹಕ ಕರುಣಾಕರ ಅವರು ಬಳಸಿಕೊಂಡಿರುವ ರೀತಿ, ಶಾಟ್ ಡಿವೈಡಿಂಗ್, ಕಾಸ್ಟೂಮ್ಸ್ ಆ ಸೀನ್‍ಗಳಿಗೆ ರಿಚ್‍ನೆಸ್ ತಂದುಕೊಟ್ಟಿದೆ.

ಚಿತ್ರದಲ್ಲಿ ರವಿಚಂದ್ರನ್ ಅವರದು ಕಲೆಕ್ಟರ್ ಪಾತ್ರ. ತನ್ನ ಕಾರು ಚಾಲಕನ ಮಗಳಿಗೆ ಕ್ಯಾನ್ಸರ್ ಬಂದು ಚಿಕಿತ್ಸೆ ವೆಚ್ಚ ಭರಿಸಲಾಗದೆ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಾಗ ಇದಕ್ಕೆ ಹೇಗಾದರೂ ಪರಿಹಾರ ಹುಡುಕಬೇಕೆಂದು ಯೋಚಿಸಿ, ಜೆನೆಟಿಕ್ ಮೆಡಿಸನ್‍ನ ರೂಪುರೇಷೆ ತಯಾರಿಸುತ್ತಾರೆ. ಆ ಬಗ್ಗೆ ಆರೋಗ್ಯ ಮಂತ್ರಿಯ ಬಳಿ ಕೂಡ ಪ್ರಸ್ತಾಪಿಸುತ್ತಾರೆ. ಇಂಥ ಖಾಯಿಲೆಗಳಿಗೆ ಮೆಡಿಸಿನ್ ತಯಾರಿಸಿ ಸಾವಿರಾರು ರೂಗಳಿಗೆ ಆ ಮೆಡಿಸಿನ್ ಮಾರಿ ಹಣ ಗಳಿಸುವವರಿಗೆ ಕುತ್ತಾಗುತ್ತದೆಂದು ಅರಿತು ಅದೇ ಕಾರಣಕ್ಕೆ ಡಿಸಿಯನ್ನು ಕೊಲೆ ಮಾಡುತ್ತಾರೆ. ನಟ ರವಿಶಂಕರ್ ಮಂತ್ರಿಯ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಇಲ್ಲಿ ಸಂಗೀತ ಕೊಟ್ಟಿರುವವರು ಅರ್ಜುನ್ ಜನ್ಯ ಅವರದು ಚಿತ್ರದಲ್ಲಿ ದೊಡ್ಡ ಪಾಲು. ರವಿಚಂದ್ರನ್ ಮತ್ತು ಸುದೀಪ್ ನಡುವಿನ ಹಾಡು ಚಿತ್ರದ ಇನ್ನೊಂದು ಆಕರ್ಷಣೆ.

ಇನ್ನು ಚಿತ್ರದಲ್ಲಿ ಸುದೀಪ್ ತನ್ನ ಹೇರ್‍ಸ್ಟೈಲ್‍ನಿಂದ ತುಂಬಾ ವಿಭಿನ್ನವಾಗಿಯೇ ಕಾಣುತ್ತಾರೆ. ಅಲ್ಲದೆ ಚಿತ್ರದುದ್ದಕ್ಕೂ ಸುದೀಪ್ ಗಂಭೀರ ಅಭಿನಯ ಕೊಟ್ಟಿದ್ದಾರೆ. ಹಾಸ್ಯನಟ ಚಿಕ್ಕಣ್ಣ ಅವರ ಕಾಮಿಡಿ ಇಲ್ಲಿ ವರ್ಕೌಟ್ ಆಗಿಲ್ಲ. ಒಟ್ಟಿನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದ ಹೆಬ್ಬುಲಿ ಜನರನ್ನು ತಣ ಸುವಲ್ಲಿ ಗೆದ್ದಿದೆ.
-26/02/17

SUDEEP STARRER ‘HEBBULI’ GETS U/A, FILM RELEASING ON FEB 23
T
he much-awaited Sudeep starrer Hebbuli has got a U/A certificate from the censors without any cuts and will release in about 500 centres all over Karnataka ahead of Mahashivaratri on Feb 23. The film is produced by Umapathi and Raghunath under the banners of Umapathi Films and SRV Productions. Jack Manju is distributing the film. The film is directed by S Krishna of Mungaru Male fame who is also handling the camera department of the movie. The movie stars Ravichandran, Amala Paul and Ravishankar among others.

Producer Umapathi told reporters that the film got over so soon that he seems like that the team has lost something. Ravichandran who was a stranger to him has become like his father, the producer said and Sudeep like a brother, he added.

Producer Raghunath said he had gained self-confidence after producing this film. He said he has come to be recognized as the producer of Hebbuli in film circles. He said Ravichandran and Sudeep had become friends for life.

Director Krishna said eight months of hard work had borne fruit now. He said he had to make Hebbuli first but Gajakesari happened before this one and justified that people will know why given the preparation that Hebbuli required before it went on the sets. The director said the film had fetched a good price from the sale of dubbing rights into Telugu, Tamil and Hindi. He said two years of hard work cannot be explained in a minute or even in a day. He said respect for Sudeep went up after he agreed to do the movie only after to listening to a one line story.

Ravishankar said though he is an on-screen villain he is a soft man off it. He said there are two villains in the movie and added that audiences will have to wait to see who the other one is.

Ravichandran said he is meeting the producer after eight months and added that Hebbuli is a well made film. He said people ask about the chemistry between the hero and the heroine but he said his chemistry with Sudeep was wonderful and predicted that Hebbuli will become another Manikya. He said he came to know of Sudeep’s controlling capacity during the dubbing of Apoorva. Ravichandran said the film had crossed the budget fixed for it and has become a big budget film. He said Hebbuli may be his 92th or 93rd film.

Sudeep said when the director wanted him to change the actor’s hairstyle he wondered if it will suit him. The director then said audiences accept a movie when the hero acts with so many different heroines. He said the director was confident that audiences will like his hairstyle. He said the media covered his hairstyle extensively which gave the movie good mileage and publicity. He came to know that people are following his hairstyle by getting themselves styled on the same lines.

Sudeep said Arjun Janya will go places with his music as he has scored good tunes in the movie. The actor said Ravichandran is a showman and a dream merchant and remembered the first time he had coffee with the Prema Loka star at his place. Sudeep said there is no alternative to Ravishankar’s voice and he has dubbed for many and helped actors flourish. The film has elements of belief, strength, breath, love, family and future in it. 
-20/02/17ಫೆಬ್ರುವರಿ 23ಕ್ಕೆ ತೆರೆಯ ಮೇಲೆ `ಹೆಬ್ಬುಲಿ’ ಘರ್ಜನೆ!
ಎಸ್.ಆರ್.ವಿ ಪ್ರೊಡಕ್ಷನ್ ಮತ್ತು ಉಮಾಪತಿ ಫಿಲಂಸ್ ಲಾಂಛನದಲ್ಲಿ ರಘುನಾಥ್ ಮತ್ತು ಉಮಾಪತಿ ಜಂಟಿಯಾಗಿ ನಿರ್ಮಿಸಿರುವ, ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿ. ಕಿಚ್ಚ ಸುದೀಪ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಒಟ್ಟಿಗೇ ತೆರೆ ಹಂಚಿಕೊಂಡುವ `ಹೆಬ್ಬುಲಿ'ಯಲ್ಲಿ ಅಮಲಾ ಪೌಲ್ ನಾಯಕಿಯಾಗಿ ನಟಿಸಿದ್ದಾರೆ. ರವಿಶಂಕರ್, ಸಂಪತ್ ರಾಜ್ ಮತ್ತು ಚಿಕ್ಕಣ್ಣ ಸೇರಿದಂತೆ ಅನೇಕ ಖ್ಯಾತ ನಟರ ಪಡೆಯೇ ತಾರಾಗಣದಲ್ಲಿದೆ. ಕಿಚ್ಚ ಸುದೀಪ್ ಅವರ ಡಿಫರೆಂಟ್ ಲುಕ್ ಸೇರಿದಂತೆ ನಾನಾ ಕಾರಣಗಳಿಂದ ಭಾರೀ ಕುತೂಹಲ ಕೆರಳಿಸಿರೋ ಈ ಚಿತ್ರ ಫೆಬ್ರವರಿ 23ರ ಶಿವರಾತ್ರಿ ಹಬ್ಬದ ಮುನ್ನಾದಿನ ತೆರೆ ಕಾಣಲಿದೆ.

ಗಜ ಕೇಸರಿ ಚಿತ್ರದ ಮೂಲಕ ನಿರ್ದೇಶಕರಾಗಿ ಶೈನಪ್ ಆಗಿದ್ದ ಕೃಷ್ಣ ನಿರ್ದೇಶನದ ಎರಡನೇ ಚಿತ್ರ ಹೆಬ್ಬುಲಿ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರೋ ಎಲ್ಲ ಹಾಡುಗಳೂ ಚೆಂದಗಿವೆ. ಟೈಟಲ್ ಸಾಂಗ್‍ನಿಂದ ಮೊದಲ್ಗೊಂಡು ಎಲ್ಲ ಹಾಡುಗಳೂ ಕಿಚ್ಚನ ಅಭಿಮಾನಿಗಳನ್ನು ಹುಚ್ಚೆಬ್ಬಿಸಿವೆ. ಸಾಮಾನ್ಯವಾಗಿ ಈ ಅಭಿಮಾನಿಗಳಿಗೆ ಮುದ ನೀಡಿ ಹುಚ್ಚೇಳುವಂತೆ ಮಾಡಿರುವುದು `ತೆಳ್ಳಗೆ ಬೆಳ್ಳಗೆ ಇದ್ದಾನೆ, ಉದ್ಧಕ್ಕೆ ನಿಂತರೆ ಮದ್ದಾನೆ’ ಹಾಡು. ಅರ್ಜುನ್ ಜನ್ಯ ಸಂಗೀತದ ರಿದಂ ಹಾಗೂ ಅದಕ್ಕೆ ಪೂರಕವಾದ ಸಾಹಿತ್ಯ ಇರೋ ಈ ಹಾಡೀಗ ಎಲ್ಲೆಡೆ ಗುನುಗಿಸಿಕೊಳ್ಳುತ್ತಿದೆ. ಅಭಿಮಾನಿಗಳಿಗಂತೂ ಈ ಹಾಡೇ ಇಷ್ಟವಾಗಿದೆ. ಯಾಕಂದ್ರೆ ಆ ಹಾಡು ಸುದೀಪ್ ಪರ್ಸನಾಲಿಟಿಗೂ ಅನ್ವಯವಾಗೋವಂತಿದೆ!

ಹೆಬ್ಬುಲಿಯ ವಿಶೇಷತೆಗಳು ಇಷ್ಟಕ್ಕೇ ಸೀಮಿತವಾಗೋದಿಲ್ಲ. ಯಾವ ಸಿನಿಮಾ ಮಾಡುವಾಗಲಾದರೂ ಕಥೆಯ ಬಗ್ಗೆ ತೀವ್ರವಾಗಿ ಗಮನ ಇಡುವವರು ಸುದೀಪ್. ಆದರೆ ಅಂಥಾ ಸುದೀಪ್ ಅವರೇ ಪೂರ್ತಿ ಕಥೆ ಕೇಳದೆಯೇ ಹೆಬ್ಬುಲಿಯನ್ನು ಒಪ್ಪಿಕೊಂಡಿದ್ದರಂತೆ. ಅದಕ್ಕೆ ಕಾರಣ ಲಾಗಾಯ್ತಿನಿಂದಲೂ ನಿರ್ದೇಶಕ ಕೃಷ್ಣರೊಂದಿಗಿನ ಒಡನಾಟ ಮತ್ತು ಅವರ ¥ಂತಿeಭೆಯ ಬಗೆಗಿರುವ ನಂಬಿಕೆ. ಸುದೀಪ್ ಅವರ ರಂಗ ಎಸ್‍ಎಸ್‍ಎಲ್‍ಸಿ ಹಾಗೂ ಕೆಂಪೇಗೌಡ ಚಿತ್ರಗಳಿಗೆ ಕ್ಯಾಮೆರಾ ಕೆಲಸ ಮಾಡಿದ್ದ ಕೃಷ್ಣ ಆ ಹಂತದಲ್ಲಿಯೇ ಸುದೀಪ್ ಒಡನಾಟ ಹೊಂದಿದ್ದರು. ಅದೀಗ ಹೆಬ್ಬುಲಿ ಎಂಬ ಅಚ್ಚರಿಯ ಮೂಲಕ ಮತ್ತಷ್ಟು ಗಟ್ಟಿಯಾಗಿದೆ. ಸುದೀಪ್ ಅವರು ತಮ್ಮ ಮೇಲಿಟ್ಟ ನಂಬಿಕೆಯನ್ನೇ ಜವಾಬ್ದಾರಿ ಅಂದುಕೊಂಡು ಕೃಷ್ಣ ಹೆಬ್ಬುಲಿಯನ್ನು ರೂಪಿಸಿದ್ದಾರೆ.

ನಿರ್ಮಾಪಕರಾದ ರಘುನಾಥ್ ಮತ್ತು ಉಮಾಪತಿ ಈ ಚಿತ್ರವನ್ನು ಅತೀವ ಪ್ರೀತಿಯಿಂದ ರೂಪಿಸಿದ್ದಾರೆ. ಪ್ರತೀ ಹಂತದಲ್ಲಿಯೂ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್, ರವಿಕಿಶನ್ ಕಬೀರ್ ಸೇರಿದಂತೆ ಲೀಡ್ ವಿಲನ್ನುಗಳ ದಂಡೇ ಇದೆ. ಈ ಹಿಂದೆ ನಿರ್ದೇಶಕ ಕೃಷ್ಣರ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದ ಕರುಣಾಕರ್ ಹೆಬ್ಬುಲಿಗೆ ಕ್ಯಾಮೆರಾಮನ್ ಆಗಿದ್ದಾರೆ. ಈ ಹಿಂದೆ ಜಯಲಲಿತಾ ಮುಂತಾದ ಚಿತ್ರಗಳಿಗೆ ಕ್ಯಾಮೆರಾಮನ್ ಆಗಿದ್ದ ಇವರಿಗಿದು ಮೂರನೇ ಸ್ವತಂತ್ರ ಸಿನಿಮಾ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರೋ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನ, ರವಿಕುಮಾರ್ ಸಂತೇಹಕ್ಲು ಕಲಾ ನಿರ್ದೇಶನ ಮತ್ತು ಹರ್ಷ ನೃತ್ಯ ನಿರ್ದೇಶನವಿದೆ.
-8/02/17

HEBBULI’ AUDIO RELEASED IN DAVANGERE
T
he audio of the much-awaited Kannada film Hebbuli was released in Davangere in the wee hours of Monday. The programme which was scheduled for Sunday evening went on till 2.30 am on Monday with huge crowds attending the function. The film is produced by Umapathy and Raghunath and it stars Sudeep, Ravichandran, Amala Paul, Bhojpuri actor Ravi Kishan Ravishankar, Chikkanna and Avinash among others. The film is directed by Krishna.

The audiences were enthralled by song and dance performances from several actors who attended the function. Arjun Janya started off with a performance which was followed by Chikkanna. Ravishankar sang a song and danced which surprised the crowds. He also enacted a scene from his films without mouthing any dialogues. Haripriya entertained the crowd with her dance.

Ravichandran who is playing Sudeep’s elder brother in the film recalled the time when he attended the 100 days function of Naanu Nanna Hendthi with his on-screen wife and real-life wife in Davangere. He also went nostalgic about the audio release that was organized for his movie Ekangi in Davangere. He said he was happy to be back in Davangere. Today, he said he is playing Sudeep’s brother while he played his father in Manikya. He said he may play grandfather to his son in the future and added that even if he plays brother, father or grandfather he will have heroines acting with him.

Ravichandran said he would like to make films that make people happy. He said he could have made Malla kind of films but there was a need to make new attempts.

Sudeep who arrived on stage from a huge crane said friends and family have been encouraging and Kannada audiences are blessing him which is enough for this lifetime. Sudeep said he was proud to be a Kannadiga and added that Kannada cinema was no pushover or a small industry. Sudeep's fans greeted the actors with flowers, bouquets and even presented him a silver crown. 

Anushri compered the show. 
-27/12/16
`ಹೆಬ್ಬುಲಿ'ಯ ಚಿತ್ರೀಕರಣ ಬಹುತೇಕ ಪೂರ್ಣ
ಕಿಚ್ಚ ಸುದೀಪ್ ಈವರೆಗೆ ಕಾಣ ಸಿಕೊಳ್ಳದಿದ್ದ ಪಾತ್ರವೊಂದಕ್ಕೆ ಜೀವ ತುಂಬಿರೋ ಚಿತ್ರ `ಹೆಬ್ಬುಲಿ’. ಹೆಸರಲ್ಲೇ ಫೋರ್ಸ್ ಇರೋ ಈ ಚಿತ್ರದ ಚಿತ್ರೀಕರಣ ಯಾವ ಹಂತದಲ್ಲಿದೆ, ಯಾವಾಗ ತೆರೆ ಕಾಣುತ್ತೆ ಅಂತೆಲ್ಲ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರೂ ಕುತೂಹಲಗೊಂಡಿದ್ದಾರೆ. ಇಂಥದ್ದೊಂದು ದೊಡ್ಡ ಕ್ಯಾನ್ವಾಸ್‍ನ ಚಿತ್ರ ರೂಪುಗೊಳ್ಳಬೇಕೆಂದರೆ, ಅದು ಧೈರ್ಯಶಾಲಿ ನಿರ್ಮಾಪಕರುಗಳಿಂದ ಮಾತ್ರ ಸಾಧ್ಯ. ಈ ಅದನ್ನು ಸಾಧ್ಯವಾಗಿಸಿರುವವರು ಎಸ್.ಆರ್.ವಿ ಪೆÇ್ರಡಕ್ಷನ್ಸ್‍ನ ರಘುನಾಥ್ ಮತ್ತು ಉಮಾಪತಿ ಪಿಕ್ಚರ್ಸ್‍ನ ಉಮಾಪತಿ. ಕನ್ನಡ ಚಿತ್ರರಂಗಕ್ಕೆ ಅದ್ದೂರಿಯಾದ ಮತ್ತು ಜಾಗತಿಕ ಕಥೆಯನ್ನು ಹೊಂದಿದ ಸಿನಿಮಾ ನೀಡಬೇಕು ಎನ್ನುವುದು ರಘುನಾಥ್ ಮತ್ತು ಉಮಾಪತಿ ಅವರ ಕನಸಾಗಿತ್ತು. `ಹೆಬ್ಬುಲಿ'ಯ ಮೂಲಕ ಅದು ನನಸಾಗುತ್ತಿದೆ.

ಹೆಬ್ಬುಲಿ ಚಿತ್ರತಂಡ ಅಚ್ಚುಕಟ್ಟಾಗಿ ಸಿನಿಮಾವನ್ನು ರೂಪಿಸುತ್ತಾ ಸ್ವಲ್ಪ ಸ್ವಲ್ಪವೇ ಮಾಹಿತಿಯನ್ನು ಆಗಾಗ ರವಾನಿಸುತ್ತಾ ಬಂದಿದೆ.

ಹೆಬ್ಬುಲಿ ಪಕ್ಕಾ ಆರ್ಮಿ ಬೇಸ್ಡ್ ಚಿತ್ರ. ಇಲ್ಲಿ ಸುದೀಪ್ ದೇಶಕ್ಕೆ ಕಂಟಕವಾಗಿರೋ ಉಗ್ರರನ್ನು ಅವರಿಗೆ ರಕ್ಷಣೆ ಕೊಟ್ಟ ದೇಶಕ್ಕೇ ನುಗ್ಗಿ ಹೊಡೆಯುವ ಸ್ಪಾ ಕಮಾಂಡರ್ ಆಗಿ ನಟಿಸಿದ್ದಾರೆ. ಚಿತ್ರ ತಂಡವೇ ಹೇಳುವ ಪ್ರಕಾರ ಈ ಪಾತ್ರ ಸುದೀಪ್ ಅವರಿಗೆ ಹೇಳಿ ಮಾಡಿಸಿದಂತಿದೆ. ಈಗಾಗಲೇ ಈ ಪಾತ್ರದಲ್ಲಿ ಸುದೀಪ್ ಅವರ ವಿಭಿನ್ನ ಗೆಟಪ್ಪುಗಳು ವೈರಲ್ ಆಗಿ ಬಿಟ್ಟಿವೆ.

ಅಂದಹಾಗೆ ಮುಹೂರ್ತ ಆರಂಭವಾದಾಗಿನಿಂದಲೂ ಹೆಬ್ಬುಲಿ ಚಿತ್ರತಂಡ ನಿರಂತರವಾಗಿ ಚಿತ್ರೀಕರಣ ನಡೆಸುತ್ತಲೇ ಬಂದಿದೆ. ಒಂದು ದಿನವೂ ವ್ಯರ್ಥವಾಗದಂತೆ ನಿಗಾ ವಹಿಸಿದರ ಫಲವಾಗಿಯೇ ಇದೀಗ ಹೆಬ್ಬುಲಿಯ ಶೇಖಡಾ ತೊಂಬತ್ತರಷ್ಟು ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ. ಬೆಂಗಳೂರು, ಮೈಸೂರು ಮತ್ತು ಗೋವಾ ಮುಂತಾದೆಡೆಗಳಲ್ಲಿ ಬೇಕಾದ ಲೊಕೇಷನ್ನುಗಳಿಗಾಗಿ ತಲಾಷು ನಡೆಸಿ ಈ ಚಿತ್ರೀಕರಣ ಮಾಡಲಾಗಿದೆಯಂತೆ. ಈ ಸುದೀರ್ಘ ಚಿತ್ರೀಕರಣದ ಹಂತದಲ್ಲಿ ಇಡೀ ಚಿತ್ರ ತಂಡವೇ ಹೆಜ್ಜೆ ಹೆಜ್ಜೆಗೂ ಹೊಸಾ ಚಿತ್ರಗಳನ್ನು ನೋಡುವಂತಾದದ್ದು ಕಾಶ್ಮೀರದಲ್ಲಿ!
-8/10/2016
ಕಿಚ್ಚ ಸುದೀಪ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಸಂಗಮದ `ಹೆಬ್ಬುಲಿ' ಆರಂಭ
ಚಿತ್ರರಂಗದಲ್ಲಿ ಬೇರೆಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರು ಒಂದೇ ಚಿತ್ರದಲ್ಲಿ ಒಂದಾಗುತ್ತಿದ್ದಾರೆ; ಅದು `ಹೆಬ್ಬುಲಿ' ಚಿತ್ರದ ಮೂಲಕ.

ಎಸ್ ಆರ್ ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಘುನಾಥ್ ಮತ್ತು ಟಿ.ಎಸ್ ಸತ್ಯನಾರಾಯಣ ನಿರ್ಮಿಸಿತ್ತಿರುವ `ಹೆಬ್ಬುಲಿ' ಚಿತ್ರಕ್ಕೆ ಖ್ಯಾತ ಉದ್ಯಮಿ ಉಮಾಪತಿ ಫಿಲಂಸ್‌ನ ಉಮಾಪತಿ ಅವರು ಸಹ ನಿರ್ಮಾಪಕರಾಗಿ ಕೈಜೋಡಿಸುತ್ತಿದ್ದಾರೆ.

ಕಿಚ್ಚ ಸುದೀಪ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ `ಹೆಬ್ಬುಲಿ'ಯಲ್ಲಿ ರವಿಶಂಕರ್, ಸಂಪತ್ ರಾಜ್ ಮತ್ತು ಚಿಕ್ಕಣ್ಣ ಸೇರಿದಂತೆ ಅನೇಕ ಖ್ಯಾತ ನಟರ ಪಡೆಯೇ ತಾರಾಗಣದಲ್ಲಿದೆ.

ಏಪ್ರಿಲ್ ೧೮ನೇ ತಾರೀಖು `ಹೆಬ್ಬುಲಿ' ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ನಂತರ ಏಪ್ರಿಲ್ ೨೫ರಿಂದ ಸತತವಾಗಿ ಚಿತ್ರೀಕರಣ ಆರಂಭವಾಗಲಿದೆ.

ಮುಂಗಾರು ಮಳೆ ಚಿತ್ರದ ಛಾಯಾಗ್ರಹಣದ ಮೂಲಕ ಹೆಸರು ಮಾಡಿದವರು ಕೃಷ್ಣ. ನಂತರ ಅನೇಕ ಯಶಸ್ವಿ ಚಿತ್ರಗಳಿಗೆ ಕ್ಯಾಮೆರಾ ಕೆಲಸ ನಿಭಾಯಿದ ಕೃಷ್ಣ ಗಜಕೇಸರಿ ಸಿನಿಮಾದ ಮೂಲಕ ನಿರ್ದೇಶಕರೂ ಆದವರು. ಇವರ ನಿರ್ದೇಶನದ ಮೊದಲ ಚಿತ್ರವೇ ಸೂಪರ್ ಹಿಟ್ ಆಗಿತ್ತು. ನಂತರ ಕೃಷ್ಣ ಈಗ ತಮ್ಮ ಎರಡನೇ ಚಿತ್ರ `ಹೆಬ್ಬುಲಿ'ಯನ್ನು ನಿರ್ದೇಶಿಸಲು ತಯಾರಾಗಿದ್ದಾರೆ.

ಕೃಷ್ಣ ಅವರೇ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ `ಹೆಬ್ಬುಲಿ' ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ, ಕರುಣಾಕರ್ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಮತ್ತು ಸುಧೀಂದ್ರ ವೆಂಕಟೇಶ್ ಅವರ ಪತ್ರಿಕಾ ಪ್ರಚಾರವಿದೆ. ಜಮ್ಮು, ಕಾಶ್ಮೀರ, ಬಳ್ಳಾರಿ, ಹೊಸಪೇಟೆ, ಮೈಸೂರು, ಬೆಂಗಳೂರು, ಹೈದರಾಬಾದ್, ಆಸ್ಟ್ರೇಲಿಯಾ, ನಾರ್ವೆ, ಲಂಡನ್ ಮತ್ತು ಐಸ್‌ಲ್ಯಾಂಡ್ ಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ.
-6/04/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore