HOME
CINEMA NEWS
GALLERY
TV NEWS
REVIEWS
CONTACT US
ಸ್ಯಾಂಡಿಲ್‍ವುಡ್‍ಗೆ ಶಫಿ ಎಂಟ್ರಿ...
ತೆಲುಗು ಸಿನಿಮಾ ಪ್ರಿಯರಿಗೆ ಇವರನ್ನ ನೋಡ್ತಿದ್ದಾಂಗೆ ಇವರ ಎಲ್ಲಾ ಚಿತ್ರಗಳು ಥಟ್ ಅಂತ ಜ್ಞಾಪಕಕ್ಕೆ ಬರುತ್ತದೆ ಸಹಜ.. ಪ್ರತಿ ಚಿತ್ರದಲ್ಲೂ, ಪ್ರತಿ ಪಾತ್ರಕ್ಕೂ ವಿಭಿನ್ನವಾದ ಗೆಟಪ್, ಮ್ಯಾನರಿಜಮ್‍ನಿಂದಾನೇ ಫೇಮಸ್ ಆದ ನಟ ಶಫಿ. ಎನ್.ಎಸ್.ಡಿ ಯಲ್ಲಿ ತರಬೇತಿ ಹೊಂದಿ ಟಾಲಿವುಡ್‍ಗೆ ಎಂಟ್ರಿ ಆಗಿದ್ದೇ ತಡ ಆಫರ್‍ಗಳ ಮೇಲೆ ಆಫರ್ ಬಂದೆ ಬಿಟ್ವು.. ಅವರು ಅಭಿನಯಿಸಿದ ಖಡ್ಗಂ ಚಿತ್ರಕ್ಕೆ ಉತ್ತಮ ಖಳನಾಯಕನ ಪ್ರಶಸ್ತಿ (ಫಿಲ್ ಫೇರ್), ಕಮಲಿ ಎನ್ನುವ ಚಿತ್ರದಲ್ಲಿ ನಾಯಕರಾಗಿ ಅಭಿನಿಯಸುವುದೇ ಅಲ್ಲದೆ ಆ ಚಿತ್ರಕ್ಕೆ ನೇಷನಲ್ ಅವಾರ್ಡು ಕೂಡ ಬಂದಿದೆ. ವರ್ಷಂ, ಛತ್ರಪತಿ, ಖಲೇಜ ಹೀಗೆ ದೊಡ್ಡ ದೊಡ್ಡ ನಟರೊಂದಿಗೆ, ನಿರ್ದೇಶಕರೊಂದಿಗೆ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ತನ್ನದೇ ಆದ ಐಡೆಂಟಿಟಿಯನ್ನು ತಂದುಕೊಂಡವರು ಶಫಿ.

ಇಂತಹ ಅದ್ದುತವಾದ ನಟ ಈಗ ಸ್ಯಾಂಡಿಲ್‍ವುಡ್‍ಗೆ ಕಾಲಿಡುತ್ತಿದ್ದಾರೆ. ಹೌದು “ಹ್ಯಾಂಗೋವರ್” ಚಿತ್ರದ ಶಫಿ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹ್ಯಾಂಗೋವರ್ ಚಿತ್ರದಲ್ಲಿ ಕ್ರೈಮ್ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ಕಾಣ ಸಿಕೊಳ್ಳಲಿದ್ದಾರಂತೆ. “ಚಿತ್ರದ ನಿರ್ದೇಶಕ ವಿಠಲ್ ಭಟ್ ನನಗೆ ತುಂಬಾ ಹಳೇ ಸ್ನೇಹಿತ, ನಾನು ಬೆಂಗಳೂರಿಗೆ ಬಂದಾಗೆಲ್ಲಾ ಅವರನ್ನು ಭೇಟಿ ಮಾಡದೆ ಹೋಗುತ್ತಿರಲಿಲ್ಲಾ.. ಅಷ್ಟೊಂದು ಆತ್ಮೀಯ.. ಅವರ ಮೊದಲ ಚಿತ್ರ ಪ್ರೀತಿಕಿತಾಬು ಚಿತ್ರಕ್ಕೂ ನನ್ನನ್ನ ಕರೆದಿದ್ದರು ಕಾರಣಾಂತಗಳಿಂದ ಅವರೊಂದಿಗೆ ಹಂಚಿಕೊಳ್ಳಲು ಆಗಲಿಲ್ಲ. ಆ ಅವಕಾಶ ಈಗ ಸಿಕ್ಕಿರುವುದು ವಿಶೇಷ.. ನಾನು ಇದುವರೆಗೂ ಇನ್ವೆಸ್ಟಿಗೇಷನ್ ಆಫೀಸರ್ ಅಂಥಹಾ ಪಾತ್ರಗಳನ್ನು ಮಾಡಿದ್ದಿಲ್ಲಾ.. ನನಗೆ ಬಂದಿರುವ ಪಾತ್ರಗಳೆಲ್ಲಾ ಮಾಸ್ ರ್ರಗ್ಗಡ್ ಆಗಿರುವ ಪಾತ್ರಗಳೇ.. ಮೊದಲ ಬಾರಿಗೆ ಇನ್ವೆಷ್ಟಿಗೇಷನ್ ಆಫೀಸರ್ ಪಾತ್ರವನ್ನು ನಿಭಾಯಿಸುತ್ತಿದ್ದೇನೆ.. ನನ್ ಪಾತ್ರವನ್ನು ಕೇಳುತ್ತಿದ್ದಾಂಗೆ ನನಗೆ ಮೈ ರೋಮಾಂಚನೆಯಾಯಿತು.. ಅಷ್ಟೂ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಈ ಥರದ ಪಾತ್ರದಲ್ಲಿ ನಾನು ಇದುವರೆಗೂ ಸ್ರ್ಕೀನ್ ಮೇಲೆ ಕಾಣ ಸಿಕೊಂಡಿದ್ದಿಲ್ಲಾ.. ಹೀಗಾಗಿ ನನಗೂ ಛಾಲೆಂಜಿಂಗ್ ಆಗಿದೆ. ನನ್ನನ್ನ ನಂಬಿ ಈ ಪಾತ್ರವನ್ನು ಕೊಟ್ಟ ನನ್ನ ಗೆಳೆಯ ಕಂ ನಿರ್ದೇಶಕ ವಿಠಲ್ ಭಟ್‍ಗೆ ಥ್ಯಾಂಕ್ಸ್” ಅಂತಾರೆ ಶಫಿ.
ಒಟ್ಟಾರೆ ಸ್ಯಾಂಡಿಲ್‍ವುಡ್ಗೆ ಮತ್ತೊಬ್ಬ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣವನ್ನು ಮೈಸೂರಲ್ಲಿ ಚಿತ್ರೀಕರಿಸಲು ಚಿತ್ರತಂಡ ಸಜ್ಜಾಗುತ್ತಿದೆ.
-9/11/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore