HOME
CINEMA NEWS
GALLERY
TV NEWS
REVIEWS
CONTACT US
ಸಿಲಿಕಾನ್ ಸಿಟಿಗೆ ಹ್ಯಾಪನ್ ಆ್ಯಪ್
ತಂತ್ರಜ್ಘಾನ ಬೆಳೆದಂತೆ ಜನರು ಸುಲಭರೂಪದಲ್ಲಿ ಸಂಪರ್ಕ ಪಡೆಯಲು ಬಯಸುತ್ತಾರೆ. ಅದೇ ರೀತಿಯಲ್ಲಿ 2014ರಂದು ಪ್ಯಾರೀಸ್, ನ್ಯೂಯಾರ್ಕ್, ಲಂಡನ್ ದೇಶದಲ್ಲಿ ಹೂಸ ರೂಪದ ‘ಹ್ಯಾಪನ್ ಆ್ಯಪ್’ ಅನಾವರಣಗೊಂಡಿತ್ತು. ಇಲ್ಲಿಯವರೆವಿಗೂ 28 ಮಿಲಿಯನ್ ಜನರು ಡೌನ್‍ಲೋಡ್ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲೆ ಪ್ರಥಮಬಾರಿ ಬಾಂಬೆಯಲ್ಲಿ ಹ್ಯಾಪ್ ತೆರೆದುಕೊಂಡು ಇದಕ್ಕೆ ಬಾಲಿವುಡ್ ನಟ ಹೃತಿಕ್‍ರೋಷನ್ ಪಾಲುದಾರರಾಗಿದ್ದರು. ಈಗ ಆ್ಯಪ್ ಬೆಂಗಳೂರಿನಲ್ಲಿ ಶಾಖೆಯನ್ನು ತೆರೆಯಲಾಗಿದೆ. ದಕ್ಷಿಣ ಭಾರತದ ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿಕ್ ಇದರ ಹಕ್ಕುಗಳನ್ನು ಪಡೆದುಕೊಂಡಿದೆ. ಸಂಸ್ಥಾಪಕ ದಿದೀಯರ್‍ರ್ಯಾಪ್ಪಪೋರ್ಟ್ ಬೆಂಗಳೂರಿಗೆ ಆಗಮಿಸಿ ಆ್ಯಪ್‍ನಲ್ಲಿ ಸೇವೆಗಳನ್ನು ಪಡೆಯಬಹುದಾದ ಹೆಚ್ಚಿನ ವಿವರಗಳನ್ನು ತಿಳಿಸಿದರು. ಡಿಜಿಟಲ್ ಮೀಡಿಯಾದವರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂಬ ಅಂಶವನ್ನು ಲಹರಿ ರೂವಾರಿ ವೇಲು ಮತ್ತು ಚಂದ್ರು ಈ ಸಂದರ್ಭದಲ್ಲಿ ಮಾಹಿತಿ ಒದಗಿಸಿದರು. ಐಓಎಸ್, ಆಂಡ್ರ್ಯಾಡ್ ಮತ್ತು ವಿಂಡೋಸ್ ಫೋನ್ ಮುಖಾಂತರ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.
-19/05/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore