HOME
CINEMA NEWS
GALLERY
TV NEWS
REVIEWS
CONTACT US
ಹ್ಯಾಂಗ್ ಓವರ್‍ಗೆ ಗಣೇಶ್ ಶುಭಹಾರೈಕೆ
ಪ್ರೀತಿಕಿತಾಬು ನಿರ್ದೇಶನ ಮಾಡಿದ್ದ ವಿಠಲ್‍ಭಟ್ ಎರಡನೆ ಬಾರಿ ಕತೆ ಬರೆದು ಆಕ್ಷನ್ ಕಟ್ ಹೇಳಿರುವ ‘ಹ್ಯಾಂಗ್ ಓವರ್’ ಚಿತ್ರದ ಟ್ರೈಲರ್‍ನ್ನು ಬಿಡುಗಡೆ ಮಾಡಿದ ಗಣೇಶ್ ತಂಡಕ್ಕೆ ಶುಭಹಾರೈಸಿದ್ದಾರೆ. ಕತೆಯಲ್ಲಿ ಮೂವರು ಹುಡುಗರು ಮತ್ತು ಹುಡುಗಿಯರು ಕಾಕ್ಟೇಲ್ ಪಾರ್ಟಿಗೆ ದೂರದ ಫಾರ್ಮ್ ಹೌಸ್‍ಗೆ ತೆರೆಳುತ್ತಾರೆ. ಎಲ್ಲರೂ ಎಂಜಾಯ್ ಮಾಡಿ ತಡವಾಗಿದ್ದರಿಂದ ಅಲ್ಲಿಯೇ ತಂಗುತ್ತಾರೆ. ಬೆಳಿಗ್ಗೆ ಎದ್ದು ನೋಡಿದಾಗ ಒಂದು ಹುಡುಗಿ ಸೋಫಾ ಮೇಲೆ ಕೊಲೆಯಾಗಿರುತ್ತಾಳೆ. ಕುಡಿದ ಹ್ಯಾಂಗ್‍ಓವರ್‍ದಲ್ಲಿ ಎಲ್ಲವನ್ನು ಮರೆತಿರುತ್ತಾರೆ. ನಂತರ ಒಂದೊಂದೆ ಸನ್ನಿವೇಶಗಳು ನೆನಪಿಗೆ ಬರುತ್ತದೆ. ಇದನ್ನು ರಿವರ್ಸ್ ಚಿತ್ರಕತೆಯಲ್ಲಿ ಹೇಳುವುದು ಒಂದು ಏಳೆಯ ಸಾರಾಂಶವಾಗಿದೆ. ಬೆಂಗಳೂರು, ಮೈಸೂರು ಮತ್ತು ಊಟಿಯಲ್ಲಿ 36 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚೇತನ್‍ಬಹದ್ದೂರ್, ಕೃಷ್ಣ ಸಾಹಿತ್ಯದ ಎರಡು ಹಾಡುಗಳಿಗೆ ವೀರಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ.

ಮುಖ್ಯ ಭೂಮಿಕೆಯಲ್ಲಿ ಭರತ್, ರಾಜ್, ಚಿರಾಗ್ ಅದರಂತೆ ಮಹತಿಭಿಕ್ಷು, ಸಹನ್‍ಪೊನ್ನಮ್ಮ ಮತ್ತು ನಂದಿನಿನಟರಾಜ್ ನಾಯಕಿಯರು. ಉಳಿದಂತೆ ಕೆ.ಎಸ್.ಶ್ರೀಧರ್, ನೀನಾಸಂಅಶ್ವಥ್, ಯತಿರಾಜ್, ಸ್ಪಂದನಪ್ರಸಾದ್, ಕೈಲಾಶ್‍ನೀನಾಸಂ ಅಭಿನಯವಿದೆ. ಒಂದು ಹಾಡಿಗೆ ನೀತುಶೆಟ್ಟಿ ಹೆಜ್ಜೆ ಹಾಕಿದ್ದಾರೆ. ಇನ್ಸೆಪಕ್ಟರ್ ಪಾತ್ರದಲ್ಲಿ ಟಾಲಿವುಡ್‍ನ ಷಫಿ ನಟನೆ ಇದೆ. ಛಾಯಗ್ರಹಣ ಯೋಗಿ, ಸಂಕಲನ ಕಿರಣ್‍ಕುಮಾರ್, ಮೊದಲಬಾರಿ ಸಿನಿಮಾ ಪತ್ರಕರ್ತ ಗಣೇಶ್‍ರಾಣೆಬೆನ್ನೂರು ಸಂಭಾಷಣೆಗೆ ಮಾತುಗಳನ್ನು ಪೋಣಿಸಿದ್ದಾರೆ. ರಾಕೇಶ್.ಡಿ ನಿರ್ಮಾಣ ಮಾಡಿರುವ ಚಿತ್ರದ ಹಾಡುಗಳು ಸದ್ಯದಲ್ಲೆ ಹೊರಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/07/18











For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore