HOME
CINEMA NEWS
GALLERY
TV NEWS
REVIEWS
CONTACT US
ವೆಬ್ ಸೀರೀಸ್‍ನಲ್ಲಿ ಕನ್ನಡ ಚಿತ್ರ
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಪುತ್ರಿ ನಿವೇದಿತಶಿವರಾಜ್‍ಕುಮಾರ್ ನೇತೃತ್ವದ ಶ್ರೀ ಮುತ್ತು ಸಿನಿ ಸರ್ವಿಸ್ ಹಾಗೂ ಸಕ್ಕತ್ ಸ್ಟುಡಿಯೋ ಸಹ ನಿರ್ಮಾಣದೊಂದಿಗೆ 30 ನಿಮಿಷದ, ಏಳು ಸಂಚಿಕೆಗಳ ‘ಹೇಟ್ ಯು ರೋಮಿಯೋ’ ಕನ್ನಡ ಚಿತ್ರವೊಂದು ವಿದೇಶದಲ್ಲಿ ಚಿತ್ರೀಕರಣವಾಗುತ್ತಿದೆ. ನಾಯಕನಾಗಿ ಅರವಿಂದ್‍ಐಯ್ಯರ್ ನಟಿಸುತ್ತಿದ್ದಾರೆ. ಇವರ ಕುರಿತು ಹೇಳುವುದಾದರೆ ಲಂಡನ್‍ದಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ಬಿಡುವಿನ ಸಮಯಲ್ಲಿ ಅಭಿನಯ ತರಭೇತಿ ಪಡೆದುಕೊಂಡಿದ್ದಾರೆ. ಬೆಂಗಳೂರನಲ್ಲಿದ್ದಾಗ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡು,ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಗಮನ ಸೆಳೆದಿದ್ದರು. ಸದ್ಯ ‘ಭೀಮಸೇನ ನಳಮಹರಾಜ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವೆಬ್ ಸೀರಿಸ್ ಬಾಲಿವುಡ್, ಟಾಲಿವುಡ್‍ನಲ್ಲಿ ಪ್ರಸಿದ್ದಿಯಾಗಿದ್ದು, ಮಾಧವನ್, ಸೈಫ್‍ಆಲಿಖಾನ್, ತೆಲುಗುದಲ್ಲಿ ಜಗಪತಿಬಾಬು ಕಾಣಿಸಿಕೊಂಡಂತೆ ಕನ್ನಡದಲ್ಲಿ ಮೊದಲ ಪ್ರಯತ್ನವಾಗಿದೆ. ಸಕ್ಕತ್ ಸ್ಟುಡಿಯೋ ನಿರ್ಮಾಣ ಮಾಡಿದ್ದ ‘ಲೂಸ್ ಕನೆಕ್ಷನ್’ ‘ಡಾ.ಪಾಕ್‍ವೆಬ್ ಸೀರೀಸ್’ ಪ್ರಸಾರಗೊಂಡಿದೆ. ಲೂಸ್‍ಕನೆಕ್ಷನ್ ನಿರ್ದೇಶನ ಮಾಡಿರುವ ಹಸೀನ್‍ಖಾನ್ ಮತ್ತು ಇಶಾಮ್‍ಖಾನ್ ಕನ್ನಡದ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆನ್‍ಲೈನ್‍ದಲ್ಲಿ ಹೆಸರು ಮಾಡಿರುವ ಕನ್ನಡತಿ ನಾಯಕಿಯಾಗಿ ಆಯ್ಕೆಯಾಗಿದ್ದು, ಆಕೆ ಯಾರೆಂದು ಮುಂದಿನ ದಿನದಲ್ಲಿ ತಿಳಯುತ್ತದಂತೆ. ಮುತ್ತು ಸಿನಿ ಸರ್ವಿಸ್‍ದಲ್ಲಿ ಮಾನಸ ಸರೋವರ ಧಾರವಾಹಿಯು ವೀಕ್ಷಕರಿಂದ ಪ್ರಶಂಸೆಗೆ ಒಳಪಟ್ಟಿರುವುದನ್ನು ಸ್ಮರಿಸಬಹುದು.
ಸಿನಿ ಸರ್ಕಲ್.ಇನ್ ನ್ಯೂಸ್
7/08/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore