HOME
CINEMA NEWS
GALLERY
TV NEWS
REVIEWS
CONTACT US
ಸಿನಿಮಾ ನಿರ್ದೇಶನ ಮಾಡುವವರಿಗೆ ಕಿರುಚಿತ್ರ ಪ್ರವೇಶ ಪರೀಕ್ಷೆ ಇದ್ದಂತೆ
ಚಿತ್ರರಂಗದಲ್ಲಿ ತನ್ನ ಪ್ರತಿಭೆಯನ್ನು ತೋರಿಸಲು ಕಿರುತೆರೆ ಒಂದು ರೀತಿಯಲ್ಲಿ ಪ್ರವೇಶ ಪರೀಕ್ಷೆಯಂತೆ ಕಂಡುಬರುತ್ತದೆ. ಇದರಲ್ಲಿ ಪ್ರಶಂಸೆ ಸಿಕ್ಕಲ್ಲಿ ಹಿರಿತೆರೆಗೆ ಸುಲಭವಾಗಿ ಹಾರಬಹುದು. ಸದ್ಯಕ್ಕೆ ಈ ಟ್ರೇಂಡ್ ಚಾಲ್ತಿಯಲ್ಲಿದೆ. ಇದರ ಸಾಲಿಗೆ ‘ಹೆಡ್ ಮಾಸ್ಟರ್ ವಾಮನರಾವ್’ ಶಾರ್ಟ್ ಫಿಲ್ಮ್ ಸೇರ್ಪಡೆಯಾಗಿದೆ. ಟೆಕ್ಕಿಯೊಬ್ಬ ಕೆಲಸದ ನಿಮಿತ್ತ ತಾನು ಓದಿದ ಶಾಲೆಗೆ ಹೋಗಬೇಕಾದ ಸಂದರ್ಭ ಬರುತ್ತದೆ. ಅಲ್ಲಿಗೆ ಭೇಟಿ ನೀಡಿದಾಗ ಅದೇ ಹೆಡ್ ಮಾಸ್ಟರ್ ಸೇವೆಯನ್ನು ಸಲ್ಲಿಸುತ್ತಿದ್ದು, ಯಾವುದೇ ರೀತಿಯಲ್ಲಿ ಬದಲಾವಣೆಯಾಗದಿರುವುದನ್ನು ಕಂಡು ಖೇದಗೊಳ್ಳುತ್ತಾನೆ. ಮಾಸ್ಟರ್ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಲ್ಲದೆ ಚಿಣ್ಣರ ವೈಯಕ್ತಿಕ ಆಸೆಗಳನ್ನು ನೆರವೇರಿಸುತ್ತಿರುತ್ತಾರೆ. ಮುಂದೆ ಅವರು ಸೇವೆಯಿಂದ ನಿವೃತ್ತಿ ಹೊಂದುವಲ್ಲಿಗೆ ಕತೆಗೆ ತೆರೆ ಬೀಳುತ್ತದೆ. ಜೀವನ, ವ್ಯಕ್ತಿ ಇವುಗಳಿಗೆ ಮಾರ್ಗದರ್ಶಕರಾಗಿರುವುದು ಗುರುಗಳು. ಬ್ರಹ್ಮ ಆಯುಷ್ಯ ಬರೆದರೆ, ಭವಿಷ್ಯವನ್ನು ರೂಪಿಸುವುದು ಶಿಕ್ಷಕರು ಎಂದು ಸಂದೇಶದಲ್ಲಿ ಹೇಳಲಾಗಿದೆ.

ಶ್ರೀನಾಥ್‍ಚಿತ್ತಾರ ಹೆಡ್ ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೆಕ್ಕಿಯಾಗಿ ಗಿರೀಶ್‍ಬಿಜ್ಜಳ್ ಕತೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಪಾಲುದಾರರು. ವಿಕ್ಟರಿ-2 ಚಿತ್ರಕ್ಕೆ ಚುಟು ಚುಟು ಹಾಡು ಬರೆದಿರುವ ಉತ್ತರ ಕರ್ನಾಟಕದ ಪ್ರತಿಭೆ ಶಿವುಭೇರ್ಗಿ ಅರ್ಥಪೂರ್ಣ ಸಾಹಿತ್ಯ ರಚಿಸಿ ಸಂಗೀತ ಒದಗಿಸಿರುವ ಹಾಡಿಗೆ ವಿಜಯ್‍ಪ್ರಕಾಶ್ ಧ್ವನಿಯಾಗಿದ್ದಾರೆ. ಛಾಯಗ್ರಹಣ ಅಜಿತ್.ಎ.ಯು, ಸಂಕಲನ ರತೀಶ್‍ಕುಮಾರ್, ಹಿನ್ನಲೆ ಸಂಗೀತ ಅಜಿತ್‍ಪದ್ಮನಾಭ, ಕಲರಿಸ್ಟ್ ಕಿರಣ್.ಎ.ಯು ನಿರ್ವಹಿಸಿದ್ದಾರೆ. ವಿ.ಬಿ.ಅಮರ್‍ನಾಥ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ನಾಲ್ಕೂವರೆ ಲಕ್ಷ ಖರ್ಚಾಗಿದೆ. ದೊಡ್ಡಬಳ್ಳಾಪುರದಲ್ಲಿರುವ ವಿದ್ಯಾದಾನ್ ಶಾಲೆಯಲ್ಲಿ ನಾಲ್ಕು ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಈ ಶಾಲೆಯು ದೇಶದಾದ್ಯಂತ ಮೂರು ಶಾಖೆಗಳು ಇರಲಿದ್ದು, ಇಲ್ಲಿನ ಮಕ್ಕಳಿಗೆ ಶಿಕ್ಷಣ, ಪ್ರಯಾಣ, ಉಪಹಾರ ಎಲ್ಲವು ಉಚಿತವಾಗಿ ನೀಡಲಾಗುತ್ತಿರುವುದು ಈ ಶಾಲೆಯ ವಿಶೇಷ. ಬೈಟೂ ಕಾಫೀ ಫಿಲ್ಮ್ಸ್ ಮತ್ತು ವುಡ್ ಕ್ರೀಪರ್ಸ್ ಸಹಯೋಗದಲ್ಲಿ ಸಿದ್ದಪಡಿಸಿರುವ ಭಾವನಾತ್ಮಕ ಕಿರುಚಿತ್ರವು ಸಖತ್ ಸ್ಟುಡಿಯೋ ಮೂಲಕ ಯು ಟ್ಯೂಬ್‍ನಲ್ಲಿ ಅಳವಡಿಸಲಾಗಿದೆ. ಇತ್ತೀಚೆಗಷ್ಟೇ ಮಾದ್ಯಮದವರಿಗೆಂದು ಪ್ರತ್ಯೇಕವಾಗಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಸಿನಿ ಸರ್ಕಲ್.ಇನ್ ನ್ಯೂಸ್
7/10/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore