HOME
CINEMA NEWS
GALLERY
TV NEWS
REVIEWS
CONTACT US
ನಾಡು, ನುಡಿ ಸಂಸ್ಕ್ರತ ಸಾರುವ ಹೆಚ್‍ಎಸ್‍ಆರ್ ಹಬ್ಬ
ಸಿಲಿಕಾನ್ ಸಿಟಿ ಹೊರವಲಯದಲ್ಲಿರುವ ಹೆಚ್‍ಎಸ್‍ಆರ್ ಲೇಔಟ್‍ದಲ್ಲಿ ಬಹುತೇಕ ಕನ್ನಡೇತರರು ವಾಸ ಮಾಡುತ್ತಿದ್ದಾರೆ. ಇವರುಗಳಿಗೆ ಇಲ್ಲಿನ ಭಾಷೆ, ಸಂಸ್ಕ್ರತಿ ತಿಳಿದಿರುವುದಿಲ್ಲ. ಅದರಿಂದಲೇ ಅಲ್ಲಿನ ಯುವ ತಂಡವೊಂದು ಸ್ಥಳೀಯ ಶಾಸಕರ ಪ್ರೋತ್ಸಾಹದೊಂದಿಗೆ ಮೂರು ದಿನಗಳ ಕಾಲ ‘ಹೆಚ್‍ಎಸ್‍ಆರ್ ಹಬ್ಬ’ ವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಡಿಸೆಂಬರ್ ಏಳರಂದು ಡೊಳ್ಳು ಕುಣಿತದೊಂದಿಗೆ ಚಾಲನೆ ಸಿಗಲಿದ್ದು, ಮೊದಲ ದಿವಸ ಪೆಟ್ ಶೋ, ಬಾಡಿ ಬಿಲ್ಡರ್ಸ್‍ಗಳ ಪ್ರದರ್ಶನ, ಫ್ಲೂಟ್ ಬಾಕ್ಸಿಂಗ್, ಕಿರುಚಿತ್ರಗಳ ಸ್ಪರ್ಧೆ ನಡೆಯಲಿದೆ.

ಎಂಟರಂದು ಬೆಳಿಗ್ಗೆ ಕ್ರೀಡೆ ಮತ್ತು ಸಾಂಸ್ಕ್ರತಿಕ ಸ್ಪರ್ಧೆ, ಬರ್ಗರ್, ಪಿಜ್ಜಾ ತಿಂಡಿಗಳನ್ನು ಸೇವಿಸದೆ ಅಪ್ಪಟ್ಟ ಭೂಮಿಯಲ್ಲಿ ಬೆಳೆದ ತರಕಾರಿಗಳನ್ನು ಸೇವಿಸಿರಿ ಎನ್ನುವ ಪರಿಕಲ್ಪೆನೆಯೊಂದಿಗೆ ಪ್ರತಿ ಕಿಲೋಗೆ ಒಂದು ರೂಪಾಯಿಗೆ ತರಕಾರಿ ಮಾರಾಟ, ತೆರೆದ ರಸ್ತೆಯಲ್ಲಿ ಆಹಾರ ಮಳಿಗೆಗಳು, ನೃತ್ಯ ಸ್ಪರ್ಧೆ, ಫ್ಯಾಶನ್ ಶೋ, ಸಂಗೀತದ ವೈಭವ.

ಸಮಾರೋಪ ದಿನ ಭಾನುವಾರದಂದು ಆರೋಗ್ಯಕ್ಕಾಗಿ ಓಟದಲ್ಲಿ ಭಾಗವಹಿಸಲು ಪ್ರವೇಶ ಶುಲ್ಕವಿದೆ. ಇದರಲ್ಲಿ ಬಂದಂತ ಹಣದಲ್ಲಿ ಐದು ಮಕ್ಕಳನ್ನು ದತ್ತುಗೆ ತೆಗೆದುಕೊಂಡು ಅವರುಗಳಿಗೆ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ತಂಡವು ಭರಿಸಲಿದೆ. ಹೆಚ್‍ಎಸ್‍ಆರ್ ಹಬ್ಬದ ಊಟ, ಸಂಜೆ ಕಲಾವಿದರುಗಳಿಂದ ಸ್ಟಾರ್ ನೈಟ್ ಕಾರ್ಯಕ್ರಮ. ನಟಿಯರಾದ ಟಗರು ಖ್ಯಾತಿಯ ಮಾನ್ವಿತಹರೀಶ್, ಕಾರುಣ್ಯರಾಮ್, ಕಾವ್ಯಶಾ, ಮಯೂರ್‍ಪಟೇಲ್ ಇನ್ನು ಮುಂತಾದವರು ಹಿಟ್ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಅನುಶ್ರೀ ಮತ್ತು ನಿರಂಜನ್‍ದೇಶಪಾಂಡೆ ತಲಾ ಒಂದೊಂದು ದಿವಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಕಿರಣ್‍ರೆಡ್ಡಿ ಮತ್ತು ಸವಿತಾರೆಡ್ಡಿ ಸಾರಥ್ಯದಲ್ಲಿ ತಂಡದೊಂದಿಗೆ ಹಬ್ಬವು ನಡೆಯಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
6/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore