HOME
CINEMA NEWS
GALLERY
TV NEWS
REVIEWS
CONTACT US
ದೊಡ್ಡವರಿಗೂ ಗೌರವ ಕೊಡಿ ಎನ್ನುವ ಹಾಲು ತುಪ್ಪ
‘ಹಾಲು ತುಪ್ಪ’ ಪೋಸ್ಟರ್‍ನಲ್ಲಿ ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಮಾತಾಡಬಾರದು ಎಂದು ತೋರಿಸಿರುವಂತೆ ಚಿತ್ರದ ಕತೆಯಲ್ಲಿ ಇಂತಹ ಅಂಶಗಳನ್ನು ಹೆಚ್ಚಾಗಿ ಬಳಸಿಕೊಂಡಿಲ್ಲ. ಇಬ್ಬರು ಪ್ರಮುಖ ವ್ಯಕ್ತ್ತಿಗಳನ್ನು ಇಟ್ಟುಕೊಂಡು ಇವೆಲ್ಲಾವನ್ನು ಹೇಳಲು ಹೊರಟಿರುವ ಪ್ರಯತ್ನಕ್ಕೆ ಫಲ ಸಿಗುವುದು ಕಡಿಮೆಯಾಗಿದೆ. ಹಳ್ಳಿ ದೇಸಿ ಕತೆಯಾದ ಕಾರಣ ಅಲ್ಲಿ ಏನೆಲ್ಲಾ ನಡೆಯುತ್ತೆ, ಏನೆಲ್ಲಾ ನಡೆಯುವುದಿಲ್ಲ ಅದೆಲ್ಲಾವನ್ನು ಹಸಿ ಬಿಸಿಯಾಗಿ ತೋರಿಸಲಾಗಿದೆ. ಚಿತ್ರದ ವಿವರ ಮುಕ್ಕಾಲು ಗಂಟೆಯಾದ ನಂತರ ತಿಳಿಯುತ್ತದೆ. ಡಬ್ಬಲ್ ಮೀನಿಂಗ್ ಮಾತುಗಳು ಇತರೆ ಚಿತ್ರಗಳಿಂದ ಕಡಿಮೆ ಇದೆ, ಹಾಗೂ ಹಿರಿಯರಿಂದ ಇಂತಹ ಪದಗಳನ್ನು ಹೇಳಿಸದೆ ಇರುವುದು ಸಮಧಾನಕರವಾಗಿದೆ. ಗ್ರಾಮರ್ ಹೇಳಿಕೊಡಲು ಬರುವ ಟೀಚರ್ ಹಿಂದೆ ಎಲ್ಲರು ಹಿಂದೆ ಬೀಳುವ ದೃಶ್ಯಗಳು ಮುಜುಗರ ತರಿಸುತ್ತವೆ. ಮಾನವೀಯತೆ, ತಪ್ಪುಗಳನ್ನು ತಿದ್ದುಕೊಳ್ಳುವುದು, ಹಿರಿಯರಿಗೂ ಗೌರವ ಕೊಡಿ ಸಂದೇಶದೊಂದಿಗೆ ಹೇಳಿರುವುದು ಪ್ಲಸ್ ಪಾಯಿಂಟ್ ಆಗಿದೆ. ಎಲ್ಲಾ ಹಳ್ಳಿಯಲ್ಲಿ ನಡೆಯುವ ನೈಜ ಘಟನೆಗಳನ್ನು ಹೆಕ್ಕಿಕೊಂಡು ಅದಕ್ಕೆ ಸ್ಪಲ್ಪ ಮಸಾಲೆ ಸೇರಿಸಿ ನೋಡುಗನನ್ನು ಸೀಟಿನಲ್ಲಿ ಕೂರುವಂತೆ ಮಾಡಿದ್ದಾರೆ ಎನ್ನಬಹುದು. ಸಾಕಷ್ಟು ಎಡವಟ್ಟುಗಳು ಇದ್ದರೂ ಕೆಲವು ಅರ್ಥಪೂರ್ಣ ದೃಶ್ಯಗಳು ಇವೆಲ್ಲಾವನ್ನು ಮರೆಸುತ್ತವೆ.

ಪಾರ್ವತಿಪುರ ಮತ್ತು ಶಿವನಹಳ್ಳಿ ಎರಡು ಊರಿನ ದ್ವೇಷ ಲಾಗಾತ್ತಿನಿಂದಲೂ ನಡೆದುಕೊಂಡು ಬಂದಿರುತ್ತದೆ. ಆದರೂ ಈ ಊರಿನ ಹುಡುಗ, ಆ ಊರು ಹುಡುಗಿ ಪ್ರೇಮ ಚಿಗುರುತ್ತದೆ. ಅದು ಎರಡು ಗ್ರಾಮಗಳ ಮಧ್ಯೆ ಮತ್ತಷ್ಟು ದ್ವೇಷಕ್ಕೆ ಕಾರಣವಾಗುತ್ತದೆ. ಊರಿನ ಹಿರಿಯನನ್ನು ಗೌರವದಿಂದ ನೋಡುವ ಜನರು, ಅವರಿಗೆ ಖಾಯಿಲೆ ಅಂತ ಗೊತ್ತಾದಾಗ ದೂರಸರಿಯುತ್ತಾರೆ. ಇದರಿಂದ ಮನನೊಂದು ನಿಯಮಮೀರಿ ಪಕ್ಕದ ಹಳ್ಳಿಗೆ ಹೋಗುತ್ತಾರೆ. ಅಲ್ಲಿ ಪಂಚಾಯ್ತಿ ಸೇರಿಸಿ ಬಹಿಷ್ಕಾರ ಹಾಕಲಾಗುತ್ತೆ. ಮುಂದೆ ಎಲ್ಲವು ಹಂತಕ್ಕೆ ಬಂದು ಹೇಗೆ ಪರಿಹಾರವಾಗುತ್ತದೆ ಎಂಬುದನ್ನು ನಿರ್ದೇಶಕ ಶಶಾಂಕ್‍ರಾಜ್ ಸುಂದರವಾಗಿ ತೋರಿಸುವುದನ್ನು ನಾವು ಹೇಳುವುದಕ್ಕಿಂತ ಸಿನಿಮಾ ನೋಡುವುದು ಚೆಂದ ಅನಿಸುತ್ತದೆ. ಸೆಂಚೂರಿಗೌಡ ಎಂದಿನಂತೆ ಅಭಿನಯ, ಗಡ್ಡಪ್ಪ ಪಾತ್ರಕ್ಕೆ ಶಕ್ತಿ ಇರಲಿದ್ದು, ಕೆಲವೊಂದು ಕಡೆ ಅವರ ನಟನೆ ಕಣ್ಣು ಒದ್ದು ಮಾಡುತ್ತದೆ. ಪವನ್‍ಸೂರ್ಯ ಭರವಸೆಯ ನಾಯಕನಾಗುವ ಲಕ್ಷಣಗಳು ಕಂಡುಬಂದಿದೆ. ನಾಯಕಿ ಸಂಹಿತಾವಿನ್ಯಾ ಅಭಿನಯದಲ್ಲಿ ಇನ್ನು ಪಳಗಬೇಕಾಗಿದೆ. ಹೊನ್ನವಳ್ಳಿಕೃಷ್ಣ, ಜಯರಾಮ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇಂದ್ರಸೇನಾ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ಆರ್.ವಿ.ನಾಗೇಶ್ವರರಾವ್ ಹಳ್ಳಿಯ ಸೌಂದರ್ಯವನ್ನು ಚೆನ್ನಾಗಿ ಸೆರೆಹಿಡಿದಿರುವುದು ಪರದೆ ಮೇಲೆ ಕಾಣ ಸುತ್ತದೆ. ಇದೆಲ್ಲಾದಕ್ಕೂ ಸೂತ್ರದಾರ ನಿರ್ಮಾಪಕ ದೊಡ್ಮನೆ ವೆಂಕಟೇಶ್‍ರವರು ಹೆಸರಿಗೆ ತಕ್ಕಂತೆ ಉತ್ತಮ ಚಿತ್ರ ನೀಡಿದ್ದಾರೆ.
-4/11/17
ಹಾಲು ತುಪ್ಪ ನೋಡಲು ಬನ್ನಿ
‘ಹಾಲು ತುಪ್ಪ’ ಅಡಿಬರಹದಲ್ಲಿ ತಿಥಿ ಅಲ್ಲ ಅಂತ ಹೇಳಿಕೊಂಡಿರುವ ಸಿನಿಮಾದ ತಂಡವು ಕೊನೆ ಬಾರಿ ಸುದ್ದಿಗೋಷ್ಟಿಯನ್ನು ಏರ್ಪಾಟು ಮಾಡಿತ್ತು. ಪ್ರಾರಂಭದೆಲ್ಲೆ ವಿತರಕ ರಾಘವೇಂದ್ರ ನಮ್ಮ ಸಂಸ್ಥೆಯಿಂದ ಮೊದಲ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇವೆ. ಸುಮಾರು 60ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ಬರಲಿದೆ ಎಂದಾಗ ಅನುಭವ ಇಲ್ಲದವರಿಗೆ ಯಾವ ಆಧಾರದ ಮೇಲೆ ಜವಬ್ದಾರಿಯನ್ನು ಹೊರಿಸಿರುವಿರಾ ಎಂಬ ಪ್ರಶ್ನೆ ಮಾದ್ಯಮದಿಂದ ಕೇಳಿಬಂತು. ಇದಕ್ಕೆ ಉತ್ತರ ನೀಡಿದ ನಿರ್ಮಾಪಕ ದೊಡ್ಮನೆ ವೆಂಕಟೇಶ್ ಹೊಸಬರಿಗೆ ಅವಕಾಶ ನೀಡಿದರೆ ತಾನೆ ಅವರ ಪ್ರತಿಭೆ ಏನೆಂದು ತಿಳಿಯುವುದು. ನಾನು ಕೂಡ ಪ್ರಾರಂಭದಲ್ಲಿ ಹೊಸಬನಾಗಿದ್ದೆ. ಹಳಬರನ್ನು ಸಂಪರ್ಕಿಸಿದಾಗ ಸೂಕ್ತ ಸ್ಪಂದನೆ ಸಿಗಲಿಲ್ಲ. ಅದಕ್ಕೆಂದೆ ಇವರನ್ನು ಭೇಟಿ ಮಾಡಲಾಯಿತು ಅಂತ ಸಮಜಾಯಷಿ ನೀಡಿದರು. ಹಳ್ಳಿ ಸೊಗಡಿನ ಕತೆಯಲ್ಲಿ ದೇಸಿ ಸಂಗೀತ ಒದಗಿಸಲಾಗಿದೆ. ರಾಜಕುಮಾರ ಚಿತ್ರದಲ್ಲಿ ತಂದೆ-ತಾಯಿ ನೋಡಿಕೊಳ್ಳುವವರನ್ನು ಈ ರೀತಿ ಕರೆದಿದ್ದಾರೆ. ಇದರಲ್ಲಿ ವಯಸ್ಸಾದವರು ನೀವೇ ರಾಜಕುಮಾರ ಅಂತ ಹೇಳಲಾಗಿದೆ. ದೇವರ ಸೃಷ್ಟಿ ಹಾಲು. ಮನುಷ್ಯ ಸೃಷ್ಟಿ ಮಾಡಿದ್ದು ತುಪ್ಪ. ಜೀವನಕ್ಕೆ ಹಾಲು, ಬದುಕಲು ತುಪ್ಪ ಎಂದು ಹೇಳಲಾಗಿದೆ ಎಂಬುದರ ವ್ಯಾಖ್ಯಾನ ಕೊಟ್ಟರು ಸಂಗೀತ ನಿರ್ದೇಶಕ ಇಂದ್ರಸೇನಾ.

ಗಡ್ಡಪ್ಪನ ಮೊಮ್ಮಗನಾಗಿ ಕಾಣ ಸಿಕೊಂಡಿದ್ದೇನೆಂದು ಪರಿಚಯಿಸಿಕೊಂಡರು ನಾಯಕ ಪವನ್. ವೃತ್ತಿಯಲ್ಲಿ ಮಾಡೆಲ್ ಆಗಿರುವ ನನಗೆ ಹಳ್ಳಿ ಹುಡುಗಿಯಾಗಿ ತೋರಿಸಿದ್ದಾರೆಂದು ನಾಯಕಿ ವಿಂದ್ಯಾ ಹೇಳಿಕೊಂಡರು. ವಿಡಂಭನೆ-ನೀತಿ ಇರುವಂತೆ ಸಂಭಾಷಣೆ ಬರೆಯುವುದು ಛಾಲೆಜಿಂಗ್ ಆಗಿತ್ತು. ಐಟಂ ಹಾಡನ್ನು ತುರುಕಿಲ್ಲ. ಸರಕಿಗೆ ಬೇಕಾಗಿರುವುದರಿಂದ ಸೇರಿಸಲಾಗಿದೆ ಎಂದು ಪ್ರಶ್ನಗೆ ಉತ್ತರವಾದರು ಸಾಯಿರಾಂ. ನಾಟಿ ವೈದ್ಯನಾಗಿ ಅಭಿನಯಿಸಿರುವ ಗಡ್ಡಪ್ಪ, ಹಿರಿಯನ ಪಾತ್ರದಲ್ಲಿ ಸಂಚೂರಿಗೌಡ ಎಂದಿನಂತೆ ನಮ್ಮನ್ನು ಹರಿಸಿ ಅಂತ ಕೋರಿಕೊಂಡರು. ಸಹ ಕಲಾವಿದರಾದ ಗಿರಿಜಾ, ಕಲ್ಕರೆಗಂಗಾಧರ್, ನಿರ್ದೇಶಕ ಶಶಾಂಕ್‍ರಾಜ್ ಎಲ್ಲರು ಚುಟುಕು ಮಾತಿಗೆ ಮೀಸಲಿಟ್ಟರು. ಚಿತ್ರವು ಶುಕ್ರವಾರದಂದು ರಾಜ್ಯದ್ಯಂತ ತೆರೆಕಾಣಲಿದೆ.
-30/10/17
ಭಗವಂತನ ಸೃಷ್ಟಿ ಹಾಲು, ಮನುಜಂದು ತುಪ್ಪ
ಜನನ-ಮರಣಕ್ಕೆ ‘ಹಾಲು ತುಪ್ಪ’ ವನ್ನು ಬಳಕೆ ಮಾಡುವುದು ಪದ್ದತಿ. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಂಡು ಬಿಡುಗಡೆಯಾಗಲು ಅಣ ಯಾಗುತ್ತಿದೆ. ಮೊನ್ನೆ ಚಿತ್ರದ ಧ್ವನಿಸಾಂದ್ರಿಕೆಯು ಅನಾವರಣಗೊಂಡಿತು. ರಚನೆ,ಚಿತ್ರಕತೆ, ನಿರ್ದೇಶನ ಮಾಡಿರುವ ಶಶಾಂಕ್‍ರಾಜ್ ಸಿನಿಮಾದಲ್ಲಿ ಕುಟುಂಬದ ಒಡೆಯ, ಹಿರಿಯ ನಾಗರೀಕರಿಗೆ ಗೌರವ ನೀಡಿ. ಟೈಟಲ್‍ಗೆ ಅರ್ಥ ಸಕರಾತ್ಮಕ, ನಕರಾತ್ಮಕ ಎರಡು ಬರುತ್ತವೆ. ಕತೆಯಲ್ಲಿ ಹೆಚ್ಚು ಪಾಸಿಟಿವ್ ಅಂಶಗಳನ್ನು ಸೇರಿಸಲಾಗಿದೆ. ಗಡ್ಡಪ್ಪ ನಾಟಿವೈದ್ಯರಾಗಿ, ಸೆಂಚುರಿಗೌಡ ನ್ಯಾಯ ಪಂಚಾಯತಿ ಮುಖ್ಯಸ್ಥನಾಗಿ ಅಭಿನಯಿಸಿದ್ದಾರೆ. ಡೈಲಾಗ್‍ಗಳು ಅಶ್ಲೀಲವಾಗಿರದೆ, ಮುಜುಗರ ತರದಂತೆ ಆರೋಗ್ಯಕರವಾಗಿದ್ದು ಇವರ ಮೂಲಕ ಸಂದೇಶವನ್ನು ಹೇಳಿಸಲಾಗಿದೆ. ತಿಥಿಗೂ ನಮ್ಮ ಸಿನಿಮಾಕ್ಕೂ ಸಂಬಂಧವಿಲ್ಲ. ಅಪ್ಪಟ್ಟ ಗ್ರಾಮೀಣ ಸೊಗಡಿನ ಕಥನವಾಗಿದ್ದು ಪ್ರೇಕ್ಷಕರನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದರ ವ್ಯಾಖ್ಯಾನ ಬಿಚ್ಚಿಟ್ಟರು.

ಹಾಡುಗಳನ್ನು ಲೋಕಾರ್ಪಣೆ ಮಾಡಿದ ವಾಣ ಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ಇಬ್ಬರು ಹಿರಿಯ ಕಲಾವಿದರನ್ನು ಕ್ಯಾಬರ್ ನೃತ್ಯದಲ್ಲಿ ತೋರಿಸಿದ್ದು ಖೇದ ತರಿಸಿದೆ. ಇವರ ಮೇಲೆ ಜನರು ಒಂದು ರೀತಿಯ ಗೌರವ ತೋರಿಸಿದ್ದಾರೆ. ಅದಕ್ಕೆ ಮಸಿ ಬಳಿಯಬೇಡಿ. ಇಬ್ಬರು ಹೇಳುವ ಆಡುಭಾಷೆ ಎಲ್ಲರಿಗೂ ಇಷ್ಟವಾಗಿದೆ. ಮುಂದೆಯೂ ಒಳ್ಳೆ ರೀತಿಯಲ್ಲಿ ಬಳಸಿಕೊಳ್ಳಿ. ನಾಯಕ-ನಾಯಕಿ ಅಭಿನಯ ಚೆನ್ನಾಗಿ ಬಂದಿದೆ. ಅವರಿಗೆ ಭವಿಷ್ಯವಿದೆ. ತಿಥಿ ಬಿಡುಗಡೆ ಸಂದರ್ಭದಲ್ಲಿ ಮಂಡ್ಯಾ ಚಿತ್ರಮಂದಿರದವರು ಸಿನಿಮಾ ಹಾಕಲು ಹಿಂದೇಟು ಹಾಕಿದರು. ಅವರಿಗೆ ಬುದ್ದಿಹೇಳಿ ಬಲವಂತವಾಗಿ ಷೋ ಹಾಕಿಸಿದಾಗ ಸತತ ಆರು ವಾರಗಳು ಪ್ರದರ್ಶನ ಕಂಡು ದಾಖಲೆ ಮಾಡಿತು. ಕತೆಗೆ ಪೂರಕವಾಗುವಂತೆ ಹಿರಿಯರಿಗೆ ಪಾತ್ರ ಕೊಡುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಗಡ್ಡಪ್ಪನ ಮೊಮ್ಮಗನಾಗಿ ಅಭಿನಯಿಸಿರುವ ನಾಯಕ ಪವನ್, ಹಳ್ಳಿ ಹುಡುಗಿಯಾಗಿ ಸಂಹಿತಾವಿನಯ, ನಗಿಸಿರುವ ಕೋಟೆನಾಗರಾಜು ಪಾತ್ರದ ಪರಿಚಯ ಮಾಡಿಕೊಂಡು ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು. ದೇವರು ಕೊಟ್ಟ ಹಾಲು, ಮನುಷ್ಯ ಮಾಡಿದ ತುಪ್ಪ. ಹಾಗೆ ಜೀವನ ರುಚಿ ಮಾಡಿಕೊಳ್ಳಿರೆಂಬ ಸಂದೇಶವನ್ನು ಸುಂದರವಾಗಿ ಹೇಳಲಾಗಿದೆ ಎಂದು ಬಣ ್ಣಸಿಕೊಂಡಿದ್ದು ಆರು ಹಾಡುಗಳಿಗೆ ಸಾಹಿತ್ಯ ಹಾಗೂ ಸಂಗೀತ ಸಂಯೋಜಿಸಿರುವ ಇಂದ್ರಸೇನಾ. ಇದಕ್ಕೂ ಮುನ್ನ ಟ್ರೈಲರ್, ಹಾಡಿನ ತುಣುಕುಗಳನ್ನು ತೋರಿಸಲಾಯಿತು. ನಿರ್ಮಾಪಕ ದೊಡ್ಮನೆ ವೆಂಕಟೇಶ್, ಸಹ-ನಿರ್ಮಾಪಕರಾಗಿ ಮೂರ್ತಿ ನಿರ್ಮಾಣ ಮಾಡಿರುವ ಚಿತ್ರವು ಇದೇ ತಿಂಗಳಲ್ಲಿ ತೆರೆಕಾಣಲಿದೆ.
-30/06/17

ಸದ್ಯದಲ್ಲೇ `ಹಾಲು ತುಪ್ಪ' ಚಿತ್ರದ ಹಾಡುಗಳ ಸೀಡಿ ಬಿಡುಗಡೆ
ಸ್ಮಿತ ಎಂಟರ್‍ಟೈನರ್ ಲಾಂಛನದಲ್ಲಿದೊಡ್ಮನೆ ವೆಂಕಟೇಶ್ ಅವರು ನಿರ್ಮಿಸುತ್ತಿರುವ `ಹಾಲು ತುಪ್ಪ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಪಾಂಡವಪುರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಸಹ ಪೂರ್ಣಗೊಂಡಿದ್ದು, ಈಗ ರೀರೆಕಾರ್ಡಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಇಂದ್ರಸೇನಾ ಅವರು ಸಂಗೀತ ನೀಡಿರುವ ಚಿತ್ರದ ಹಾಡುಗಲ ಸೀಡಿ ಬಿಡುಗಡೆಯಾಗಲಿದೆ.

ಶಶಾಂಕ್ ರಾಜ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಆರ್.ವಿ.ನಾಗೇಶ್ವರ ರಾವ್ ಅವರ ಛಾಯಾಗ್ರಹಣವಿದೆ. ಸಂಜೀವ ರೆಡ್ಡಿ ಸಂಕಲನ, ನಾಗರಾಜ್ ನೃತ್ಯ ನಿರ್ದೇಶನ ಹಾಗೂ ಬಾಬು ಖಾನ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ದೆಲೀಪ್ ದಿಲ್‍ಸೇ ರಚಿಸಿದ್ದಾರೆ. ಎ.ಆರ್.ಸಾಯಿರಾಂ ಸಂಭಾಷಣೆ ಬರೆದಿದ್ದಾರೆ. ಮೂರ್ತಿ ಅವರ ಸಹ ನಿರ್ಮಾಣವಿರುವ ಈ ಚಿತ್ರದ ತಾರಾಬಳಗದಲ್ಲಿ ಸೆಂಚುರಿ ಗೌಡ, ಗಡ್ಡಪ್ಪ, ಪವನ್, ಮೌನ, ಹೊನ್ನವಳ್ಳಿ ಕೃಷ್ಣ, ನಾಗರಾಜ ಕೋಟೆ, ಬಸವರಾಜ್ ಕಟ್ಟಿ, ಜಯರಾಂ, ಕುರಿ ಸುನೀಲ್ ಮುಂತಾದವರಿದ್ದಾರೆ.
-18/04/17

HAALU THUPPA’ COMPLETES SHOOT
K
annada film ‘Haalu Thuppa’ has completed shoot and is all set to have its audio release in April. The film is produced by Doddamane Venkatesh and directed by Shashank Raj. The film stars Century Gowda, Gadappa, Pavan Surya, Mouna, Basavaraj Katti, Nagaraj Kote and Honnavalli Krishna among others.   

Director Shashank Raj told reporters that Haalu Thuppa is used for good, bad and even festive occasions. He said this is not for a bad occasion or a sad moment such as death ceremony (thithi). He said the film tries to show how man’s life should be good like ghee.  

Producer Doddamane Venkatesh said he wanted to produce a film with stars but after he heard the story from Shashank Raj he came forward to produce it. He said it is a comparatively small budget film. He said he laid a condition that the film should have no vulgar scenes or double meaning dialogues. However, he said the film has an item song which is meant to attract audiences.  He said he expects to release the film in May.  

Dil Se Dilip, a protégé of Hamsalekha has penned lyrics for four songs. Indrasena has scored the music.  

Pavan Surya said after doing Goolihatti this is his third film in which he plays the grandson of Gadappa. Mouna said her real name is Samhita Vinya and that she plays a village girl in the movie. Mouna has been into modeling and Haalu Thuppa is her first film.
-23/03/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore