HOME
CINEMA NEWS
GALLERY
TV NEWS
REVIEWS
CONTACT US
ಕವಿಯ ಕುಂಚದಲ್ಲಿ ಮಾನವೀಯ ಸಂಬಂದಗಳು
ಹಿರಿಯ ಕವಿ, ಸಾಹಿತಿ ಡಾ. ಹೆಚ್.ಎಸ್.ವೆಂಕಟೇಶಮೂರ್ತಿ ಅವರ ನಿರ್ದೇಶನದ ಮೊದಲ ಚಿತ್ರ ‘ಹಸಿರು ರಿಬ್ಬನ್’ ಆಲಿಸಲು ಇಂಪಾಗಿದೆ. ಇದರಲ್ಲಿ ಸಂಸ್ಕ್ರತಿ, ಮುಗ್ದತೆ ಹಾಗೂ ಸಮೃದ್ದಿಗಳ ಸಂಕೇತವನ್ನು ಕಾಣಬಹುದಾಗಿದೆ. ತಮ್ಮ ಕೃತಿ ‘ಅನಾತ್ಮಕ ಕಥನ’ದ ಒಂದು ಅಧ್ಯಾಯವನ್ನು ತೆಗೆದುಕೊಂಡು ಅದನ್ನು ಬೆಳ್ಳೆ ಪರದೆ ಮೇಲೆ ನುರಿತವರಂತೆ ಚೆನ್ನಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಕಳೆದು ಹೋಗುತ್ತಿರುವ ಮಾನವೀಯ ಸಂಬಂದಗಳು, ಹಣಕ್ಕಾಗಿ ಸಂಬಂದವನ್ನು ದೂರ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಿದ್ದಾರೆ. ಅದರಂತೆ. ಬಡತನ ಕುಟುಂಬದಲ್ಲಿ ತಾಯಿ-ಮಗಳು-ಮೊಮ್ಮಗಳು ಹೀಗೆ ಇವರ ಮನೆಗೆ ಬರುವ ಅನಾಮಿಕನೊಬ್ಬನು ಮೋಸ ಮಾಡಿದಾಗ ಪುಟಾಣಿ ಹುಡುಗಿಯ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ಅಲ್ಲದೆ ಸಾಮಾನ್ಯ ಮನುಷ್ಯನಾದವನು ಯಾವುದೇ ಒಂದು ಘಟನೆಗೆ ಹೇಗೆ ಪ್ರತಿಕ್ರಿಯಿಸುತ್ತಾನೋ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ದೊಡ್ಡವರ ಜಗಳವನ್ನು ಮಕ್ಕಳು ನೋಡುವ ರೀತಿ, ಮಕ್ಕಳ ಮಾತುಗಳಲ್ಲಿ ದೊಡ್ಡವರ ತಪ್ಪುಗಳನ್ನು ಹೊರಗೆಡುವುದು. ಹಾಗೆಯೇ ಚಿಣ್ಣರ ಮೂಲಕ ದೊಡ್ಡವರಿಗೊಂದು ಅರ್ಥಪೂರ್ಣ ಸಂದೇಶವನ್ನು ಹೇಳಿದ್ದಾರೆ. ಇದೆಲ್ಲಾವನ್ನು ಅನುಭವಿಸಲು ಸಿನಿಮಾ ನೋಡಬೇಕು.

ನಾಯಕನಾಗಿ ನಿಖಿಲ್‍ಮಂಜು ಚಿತ್ರಕ್ಕೆ ಜೀವಾಳವಾಗಿದ್ದರಿಂದ ಅದನ್ನು ಜತನದಿಂದ ಕಾಪಾಡಿಕೊಂಡು ಬಂದಿರುವುದು ಎದ್ದು ಕಾಣಿಸುತ್ತದೆ. ಹಣ ಸಣ್ಣದು, ಮನುಷ್ಯ ಸಹ ಸಣ್ಣವನಾಗಬೇಕಾ ಎಂದು ಮನಸ್ಸು ಕದಡುವಂತೆ ಡೈಲಾಗ್ ಹೇಳುವ ಗಿರಿಜಾಲೋಕೇಶ್ ನೊಂದ ಮಹಿಳೆಯಾಗಿ ತಾವೇ ಒಂದು ಫ್ರೇಮ್ ಹಾಕಿಕೊಂಡು ನಟಿಸಿ ಗಮನ ಸೆಳಯುತ್ತಾರೆ. ಪುಟಾಣಿಗಳಾದ ಚಂದ್ರು ಹಾಗೂ ಚಂಪಾ ಮುಗ್ದ ಅಭಿನಯ ನೋಡುವುದಕ್ಕೆ ಚೆಂದ. ರಂಗಭೂಮಿ ಪ್ರತಿಭೆಗಳಾದ ಚೈತ್ರಾ, ಸುಪ್ರಿಯಾ.ಎಸ್.ರಾವ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಡಾಕ್ಟರ್ ರಚಿಸಿರುವ ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಉಪಾಸನಾಮೋಹನ್ ಕೆಲಸದಲ್ಲಿ ‘ಸಕ್ಕರೆಯ ಪಾಕಲಿ ಅದ್ದಿರುವ ಜಾಮೂನು’ ಗೀತೆ ಎಷ್ಟು ಸಲ ಕೇಳಿದರೂ ಬೋರ್ ಆಗುವುದಿಲ್ಲ. ಈ ಇಳಿ ವಯಸ್ಸಿನಲ್ಲಿ ಚೆಂದದ ಚಿತ್ರ ನೀಡಿರುವ ನಿರ್ದೇಶಕರು ಮತ್ತು ನಿರ್ಮಾಣ ಮಾಡಿರುವ ಅರ್.ಎಸ್.ಕುಮಾರ್ ಅವರಿಗೆ ಕನ್ನಡಿಗರಿಂದ ಒಂದು ಗೌರವಯುತ ಸಲಾಂ.
***1/2 ಸಿನಿ ಸರ್ಕಲ್.ಇನ್ ವಿಮರ್ಶೆ
16/07/18

ಚಿತ್ರಮಂದಿರದಲ್ಲಿ ಹಸಿರು ರಿಬ್ಬನ್
ಚಿನ್ನಾರಿ ಮುತ್ತ ಚಿತ್ರಕ್ಕೆ ಕತೆ,ಸಾಹಿತ್ಯ, ಸಂಭಾಷಣೆ ಬರೆದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಮೊದಲ ನಿರ್ದೇಶನದ ‘ಹಸಿರು ರಿಬ್ಬನ್’ ಸಿನಿಮಾದ ಕತೆಯು ಅವರದೇ ಕೃತಿಯ ಅನಾತ್ಮ ಕಥನದ ಒಂದು ಭಾಗವಾಗಿದೆ. ಒಂದು ಕನಸಿನ ಹಿಂದೆ ಎಂದು ಅಡಿಬರಹದಲ್ಲಿ ಹೇಳಿರುವಂತೆ ಮುಗ್ದ ಕುಟುಂಬವೊಂದರ ತಳಮಳ, ತಲ್ಲಣಗಳು ಸನ್ನಿವೇಶಗಳಲ್ಲಿ ವ್ಯಾಕರಣವನ್ನು ಹಿಡಿಯುವ ಪ್ರಯತ್ಮ ಮಾಡಲಾಗಿದೆ. ಇವರದೆ ಸಾಹಿತ್ಯದ ಹಾಡುಗಳಿಗೆ ಉಪಾಸನಾ ಮೋಹನ್ ಸಂಗೀತ ಸಂಯೋಜಿಸಿರುವ ಎಲ್ಲಾ ಹಾಡುಗಳು ಆಲಿಸಲು ಖುಷಿ ಕೊಡುತ್ತದೆ. ತಾರಗಣದಲ್ಲಿ ನಿಖಿಲ್‍ಮಂಜು, ಗಿರಿಜಾಲೋಕೇಶ್, ಬಿ.ಜಯಶ್ರೀ, ರಂಗಭೂಮಿ ಪ್ರತಿಭೆಗಳಾದ ಸುಪ್ರಿಯಾ, ಚೈತ್ರಾ ಮತ್ತು ಬೇಬಿ ಪೃಥ್ವಿ ನಟನೆ ಇದೆ. ನಿಸರ್ಗ ಕ್ರಿಯೆಶನ್ಸ್ ಮೂಲಕ ಆರ್.ಎಸ್.ಕುಮಾರ್ ನಿರ್ಮಾಣ ಮಾಡಿರುವ ಚಿತ್ರವು ರಾಜ್ಯಾದ್ಯಂತ ಶುಕ್ರವಾರದಂದು ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
12/07/18
ಕವಿಗಳ ಬಜಾರ್‍ನಲ್ಲಿ ಹಾಡುಗಳ ಅನಾವರಣ
ಬುದುವಾರ ಸುಚಿತ್ರ ಫಿಲ್ಮ್ ಸೋಸೈಟಿ ಜಾಗದಲ್ಲಿ ಕನ್ನಡ ಕಂಪು ಎಲ್ಲಾ ಕಡೆ ಪಸರಿಸುತ್ತಿತ್ತು. ಹಿರಿಯ ಕನ್ನಡದ ಕವಿಗಳು, ಸಾಹಿತಿಗಳು, ಬುದ್ದಿ ಜೀವಿಗಳು, ಕನ್ನಡ ಚಿಂತಕರು ಆಗಮಿಸಿದ್ದರಿಂದ ಎಲ್ಲರನ್ನು ನೋಡುವ ಸೌಭಾಗ್ಯ ಕನ್ನಡಿಗರಿಗೆ ಲಭಿಸಿತ್ತು. ‘ಹಸಿರು ರಿಬ್ಬನ್’ ಚಿತ್ರದ ಧ್ವನಿಸಾಂದ್ರಿಕೆ ಲೋಕಾರ್ಪಣೆ ಕಾರ್ಯಕ್ರಮ ಇದಕ್ಕೆ ಕಾರಣವಾಗಿತ್ತು. ಮೂರು ಹಾಡುಗಳನ್ನು ತೋರಿಸಿದ ನಂತರ ದಿಗ್ಗಜರು ವೇದಿಕೆಗೆ ಆಗಮಿಸಿದರು. ಮೊದಲು ಮಾತನಾಡಿದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಚಿತ್ರಗಳಿಗೆ ಕತೆ,ಚಿತ್ರಕತೆ, ಹಾಡು ಬರೆಯುತ್ತಿದ್ದ ನನಗೆ ನಿರ್ಮಾಪಕರು ಒಮ್ಮೆ ಭೇಟಿ ಮಾಡಿ ನೀವು ನಿರ್ದೇಶನ ಮಾಡಬೇಕೆಂದು ಆಹ್ವಾನ ನೀಡಿದಾಗ ನಂಬಲಿಕ್ಕೆ ಆಗಲಿಲ್ಲ. ಎಪ್ಪತ್ತು ದಾಟಿದ ನಾನು ಒಂದು ಕೈ ನೋಡಿಬಿಡುವ ಎಂದು ಸಾಹಸಕ್ಕೆ ಕೈ ಹಾಕಲಾಗಿದೆ. ಗುರುಗಳಾದ ನಿಸಾರ್‍ಅಹ್ಮದ್, ಗೆಳಯರು ಆಗಮಿಸಿದ್ದು ಸಂತಸ ತಂದಿದೆ ಎಂದು ಸವಿನೆನಪುಗಳನ್ನು ಹಂಚಿಕೊಂಡರು.

ನಿರ್ದೇಶಕ ಟಿ.ಎಸ್.ನಾಗಭರಣ ಕಾರ್ಯಕ್ರಮವನ್ನು ಬಣ ್ಣಸಿದ ರೀತಿ ಹೀಗಿತ್ತು: ಇದು ಸಮಾರಂಭವಲ್ಲ. ಕುಟುಂಬದ ಮಿಲನ ಎನ್ನಬಹುದು. ಈಗ ತಾನೆ ಹುಟ್ಟಿರುವ ನಿರ್ದೇಶಕ ವಯಸ್ಸಿನಲ್ಲಿ ಹಿರಿಯರು. ಅನುಭವದಲ್ಲಿ ಹಿರಿಯರಾಗಿರುವ ಸಂಗೀತ ನಿರ್ದೇಶಕರ ವಯಸ್ಸು ಕಡಿಮೆ. ಕವನ ಸಿದ್ದಿಗಳನ್ನು ಬರೆಯುತ್ತಿದ್ದ ಹೆಚ್‍ಎಸ್‍ವಿ ಅವರು ಚಿತ್ರಸಿದ್ದಿ ಬರೆಯುವದರೊಂದಿಗೆ ಪಾದಾರ್ಪಣೆ ಮಾಡಿದ್ದಾರೆ. 52 ವಾರದಲ್ಲಿ 52 ಸಿನಿಮಾಗಳು ಬೇಕಾಗುವ ಇಂದಿನ ಪರಿಸ್ಥಿತಿ 200 ಚಿತ್ರಗಳು ಬರುತ್ತಿವೆ. ತಾವು ನೀಡುತ್ತಿರುವ ಚಪ್ಪಾಳೆಗಳು ಟಿಕೆಟ್‍ಗಳಾಗಿ ಪರಿವರ್ತಿಸಲಿ. ಸಧಭಿರುಚಿ ಹಿಂದೆ ಸತ್‍ಶಕ್ತಿ ಅಂದರೆ ಪ್ರೀತಿಸೋರು ಪ್ರತಿಯೊಬ್ಬರು ಇದ್ದಾರೆ. ಸಕ್ಕರೆಯ ಪಾಕದಲ್ಲಿ ಹದ್ದಿದ ಹಸಿರು ರಿಬ್ಬನ್.

ಸಂಗೀತಕ್ಕೆ ಮಾಂತ್ರಿಕ ಶಕ್ತಿ ಇದೆ. ಅದನ್ನು ಕೇಳದೆ ಇರುವವನು ನಿಮಾನ್ಸ್‍ಗೆ ಹೋಗುತ್ತಾನೆ. ಸಿನಿಮಾ ಕಣ ್ಣೀರು ಒರೆಸುವ ಕೆಲಸ ಮಾಡಲಿ. ಸಾಹಿತ್ಯ ಕಳೆದು ಹೋಗುತ್ತಿರುವ ಜಾಗದಲ್ಲಿ ಇಂದು ಸಾಹಿತ್ಯ ಉಳಿದಿದೆ. ಸಂಗೀತ ರಸಿಕರು ವೀಣೆ ತಂತಿ ಮೀಟುವಂತೆ ಇರುತ್ತಾರೆ. ಅರಸಿಕರು ಹೆಣಕ್ಕೆ ಕಚಗುಳಿ ಇಟ್ಟಂತೆ . ಮುಂದಿನ ದಿನಗಳಲ್ಲಿ 350 ಆಸನದ ಸಭಾಂಗಣ ನಿರ್ಮಿಸುವುದಾಗಿ ಭರವಸೆ ನೀಡಿದರು ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಟ್ಯಾಗೂರ್.

ಪ್ರತಿ ಸಿನಿಮಾದಲ್ಲಿ ಹೆಚ್.ಎಸ್.ವಿ ಅವರ ಕವನವನ್ನು ಬಳಸಲಾಗುತ್ತಿದೆ. ಸಿನಿಮಾವು ಜನರ ಮನಸ್ಸಿನಲ್ಲಿ ಉಳಿದು ಹೆಚ್ಚು ದಿನ ಓಡಲಿ ಅಂತಾರೆ ನಟ ರಕ್ಷಿತ್‍ಶೆಟ್ಟಿ. ಕವಿಗಳು ಪ್ರೇಮಿಗಳ ದಿನದಂದೆ ಹಾಡನ್ನು ಲೋಕಾರ್ಪಣೆ ಮಾಡಿರುವುದು ನೋಡಿದಾಗ ಇವರಿಗೆ ವಯಸ್ಸು ಆಗಿಲ್ಲ ಅಂತ ಖಾತರಿಯಗುತ್ತದೆ. ಒಂದು ಗೀತೆಯು ಇವರ ಮೇಲೆ ಬರೆದ ಆಗಿದೆ. ಹಿರಿಯರು-ಕಿರಿಯರ ಮಿಶ್ರಣ. ಒಳ್ಳೆಯ ಹೊತ್ತಲ್ಲಿ ಒಳ್ಳೆಯ ಗುಂಪಲ್ಲಿ ಹಾಡುಗಳು ಹಸಿರಾಗಲಿ ಎಂದರು ಜೋಗಿ.

ಶಿಷ್ಯನ ಸಾಧನೆಯನ್ನು ಶ್ಲಾಘಿಸಿದ ಪದ್ಮಶ್ರೀ ಪ್ರೋ.ಕೆ.ಎಸ್.ನಿಸಾರ್‍ಅಹಮದ್ ಚಿತ್ರರಂಗದಲ್ಲಿ ರಾಜ್‍ಕುಮಾರ್ ಒಬ್ಬರೆ ಆಪ್ತರು. ಇಷ್ಟು ಜನಪ್ರಿಯತೆ ನೋಡಿದಾಗ ಜನಪೂಜ್ಯತೆ ಆಗಿದೆ. ನಿರ್ದೇಶಕರಿಗೆ ಹಳಗನ್ನಡ ಕಾವ್ಯ ಆವರಿಸಿಕೊಂಡಿದ್ದರಿಂದ ಸುಂದರ ಪದಗಳನ್ನು ಪೋಣ ಸುತ್ತಾರೆ. ದೊಡ್ಡ ಕವಿಗಳ ಪ್ರಭಾವ ಬೀರಿದೆ. ಸಾಹಿತ್ಯ-ಸಂಗೀತದಲ್ಲಿ ತನ್ನತನದ ಛಾಪನ್ನು ಉಳಿಸಿಕೊಳ್ಳಬೇಕು. ಸ್ವಂತಿಕೆ ಇರುವಲ್ಲಿ ಯಶಸ್ಸು ಬರುತ್ತದೆ. ಒಳ್ಳೆಯ ವಿಮರ್ಶಕ ಮಾರ್ಗದರ್ಶಕ ಆಗಿರುತ್ತಾನೆ ಅಂತ ದೀರ್ಘ ಕಾಲದ ಮಾತುಗಳನ್ನು ಆಡಿ ನಗಿಸಿದರು. ಆರ್.ಕುಮಾರ್ ನಿರ್ಮಾಣ ಮಾಡಿರುವ ಚಿತ್ರದಲ್ಲಿ ನಿಖಿಲ್‍ಮಂಜು, ಗಿರಿಜಾಲೋಕೇಶ್, ರಂಗಭೂಮಿ ಕಲಾವಿದರಾದ ಸುಪ್ರಿಯಾ, ಚೈತ್ರಾ, ಬೇಬಿ ಪೃಥ್ವಿ ಮುಂತಾದವರ ನಟನೆ ಇರಲಿದ್ದು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಚಿತ್ರಗಳು; ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-16/02/18
HASIRU RIBBON SHOOTING BEGINS
D
r H.S. Venkatesh Murthy makes debut as a director with the film Hasiru Ribbon. The 73-year-old Murthy has penned script and lyrics for many Kannada films. The script is based on Dr Murthy’s Anathmakathana. The film is about a family that struggles to protect environment and promote organic farming.

Kannada Chalanachitra Academy chairman S.V. Rajendra Singh Babu sounded the clapboard on the muhurat shot picturized on veteran actress Girija Lokesh and Nikhil Manju at Kannada Sahitya Parishad on Sunday evening. Music director Hamsalekha, Srinath, Jayashri, Srinivas Mestru, Dodda Rangegowda, Jogi and prominent theatre personalities have attended the function.

Speaking on the occasion, Dr Murthy said Hasiru Ribbon will be memorable moment in his life. “Nikhil Manju had directed a successful film. Now, I got an opportunity to direct Nikhil Manju,’’ Dr Murthy said.

He said the film has a message to society. “Selecting the right path and right issue is very important for life. My daughter-in-law always tells me to make a neat film. I am trying to do that with this film,’’ he said.
Upasana Mohan is the music director for this film and R.S. Kumar is the producer.
-Cine Circle News
-7/08/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore