HOME
CINEMA NEWS
GALLERY
TV NEWS
REVIEWS
CONTACT US
ಸಂಗೀತ ಒಂದು ಉಸಿರನ್ನುಳಿಸಿತು...
ಯಾರೇ ಆದರೂ ಮಾರ್ಗತೋರಿದ ಗುರುಗಳ ಮೇಲೆ ಅಭಿಮಾನ ಇಟ್ಟುಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಸಂಗೀತÀ ಸಾಧನೆಗೆ ಕೇವಲ ಸ್ಪೂರ್ಥಿಯಾದ ಗುರುವಿನ ಮೇಲೆ ಉತ್ಕಟ ಅಭಿಮಾನ, ಭಕ್ತಿ ಇಟ್ಟುಕೊಳ್ಳುವವರು ವಿರಳ. ಅಂತಹ ಗುರುಭಕ್ತನೋರ್ವನ ಭಕ್ತಿಯ ಪರಾಕಷ್ಠೆಯ ಕಥೆಯನ್ನು ಹೇಳುವ ಹಳ್ಳಿಯ ಸೊಗಡು ಚಿತ್ರ ಈವಾರ ಬಿಡುಗಡೆಯಾಗಿದೆ. ಸಂಗೀತ ಸಾಧಕನೊಬ್ಬನ ಕಥೆಯನ್ನು ತೆರೆಮೇಲೆ ತಂದವರು ನೃತ್ಯ ನಿರ್ದೇಶಕ ಎಂ.ಆರ್.ಕಪಿಲ್. ನೂರಕ್ಕೂ ಹೆಚ್ಚು ಚಲನಚಿತ್ರಗಳಿಗೆ ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ಕಪಿಲ್ ನಿರ್ದೇಶನದ ಮೊದಲ ಚಲನಚಿತ್ರವಿದು. ಸಾಹಿತಿ ಡಾ|| ದೊಡ್ಡರಂಗೇಗೌಡ ಅವರ ಅಭಿಮಾನಿಯ ಅಭಿಮಾನದ ಕಥೆ ಈ ಚಿತ್ರದಲ್ಲಿದೆ.

ಸಾಹಿತಿ ಡಾ.ದೊಡ್ಡರಂಗೇಗೌಡ ಅವರು ತಮ್ಮದೇ ಪಾತ್ರವನ್ನು ಚಿತ್ರದಲ್ಲಿ ನಿರ್ವಹಿಸಿದ್ದಾರೆ. ಮಧುಗಿರಿ ತಾ. ಕುರುಬರಹಳ್ಳಿಯಲ್ಲಿ ಜನಿಸಿದ ಶಿವಣ್ಣ(ಆರವ್ ಸೂರ್ಯ) ಚಿಕ್ಕವನಾಗಿದ್ದಾಗಿನಿಂದಲೂ ಸಂಗೀತದ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡು ಬೆಳೆದವನು. ಸಂಗೀತವನ್ನೇ ಉಸಿರನ್ನಾಗಿಸಿಕೊಂಡ ಶಿವಣ್ಣ ತನ್ನ ಸಾಧನೆಗೆ ದೊಡ್ಡರಂಗೇಗೌಡರನ್ನೇ ಸ್ಪೂರ್ಥಿಯನ್ನಾಗಿಸಿಕೊಂಡಿರುತ್ತಾನೆ. ಅವರ ರಚನೆಯ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ಆ ಹಳ್ಳಿಯ ಜನರ ಪ್ರೀತಿಗೆ ಪಾತ್ರನಾಗಿ ಬೆಳೆದಿದ್ದ ಶಿವಣ್ಣನಿಗೆ ಸಂಗೀತಕ್ಕೆ ಎಂಥ ಅಪಾರವಾದ ಶಕ್ತಿಯಿದೆ ಎಂಬುದು ತಿಳಿದಿತ್ತು. ಆ ಊರಿನಲ್ಲಿ ಯಾರಾದರೂ ಸಂಗೀತದ ಬಗ್ಗೆ ಕೀಳಾಗಿ ಮಾತನಾಡಿದರೆ ಅವರಿಗೆ ಸಂಗೀತದ ಮಹತ್ವವನ್ನು ತಿಳಿಸಿಕೊಡುವುದಲ್ಲದೆ ಅವರು ದೇಸೀ ಸಂಗೀತಕ್ಕೆ ಶರಣಾಗುವ ಹಾಗೆ ಮಾಡುತ್ತಿದ್ದ. ದೊಡ್ಡರಂಗೇಗೌಡರ ಹುಟ್ಟುಹಬ್ಬವನ್ನು ತನ್ನೂರಲ್ಲೇ ಆಚರಿಸಬೇಕು. ಗೌಡರನ್ನು ಆಹ್ವಾನಿಸಿ ಅವರಿಗೆ ಗೌರವಿಸಬೇಕು ಎಂದು ನಿರ್ಧರಿಸಿ ಊರ ಜನರ ಜೊತೆ ಚರ್ಚಿಸುತ್ತಾನೆ. ಅದಕ್ಕೆ ಊರ ಜನರೆಲ್ಲ ಖುಷಿಯಿಂದ ಒಪ್ಪಿ ಈ ಕಾರ್ಯಕ್ರಮವನ್ನು ಹಬ್ಬದ ರೀತಿ ಮಾಡೋಣ ಎಂದು ಸಿದ್ದತೆಗಳನ್ನು ಮಾಡಿಕೊಳ್ಳುತ್ತಾರೆ. ಗೌಡರೂ ಕೂಡ ಬರಲು ಒಪ್ಪಿಕೊಳ್ಳುತ್ತಾರೆ. ಕಾರ್ಯಕ್ರಮಕ್ಕೆ ಆಗಮಿಸುವಾಗ ತಾವು ಓದಿದ ಬಡವರಹಳ್ಳಿ ಹಾಗೂ ಮಧುಗಿರಿಗೆ ಶಿವಣ್ಣ ಹಾಗೂ ಗ್ರಾಮಸ್ಥರನ್ನು ಕರೆದುಕೊಂಡು ಹೋಗಿ ಓದಿದ ಶಾಲೆಗಳನ್ನು ತೋರಿಸುತ್ತಾರೆ. ಸಮಾರಂಭ ಅದ್ದೂರಿಯಾಗಿ ನಡೆಯುತ್ತದೆ. ಶಿವಣ್ಣನ ಈ ಎಲ್ಲಾ ಕೆಲಸಗಳಲ್ಲಿ ಆತನ ಗೆಳತಿ ಮಯೂರಿ(ಅಕ್ಷರಾ) ಬೆಂಬಲವಾಗಿ ನಿಲ್ಲುತ್ತಾಳೆ. ಹೀಗಿರುವಾಗ ಒಮ್ಮೆ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವೃದ್ದೆಯೊಬ್ಬರಿಗೆ ವಾಹನವೊಂದು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಶಿವಣ್ಣನ ಮೇಲೇ ಆ ವಾಹನ ಹರಿಯುತ್ತದೆ. ಶಿವಣ್ಣ ತೀವೃವಾದ ಪೆಟ್ಟುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾನೆ. ಕೊನೆಗೆ ತನ್ನ ಗುರುಗಳ ಗಾಯನದಿಂದಲೇ ನವಚೇತನ ಪಡೆದು ಗುಣಮುಖನಾಗುತ್ತಾನೆ. ಸಂಗೀತಕ್ಕೆ ಜೀವ ಉಳಿಸುವಂಥ ಶಕ್ತಿಯಿದೆ ಎಂಬುದನ್ನು ನಿರ್ದೇಶಕ ಕಪಿಲ್ ಅವರು ಈ ಚಿತ್ರದಲ್ಲಿ ಒಂದಷ್ಟು ಉದಾಹರಣೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಗರ್ಭದಲ್ಲಿರುವ ಮಗು ಕೂಡ ಸಂಗೀತವನ್ನು ಆಲಿಸಿ ತನ್ನ ಚಲನಚಲನಗಳನ್ನು ಚುರುಕುಗೊಳಿಸುತ್ತದೆ ಎಂಬುದನ್ನು ಕೂಡ ನಿರ್ದೇಶಕರು ತೋರಿಸಿದ್ದಾರೆ. ರಾಗರಮಣ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಚಿತ್ರಕ್ಕೆ ಮತ್ತಷ್ಟು ಕಲರ್ ನೀಡಿವೆ. ನಾಯಕ ಆರವ್ ಸೂರ್ಯ ಚುರುಕಾಗಿ ಅಭಿನಯಿಸಿದ್ದಾರೆ. ಇಲ್ಲಿ ನಾಯಕಿ ಅಕ್ಷರಾಗೆ ಹೆಚ್ಚಿನ ಅವಕಾಶ ಇಲ್ಲ. ಇದು ಸಂಪೂರ್ಣ ಗ್ರಾಮೀಣ ಸೊಗಡಿನಲ್ಲಿ ನಡೆಯುವಂಥ ಕಥೆಯಾಗಿದ್ದು, ಹಳ್ಳಿಯ ಪರಿಸರವನ್ನು ಛಾಯಾಗ್ರಾಹಕ ಶ್ರೀನಾಥ್ ಸೊಗಸಾಗಿ ಸೆರೆಹಿಡಿದಿದ್ದಾರೆ. ಮೊದಲ ಬಾರಿಗೆ ಪಿ.ಸತೀಶ್‍ಕುಮಾರ್ ಮೆಹತಾ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ.
-Cine Circle News
-9/09/17

ಚಿತ್ರಮಂದಿರದಲ್ಲಿ ಹಳ್ಳಿ ಸೊಗಡು
ಸೆಪ್ಟಂಬರ್ 8ರಂದು ‘ಹಳ್ಳಿ ಸೊಗಡು’ ಚಿತ್ರವು ಬಿಡುಗಡೆಯಾಗುತ್ತಿರುವುದರಿಂದ ಕೊನೆ ಬಾರಿ ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಮೈಕ್ ತೆಗೆದುಕೊಂಡ ಎಂ.ಆರ್.ಕಪಿಲ್ ಚಿತ್ರಕ್ಕೆ ನೃತ್ಯ, ಕತೆ,ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದೇನೆ. ಪ್ರತಿಯೊಬ್ಬರು ನೋಡಲೇ ಬೇಕಾದ ಸಿನಿಮಾ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾದ ಮೇಲೆ ಅಂಚೆ ಚೀಟಿ ಹೊರಬಂದಿದೆ. ಹಿರಿಯ ಸಾಹಿತಿ ಪ್ರೊ..ದೊಡ್ಡರಂಗೇಗೌಡರ ಪೂರ್ಣ ವ್ಯಾಸಾಂಗ, ಸಾಧನೆಗಳನ್ನು ಚಿತ್ರಾವಳಿಗಳಲ್ಲಿ ತೋರಿಸಲಾಗಿದ್ದು,ಮೂರು ತಲೆಮಾರುಗಳು ಇಷ್ಟ ಪಡುತ್ತಾರೆ ಎಂದು ನಂಬಲಾಗಿದೆ. ಶಿವರಾಜ್‍ಕುಮಾರ್ ಆಡಿಯೋ ಬಿಡುಗಡೆಮಾಡಿ 100ನೇ ದಿವಸದ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇದಕ್ಕಿಂತ ಸೌಭಾಗ್ಯ ಬೇರೊಂದುವಿಲ್ಲವೆಂದು ಖುಷಿಗೊಂಡರು. ನಾಯಕನಾಗಿ ಮೊದಲ ಚಿತ್ರದಲ್ಲಿ ಸಾಹಿತಿಗಳು ರಚಿಸಿದ ಕೋಲುಮಂಡೆ ಜಂಗಮದೇವ ಗೀತೆಗೆ ಡ್ಯಾನ್ಸ್ ಮಾಡಿದ್ದು ಸುಕೃತ. ರೈತನಾಗಿ ವಾದ್ಯಗೋಷ್ಟಿ ನಡೆಸುತ್ತಾ ಅವರ ಅಭಿಮಾನಿಯಾಗಿ ನಟಿಸಿದ್ದೇನೆ ಎಂದು ಹೇಳಿದರು ಆರವ್‍ಸೂರ್ಯ. ಗ್ರಾಮೀಣ ಸೊಗಡಿನ, ಭಾರತದಲ್ಲಿ ಸಾಹಿತ್ಯ ದಿಗ್ಗಜನ ಕಥನವು ಚಿತ್ರರೂಪದಲ್ಲಿ ಬರುತ್ತಿರುವುದು ನಮಗೆ ಹೆಮ್ಮೆಯ ವಿಷಯ ಅಂತಾರೆ ಶಂಕರ್‍ಭಟ್. ಹಾಸ್ಯಕಲಾವಿದರ ದಂಡೇ ಇದರಲ್ಲಿರುವುದು ವಿಶೇಷ ಎನ್ನುತ್ತಾರೆ ಶಂಖನಾದಅರವಿಂದ್.

70ನೇ ವರ್ಷದ ಹುಟ್ಟುಹಬ್ಬಕ್ಕೆ ನಿರ್ಮಾಣ ಮಾಡಿರುವುದು ತೃಪ್ತಿ ತಂದಿದೆ. ಮೂಲತ: ಶಿಕ್ಷಕನಾಗಿರುವುದರಿಂದ ಶಿಕ್ಷಕರ ದಿನಾಚರಣೆಯಂದೇ ಮಾದ್ಯಮದವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಸುದೀರ್ಘ 44 ವರ್ಷ ಶಿಕ್ಷಕ ವೃತ್ತಿಯಲ್ಲಿ ಇಡೀ ಕುಟುಂಬವೇ ಇದೇ ಕೆಲಸದಲ್ಲಿ ತೊಡಗಿಕೊಂಡಿದೆ. ಗೀತರಚನೆಕಾರನ ಜೀವನಚಿತ್ರವನ್ನು ಮಾಡಿರುವುದು ಭಾರತದ ಇತಿಹಾಸದಲ್ಲಿ ಮೊದಲು ಎನ್ನಬಹುದು. ಇದಕ್ಕೆ ನಿರ್ಮಾಪಕರ, ನಿರ್ದೇಶಕರ ಧೈರ್ಯವನ್ನು ಮೆಚ್ಚಬೇಕು. ಹುಟ್ಟಿ ಬೆಳೆದ ಮಧುಗಿರಿಯ ಕುರಬರಹಳ್ಳಿ ಜಾಗಗಳಲ್ಲಿ ತಾನು ಓಡಾಡಿದ, ಊಟ ಮಾಡಿದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಜೀವನದ ಪ್ರವರಗಳನ್ನು ಚೆನ್ನಾಗಿ ದಾಖಲಿಸಿದ್ದಾರೆ. ಏಳು ಹಾಡುಗಳ ಪೈಕಿ ಐದು ಗೀತೆಗಳಿಗೆ ಸಾಹಿತ್ಯ ಬರೆಯಲಾಗಿದೆ. ಜೀವನ ಸಂಪೂರ್ಣವಾಗಿ ಇರದೆ ಇದ್ದರೂ ಅಭಿಮಾನಿಗಳಿಗೆ ಶೇಕಡ 70ರಷ್ಟು ಮಾಹಿತಿ ಲಭ್ಯವಾಗಲಿದೆ ಎಂದರು. ಅಪ್ಪನ ಬಾಲ್ಯ, ಯೌವ್ವನ, ಸಾಧನೆ ಕುರಿತ ಹಾಡನ್ನು ಬರೆದಿದ್ದು ಈ ಜನ್ಮದ ಪುಣ್ಯ ಎಂಬ ನುಡಿ ಭರತ್‍ದೊಡ್ಡರಂಗೇಗೌಡ ಅವರದು. ಸಂಗೀತಕ್ಕೆ ಇರೋ ಶಕ್ತಿ ಪ್ರಪಂಚದಲ್ಲಿ ಯಾವುದು ಇಲ್ಲವೆಂದು ಬಣ್ಣನೆ ಮಾಡಿದ್ದು ಮೈಸೂರು ರಮಾನಂದ್. ಸತೀಶ್‍ಕುಮಾರ್ ಮೆಹತಾ ನಿರ್ಮಾಣ ಮಾಡಿರುವ ಸಿನಿಮಾಕ್ಕೆ ಹೆಚ್.ಎನ್.ದತ್ತಾತ್ರೇಯ, ಮಹಾಂತೇಶ್, ಬಿ.ಎನ್.ಸ್ವಾಮಿ ಸಹ ನಿರ್ಮಾಪಕರಾಗಿದ್ದಾರೆ.
-Cine Circle News
-7/09/17
POSTAGE STAMP ON KANNADA FILM ‘HALLI SOGADU’ AND DODDARANGE GOWDA’ OUT
F
or the first time ever two postage stamps each of value of Rs 5 bearing an upcoming Kannada film title and a Kannada poet-teacher were released by the postal department. Yes, a postage stamp bearing the film title Halli Sogadu and another one bearing Prof Doddarange Gowda were released at a special function held in Bengaluru. The stamps were released by Kumar Bangarappa. Kannada Development Authority Chairman Siddaramaiah was also present.  

Halli Sogadu is a biopic on Prof Doddarange Gowda and is made by choreographer turned director M R Kapil. The film is produced by Satish Mehta. Raaga Raman has scored the music. Aarav Surya and Akshara are playing the lead roles.  

Speaking on the occasion, Kumar Bangarappa recalled the hit song Hrudaya Samudra Kalaki…that featured himself in the lead from the film Ashwamedha sung by Dr Rajkumar. He said the film became popular also because of Prof Doddarange Gowda’s lyrics. Kumar Bangarappa also recalled the first time he got photographed by senior lensman K N Nagesh Kumar before he made a bow into movies.  

S G Siddaramaiah said the title of the film is good and he is happy that a film based on the life of his friend Doddarange Gowda had been made.
-2/04/17HALLI SOGADU’ AUDIO RELEASED, FILM READY FOR RELEASE
S
hivarajkumar released the audio of the film ‘Halli Sogadu’ at a function. The film is made by choreographer-turned-director M R Kapil who has worked in 94 Kannada films as a dance master. The film is produced by Satish Mehta and his brother while it is co-produced by B N Swamy, Dattatreya and Mahantesh. Raaga Raman has scored the music.  

Director  Kapil said it was dream of 28 years to make a film and that he had been struggling since the last five years to make films. He said he had made three films that have been delayed but now Halli Sogadu which is a biopic on renowned film lyricist Prof Doddarange Gowda is ready for release. He said the film has been censored with a U certificate without any cuts. He said the film was shot in 25 days and the whole story came to his mind in 20 minutes in Ravindra Kalakshetra.  

Kapil said Prof Gowda is the backbone of the film as it is meant to be a biopic on him. The film is a tribute to the legend who will be celebrating his 70th birthday. The film will show how effective music is in touching people’s hearts and lives. He said while this is Michael Madhu’s 250th film Dingri Nagaraj had performed for the same song Year Yeri in which he was seen decades ago. He said senior journalist Pankaja has written the screenplay and songs for the movie. Prof Gowda’s son Bharath has also penned the lyrics for a song.  

Kapil said he chose Aarav Surya as the hero who is a student of Chamaraj master. He said the real hero of the film is however Prof Doddarange Gowda who is known for his humility and simplicity which is unparalleled in many ways. Major portion of the film has been shot in Kurubarahalli of Madhugiri taluk.  

Akshara who has acted in her first film said she is happy to be part of the film. She plays a dancer in the film. Akshara said she was at ease as she is a dancer.  

Prof Doddarange Gowda said he had acted in the movie in a lengthy role. He said his life has seen a chain of unexpected events and the movie is also one of them. He said this was a laudable effort to make a film that chronicles the musical journey which has seen him write more than 600 songs in about 42 years. 
-8/03/17

HALLI SOGADU’ LAUNCHED AS TRIBUTE TO DODDARANGE GOWDA
K
annada film ‘Halli Sogadu’ was launched by producers Satish Mehta, Rajath Raghunath, Dattatreya and Mahantesh who are fans of the legendary lyricist Prof Doddarange Gowda. The producers are making the film as a tribute and a gift to the legend for his 70th birthday. Arav Surya is playing the male lead who is also a fan of Prof Gowda.

Arav Gowda told reporters that Halli Sogadu is his third film and that he is a big fan of Doddarange Gowda. He said he plays a singer in the film who sings the lyricist’s songs which also gives him a fresh lease of life.

Akshara who is playing the female lead opposite Arav said she is a bharatanatyam dancer in real life and she plays a dance teacher in the film. Shankar Bhat plays the hero’s father.   

Doddarange Gowda said it is a rural film that reflects the milieu of our country. He said he has written a song for the movie. One of the highlights of the movie is that 27 songs written by Prof Gowda are being used to write a song. Prof Gowda will appear in the film’s climax as himself. Prof Gowda’s son Bharath Doddarange Gowda has also penned a song for the film.

Director Kapil who is also the choreographer said the film will have ten songs and that the movie will be shot in Madhugiri for 18 days where Prof Gowda grew up. He said the team has planned a 35-day shooting schedule and plans to release the film on November 1.

Senior journalist Pankaja has penned the dialogues for the movie.
-28/08/16
ಹಳ್ಳಿ ಸೊಗಡಿನ ಹಾಡುಗಳಿಗೆ ಶಾಸಕರಿಂದ ಚಾಲನೆ
ಕಳೆದ 2 ದಶಕಗಳಿಂದ ನೃತ್ಯನಿರ್ದೇಶಕನಾಗಿ ಸೇವೆಸಲ್ಲಿಸಿದ ಎಂ.ಆರ್. ಕಪಿಲ್ ಅವರ ನಿರ್ದೇಶನದ ಹೊಸ ಸಿನಿಮಾ ಹಳ್ಳಿಯ ಸೊಗಡು ಚಿತ್ರದ ಹಾಡುಗಳ ಧ್ವನಿಮುದ್ರಣ ಸಮಾರಂಭ ಕಳೆದ ಭಾನುವಾರದಂದು ನೆರವೇರಿತು. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪ್ರಸಾದ್ ರೆಕಾರ್ಡಿಂಗ್ ಥಿಯೇಟರ್‍ನಲ್ಲಿ ನಡೆದ ಈ ಸಮಾರಂಭದಲ್ಲಿ ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ ಹಾಗೂ ಬಿಬಿಎಂಪಿ ಸದಸ್ಯೆ ಹೇಮಲತಾ ಗೋಪಾಲಯ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಹಾಡುಗಳಿಗೆ ಚಾಲನೆ ನೀಡಿ, ಚಿತ್ರಕ್ಕೆ ಶುಭಕೋರಿದರು. ಶಾಸಕ ಗೋಪಾಲಯ್ಯ ಮಾತನಾಡಿ ಹಿರಿಯರಾದ ದೊಡ್ಡರಂಗೇಗೌಡ ಅವರ ವಿಷಯ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ, ಚಿತ್ರತಂಡಕ್ಕೆ ಶುಭವಾಗಲಿ ಎಂದು ನುಡಿದರು.

ಡಾ.ದೊಡ್ಡರಂಗೇಗೌಡ ಅವರ ಅಪ್ಪಟ ಅಭಿಮಾನಿಯೊಬ್ಬನ ಜೀವನದ ಕಥೆ ಹೊಂದಿದ ಈ ಚಿತ್ರ ಇದೇ ತಿಂಗಳಲ್ಲಿ ಮುಹೂರ್ತವನ್ನಾಚರಿಸಿಕೊಳ್ಳಲಿದೆ. ‘ಹಳ್ಳಿ ಸೊಗಡು’ ಎಂಬ ಈ ಚಿತ್ರದಲ್ಲಿ ಯುವನಟ ಆರವ್ ಸೂರ್ಯ ಹಾಗೂ ಅಕ್ಷರ ನಾಯಕ-ನಾಯಕಿಯರಾಗಿ ಕಾಣ ಸಿಕೊಳ್ಳಲಿದ್ದಾರೆ. ನಾಯಕ ಸಂಗೀತ ಪ್ರೇಮಿಯಾಗಿದ್ದು, ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಅಪ್ಪಟ ಅಭಿಮಾನಿಯಾಗಿರುತ್ತಾನೆ. ಆತ ನಂಬಿದ ಸಂಗೀತವೇ ಆತನ ಜೀವನವನ್ನು ಕಾಪಾಡುತ್ತದೆ. ಸಂಗೀತಕ್ಕೆ ಎಂಥಾ ಶಕ್ತಿ ಇದೆ ಎಂದು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ. ದೊಡ್ಡರಂಗೇಗೌಡರು ಈ ಚಿತ್ರದಲ್ಲಿ ತಮ್ಮದೇ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕಪಿಲ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನೃತ್ಯ ಹಾಗೂ ನಿರ್ದೇಶನ ಮಾಡುತ್ತಿದ್ದು, ಇದೇ 28ರಂದು ಈ ಚಿತ್ರದ ಮುಹೂರ್ತ ನಡೆಯಲಿದೆ. ರಾಗರಮಣ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ಒಟ್ಟು 8 ಹಾಡುಗಳಿವೆ. ರಾಜೇಂದ್ರ ಸೂರಿ ಪ್ರೊಡಕ್ಷನ್ಸ್ ಅಡಿಯಲ್ಲಿ ಪಿ. ಸತೀಶ್‍ಕುಮಾರ್ ಮೆಹತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೆಚ್.ಎನ್. ದತ್ತಾತ್ರೇಯ, ಮಹಂತೇಶ ಕೆ.ಎಸ್, ಬಿ.ಎನ್. ಸ್ವಾಮಿ ಹಾಗೂ ರಜತ್ ರಂಗನಾಥ್ ಈ ಚಿತ್ರದ ಸಹ ನಿರ್ಮಾಪಕರು.

ಆಲ್ವಿನ್ ಸಂಕಲನ, ಡಾ. ದೊಡ್ಡರಂಗೇಗೌಡ, ಡಾ. ಭರತ್ ದೊಡ್ಡರಂಗೇಗೌಡ, ಉದಯಲೇಖ ಸಾಹಿತ್ಯವಿದ್ದು, ಪತ್ರಕರ್ತೆಯಾದ ಬಿ.ಎನ್.ಪಂಕಜಾ ಅವರು ಸಂಭಾಷಣೆಗಳನ್ನು ರಚಿಸಿದ್ದಾರೆ. ಆರವ್ ಸೂರ್ಯ, ಅಕ್ಷರಾ, ಶಂಕರ್ ಭಟ್, ಜ್ಯೋತಿ, ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ್, ಶಂಕನಾದ ಅರವಿಂದ, ಮೈಕಲ್ ಮಧು, ಹೆಚ್.ಎನ್. ದತ್ತಾತ್ರೇಯ, ಮಾಲತೇಶ್ ಕೆ.ಎಸ್., ಹೆಚ್.ಎನ್. ಸಿದ್ದಪ್ಪ ಮತ್ತು ಡಾ. ವೆಂಕಟರಮಣ ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
-8/08/16

ಡಾ.ದೊಡ್ಡರಂಗೇಗೌಡರ ಅಭಿಮಾನಿಯ ಚಿತ್ರ ‘ಹಳ್ಳಿ ಸೊಗಡು
ಸುಮಾರು 90ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನೃತ್ಯನಿರ್ದೇಶಕನಾಗಿ ಕಾರ್ಯನಿರ್ವಹಿಸಿ ಹೆಸರು ಮಾಡಿರುವ ಎಂ.ಆರ್. ಕಪಿಲ್ ಅವರು ಇತ್ತೀಚೆಗಷ್ಟೇ 4 ದಶಕಗಳ ಇತಿಹಾಸ ಹೊಂದಿರುವ ಫಲಿತಾಶ ಎನ್ನುವ ಶೀರ್ಷಿಕೆಯನ್ನಿಟ್ಟುಕೊಂಡು ಹೊಸ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಆ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯ ಅಂತಿಮ ಹಂತದಲ್ಲಿರುವಾಗಲೇ ಇದೀಗ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಅವರು ಕೈಹಾಕಿದ್ದಾರೆ.

ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಅಪ್ಪಟ ಅಭಿಮಾನಿಯೊಬ್ಬನ ಜೀವನದ ಕಥಾನಕವನ್ನು ಹೊಂದಿರುವ ಈ ಚಿತ್ರವು ಮುಂದಿನ ತಿಂಗಳು ಸೆಟ್ಟೇರಲು ಸಿದ್ದವಾಗುತ್ತಿದೆ. ‘ಹಳ್ಳಿ ಸೊಗಡು’ ಎಂಬ ಹೆಸರಿನ ಈ ಚಿತ್ರದಲ್ಲಿ ಯುವನಟ ಆರವ್ ಸೂರ್ಯ ಹಾಗೂ ಅಕ್ಷರ ನಾಯಕ-ನಾಯಕಿಯರಾಗಿ ಕಾಣ ಸಿಕೊಳ್ಳಲಿದ್ದಾರೆ. ಮಧುಗಿರಿ ತಾ. ಕುರುಬರಹಳ್ಳಿ ಗ್ರಾಮದವರಾದ ಡಾ.ದೊಡ್ಡರಂಗೇಗೌಡ ಅವರು ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಕೊಡುಗೆಯಾಗಿ ಈ ಚಿತ್ರವನ್ನು ಅರ್ಪಿಸುತ್ತಿದ್ದೇವೆ ಎಂದು ನಿರ್ದೇಶಕರಾದ ಕಪಿಲ್ ತಿಳಿಸಿದ್ದಾರೆ.

ಈ ಚಿತ್ರದ ನಾಯಕ ಒಬ್ಬ ಸಂಗೀತ ಪ್ರೇಮಿಯಾಗಿದ್ದು, ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಅಪ್ಪಟ ಅಭಿಮಾನಿಯಾಗಿರುತ್ತಾನೆ. ಆತ ನಂಬಿದ ಸಂಗೀತವೇ ಆತನ ಜೀವನವನ್ನು ಕಾಪಾಡುತ್ತದೆ. ಸಂಗೀತಕ್ಕೆ ಎಂಥಾ ಶಕ್ತಿ ಇದೆ ಎಂದು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ. ದೊಡ್ಡರಂಗೇಗೌಡರು ಈ ಚಿತ್ರದಲ್ಲಿ ತಮ್ಮದೇ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕಪಿಲ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನೃತ್ಯ ಹಾಗೂ ನಿರ್ದೇಶನ ಮಾಡುತ್ತಿದ್ದು, ಪತ್ರಕರ್ತೆಯಾದ ಬಿ.ಎನ್.ಪಂಕಜಾ ಅವರು ಸಂಭಾಷಣೆಗಳನ್ನು ರಚಿಸಿದ್ದಾರೆ. ಬರುವ ಆ. 28ಕ್ಕೆ ಈ ಚಿತ್ರದ ಮುಹೂರ್ತ ನಡೆಯಲಿದೆ. ರಾಗರಮಣ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಆ.7ರಂದು ನೆರವೇರಲಿದೆ. ರಾಜೇಂದ್ರ ಸೂರಿ ಪ್ರೊಡಕ್ಷನ್ಸ್ ಅಡಿಯಲ್ಲಿ ಪಿ. ಸತೀಶ್‍ಕುಮಾರ್ ಮೆಹತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೆಚ್.ಎನ್. ದತ್ತಾತ್ರೇಯ, ಮಹಂತೇಶ ಕೆ.ಎಸ್, ಬಿ.ಎನ್. ಸ್ವಾಮಿ ಹಾಗೂ ರಜತ್ ರಂಗನಾಥ್ ಈ ಚಿತ್ರದ ಸಹ ನಿರ್ಮಾಪಕರು.

ತಾರಾಗಣದಲ್ಲಿ ಆರವ್ ಸೂರ್ಯ, ಅಕ್ಷರಾ, ಶಂಕರ್ ಭಟ್, ಜ್ಯೋತಿ, ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ್, ಶಂಕನಾದ ಅರವಿಂದ, ಮೈಕಲ್ ಮಧು, ಹೆಚ್.ಎನ್. ದತ್ತಾತ್ರೇಯ, ಮಾಲತೇಶ್ ಕೆ.ಎಸ್., ಹೆಚ್.ಎನ್. ಸಿದ್ದಪ್ಪ ಮತ್ತು ಡಾ. ವೆಂಕಟರಮಣ ಸೇರಿದಂತೆ ಇನ್ನೂ ಮುಂತಾದವರಿದ್ದಾರೆ.
-28/07/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore