HOME
CINEMA NEWS
GALLERY
TV NEWS
REVIEWS
CONTACT US
ತೆರೆಗೆ ಸಿದ್ದ ಹೊಂಬಣ್ಣ
ನಿಯಮಬಾಹಿರ ಅರಣ್ಯ ಒತ್ತುವರಿ, ರೈತರ ಸಾಗುವಳಿ ಇವೆಲ್ಲವು ಮಲೆನಾಡು ಪ್ರದೇಶಗಳಲ್ಲಿ ನಡೆಯುತ್ತಲೆ ಇದೆ. ನೂರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರು, 2-3 ಎಕರೆ ಜಾಗದಲ್ಲಿ ರೈತರು ವ್ಯವಸಾಯ ಮಾಡುತ್ತಿರುವ ಇಬ್ಬರಿಗೂ ಒಂದೇ ನ್ಯಾಯ ಇರಬೇಕು. ಆದರೆ ಶ್ರೀಮಂತ, ಬಡವನಿಗೆ ಬೇರೆಯದೆ ರೀತಿಯಲ್ಲಿ ಅರಣ್ಯ ಇಲಾಖೆಯು ಒಕ್ಕಲೆಬ್ಬಿಸುವುದು ತಪ್ಪು. ಇದನ್ನು ತಿದ್ದುಪಡಿ ಮಾಡಬೇಕು. ಮಲೆನಾಡಿನ ಸಂಸ್ಕ್ರತಿ, ಸಂಪ್ರದಾಯ ಇವೆಲ್ಲವನ್ನು ‘ಹೊಂಬಣ್ಣ’ ಸಿನಿಮಾದಲ್ಲಿ ತೋರಿಸಲಾಗಿದೆ. ನಿರೀಕ್ಷೆಯ ಬಣ್ಣವನ್ನು ಶೀರ್ಷಿಕೆಗೆ ಹೋಲಿಸಲಾಗಿದೆ. ಮೂಲತ: ಅದೇ ಜಾಗದವರಾಗಿದ್ದ ಕಾರಣ ನಿರ್ದೇಶಕ ರಕ್ಷಿತ್‍ತೀರ್ಥಹಳ್ಳಿ ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಕಲಾತ್ಮಕ ಚಿತ್ರದಂತೆ ಇರಬಾರದೆಂದು 7 ಅದ್ಬುತ ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ. ಇದರಲ್ಲಿ 6 ಗೀತೆಗಳಿಗೆ ನಿರ್ದೇಶಕರು ಸಾಹಿತ್ಯ ಒದಗಿಸಿದರೆ, ಒಂದನ್ನು ಫೇಸ್‍ಬುಕ್ ಸಾಹಿತ್ಯಸಕ್ತರ ಪದಗಳನ್ನು ಬಳಸಿಕೊಳ್ಳಲಾಗಿದೆ.

ಉಡುಪಿ, ಹೆಬ್ಬುರಿ, ತೀರ್ಥಹಳ್ಳಿ, ಶಿವಮೊಗ್ಗ, ಶಿರಾಳಕೊಪ್ಪ ದಟ್ಟಾರಣ್ಯಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಟನೆಯ ದಾಹಕ್ಕೆ ಉನ್ನತ ಕಂಪನಿಗೆ ಬೆನ್ನು ತೋರಿಸಿರುವ ಸುಬ್ಬುತಲಬಿ ಅವಿದ್ಯಾವಂತ, ಮುಗ್ದತೆ ಹುಡುಗನ ಪಾತ್ರದಲ್ಲಿ ನಾಯಕನಾಗಿ ಹೊಸ ಅನುಭವ. ಮತ್ತೋಂದು ಮುಖ್ಯ ಪಾತ್ರಕ್ಕೆ ರಂಗಭೂಮಿ ನಟ ಧನುಗೌಡ ಪಟ್ಟಣದಿಂದ ಹಳ್ಳಿಗೆ ಬಂದು ಕೆಲಸ ಮಾಡುವ ಪಾತ್ರ. ನಾಯಕಿಯರಾಗಿ ವರ್ಷಆಚಾರ್ಯ, ಪವಿತ್ರಾ, ಶರ್ಮಿಳಾಶೆಟ್ಟಿ ನಟನೆ ಇದೆ. ಇವರೊಂದಿಗೆ ಹಿರಿಯ ಕಲಾವಿದರಾದ ದತ್ತಣ್ಣ ಹೋರಾಟಗಾರ, ಸುಚೇಂದ್ರಪ್ರಸಾದ್ ವಕೀಲ, ನೀನಾಸಂ ಅಶ್ವಥ್ ಸಂಘಟನಾ ಅಧ್ಯಕ್ಷ, ಅಂಬುಜಾಕ್ಷಿ ಮುಂತಾದವರು ಇದ್ದಾರೆ. ಬಾಗಲಕೋಟೆ ಮೂಲದ ಟೆಕ್ಕಿ ರಾಮಕೃಷ್ಣಹೆಗಡೆ ಸಿನಿಮಾ ಕೃಷಿಗೆ ಹಣ ಹೂಡಿದ್ದಾರೆ. ವಿತರಕ ನವರಸನ್ ಮುಖಾಂತರ ಜುಲೈ ಮೊದಲವಾರದಂದು ಸುಮಾರು 75 ಕೇಂದ್ರಗಳಲ್ಲಿ ತೆರೆಕಾಣಲಿದೆ.
-30/06/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore