HOME
CINEMA NEWS
GALLERY
TV NEWS
REVIEWS
CONTACT US
ದುರಳರ ಸಂಹಾರಕ್ಕೆ ಕೆಟ್ಟವರೇ ಬರಬೇಕು
ಕೆಟ್ಟವರನ್ನು ಸಂಹರಿಸಲು ಒಳ್ಳೆಯವರು ಬರುವುದು ಎಲ್ಲರಿಗೂ ತಿಳಿದಿದೆ. ಬದಲಾವಣೆ ಎನ್ನುವಂತೆ ‘ಹಫ್ತಾ’ ಚಿತ್ರದಲ್ಲಿ ದುರಳರನ್ನು ಕೆಟ್ಟ ಜನರೇ ಮುಗಿಸುವುದು ವಿಶೇಷವಾಗಿದೆ. ಕರಾವಳಿ ತೀರದ ಭೂಗತ ಲೋಕ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಹೊಡಿಯೋರೇ ಒಬ್ಬರು, ಒಳಗೆ ಹೋಗುವವರು ಒಬ್ಬರು, ಆಳುವವರು ಒಬ್ಬರು. ಹೆದರಿಸಿ,ಬೆದರಿಸಿ ವಸೂಲಿ ಮಾಡುವರ ಗುಂಪು ಬೇರೆಯದು. ಹೆಸರು ಹೇಳಿದೊಡನೆ ಹಣ ನೀಡುವುದು ನಮ್ಮ ಸ್ಪೆಷಾಲಿಟಿ ಎಂಬ ಡೈಲಾಗ್‍ಗಳು ಕತೆಗೆ ಪೂರಕವಾಗಿದೆ. ಇಬ್ಬರು ಬಾಲ್ಯ ಸ್ನೇಹಿತರಾದ ಶಂಕರ್‍ಯರ್‍ವಾಡ, ಕುಡ್ಲ ಭೂಗತಲೋಕಕ್ಕೆ ಎಂಟ್ರಿಕೊಟ್ಟು ತಮ್ಮದೆ ಹವಾ ಸೃಷ್ಟಿಸಿಕೊಂಡಿರುತ್ತಾರೆ. ಶಂಕರ್ ಎಂ.ಟೆಕ್ ಪದವಿದರ ನಾಗಿದ್ದು ಅಪರಾಧಗಳನ್ನು ಲ್ಯಾಪ್‍ಟಾಪ್ ಮೂಲಕ ನಡೆಸುವ ನಿಸ್ಸೀಮ. ಶೀರ್ಷಿಕೆ ಹೇಳುವಂತೆ ಪಕ್ಕಾ ಕಮರ್ಷಿಯಲ್ ಅಂಶಗಳು ಇರುವ ಕಾರಣ ಫೈಟು, ಗುಂಡಿನ ಸದ್ದುಗಳು ಆಗಾಗ್ಗೆ ಕೇಳಿಬರುತ್ತವೆ. ಹಾಗಂತ ಸುಖಾಸುಮ್ಮನೆ ಬರುವುದಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಎಷ್ಟು ಬೇಕೋ ಅಷ್ಟನ್ನು ತೋರಿಸಿರುವ ಕಾರಣ ಪ್ರೇಕ್ಷಕನಿಗೆ ಮೊಬೈಲ್ ನೋಡಲು ಅವಕಾಶ ಮಾಡಿಕೊಟ್ಟಿಲ್ಲ. ಅಲ್ಲದೆ ಸ್ನೇಹ ಯಾವತ್ತೂ ಅಮರ ಎಂದು ಹೇಳಿರುವುದು ಪ್ಲಸ್ ಪಾಯಿಂಟ್.

ಕುಡ್ಲ ಆಲಿಯಾಸ್ ಕೃಷ್ಣನಾಗಿ ವರ್ಧನ್‍ತೀರ್ಥಹಳ್ಳಿ ಅಭಿನಯದಲ್ಲಿ ಮಿಂಚಿದ್ದಾರೆ. ಅದರಲ್ಲೂ ಮಂಗಳಮುಖಿಯಾಗಿ ಯಾವ ಪಾತ್ರಕ್ಕೂ ಸೈ ಅನಿಸಿಕೊಂಡು ಮಾಸ್ ಹೀರೋಗಳ ಸಾಲಿಗೆ ಸೇರುತ್ತಾರೆ. ರಾಘವನಾಗ್ ಇಲ್ಲಿಯವರೆಗೂ ಸೌಮ್ಯ ಸ್ವಭಾವದಲ್ಲಿ ಕಾಣಿಸಿಕೊಂಡಿದ್ದು ಇದರಲ್ಲಿ ರಫ್ ಆಗಿ ಶಾರ್ಪ್ ಶೂಟರ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ನಾಯಕಿಯರಾಗಿ ಬಿಂಬಶ್ರೀನೀನಾಸಂ, ಸೌಮ್ಯತತೀರ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಖಳನಾಗಿ ಬಾಲ್‍ರಾಜ್‍ವಾಡಿ ನ್ಯಾಯ ಒದಗಿಸಿದ್ದಾರೆ. ಮೊದಲಬಾರಿ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಪ್ರಕಾಶ್‍ಹೆಬ್ಬಾಳ ಅವರಿಗೆ ಭವಿಷ್ಯದಲ್ಲಿ ಬ್ಯುಸಿ ಆಗುವ ಲಕ್ಷಣಗಳು ಗೋಚರಿಸುತ್ತದೆ. ಹಾಡುಗಳಿಂತ ಹಿನ್ನಲೆ ಸಂಗೀತ ಒದಗಿಸಿರುವ ಗೌತಂಶ್ರೀವತ್ಸ ಇಡೀ ಚಿತ್ರಕ್ಕೆ ಕಳಸವಿಟ್ಟಂತೆ ಆಗಿದೆ. ಮಾಸ್ ಪ್ರಿಯರಿಗೆ ಪೈಸಾ ವಸೂಲ್ ಆಗುವುದು ಖಚಿತ.
ನಿರ್ಮಾಣ: ಮೈತ್ರಿಮಂಜುನಾಥ್,ಬಾಲರಾಜ್
***
ಸಿನಿ ಸರ್ಕಲ್.ಇನ್ ವಿಮರ್ಶೆ
21/06/19


ಲೋಕಾರ್ಪಣೆಗೊಂಡಹಫ್ತಾಟ್ರೈಲರ್
ಹೊಸಬರ ‘ಹಫ್ತಾ’ ಚಿತ್ರದಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆಇರಬಹುದೆಂದು ಭಾವಿಸಿದರೆ ಅದುಆಗಿರುವುದಿಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿಕಿಲ್ಲಿಂಗ್‍ಜೊತೆಗೆ ಬೇರೆತರಹದ ಮತ್ತೋಂದು ವಿಷಯವನ್ನು ಸೆಸ್ಪನ್ಸ್‍ಥ್ರಿಲ್ಲಿಂಗ್ ಮಾದರಿಯಲ್ಲಿತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲುಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ.ಮೂರು ಹಾಡುಗಳಿಗೆ ವಿಜಯ್‍ಯಾರ್ಡಲ್ಲಿರಾಗ ಸಂಯೋಜಿಸಿದ್ದರೆ, ಹಿನ್ನಲೆ ಸಂಗೀತವನ್ನು ಗೌತಂಶ್ರೀವತ್ಸ ಒದಗಿಸಿದ್ದಾರೆ.ಛಾಯಗ್ರಹಣ ಸೂರಿಸಿನಿಟೆಕ್, ಸಂಕಲನ ರಘುನಾಥ್.ಎಲ್. ನಿರ್ವಹಿಸಿದ್ದಾರೆ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಸಹಾಯಕನಾಗಿದುಡಿದಿರುವ ಪ್ರಕಾಶ್‍ಹೆಬ್ಬಾಳ ಚಿತ್ರಕ್ಕೆಕತೆ,ಚಿತ್ರಕತೆ, ಸಂಭಾಷಣೆ ಬರೆದು ಚೂಚ್ಚಲಬಾರಿನಿರ್ದೇಶನ ಮಾಡಿದ್ದಾರೆ.

ವರ್ಧನ್‍ತೀರ್ಥಹಳ್ಳಿ ನಾಯಕನಾಗಿಎರಡು ಶೇಡ್‍ಗಳಲ್ಲಿ ಅದರಲ್ಲೂಒಂದು ಹಂತದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಬುದ್ದವಂತಿಕೆಯಿಂದಅಪರಾದದ ಸುಳಿವು ಸಿಗದಂತೆ ಸೈಲೆಂಟ್‍ಕಿಲ್ಲರ್. ಇವನದುಏನಿದ್ದರೂಗನ್ ಮಾತಾಡುತ್ತೆಎನ್ನುವ ಪಾತ್ರದಲ್ಲಿರಾಘವನಾಗ್ ನಾಯಕನಾಗಿ ಮೂರನೆ ಸಿನಿಮಾ. ಬಿಂಬಶ್ರೀನೀನಾಸಂ ಮತ್ತು ಸೌಮ್ಯತಿತೀರ ನಾಯಕಿಯರು.ಉಳಿದಂತೆ ಬಾಲ್‍ರಾಜ್‍ವಾಡಿ ಉಳಿದಂತೆ ದಶಾವರಚಂದ್ರು, ಉಗ್ರಂರವಿ ಮುಂತಾದವರುತಂಡದಲ್ಲಿಇದ್ದಾರೆ, ಟ್ರೈಲರ್‍ಗೆ ಚಾಲನೆ ನೀಡಿದಕೆಂಪೆಗೌಡಅಭಿವೃದ್ದಿ ಪ್ರಾದಿಕಾರದಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ ಮಾತನಾಡಿ ತುಣುಕುಗಳು ಚೆನ್ನಾಗಿ ಬಂದಿದೆ.ಅದೇರೀತಿ ಸಿನಿಮಾಇರಬಹುದುಅಂತ ನಂಬಿದ್ದೇನೆ. ಒಳ್ಳೆಯದಾಗಲಿ ಎಂದರು. ಕರ್ನಾಟಕ ವಾಣಿಜ್ಯ ಮಂಡಳಿ ಗೌ.ಕಾರ್ಯದರ್ಶಿ ಬಾ.ಮ.ಹರೀಶ್, ಖಜಾಂಚಿ ವಿರೇಶ್, ಲಲ್ಲೇಶ್‍ರೆಡ್ಡಿ, ಗಾದಿಆಂಜನಪ್ಪ,ಅನಿತಾಬಂಗಾರಪ್ಪ ಹಾಜರಿದ್ದುಚಿತ್ರಕ್ಕೆತಂಡಕ್ಕೆ ಶುಭ ಹಾರೈಸಿದರು. ಮೈತ್ರಿಮಂಜುನಾಥ್ ನಿರ್ಮಾಪಕ ಹಾಗೂ ಬಾಲರಾಜ.ಟಿ.ಸಿ.ಪಾಳ್ಯ ಸಹನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಸಿನಿಮಾವುಜೂನ್‍ಇಪ್ಪತ್ತೋಂದರಂದುರಾಜ್ಯದ್ಯಂತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/06/19
ಹಫ್ತಾ ಹಾಡುಗಳು ಬಿಡುಗಡೆಗೊಂಡಿತು
ಹೊಸಬರ ‘ಹಫ್ತಾ’ ಚಿತ್ರದ ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು ಭಾವಿಸಿದರೆ ಅದು ಆಗಿರುವುದಿಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ. ಮೂರು ಹಾಡುಗಳಿಗೆ ವಿಜಯ್‍ಯಾರ್ಡಲ್ಲಿ ರಾಗ ಸಂಯೋಜಿಸಿದ್ದರೆ, ಹಿನ್ನಲೆ ಸಂಗೀತವನ್ನು ಗೌತಂಶ್ರೀವತ್ಸ ಒದಗಿಸಿದ್ದಾರೆ. ಛಾಯಗ್ರಹಣ ಸೂರಿಸಿನಿಟೆಕ್, ಸಂಕಲನ ರಘುನಾಥ್.ಎಲ್. ನಿರ್ವಹಿಸಿದ್ದಾರೆ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಸಹಾಯಕನಾಗಿ ದುಡಿದಿರುವ ಪ್ರಕಾಶ್‍ಹೆಬ್ಬಾಳ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಚೂಚ್ಚಲಬಾರಿ ನಿರ್ದೇಶನ ಮಾಡಿದ್ದಾರೆ.

ವರ್ಧನ್‍ತೀರ್ಥಹಳ್ಳಿ ನಾಯಕನಾಗಿ ಎರಡು ಶೇಡ್‍ಗಳಲ್ಲಿ ಅದರಲ್ಲೂ ಒಂದು ಹಂತದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಬುದ್ದವಂತಿಕೆಯಿಂದ ಅಪರಾದದ ಸುಳಿವು ಸಿಗದಂತೆ ಸೈಲೆಂಟ್ ಕಿಲ್ಲರ್. ಇವನದು ಏನಿದ್ದರೂ ಗನ್ ಮಾತಾಡುತ್ತೆ ಎನ್ನುವ ಪಾತ್ರದಲ್ಲಿ ರಾಘವನಾಗ್ ನಾಯಕನಾಗಿ ಮೂರನೆ ಸಿನಿಮಾ. ಬಿಂಬಶ್ರೀನೀನಾಸಂ ಮತ್ತು ಸೌಮ್ಯತಿತೀರ ನಾಯಕಿಯರು. ಉಳಿದಂತೆ ಬಾಲ್‍ರಾಜ್‍ವಾಡಿ ಉಳಿದಂತೆ ದಶಾವರಚಂದ್ರು, ಉಗ್ರಂರವಿ ಮುಂತಾದವರು ತಂಡದಲ್ಲಿ ಇದ್ದಾರೆ, ಆಡಿಯೋ ಅನಾವರಣ ಕಾರ್ಯಕ್ರಮದಲ್ಲಿ ಲಹರಿವೇಲು, ರಾಜಕೀಯ ಧುರೀಣರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಮೈತ್ರಿಮಂಜುನಾಥ್ ನಿರ್ಮಾಪಕ ಹಾಗೂ ಬಾಲರಾಜ.ಟಿ.ಸಿ.ಪಾಳ್ಯ ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ತುಣುಕುಗಳು ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/05/19ಹಫ್ತಾ ಟೀಸರ್ ಬಿಡುಗಡೆ ಮಾಡಿದ ಶ್ರೀಮುರಳಿ
ಹೊಸಬರ ‘ಹಫ್ತಾ’ ಚಿತ್ರ ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು ಭಾವಿಸಿದರೆ ಅದು ಆಗಿರುವುದಿಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ವಿಜಯ್‍ಯಾರ್ಡಲ್ಲಿ ರಾಗ ಸಂಯೋಜಿಸಿದ್ದರೆ, ಹಿನ್ನಲೆ ಸಂಗೀತವನ್ನು ಗೌತಂಶ್ರೀವತ್ಸ ಒದಗಿಸಿದ್ದಾರೆ. ಛಾಯಗ್ರಹಣ ಸೂರಿಸಿನಿಟೆಕ್, ಸಂಕಲನ ರಘುನಾಥ್.ಎಲ್. ನಿರ್ವಹಿಸಿದ್ದಾರೆ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಸಹಾಯಕನಾಗಿ ದುಡಿದಿರುವ ಪ್ರಕಾಶ್‍ಹೆಬ್ಬಾಳ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಚೂಚ್ಚಲಬಾರಿ ನಿರ್ದೇಶನದ ಚುಕ್ಕಾಣಿ ಹಿಡಿದಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ, ಖಳನಟನಾಗಿ ನಟಿಸಿದ್ದ ವರ್ಧನ್‍ತೀರ್ಥಹಳ್ಳಿ ಮೊದಲ ಬಾರಿ ನಾಯಕನಾಗಿ ಎರಡು ಶೇಡ್‍ಗಳಲ್ಲಿ ಅದರಲ್ಲೂ ಒಂದು ಹಂತದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಬುದ್ದವಂತಿಕೆಯಿಂದ ಅಪರಾದದ ಸುಳಿವು ಸಿಗದಂತೆ ಸೈಲೆಂಟ್ ಕಿಲ್ಲರ್. ಇವನದು ಏನಿದ್ದರೂ ಗನ್ ಮಾತಾಡುತ್ತೆ ಎನ್ನುವ ಪಾತ್ರದಲ್ಲಿ ರಾಘವನಾಗ್ ನಾಯಕನಾಗಿ ಮೂರನೆ ಸಿನಿಮಾ. ಭರತನಾಟ್ಯ ವಿದ್ಯಾರ್ಥಿಯಾಗಿ ಬಿಂಬಶ್ರೀನೀನಾಸಂ ರಾಮರಾಮರೇ ನಂತರ ನಾಯಕಿಯಾಗಿ ಅವಕಾಶ ಸಿಕ್ಕಿದೆಯಂತೆ. ಕೂರ್ಗ್ ಮೂಲದ ಸೌಮ್ಯತಿತೀರ ಚೂಚ್ಚಲ ಚಿತ್ರದಲ್ಲೆ ವೇಶ್ಯಯಾಗಿ ದೃಶ್ಯದಲ್ಲಿ ಅಶ್ಲೀಲ ಇಲ್ಲದಿರುವುದರಿಂದ ಅಭಿನಯಿಸಿರುವುದಾಗಿ ಸಮರ್ಥನೆ ಉತ್ತರ ನೀಡುತ್ತಾರೆ. ಮುಖ್ಯ ಖಳನಾಯಕನಾಗಿ ಬಾಲ್‍ರಾಜ್‍ವಾಡಿ ಉಳಿದಂತೆ ದಶಾವರಚಂದ್ರು, ಉಗ್ರಂರವಿ ಮುಂತಾದವರು ತಂಡದಲ್ಲಿ ಇದ್ದಾರೆ.

ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಮಾತನಾಡಿ ಮೊದಲು ಪೂರ್ವ ತಯಾರಿ ಮಾಡಿಕೊಂಡು ಶುರು ಮಾಡಿದಲ್ಲಿ ಅದ್ಬುತವಾಗಿ ಚಿತ್ರವು ಬರುತ್ತದೆ. ಡಾ.ರಾಜ್‍ಕುಮಾರ್ ಕಂಪೆನಿಯಲ್ಲಿ ಇದೆಲ್ಲವು ನಡೆಯುತ್ತಿತ್ತು. ಕೆಲಸ ನಮ್ಮದು, ಅದಕ್ಕೆ ಫಲಿತಾಂಶವನ್ನು ಕೊಡುವುದು ಪ್ರೇಕ್ಷಕ ಪ್ರಭುಗಳು. ನಿರ್ಮಾಪಕರಿಗೆ ಹಣ ವಾಪಸ್ಸು ಬರಲೆಂದು ಹಾರೈಸಿದರು.

ಟೀಸರ್‍ಗೆ ಚಾಲನೆ ನೀಡಿದ ಶ್ರೀಮುರಳಿ ಸೆಂಟಿಮೆಂಟ್ ನಾಟ್ ಅಲೋಡ್ ಟ್ಯಾಗ್‍ಲೈನ್‍ದಲ್ಲಿ ಇರುವಂತೆ, ಚಿತ್ರರಂಗದಲ್ಲೂ ಇದು ನಡೆಯುವುದಿಲ್ಲ. ಅಸಲಿ ಕೆಲಸ ತೆರೆ ಕಂಡ ನಂತರ ಗೊತ್ತಾಗುತ್ತದೆ. ರಂಗಭೂಮಿ ಕಲಾವಿದರುಗಳನ್ನು ಕಂಡರೆ ಗೌರವ, ಮರ್ಯಾದೆ ಜಾಸ್ತಿ ಬರುತ್ತದೆ. ನಮಗಿಂತ ಕಲೆಯಲ್ಲಿ ಗೆದ್ದವರು. ಎಲ್ಲಾದರಲ್ಲಿ ಅದೃಷ್ಟ ಒಲಿಯುವುದಿಲ್ಲ. ನಾವು ಮಾಡುವ ಶ್ರಮ, ಶ್ರದ್ದೆ, ಕೆಲಸವನ್ನು ಬೇರೆಯವರು ಶ್ಲಾಘಿಸಿದರೆ ಮಾತ್ರ ಯಶಸ್ಸು ಗಳಿಸಬಹುದು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಪ್ರತಿ ಸಿನಿಮಾವನ್ನು ಮೊದಲಿನಂತೆ ಮಾಡುತ್ತೆನೆ. ಒಳ್ಳೆ ಪ್ರತಿಭೆಗಳು ಬರಬೇಕು, ಚಿತ್ರರಂಗ ಬೆಳಿಬೇಕು ಎನ್ನುವಾಗ, ಮಧ್ಯೆ ಪ್ರವೇಶಿಸಿದ ಅಧ್ಯಕ್ಷರು ನೀವು ಕನ್ನಡ ಚಿತ್ರರಂಗ ಉದ್ದಾರವಾಗಬೇಕಾದರೆ ಪ್ರತಿ ವರ್ಷ ಕನಿಷ್ಟ ಎರಡು ಸಿನಿಮಾಗಳನ್ನು ನೀಡಬೇಕೆಂದು ಅಪ್ಪನಾಗಿ ಆದೇಶ, ಅಧ್ಯಕ್ಷರಾಗಿ ಕೋರಿದಾಗ, ಶ್ರೀಮುರಳಿ ನಗುವೇ ಉತ್ತರವಾಗಿತ್ತು.

ಕಾರ್ಯಕ್ರಮದಲ್ಲಿ ಉಮೇಶ್‍ಬಣಕಾರ್, ಇನ್ನು ಮುಂತಾದವರು ಆಗಮಿಸಿದ್ದರು. ಮೈತ್ರಿ ಕಟ್ಟಡಗಳ ಮಾಲೀಕ ಮೈತ್ರಿಮಂಜುನಾಥ್ ನಿರ್ಮಾಪಕರಾಗಿ ಎರಡನೆ ಪ್ರಯತ್ನ. ಸದ್ಯದಲ್ಲೆ ಧ್ವನಿಸಾಂದ್ರಿಕೆ ಅನಾವರಣ ನಂತರ ಮುಂದಿನ ವರ್ಷ ಚಿತ್ರವನ್ನು ಜನರಿಗೆ ತೋರಿಸಲು ತಂಡವು ಯೋಜನೆ ಹಾಕಿಕೊಂಡಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
14/12/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore