HOME
CINEMA NEWS
GALLERY
TV NEWS
REVIEWS
CONTACT US
ಬಾಲಿವುಡ್‍ಗೆ ಪಾದ ಬೆಳೆಸಿದ ದತ್ತಣ್ಣ
ಹಿರಿಯ ನಟ ಎಚ್.ಜಿ.ದತ್ತಾತ್ರೆಯ ನಮ್ಮೆಲ್ಲರ ಪ್ರೀತಿಯ ದತ್ತಣ್ಣ ಪೋಷಕ ನಟನಾಗಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದವರು. ಇದರ ಅನುಭವದ ಮೇಲೆ ಬಾಲಿವುಡ್‍ನವರು ‘ಮಿಷಿನ್ ಮಂಗಲ್’ ಹಿಂದಿ ಚಿತ್ರದಲ್ಲಿ ಅಭಿನಯಿಸಲು ಆಹ್ವಾನಿಸಿದ್ದಾರೆ. ಅದರಂತೆ ತಮ್ಮ ಭಾಗದ ಕೆಲಸವನ್ನು ಮುಗಿಸಿಕೊಟ್ಟಿದ್ದು, ಬಲ್ಲ ಮೂಲಗಳ ಪ್ರಕಾರ ಇದರಲ್ಲಿ ಸರ್ಕಾರಿ ಸ್ವಾಮ್ಯದ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರಂತೆ. ಬಿಗ್ ಬಜೆಟ್ ಸಿನಿಮಾವಾಗಿದ್ದರಿಂದ ದತ್ತಣ್ಣ ಎಂಟ್ರಿ ಭರ್ಜರಿಯಾಗೆ ಇರಲಿದೆ. ಮತ್ತೋಂದು ಕನ್ನಡದ ಬೇರು ರಾಷ್ಟ್ರ ಪಟ್ಟದಲ್ಲಿ ಗುರುತಿಸಿಕೊಂಡಿದ್ದು, ಕನ್ನಡಿಗರಿಗೆ ಹೆಮ್ಮೆ ಅನಿಸಿದೆ. ಇಸ್ರೋದ ‘ಮಾರ್ಸ್ ಅರ್ಬಿಟರ್ ಮಿಷನ್’ (ಮಾಮ್) ಕತೆ ಆಧರಿಸಲಾಗಿದೆ. ಮುಖ್ಯ ಪಾತ್ರದಲ್ಲಿ ಅಕ್ಷಯ್‍ಕುಮಾರ್ ನಟನೆ ಜೊತೆಗೆ ನಿರ್ಮಾಣದಲ್ಲಿ ಪಾಲುದಾರರು.

ಜಗನ್‍ಶಕ್ತಿ ನಿರ್ದೇಶನದಲ್ಲಿ ನಾಯಕಿಯರಾಗಿ ಸೋನಾಕ್ಷಿಸಿನ್ಣ, ತಾಪ್ಸಿಪನ್ನು, ವಿದ್ಯಾಬಾಲನ್, ಕೀರ್ತಿಕುಲ್ಳರಿ ಮತ್ತು ನಿತ್ಯಾಮೆನನ್ ಇರುವುದು ಕುತೂಹಲ ಮೂಡಿಸಿದೆ. ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ನಿರ್ದೇಶಕ ಭಾಲ್ಕಿ.ಆರ್ ನಿರ್ಮಾಪಕರಾಗಿರುವ ಚಿತ್ರವು ಬಿಡುಗಡೆ ಮುಂಚೆ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
6/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore